ಕನ್ನಡ ಸಾಹಿತ್ಯ ಭಾಗ-1

1) ಕನ್ನಡದ ಆದಿ ವ್ಯಾಕರಣಕಾರ ಯಾರು.?
🐾 2ನೇ ನಾಗವರ್ಮ
 2) " ಛಂದಸ್ಸು ಕವಿಯ ಕಣ್ಣಿನ ಬೆಳಕು "ಎಂದು ಹೇಳಿದವರು.?
🐾 1ನೇ ನಾಗವರ್ಮ
3) ಛಂದಸ್ಸು ಎಂದರೆ..?
🐾ಪದ್ಯಾರಚನ ಶಾಸ್ತ್ರ
4) ಕನ್ನಡ ಛಂದಸ್ಸಿಗೆ ಮಾತ್ರಾಗಣ ಯಾವ ಭಾಷೆಯ ಕೊಡುಗೆ ಯಾಗಿದೆ..?
🐾 ಪ್ರಾಕೃತ
5) ಕನ್ನಡದಲ್ಲಿ ಮೊಟ್ಟ ಮೊದಲ ಪ್ರಾಸಬಿಟ್ಟು ಕಾವ್ಯ ರಚಸಿದವರು...?
🐾ಗೋವಿಂದ ಪೈ
6) " ಬ್ರಹ್ಮ ಗಣ " ವನ್ನು ಜಯಕೀರ್ತಿ ಹೀಗೆ ಕರೆದಿದ್ದಾರೆ..?
🐾 ರತಿ
7) ವಡಿಯ ಪ್ರಸ್ತಾಪ ಕನ್ನಡದಲ್ಲಿ ಮೊದಲಿಗೆ ಮಾಡಿದ ಕೃತಿ ಯಾವುದು..?
🐾 ಕವಿ ಜಿಹ್ವಾಬಂಧನ
8) ಕಂದ ಪದ್ಯದ ಎಷ್ಟನೇ ಗಣದ ಮೇಲೆ ' ಯತಿ ' ಬರುತ್ತದೆ..?
🐾 6ನೇ ಗಣ
9) ಸಂಸ್ಕೃತದ ಆರ್ಯಾಗೀತಿ ; ಪ್ರಾಕೃತದ '  ಸ್ಕಂಧಕ 'ಎಂದಕ್ಕೆ ಕನ್ನಡ ಸಂವಾದ ಪದ ಯಾವುದು,?
🐾 ಕಂದ ಪದ್ಯ
10) " ಖ್ಯಾತ ಕರ್ನಾಟಕ ವೃತ್ತಗಳು " ಎಂದು  ಹೆಸರಿಸಿದವರು .?
🐾 1ನೇ ನಾಗವರ್ಮ

 11) ಅಚ್ಚಗನ್ನಡ ಛಂದಸ್ಸಿನ ಹತ್ತು ಮಟ್ಟುಗಳಲ್ಲಿ ಮೊದಲನೆಯದು,?
🐾 ಮದನವತಿ
12) ಗೀತಿಕೆಯ ಮೊದಲ ಪ್ರಯೋಗ ಕಂಡು ಬರುವ ಕೃತಿ ಯಾವುದು.. ?
🐾ಕವಿರಾಜಮಾರ್ಗ
13) ಪೊಸಗನ್ನಡದಿಂ ವ್ಯಾವರ್ಣಿಸುವೆಂ ಸತ್ಕೃತಿಯಂ ಎಂದು ಹೇಳಿದವನು ..?
🐾 ಚಂದ್ರರಾಜ
14) ಕನ್ನಡ ಮೊದಲನೆಯ ವ್ಯಾಕರಣ ' ಶಬ್ಧಸ್ಮೃತಿ ' ಮತ್ತು ಸಂಸ್ಕೃತದಲ್ಲಿ ಕನ್ನಡ ವ್ಯಾಕರಣ " ಕರ್ಣಾಟಕ ಭಾಷಾಭೂಷಣ " ಬರೆದ ಕವಿ ಯಾರು .?
🐾 2ನೇ ನಾಗವರ್ಮ
15) ಆಗಮ ಲೌಕಿಕ ವಿರೋಧಮಂ ಕಳೆದು , ಸಾರಾಂಶಮಂ ಕೊಂಡಾ ಹಲವು ಮತಂಗಳನೊಂದು ಮಾಡಿ ಬರೆದ ಕಾವ್ಯ ಯಾವುದು..?
🐾 ಮದನ ತಿಲಕ
16) 24ನೇ ತೀರ್ಥಕರ ಮಹಾವೀರನ ಕುರಿತು ಚಂಪೂ ಕಾವ್ಯ ಬರೆದ ಕವಿ ಯಾರು,?
🐾 2ನೇ ನಾಗವರ್ಮ -ವರ್ಧಮಾನ ಪುರಾಣ
17) ಕವಿರಾಜ ಮಾರ್ಗದಲ್ಲಿ ಪ್ರಾಸಾಕ್ಷರವನ್ನು ಹೀಗೆ ಕರೆಯಲಾಗಿದೆ..?
🐾 ಶಬ್ದಾಲಂಕಾರ
18) ಸುಭಟರ್ಕಳ್ ,ಕವಿಗಳ್ ,ಸುಪ್ರಭುಗಳ್ ಎಂದು ವರ್ಣಿಸುವುದಕ್ಕೆ ಕವಿರಾಜಮಾರ್ಗದ ಪ್ರಕಾರ ಯಾವುದು,?
🐾 ಬಹುವಿಶೇಷಣ
19) ಅಕ್ಷರ ಗಣ ಕನ್ನಡಕ್ಕೆ ಯಾವ ಭಾಷೆಯ ಕೊಡುಗೆ ಯಾಗಿದೆ .?
🐾 ಸಂಸ್ಕೃತ
20) ಪ್ರಾಸಾಕ್ಷರವು ವಿಸರ್ಗದಿಂದ ಕೊಡಿದ್ದರೆ...?
🐾 ಅಜಪ್ರಾಸ*

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