ಪೋಸ್ಟ್‌ಗಳು

ಮೇ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ರಗಳೆ ಪರಿಚಯ  ೦೧.ರಗಳೆ ಮೊದಲು ಛಂದೋಬಂಧವಾಗಿ ಕಂಡುಬರುವುದು ಯಾವ ಕೃತಿಯಲ್ಲಿ? ✅ಆದಿಪುರಾಣ ೦೨.ರಗಳೆಯ ಉಲ್ಲೇಖ ಮೊದಲು ಕಂಡುಬರುವುದು...? ✅ಛಂದೊಂಬುದಿ ೦೩.ಕವಿರಾಜಮಾರ್ಗದಲ್ಲಿ ರಗಳೆಯ ಪ್ರಸ್ತಾಪ ಇದೆಯೇ? ✅ಇಲ್ಲ ೦೪.ಆದಿಪುರಾಣದಲ್ಲಿ ರಗಳೆ ಛಂದೋಬಂಧವಾಗಿ ಯಾವ ಹೆಸರಿನಲ್ಲಿ ಕಂಡುಬರುತ್ತೆ? ✅ಮಂದಾನಿಲ ರಗಳೆ ೦೫.ಛಂದಸ್ಸಿನ ವೃತ್ತ,, ಜಾತಿ, ಛಂದ ಎಂಬ ವರ್ಗಗಳಲ್ಲಿ ರಗಳೆಯನ್ನು ಯಾವುದರಲ್ಲಿ ಸಮಾವೇಶಗೊಂಡಿದೆ? ✅ಜಾತಿ ೦೬."ಗಣನಿಯಮವಿಪರ್ಯಾಸದೊಳೆಣೆವಡೆದು ತಾಳದ ಗಣನೆಗೊಡಂಬಡುವ ರಗಳೆಯು ದೇಶೀಯವಾಗಿಯೇ ಇರುವ ಹಾಡು" ಎಂದವರು? ✅ಮುಳಿಯ ತಿಮ್ಮಪ್ಪಯ್ಯರವರು ೦೭.ರಗಳೆಯಲ್ಲಿ ಹೆಚ್ಚಾಗಿ ಯಾವ ಪ್ರಾಸ ಬಳಕೆಯಾಗಿವೆ? ✅ಅಂತ್ಯ ಪ್ರಾಸ ೦೮."ಪಾದದ್ವಂದ್ವಸಮಾಕೀರ್ಣ" ಎಂದು ರಗಳೆಯ ಬಗ್ಗೆ ಹೇಳಿದವರು? ✅ಜಯಕೀರ್ತಿ ೦೯."ಪದ್ದತಿ ಒಂದು ಬಗೆಯ ಮಾತ್ರಾವೃತ್ತ.ಅಪಭ್ರಂಶ ಕವಿತೆಯಲ್ಲಿ ಅದರ ಬಳಕೆ ಹೆಚ್ಚು" ಎಂದವರು? ✅ಪ್ರೊ.ಎಚ್.ಡಿ ವೆಲಂಕರ ೧೦.ಯಾವ ಛಂದೋಬಂಧದ ಲಯವನ್ನೂ, ಗಣಯೋಜನೆಯನ್ನೂ ಹೋಲುವ ರಗಳೆಯನ್ನು ಪಂಪನು ಪ್ರಯೋಗಿಸಿದ್ದಾನೆ? ✅ಪ್ರಾಕೃತದ ಪಜ್ಝಟಿಕಾ ೧೧.ರಗಳೆ ಎಂಬ ಹೆಸರು ಯಾವ ಭಾಷೆಯದು? ✅ಕನ್ನಡ ೧೨.ಅಂತ್ಯಪ್ರಾಸವನ್ನು ಹೊಂದಿದ ಛಂದೋಬಂಧವು ಸಂಸೃತದಲ್ಲಿದೆಯೇ? ✅ಇಲ್ಲ ೧೩."ರಗಡ" ದ ಪ್ರಸ್ತಾಪ ಬರುವುದು ಯಾವ ಕೃತಿಯಲ್ಲಿ? ✅ಅಪ್ಪಕವಿಯ "ಅಪ್ಪಕವೀಯಮು&
 ರಸಪ್ರಶ್ನೆ ಸರಣಿ-1 ೧.  'ಬ್ರಾಹ್ಮಣ-ಶೂದ್ರ' ಎಂಬ ತಾತ್ವಿಕ ಪರಿಕಲ್ಪನೆಯ ಚರ್ಚೆಯನ್ನು ಮೊದಲು ಮಾಡಿದವರು ಯಾರು? ೨. ಮೌಲ್ಯಗಳ ವಿಘಟನೆ ಹಾಗೂ ಅಸ್ತಿತ್ವದ ಆಭದ್ರತೆಯನ್ನು ಸಶಕ್ತವಾದ ಬಂಧದಲ್ಲಿ ಹಿಡಿದ 'ತಬ್ಬಲಿಗಳು' ಎಂಬ ಕಥೆಯ ಕರ್ತೃ ಯಾರು? ೩. "ಇತರ ತತ್ವಜ್ಞಾನಿಗಳ ಬರಹಗಳೇ ತನ್ನ ತತ್ವಜ್ಞಾನದ ಪ್ರೇರಣೆಗಳಯ" ಹೀಗೆಂದವರು ಯಾರು? ೪. 'ಅಮೃತ ಮತ್ತು ಗರುಡ' ಎಂಬ ವಿಮರ್ಶೆ ಲೇಖನದ ಕರ್ತೃ ಯಾರು? ೫. 'ನಾನೇಕೆ ಬರೆಯುತ್ತೇನೆ' ಎಂಬ ವಿಮರ್ಶಾ ಗ್ರಂಥದ ಕರ್ತೃ ಯಾರು? ೬. ಎಂ. ಗೋಪಾಲಕೃಷ್ಣ ಅಡಿಗರ 'ಭೂಮಿಗೀತ' ಕವನ ಸಂಕಲನ ಕ್ಕೆ ಮುನ್ನುಡಿಯನ್ನು ಬರೆದವರು ಯಾರು? ೭. ಯು.ಆರ್.ಅನಂತಮೂರ್ತಿ ರವರ ವಿಮರ್ಶೆಯ ತಿರುಳು ಯಾವುದು? ೮. 'ಮನಃಶಾಸ್ತ್ರದ ಕೀಲಿಕೈ' ಎಂಬ ಲೇಖನದ ಕರ್ತೃ ಯಾರು? ೯. 'ಕಾವ್ಯಕುತೂಹಲ' ಎಂಬ ವಿಮರ್ಶಾ ಗ್ರಂಥದ ಕರ್ತೃ ಯಾರು? ೧೦. 'ಬಂಡಾಯ ಸಾಹಿತ್ಯ - ದಲಿತ ಸಾಹಿತ್ಯ' ಎಂಬ ತಾತ್ವಿಕ ವೈಚಾರಿಕ ಆಕೃತಿಯ ರುವಾರಿಗಳು ಯಾರು? ಪ್ರಶ್ನೆಗೆ ಉತ್ತರಗಳು-1 ೧. ಯು.ಆರ್. ಅನಂತಮೂರ್ತಿ ೨. ರಾಘವೇಂದ್ರ ಖಾಸನೀಸ ೩. ಜಿ. ಇ. ಮೂರ್ ೪. ಡಿ ಆರ್ ನಾಗರಾಜ ೫. ಎಸ್ ಎಲ್ ಭೈರಪ್ಪ ೬. ಯು ಆರ್ ಅನಂತಮೂರ್ತಿ ೭. ರಾಜಕೀಯ ಮತ್ತು ಸಾಮಾಜಿಕ ಕಾಳಜಿ ೮. ಜಿ ಎಸ್ ಶಿವರುದ್ರಪ್ಪ ೯. ಪು.ತಿ.ನರಸಿಂಹಾಚಾರ್ ೧೦.
