ಸರ್ವಜ್ಞನ ವಚನಗಳ ಕೆಲವು ಪ್ರಶ್ನೋತ್ತರಗಳು...



೧. ಸರ್ವಜ್ಞನ ಭಾಷಾಭಿವ್ಯಕ್ತಿಯ ಪ್ರಕಾರ ಯಾವುದು?
👉 ತ್ರಿಪದಿ
೨. ಸರ್ವಜ್ಞನ ಕುರಿತು ಮೊದಲು ಸಂಶೋಧನೆ ಕೈಗೊಂಡ ಕನ್ನಡ ವಿದ್ವಾಂಸ ಯಾರು?
👉 ಉತ್ತಂಗಿ  ಚೆನ್ನಪ್ಪ 
೩. ಕೈಲಾಸದಲ್ಲಿ ಗಣೇಶ್ವರನಾದ ಸರ್ವಜ್ಞನ ಹೆಸರು ಯಾವುದು?
👉 ಪುಷ್ಪದತ್ತ
೪. ಡಾ.ಎಲ್.ಬಸವರಾಜು ಸರ್ವಜ್ಞನ ಕುರಿತು ಯಾವ ಹಸ್ತಪ್ರತಿ ಯಿಂದ ವಿವರಣೆ ನೀಡಿದ್ದಾರೆ?
👉 ವೆಂಕನ ಪ್ರತಿಯಿಂದ
೫. ಬ್ರಹ್ಮಸತ್ಯವನ್ನರಿತ ವ್ಯಕ್ತಿ ಸರ್ವಜ್ಞ ನ ಪ್ರಕಾರ ಏನಿರಬೇಕು?
👉 ಸುಮ್ಮನಿರಬೇಕು
೬. ಪುಣ್ಯಸಂಚಯದ ಸಾಧನಗಳು ಯಾವುವು?
👉 ದಾನ/ ದಾಸೋಹಗಳು
೭. ಜ್ಞಾನವಿಲ್ಲದವನ ಬರಿಯೊಡಲು ಸರ್ವಜ್ಞನ ಪ್ರಕಾರ ಹೇಗಿದೆ?
👉 ಹಾಳೂರ ಶ್ವಾನದಂತಿದೆ
೮. ಸರ್ವಜ್ಞ ವಿದ್ಯದ ಪರ್ವತ ಹೇಗಾದ?
👉 ಸರ್ವರಲ್ಲಿ ಒಂದೊಂದು ನುಡಿ ಕಲಿತು
೯. "ಎಲುಬಿನ ಕಾಯಕ್ಕೆ ಸಲೆ ಚರ್ಮವನ್ನು ಹೊದಿಸಿ ಮಲಮೂತ್ರ ಕ್ರಿಮಿಯು ಒಳಗಿಪ್ಪ ದೇಹಕ್ಕೆ ಕುಲವಾವುದಯ್ಯ" ಎಂದು ಕೇಳಿದವರು?
👉 ಸರ್ವಜ್ಞ
೧೦. " ಮಂಡೆ ಬೋಳಾದೊಡಂ ದಂಡು ಕೋಲ್ವಿಡಿದೊಡಂ ಹೆಂಡತಿಯನ್ನು ಬಿಟ್ಟು ನಡೆದೊಡಂ" ಏನು ಕಾಣುವುದಿಲ್ಲವೆಂದು ಸರ್ವಜ್ಞ ತಿಳಿಸುತ್ತಾನೆ?
👉 ಗುರುಮುಖದಿಂದ
೧೧. 'ತುಪ್ಪವಾದ ಬಳಿಕ ಹೆಪ್ಪನೆರೆದವರುಂಟೆ' ಎಂದು ಕೇಳಿದವರು?
👉ಸರ್ವಜ್ಞ
೧೨. 'ಎಷ್ಟು ಬಗೆಯಾರತಿಯ ನೊಟ್ಟಯಿಸಿ ಫಲವೇನು ನಿಷ್ಠೆಯಿಲ್ಲದವನ ಶಿವಪೂಜೆಯನ್ನು' ಸರ್ವಜ್ಞ ಯಾವುದಕ್ಕೆ ಹೋಲಿಸಿದ್ದಾರೆ?