ವಡ್ಡಾರಾಧನೆ-ಚಾಣಕ್ಯರಿಷಿಯಕಥೆ ೦೧."ದೇವಾ ನಿಮ್ಮ ಸಾರಮಪ್ಪ ದ್ರವ್ಯಮನಾರುಮರಿಯದಲ್ಲಿ ಮಡಗಿ ನಾಮುಚ್ಚವಿಗ್ರಹದೊಳ್ ನಿಂದು ಕಾದುವಮ್" ಎಂದು ಯಾರು ಯಾರಿಗೆ ಹೇಳಿದರು? ✅ಕಾಪಿ(ವಿಶ್ವಸೇನ) ೦೨."ನಾಮಿನಿಬರುಂ ಸಾವರು ಮಲ್ಲ ಬಾಳ್ವರುಮಲ್ಲೆಮ್ಮೊಳಾವನೊರ್ವಂ ನಮ್ಮ ಪಗೆಯನಿರಿಯಲುಂ" ಎಂದವರು ಯಾರು? ✅ಕಾಪಿ(ವಿಶ್ವಸೇನ) ೦೩.ವಸಂತಕನು ಒಬ್ಬ....? ✅ಮಾಲೆಗಾರ ೦೪."ಪ್ರಪಂಚವು ಮರದ ಕೊಂಬೆಯಿಂದ ನಡುಕಗೊಂಡಿದೆ" ಎಂಬ ವಸಂತಕನ ಮಾತಿನಲ್ಲಿ ಪ್ರಪಂಚವು ಯಾರನ್ನು ಸೂಚಿಸುತ್ತದೆ? ✅ವಿಶ್ವಸೇನ ೦೫.ನಮ್ಮ ಶತೃವನ್ನು ಘಾತಿಸಲೂ ನಂದ ವಂಶವನ್ನು ನಿರ್ಮೂಲನ ಮಾಡಲೂ ನಾನು ಸಮರ್ಥನಾಗುವೆನು" ಎಂದವರು ಯಾರು? ✅ಸಂಬಂಧು(ಮಂತ್ರಿ) ೦೬.ಯಾವ ನದಿಯ ತೀರದಲ್ಲಿ ಚಾಣಕ್ಯನ ಕಾಲನ್ನು ಒಂದು ಎಳೆಯ ದರ್ಬೆ ಚುಚ್ಚಿ ರಕ್ತ ಸುರಿಯಿತು? ✅ಶೋಣೆ ೦೭.ನವನಂದನರ ಸರಿಯಾದ ಅನುಕ್ರಮಣಿಕೆ ತಿಳಿಸಿ. ೧.ವಿಜಯ, ೨.ನಂದನ, ೩.ನಂದಮಹಾರಾಜ, ೪.ನಂದಿವರ್ಧನ, ೫.ಸುನಂದನ, ೬.ನಂದ, ೭.ಮಹಾಪದ್ಮ, ೮.ಶ್ರೀನಂದನ, ೯.ಪದ್ಮ. ✅೩೧೨೫೪೬೮೯೭ ೦೮."ಆ ರಾಣಿಗೆ ಹುಟ್ಟಿದ ಮಗುವನ್ನು ನನಗೆ ಕೊಡುವುದಾದರೆ ರಾಣಿಯ ಬಯಕೆಯನ್ನು ಈಡೇರಿಸುವೆನು" ಎಂದು ಯಾರು ಯಾರಿಗೆ ಹೇಳಿದರು? ✅ಚಾಣಕ್ಯ- ಕುಮುದನಿಗೆ ೦೯.ಸಿದ್ದರಸದ ಬಾವಿ____ಯಂತೆ ನಾತ ಬಡಿಯುತ್ತಿತ್ತು. ✅ಹುಳಿಮಜ್ಜಿಗೆ ೧೦.ನೇಕಾರರ ಮುದುಕಿ ಕಂಡಂತೆ ಈ ಲೋಕದಲ್ಲಿ
ಆತ್ಮಕಥೆಗಳು ಕ್ರ. ಸಂ. - ವ್ಯಕ್ತಿ - ಆತ್ಮಕಥೆ 1. ಕುವೆಂಪು - ನೆನಪಿನ ದೋಣಿಯಲ್ಲಿ 2. ಶಿವರಾಮ ಕಾರಂತ - ಹುಚ್ಚು ಮನಸಿನ ಹತ್ತು ಮುಖಗಳು 3. ಮಾಸ್ತಿ - ಭಾವ 4. ಅ.ನ.ಕೃ. - ಬರಹಗಾರನ ಬದುಕು 5. ಸ.ಸ.ಮಾಳವಾಡ. ದಾರಿ ಸಾಗಿದೆ 6. ಎಸ್.ಎಲ್.ಭೈರಪ್ಪ - ಭಿತ್ತಿ 7. ಬಸವರಾಜ ಕಟ್ಟೀಮನಿ - ಕಾದಂಬರಿಕಾರನ ಬದುಕು 8. ಪಿ.ಲಂಕೇಶ್ - ಹುಳಿ ಮಾವಿನ ಮರ 9. ಎ.ಎನ್.ಮೂರ್ತಿರಾವ್ - ಸಂಜೆಗಣ್ಣಿನ ಹಿನ್ನೋಟ 10. ಎಚ್.ನರಸಿಂಹಯ್ಯ - ಹೋರಾಟದ ಬದುಕು 11. ಗುಬ್ಬಿ ವೀರಣ್ಣ - ಕಲೆಯೇ ಕಾಯಕ 12. ಹರ್ಡೇಕರ್ ಮಂಜಪ್ಪ - ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ 13. ಸ.ಜ.ನಾಗಲೋಟಿಮಠ - ಬಿಚ್ಚಿದ ಜೋಳಿಗೆ 14. ಬೀchi - ಭಯಾಗ್ರಫಿ 15. ಸಿದ್ದಲಿಂಗಯ್ಯ - ಊರು ಕೇರಿ 16. ಕುಂ.ವೀರಭದ್ರಪ್ಪ - ಗಾಂಧಿ ಕ್ಲಾಸು
ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು 1.ಕಾನೂರು ಹೆಗ್ಗಡಿತಿ - ಕುವೆ೦ಪು 2.ಮಲೆಗಳಲ್ಲಿ ಮದುಮಗಳು - ಕುವೆ೦ಪು 3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ 4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ 5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್ 6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ 7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ 8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ 9.ಸಂಧ್ಯಾರಾಗ - ಅ.ನ. ಕೃಷ್ಣರಾಯ 10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್ 11.ಗ್ರಾಮಾಯಣ - ರಾವ್ ಬಹದ್ದೂರ್ 12.ಶಾಂತಲಾ - ಕೆ.ವಿ. ಅಯ್ಯರ್ 13.ಸಂಸ್ಕಾರ - ಯು.ಆರ್. ಅನಂತಮೂರ್ತಿ 14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ 15.ಗೃಹಭಂಗ - ಎಸ್.ಎಲ್. ಭೈರಪ್ಪ 16.ಮುಕ್ತಿ - ಶಾಂತಿನಾಥ ದೇಸಾಯಿ 17.ವೈಶಾಖ - ಚದುರಂಗ 18.ಮೃತ್ಯುಂಜಯ - ನಿರಂಜನ 19.ಚಿರಸ್ಮರಣೆ - ನಿರಂಜನ 20.ಶಿಕಾರಿ - ಯಶವಂತ ಚಿತ್ತಾಲ 21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ 22.ಕಾಡು - ಶ್ರೀಕೃಷ್ಣ ಆಲನಹಳ್ಳಿ 23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ 24.ಬಂಡಾಯ - ವ್ಯಾಸರಾಯ ಬಲ್ಲಾಳ 25.ತೇರು - ರಾಘವೇಂದ್ರ ಪಾಟೀಲ 26.ದ್ಯಾವನೂರು - ದೇವನೂರು ಮಹಾದೇವ 27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್ 28.ಇಜ್ಜೋಡು - ವಿ.ಕೃ. ಗೋಕಾಕ್ 29.ಬದುಕು - ಗೀತಾ ನಾಗಭೂಷಣ 30.ಮಾಧವ ಕರುಣಾ ವ
ಗದಾಯುದ್ಧದ ೦೫ ನೇ ಆಶ್ವಾಸದ ಪ್ರಶ್ನೆಗಳು. ಸಂಗ್ರಹ: ಬಸಮ್ಮ ೦೧.ಮೃಗರಾಜ ಪತಾಕ ಎಂದರೆ ಯಾರು? ✅ಭೀಮ ೦೨."ಶ್ರೀಕಾಂತಂ ಸಮರಜಯ ಶ್ರೀಕಾಂತಂ ರಿಪುದರ್ಪೋದ್ರೇಕಹರಂ"ಎಂದು  ಭೀಮನ ಪರಾಕ್ರಮದ ಬಗ್ಗೆ ಯಾರು ಯಾರಿಗೆ ಹೇಳಿದರು? ✅ಸಂಜಯ ದುರ್ಯೋಧನನಿಗೆ ೦೩.ಭೀಮನು ಯಾರ ಆನೆಯ ಜೊತೆಗೆ ಹೋರಾಡಿದನೆಂದು ಸಂಜಯ ದುರ್ಯೋಧನನಿಗೆ ಹೇಳಿದನು? ✅ಭಗದತ್ತನ ಆನೆ ೦೪."ಧಾತ್ರಿಸುತನಿಭದೊಳಿಭಂ ಪೋರ್ವವೊಲ್ ಪೋರ್ದ ತಾಣಂ"ಇದರಲ್ಲಿರುವ ಅಲಂಕಾರ ಯಾವುದು? ✅ಉಪಮಾ ೦೫.ಭೀಮನು ದುಶ್ಯಾಸನನ ರಕ್ತವನ್ನು ಹೇಗೆ ಕುಡಿದನೆಂದು ಸಂಜಯ ಹೇಳುತ್ತಾನೆ? ✅ಗೊಟ್ಟವೆತ್ತಿ /ಗೊಟ್ಟಂಗುಡಿದಂ ೦೬.ಕಳಿಂಗರಾಜನ ಯಾವ ಸೈನ್ಯವನ್ನು ಭೀಮನು ಕೊಂದಿದ್ದನು? ✅ಗಜ ಸೈನ್ಯ ೦೭.ಹೊಂದಿಸಿ ಬರೆಯಿರಿ. a)ಕಾಗೆಗಳು  1)ಪಕ್ಕೆಯ ಬಳಿ ಬಂದು ಕಾಡುವ b)ಹದ್ದುಗಳು   2)ಕಣ್ಣನ್ನು ಕುಕ್ಕುವ c)ನರಿಗಳು     3)ರಕ್ತನಾಳವನ್ನು ಸೆಳೆಯುವ d)ಬಳ್ಳುಗಳು   4)ನರವನ್ನು ಕೀಳುವ e)ಸೀಳ್ನಾಯಿಗಳು 5) ಕರುಳ ತೊಡಕನ್ನು ಹಿಡಿದೆಳೆಯುವ ✅a-2,  b-5,  c-4,  d-1,  e-3 ೦೮.ಪುಣ್ಣ ಪದದ ಅರ್ಥವೇನು? ✅ಗಾಯ ೦೯."ನಡುವುಡಿವನ್ನಮೇರಿ ಬರೆಯಲ್ವುಡೆವನ್ನೆಗಮೊತ್ತಿ" ಇದು ಯಾರ ಶವದ ಸ್ಥಿತಿಯನ್ನು ಸೂಚಿಹುತ್ತದೆ? ✅ದುಶ್ಯಾಸನನ ೧೦.ದುಶ್ಯಾಸನನು ಯಾರಿಂದ ಪಂಚತ್ವವನ್ನು ಹೊಂದಿದನು? ✅ಭೀಮನ ಭೀಮಗದೆಯಿಂದ ೧೧.ಹೊಂದಿಸಿ ಬರೆಯಿರಿ 1) ಜೀವ.  
ವಡ್ಢಾರಾಧನೆ ಕಥೆಗಳು  ಭದ್ರಬಾಹು ಭಟ್ಟಾರಕರ ಕಥೆ ೧,ಭದ್ರಬಾಹು ಭಟ್ಟಾರರ ಕತೆ ಯಾವ ಗಾಹೆಯಿಂದ ಆರಂಭವಾಗುತ್ತದೆ? ಉ-ಓಮೋದರಿಏ ಘೋರಾಎ ಭದ್ರಬಾಹು ಅಸಂಕಿಲಿಟ್ಟಮದೀ..... ೨,ಕೌಡಿನಿ ನಗರದ ಅರಸ ಯಾರು?ಆತನ ಹೆಂಡತಿಯ ಹೆಸರೇನು? ಉ-ಪದ್ಮರಥ ಪದ್ಮಶ್ರೀ ೩,ಪದ್ಮರಥನ ಪುರೋಹಿತ ಯಾರು? ಉ-ಸೋಮಶರ್ಮ ೪,ಭಾರ್ಯೆ ಪದದ ಅರ್ಥವೇನು? ಉ-ಹೆಂಡತಿ ೫,ಪ್ರತ್ಯಕ್ಷ ಶ್ರೀಯಾದೇವತೆಯನೆ ಬಳಲುವವರು ಯಾರು? ಉ-ಸೋಮಶ್ರೀ ೬,ಭದ್ರಬಾಹುವಿನ ತಂದೆ ತಾಯಿಯ ಹೆಸರೇನು? ಉ-ಸೋಮಶರ್ಮ ಸೋಮಶ್ರೀ ೭,ಭದ್ರಬಾಹುವಿಗೆ ಎಲ್ಲಾ ವಿಧದ ಶಾಸ್ತ್ರಗಳನ್ನು ಕಲಿಸಿದವರಾರು? ಉ-ಗೋವರ್ಧನ ಭಟಾರರು ೮,ಭದ್ರಬಾಹು ಯಾರ ಬಳಿ ತಪಸ್ಸನ್ನು ಕೈಗೊಂಡ? ಉ-ಗೋವರ್ಧನಭಟಾರರು ೯,ಜೈನಮುನಿ ಪರಂಪರೆಯಲ್ಲಿ ಮೂರನೆ ಮುನಿ ಯಾರು? ಉ-ವರ್ಧಮಾನ ೧೦,ಕೋಟೆಗಳಿಂದ ಪರಿವೇಷ್ಟಿತವಾದದ್ದು? ಉ-ಖೇಡ ೧೧,ತೊವೆ ಪದದ ಅರ್ಥ? ಉ-ಪಾಯಸ ೧೨,ಈ ಕತೆಯಲ್ಲಿ ಯಾರ ಬೆಳವಣಿಗೆಯನ್ನು ಬಿದಿಗೆಯ ಚಂದ್ರನಿಗೆ ಹೋಲಿಸಲಾಗಿದೆ? ಉ-ಭದ್ರಬಾಹು ೧೩,ಕೌಡಿನಿ ನಗರ ಯಾವ ನಾಡಲ್ಲಿದೆ? ಉ-ಪುರವರ್ಧನ ೧೪,ವರ್ಧಮಾನ ಭಟ್ಟಾರರು ಮೋಕ್ಷ ಹೊಂದಿದ ಬಳಿಕ ಬಂದ ನಾಲ್ಕನೆ ಶ್ರುತಕೇವಳಿಗಳು ಯಾರು? ಉ-ಗೋವರ್ಧನ ಭಟ್ಟಾರರು ೧೫,ಭದ್ರಬಾಹು ಭಟಾರರಿಗೆ ದಶದಿಕ್ಕುಗಳಲ್ಲಿ ನಿನ್ನ ಪಾಂಡಿತ್ಯದ ಯಶಸ್ಸನ್ನು ಪಸರಿಸು ಎಂದವರು ಯಾರು? ಉ-ಗೋವರ್ಧನ ಭಟಾರರು ೧೬,ಪ್ರತಿಮಾಯೋಗ ಕೈಗೊಂಡವರು ಯಾರು? ಉ-ಭದ್ರಬಾಹು ಭಟಾರರು ೧೭,ಸಮಾಧಿ ಮರ
🌻ವಡ್ಡಾರಾಧನೆ ಪರಿಚಯದ ಪ್ರಶ್ನೆಗಳು 🌻                     ✍ ಸತೀಶ ಸಿ   ಹೇಮದಳ✍ ೧) ಇದರಲ್ಲಿ ವಡ್ಡಾರಾಧನೆಗೆ ಸಂಬಂಧಿಸಿಲ್ಲದ ಸಾಲು ಯಾವುದು ?             # ಕನ್ನಡದ ಪ್ರಪ್ರಥಮ ಗದ್ಯಕೃತಿ                # ಕನ್ನಡದ ಪ್ರಪ್ರಥಮ ಕಥಾ ಸಂಕಲನ                   #  ಧಾರ್ಮಿಕ ಕಥಾಗುಚ್ಚ                 #  ಉಪಸರ್ಗ ಕೇವಲಿಗಳ ಕಥೆ.  👉 ಮೇಲಿನ ಎಲ್ಲವೂ ಸಂಬಂಧಿಸಿವೆ.  ೨) ವಡ್ಡಾರಾಧನೆ ಗದ್ಯಕೃತಿಯ ಕಾಲವನ್ನು ೯೨೦ ಎಂದು ಅಭಿಪ್ರಾಯ ಪಟ್ಟವರಾರು?  👉೨) ಡಿ,ಎಲ್,ನರಸಿಂಹಾಚಾರ್ಯರು.  ೩)ವಡ್ಡಾರಾಧನೆಯ ಕರ್ತೃ......?  👉 ೩) ಶಿವಕೋಟ್ಯಾಚಾರ್ಯರು  ೪) ಶಿವಕೋಟ್ಯಾಚಾರ್ಯರ ಮೂಲ ನೆಲಯಾವುದು?  👉 ೪) ಬಳ್ಳಾರಿ ಜಿಲ್ಲೆಯ,ಹೂವಿನಡಗಲಿಯ 'ಕೋಗಳಿ'  ೫) ಶಿವಕೋಟ್ಯಾಚಾರ್ಯರ ಗುರುಗಳಾರು ?  👉 ೫)ಸ್ವಾಮಿ ಸುಮಂತ ಭದ್ರಾಚಾರ್ಯರು.     ೬) ಹಳಗನ್ನಡದ ಪ್ರಪ್ರಥಮ ಕಥೆಗಾರ ಯಾರು ?  👉 ೬)   ಶಿವಕೋಟ್ಯಚಾರ್ಯ  ೭) ವಡ್ಡಾರಾಧನೆಯ ೫ ಮೂಲ ಪ್ರತಿಗಳನ್ನು ಸಂಪಾದಿಸಿದವರು ಯಾರು?  👉 ೭) ಡಿ ಎಲ್ ನರಸಿಂಹಾಚಾರ್ಯರು. ೮) ಈ ಕೆಳಗಿನವುಗಳಲ್ಲಿ ತಪ್ಪಿರುವುದು  ಯಾವುದು?                 ಅ)ದೊಡ್ಡ ಆರಾಧನೆ,                        ಆ)ಬೃಹತ್ ಆರಾಧನೆ,             ಇ)ಧಾರ್ಮಿಕ ಆರಾಧನೆ,            ಈ)ವೃದ್ಧರ ಆರಾಧನೆ, 👉೮)ಇ)ಧಾರ್ಮಿಕ ಆರಾಧನೆ. ೯) ವಡ್ಡಾರಾಧನೆಯ ಕಾಲವನ
ರಸಪ್ರಶ್ನೆ ಸರಣಿ -1 ೧. "ಮೊಳೆದ ಸಂಧ್ಯಾಂಗನೆಗಂಬುಧಿ ನಿವಾಳಿಸಲೆಂದು ತಳೆದ ಮಾಣಿಕದ ಪೆರ್ಜೊಡರೊ" ಈ ವಾಕ್ಯವು ಯಾವ ಅಲಂಕಾರ ಕ್ಕೆ ಉದಾಹರಣೆ? ೨. ತನ್ನ ಕೃತಿಯು " ಛಂದಸ್ಸು ಲಕ್ಷಣದಲಂಕಾರ ಭಾವರಸವೊಂದಿ ಕಳೆಬೆತ್ತ ಸತ್ಕೃತಿ ಚಮತ್ಕೃತಿಯುಕ್ತವೊಂದುಮಿಲ್ಲದ ಕಾವ್ಯಮಶ್ರಾವ್ಯಂ" ಎಂದೂ' ವಿನೂತನ ಕವಿತೆ' ಎಂದು ಹೇಳಿದ ಕವಿ ಯಾರು? ೩. "ಕವಿತೆ ನೆಗಳ್ತೆಯಂ ನಿರಿಸೆ ಜೋಳದಪಾಳಿ ನಿಜಾಧಿನಾಥನಾಹವದೊಳಾರತಿ ನಾಯಕರ ಪಟ್ಟನೆ ಪಾರಿಸಿ ಸಂದ ಪೆಂಪು" ಎಂದು ಹೇಳಿದವರು ಯಾರು? ೪. 'ಜಿನಶಾಸನ ದೀಪಿಕೆ', 'ಜಿನ ಧರ್ಮ ಪತಾಕೆ' ಎಂದು ಯಾರನ್ನು ವರ್ಣಿಸಲಾಗಿದೆ? ೫. ದುರ್ಗಸಿಂಹನ ಪಂಚತಂತ್ರ ಕೃತಿಯಲ್ಲಿ ಅತೀ ದೀರ್ಘ ಪ್ರಕರಣ ಯಾವುದು? ೬. ಯಾರ ವಚನಗಳನ್ನು'ರೂಪಕ ಕಾವ್ಯ'ಗಳೆಂದು ಕರೆಯಲಾಗಿದೆ? ೭. "ವಿಚಾರಿಸಬೇಡದರಿಂ ರಳಕುಳಕ್ಷಳಂಗಳನಿದರೊಳ್" ಎಂದು ಹೇಳಿದವರು ಯಾರು? ೮. "ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ" ಈ ಮಾತಿನ ಉಲ್ಲೇಖ ಇರುವುದು ಯಾವ ಗ್ರಂಥದಲ್ಲಿ? ೯. "ಬುದ್ಧದೇವನೇ ದೇಶ ಭಾಷಾ ಸಾಹಿತ್ಯಗಳ ಬೀಜವನ್ನ ಬಿತ್ತಿದನೆಂದು" ಪ್ರತಿಪಾದಿಸಿದ ವಿದ್ವಾಂಸರು ಯಾರು? ೧೦. "ದೋಷವುಳ್ಳವ ನಾನು ಭಾಷೆಯುಳ್ಳವ ನೀನು ಮೋಸ ಹೋದೆನೋ ಭಕ್ತಿರಸವ ಬಿಟ್ಟು" ಈ ಕೀರ್ತನೆಯ ರಚನಾಕಾರರು ಯಾರು? ಈ ರಸಪ್ರಶ್ನೆ ತಯಾರ
ಸಾಹಸಭೀಮ ವಿಜಯ     🌷ಪ್ರಶ್ನೆ - ಶ್ರುತಿ ಹೆಚ್🌷 1. ಕನ್ನಡದ ರತ್ನತ್ರಯರುಗಳನ್ನು ತಿಳಿಸಿ. 🔑ಪಂಪ ಪೊನ್ನ ರನ್ನ  2.ರತ್ನತ್ರಯರಲ್ಲಿ ರನ್ನ ಎಷ್ಟನೆಯವನು? 🔑ಮೂರನೆಯವನು  3.ರತ್ನತ್ರಯರನ್ನು ಮೊದಲ ಬಾರಿಗೆ ಹೆಸರಿಸಿದವರು ಯಾರು? 🔑 ರನ್ನ 4.ರನ್ನ ತನ್ನ ವೈಯಕ್ತಿಕ ವಿಷಯಗಳನ್ನು ಯಾವ ಕೃತಿಗಳಲ್ಲಿ ಹೇಳಿಕೊಂಡಿದ್ದಾನೆ? 🔑ಅಜಿತನಾಥ ಪುರಾಣ ಹಾಗೂ ಗದಾಯುದ್ದ 5.ರನ್ನ ಹುಟ್ಟಿದ್ದು ಯಾವಾಗ?ಯಾವ ಸಂವತ್ಸರದಲ್ಲಿ? 🔑ಕ್ರಿ.