👉 ಹಾಳೂರ ಕೊಟ್ಟಿಗೆ ಬೆಂದಂತೆ
೧೩. ಜಾತಿ ಜಾತಿಗೆ ವೈರ ನೀತಿ ಯಾವುದರ ವೈರವೆಂದು ಸರ್ವಜ್ಞ ಹೇಳಿದ್ದಾನೆ?
👉 ಮೂರ್ಖರ ವೈರ
೧೪. 'ಭಿಕ್ಷವ ತಂದಾದೊಡಂ ಭಿಕ್ಷವಿಕ್ಕುಣಬೇಕು ಅಕ್ಷಯಪದವು ತನಗಕ್ಕು' ಎಂದು ಹೇಳಿದವರು?
👉 ಸರ್ವಜ್ಞ
೧೫. ಪರಸ್ತ್ರೀಯ ಗಮನದಿಂ ನರಲೋಕ ಛೀಯೆನಲು ಸಿರಿಯುಡುಗಿ ತಲೆಯು ತೊಲಗಿದವು' ಎಂದು ಸರ್ವಜ್ಞ ಯಾರನ್ನು ಕುರಿತು ಹೇಳಿದ್ದಾನೆ?
👉 ರಾವಣ
೧೬. 'ಹಸಿವಿಲ್ಲದುಣಬೇಡ ಹಸಿದು ಮತ್ತಿರಬೇಡ ಬಿಸಿ ಬೇಡ ತಂಗುಳವು ಬೇಡ ಈ ನಿಯಮ ಪಾಲಿಸಿದರೆ' ಸರ್ವಜ್ಞ ಯಾವುದರ ಅವಶ್ಯಕತೆ ಇಲ್ಲವೆನ್ನುತ್ತಾರೆ?
👉 ವೈದ್ಯರ
೧೭. 'ಹರಿವ ನೀರೆತ್ತಣ ತೀರ್ಥ' ಎಂದು ಪ್ರಶ್ನಿಸಿದವರು?
👉 ಸರ್ವಜ್ಞ
೧೮. ಸರ್ವಜ್ಞನ ಆರಾಧ್ಯ ದೈವ ಯಾರು?
👉 ಹರ(ಶಿವ)
೧೯. ಸರ್ವಜ್ಞ ಹೇಳುವಂತೆ ವಿದ್ಯೆಯೇ 
👉 ತಾಯ್ತಂದೆ
೨೦. ಸರ್ವಜ್ಞನ ಪ್ರಕಾರ ಬುದ್ಧಿಯೇ
👉 ಸೋದರ ಮಾವ
೨೧. ಸರ್ವಜ್ಞನು ಹೇಳುವಂತೆ ಅಧ್ವಾನಕಾದವನೆ
👉 ನಂಟ
೨೨. 'ಕರದಲ್ಲಿ ಕಪ್ಪರವುಂಟು ಹಿರಿದಪ್ಪ ನಾಡುಂಟು ಹರನೆಂಬ ದೈವವೆಮಗುಂಟು' ಎಂದವರು?
👉 ಸರ್ವಜ್ಞ
೨೩.'ಜ್ಞಾನ ಉಳ್ಳವನೊಡಲು ಹೇಗಿರುತ್ತದೆ ' ಎಂದು ಸರ್ವಜ್ಞ ಹೇಳಿದ್ದಾನೆ?
👉 ಭಾನುವಿನಂತೆ
೨೪. 'ಬಟ್ಟಲ ಬಾಯಂತೆ ಹುಟ್ಟುವುದು ಲೋಕದೊಳು ಮುಟ್ಟದು ತನ್ನ ಹೆಂಡಿರನು' ಎಂದು ಹೇಳಿದವರು?
👉 ಸರ್ವಜ್ಞ 
೨೫. 'ಜಗಕ್ಕೆಲ್ಲ ಕರ್ತಾರ' ಯಾರೆಂದು ಸರ್ವಜ್ಞ ಹೇಳುತ್ತಾನೆ?
👉 ಸರ್ವಜ್ಞನೋರ್ವ 
******  ******  ******  ******

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