ಶ.949 ಸೌಮ್ಯ ಸಂವತ್ಸರ. 6.ರನ್ನನ ತಂದೆ ತಾಯಿಯ ಹೆಸರೇನು 🔑ಜೀನೇಂದ್ರ ವಲ್ಲಭ ಅಬ್ಬಲಬ್ಬೆ 7.ರನ್ನನ ಸಹೋದರರ ಹೆಸರೇನು? 🔑ರೇಚಣ ದೃಡಬಾಹು ಮಾರಯ್ಯ  8.ರನ್ನ ಜನಿಸಿದ ಸ್ಥಳ ಯಾವುದು? 🔑ಮುದುವೊಳಲ್ 9.ರನ್ನ ನ ಮಡದಿಯರ ಹೆಸರೇನು? 🔑ಜಕ್ಕಿ ಶಾಂತಿ 10.ರನ್ನನ ಮಕ್ಕಳ ಹೆಸರೇನು?ಯಾರ ನೆನಪಿಗಾಗಿ ಆ ಹೆಸರು ಇಡಲಾಗಿದೆ? 🔑ರಾಯ ಅತ್ತಿಮಬ್ಬೆ 9.ರನ್ನನ ವಂಶದ ಕುಲಕಸುಬು ಯಾವುದು? 🔑ಬಳೆಗಾರ ವೃತ್ತಿ 10.ರನ್ನನ ವಿದ್ಯಾಭ್ಯಾಸದ ಗುರುಗಳು ಯಾರು? 🔑ಶ್ರವಣ ಬೆಳಗೊಳದ ಜಿನಸೇನಾಚಾರ್ 11.ರನ್ನ ಯಾವ ಮತಧರ್ಮಕ್ಕೆ ಸೇರಿದವನು? 🔑ಜೈನ 12.ರನ್ನನ ಮತ್ತೋರ್ವ ಗುರು ಯಾರು? 🔑ಗಂಗ ಮಂಡಲದ ಅಜಿತ ಸೇನಾಚಾರ್ಯ 13.ರನ್ನ ಮೊದಲು ಯಾರ ಆಶ್ರಯದಲ್ಲಿದ್ದ? 🔑ಚಾವುಂಡರಾಯ 14.ರನ್ನನು ಕವಿಯಾಗುವುದಕ್ಕೆ ಮೊದಲು ಏನಾಗಿದ್ದ? 🔑ಪಂಡಿತ 15.ರನ್ನನಿಗೆ ಆಶ್ರಯ ನೀಡಿದ ದೊರೆ ಯಾರು?
🌹ಆದಿಪುರಾಣದ ೧೪ನೇ ಆಶ್ವಾಸ🌹 ಪ್ರಶ್ನೆ➖ರಾಜು. ೧.ಭರತನು ನನಗೆ ಹದಿನಾಲ್ಕು ರತ್ನಗಳಲ್ಲಿ ಶ್ರೇಷ್ಟವಾದುದು ಎಂದುದು? ✍ಚಕ್ರರತ್ನ. ೨.ತನ್ನಭಿಮಾನದ ಭುಜಬಲದುನ್ನತಿಯನೆ ಮೆರೆವವನು ಯಾರು? ✍ಬಾಹುಬಲಿ. ೩.ಭರತನ ಕೋಪವನ್ನು ಯಾವ ಲೀಲೆಗೆ ಹೋಲಿಸಲಾಗಿದೆ. ✍ಯಮನ ಲೀಲೆಗೆ. ೪.ಪಿರಿಯಣ್ಣನು ಯಾರಿಗೆ ಸಮ ✍ತಂದೆಗೆ ಸಮ. ೫.ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ ಎಂದವರು? ✍ಭರತನ ತಮ್ಮಂದಿರು(ಬಾಹುಬಲಿ ಹೊರತು ಪಡಿಸಿ). ೬.ಭರತನ ತಮ್ಮಂದಿರು ಯಾರಿಗೆ ಎರಗುವುದು ಪರಾಭವ ಎಂದು ತಿಳಿದಿದ್ದರು. ✍ಭರತನಿಗೆ ೭.ಭರತನ ತಾಯಿ ಯಾರು? ✍ಯಶಶ್ವತಿ ದೇವಿ. ೮.ಭರತ ರೂಪದಲ್ಲಿ ಯಾರನ್ನು ಹೋಲುತ್ತಿದ್ದನು. ✍ಪುರುದೇವನನ್ನು. ೯.ಷಟ್ಖಂಡ ಮಂಡಲಗಳನ್ನು ಗೆದ್ದವರು ಯಾರು? ✍ಭರತ. ೧೦.ನೀ ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ ಎಂದವರು? ✍ಬಾಹುಬಲಿ. ೧೧.ಸೋದರರೊಳು ಸೋದರರಂ ಕಾದಿಸುವುದು ಯಾವುದು? ✍ರಾಜಲಕ್ಷ್ಮಿ. ೧೨.ಭರತ ಬಾಹುಬಲಿ ಯುದ್ದಕ್ಕೆ ನಿಂತಾಗ ಹೇಗೆ ಕಾಣುತ್ತಿದ್ದರು. ✍ಅವನಿ. ೧೩.ಚಕ್ರರತ್ನದ ರಕ್ಷಕರು ಯಾರು? ✍ಯಕ್ಷಸಹಸ್ರರು. ೧೪.ಚಕ್ರರತ್ನವು ಯಾವ ಊರಿನ ಒಳಗೆ ಹೋಗದೆ ನಿಂತಿತು. ✍ಅಯೋಧ್ಯ. ೧೫.ಭರತನ ತಮ್ಮಂದಿರಲ್ಲಿ ಅತಿ ಶೂರ ಪರಾಕ್ರಮಿ ಯಾರು. ✍ಬಾಹುಬಲಿ. ೧೬.ಬಾಹುಬಲಿ ಭರತನನ್ನು ಮೇಲಕ್ಕೆ ಎತ್ತಿದ್ದು ಯಾವುದಕ್ಕೆ ಹೋಲಿಸಿದೆ. ✍ಕನಕಾಚಲವನ್ನು ಘನ ಮರಕಶೈಲವು ಹೊತ್ತಿದೆಯಂಬಂತೆ.
📜ಪಂಪನ ಆದಿಪುರಾಣ 14ನೇ ಆಶ್ವಾಸ 📜 🌞ಪ್ರಶ್ನೆಗಳು: ಪ್ರಭಾಕರ 1 .ದಿಗ್ವಿಜಯದಲ್ಲಿಯೇ ಅರವತ್ತು ಸಾವಿರ ವರ್ಷಗಳನ್ನು ಕಳೆದವರು? ಉತ್ತರ: ಭರತ 2.ಚಕ್ರರತ್ನದ ರಕ್ಷಕರಾಗಿದ್ದವರು ಯಾರು? ಉತ್ತರ: ಯಕ್ಷ ಸಹಸ್ರರು 3.ಚಕ್ರ ರತ್ನವು ಅಯೋಧ್ಯಾಪುರವನ್ನು ಒಳ ಹೋಗದೇ ನಿಂತುದ್ದನ್ನು ಕಂಡು ಅಲ್ಲಿ ನೆರದವರಾರು? ಉತ್ತರ: ಯಕ್ಷ ಸಹಸ್ರರೊಡನೆ ಗಣಬದ್ಧ ದೇವರು 4.ನನಗೂ ಶತೃಗಳು ಇರುವರೆಂಬ ವಿಷಯವನ್ನು ತಿಳಿಸಿದವರು ಯಾರು? ಉತ್ತರ: ಚಕ್ರರತ್ನ 5.ನೀನು ಆದಿರಾಜ ನಿನಗೆ ಸಾಮದಾನಗಳೇ ಮೊದಲಾದ 4  ರಾಜ ವಿದ್ಯೆಗಳು ತಿಳಿದಿವೆ ಎಂದು ಯಾರು ಯಾರಿಗೆ ಹೇಳಿದರು? ಉತ್ತರ: ಪರೋಹಿತ ಭರತನಿಗೆ 6. ಯಾವ ಯಾವ ದ್ವಾರಗಳನ್ನು ದಾಟಿ ಭರತ ಲವಣ ಸಮುದ್ರವನ್ನು ಹೊಕ್ಕನು? ಉತ್ತರ: ಗಂಗಾ,ವೈಜಯಂತಿ,ಸಿಂಧೂ 7.ಮಿಂಚಿನ ಕಾಂತಿಯಂತೆ ಚಂಚಲವಾದ ರಾಜ್ಯ ವ್ಯಾಮೋಹನ್ನು ಕಳಚುವುದು ಕಷ್ಟ ಎಂದವರು? ಉತ್ತರ: ಬಾಹುಬಲಿ 8.ಆದಿಪುರಾಣದ 14ನೇ ಆಶ್ವಾಸ ಮುಂದಿನ ಯಾವ ಕವಿಯ ಕಾವ್ಯಕ್ಕೆ ಆಕರವಾಯಿತು? ಉತ್ತರ: ರತ್ನಾಕರವರ್ಣಿಯ ಭರತೇಶ ವೈಭವ 9.ನೆತ್ತಿಯ ಮೇಲೆ ಕತ್ತಿಯಿಂದ ಗೀರಿ   ಅಕಾರಣವಾಗಿ ಛಲದಿಂದ ತಲೆಬಾಗಿಸ ಹೊರಟವನಿಗೆ ಎರಗವುದು ಅಂಜುಬುರುಕತನವಲ್ಲವೇ ಎಂದವರು? ಉತ್ತರ: ಬಾಹುಬಲಿ 10.ಭರತನು ನಮ್ಮ ಕಾಲುಗಳ ಮೇಲೆ ಬೀಳುವಂತಾಗಲು ಯೋಗ್ಯವೆನಿಸಿದ ತಪವನ್ನು ಅನುಗ್ರಹಿಸು ಎಂದು ಹೇಳಿದವರಾರು? ಉತ್ತರ: ಭರತನ ತಮ್ಮಂದಿರು 11.ಕೊಂಕು ನುಡಿ
ಚೋಮನದುಡಿ ಕಥೆಯ ಸಾರಾಂಶ: ಚೋಮ ಮತ್ತು ಅವನ ಕುಟುಂಬ ಭೋಗನ ಹಳ್ಳಿಯಲ್ಲಿ ನೆಲೆಸಿರುತ್ತಾರೆ. ಅವನ ಮಕ್ಕಳು ಚನಿಯ, ಗುರುವ, ಕಾಳ, ನೀಲ ಮತ್ತು ಬೆಳ್ಳಿ.. ಚೋಮನಿಗೆ ಬಹಳ ಇಷ್ಟವಾದ ವಸ್ತುಗಳು ಎರಡು, ಒಂದು ದುಡಿ ಮತ್ತೊಂದು ಸೇಂದಿ(ಹೆಂಡ). ಇವೆರಡೂ ಇಲ್ಲದೆ ಅವನಿಗೆ ಜೀವನ ನಡೆಸಲು ಬಹಳ ಕಷ್ಟ. ಅವನು ಜೀವನದಲ್ಲಿ ನೊಂದಾಗ ದುಡಿಯನ್ನು ಬಾರಿಸಿ ತನ್ನ ನೋವನ್ನು ನೀಗಿಕೊಳ್ಳುವನು. ಚೋಮನ ಹೆಂಡತಿ ಈಗಾಗಲೆ ತೀರಿಕೊಂಡಿರುತ್ತಾಳೆ. ಚೋಮ ಸಂಕಪ್ಪಯ್ಯನವರ ಬಳಿ ಕೆಲಸ ಮಾಡುತ್ತಿರುವುದಾಗಿಯೂ ಹಾಗೂ ಮಕ್ಕಳು ಹೊರೆ-ಸೊಪ್ಪನ್ನು ತರುವುದರಿಂದಾಗಿಯೂ ಅವರಿಗೆ ಎರಡು ಪಾವು ಅಕ್ಕಿ ಮತ್ತು ಐದು ಪಾವು ಭತ್ತ ದೊರೆಯುತ್ತಿರುತ್ತದೆ. ಮನೆಯಲ್ಲಿ ಬಾಡು ಎಂಬ ನಾಯಿಯೂ ಇರುತ್ತದೆ. ಹೀಗೆ ಎಲ್ಲ ಕಷ್ಟಗಳ ನಡುವೆ ಅವರು ಜೀವನ ನಡೆಸುತ್ತಿರುತ್ತಾರೆ. ಮನುಷ್ಯನಿಗೆ ಆಸೆ ಅನ್ನುವುದು ಸಹಜ. ಚೋಮನಿಗೂ ಹೀಗೊಂದು ಆಸೆ ಇತ್ತು. ಅದು ಆತ ಬೇಸಾಯಗಾರನಾಗಬೇಕೆಂದು. ಅವನ ಬಳಿ ಎರಡು ಎತ್ತುಗಳೂ ಸಹ ಇದ್ದವು. ಆದರೆ ಕಡು ಬಡತನದಿಂದಾಗಿ ಅವನ ಬಳಿ ಬೇಸಾಯಕ್ಕಾಗಿ ಇದ್ದ ತುಂಡು ಭೂಮಿಯನ್ನು ಸಂಕಪ್ಪಯ್ಯನ ಬಳಿ ಅಡ ಇಟ್ಟಿರುತ್ತಾನೆ. ಸಾಲ ತೀರಿಸಿ ಭೂಮಿಯನ್ನು ಮತ್ತೆ ಪಡೆಯಲು ಸಂಕಪ್ಪ ಯ್ಯನ ಬಳಿಯೇ ಜೀತಗಾರನಾಗಿ ಸೇರಿಕೊಂಡಿರುತ್ತಾನೆ. ಆ ದಿನಗಳಲ್ಲಿ ಕೀಳು ಜಾತಿಗೆ ಸೇರಿದವರು ವ್ಯವಸಾಯ ಮಾಡುವುದನ್ನು ನಿಷೇಧಿಸಿದ್ದರು. ಆದರೆ ಅವನಿಗಿದ್ದ ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನಡುವೆಯೂ ಜೀವನ ನಡೆ
‘ಗುಣಮುಖ’ ದ ಕೆಲವು ಗುಣಗಳು ಮಂದ ಬೆಳಕಿನಲ್ಲಿ ಹೆಣಗಳ ರಾಶಿ. ಶವಪರೀಕ್ಷೆ ನಂತರ ನೀಟಾಗಿ ಅವನ್ನು ಕಟ್ಟಿಟ್ಟು ಸಾಲು ಸಾಲಾಗಿ ರಾಶಿ ಹಾಕಲಾಗಿದೆ. ಅಲ್ಲಿ ಆ ದಿಬ್ಬದಲ್ಲಿ, ಇಲ್ಲಿ ಕೆಳಗೆ ಎಲ್ಲೆಲ್ಲೂ ಹೆಣಗಳೇ. ಬದುಕುಳಿದವರನ್ನು ಗಾಲಿ ಕುರ್ಚಿಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸಾಗಿಸಲಾಗುತ್ತಿದೆ. ಗೂಬೆ ಕೂಗುತ್ತಿಲ್ಲ. ಆದರೆ ಅವು ಆಳವಾದ ನೋವಿನ ವಿಷಾದವನ್ನು ಹೊರಹೊಮ್ಮಿಸುತ್ತಿವೆಯೇನೋ ಎನ್ನುವ ಭ್ರಮೆ ಉಂಟು ಮಾಡುವ ತಣ್ಣನೆಯ ಹಿನ್ನೆಲೆಯ ಸಂಗೀತ. ಕ್ರೌರ್ಯವೇ ಮಡುಗಟ್ಟಿದ ಇಂತಹ ದೃಶ್ಯದಿಂದ ‘ಗುಣಮುಖ’ ನಾಟಕ ತೆರೆದುಕೊಳ್ಳುತ್ತದೆ. ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳು ಕಲಾಗ್ರಾಮದಲ್ಲಿ ಸಾದರಪಡಿಸಿದ ನಾಟಕ ಇದು. ನಿರ್ದೇಶಕ ಸಿ.ಬಸವಲಿಂಗಯ್ಯ, ಪರಿಕರ ಮತ್ತು ವಸ್ತ್ರಾಲಂಕಾರ ಪ್ರಮೋದ ಶಿಗ್ಗಾಂವ್‌, ರಂಗವಿನ್ಯಾಸ ಶಶಿಧರ ಅಡಪ. ಇನ್ನು ನಾಟಕ ಪಿ.ಲಂಕೇಶರ ‘ಗುಣಮುಖ’. ಇದಂತೂ ಅವರ ಮಾಸ್ಟರ್‌ಪೀಸ್‌. ಪರ್ಷಿಯಾ ದೇಶದ ನಾದಿರ್‌ಶಾ, ದೆಹಲಿಯ ಸುಲ್ತಾನರನ್ನು ಸೋಲಿಸಿ ಕೆಲಕಾಲ ಆಳ್ವಿಕೆ ನಡೆಸಿದ ಕತೆ ಇದು. ಕ್ರೌರ್ಯ, ಅಟ್ಟಹಾಸ ಮೇರೆ ಮೀರಿದಷ್ಟು ಆಕ್ರಮಣಕಾರ ನಾದಿರ್‌ಶಾನ ಕಾಯಿಲೆ ಹೆಚ್ಚಾಗುತ್ತದೆ. ಗುಣಪಡಿಸಲಾಗದ ಕಾಯಿಲೆಯಿಂದ ಅವನು ನರಳುತ್ತಾನೆ. ಅವನನ್ನು ಸಹಜ ಸ್ಥಿತಿಗೆ ತಂದು, ಅಟ್ಟಹಾಸಕ್ಕೆ ಕಡಿವಾಣ ಹಾಕುವ ಮೂಲಕ ಹಕೀಮ ಅಲಾವಿಖಾನ್ ಅವನನ್ನು ಗುಣಪಡಿಸುತ್ತಾನೆ. ಎರಡು ತಾಸಿನ ಈ ನಾಟಕಕ್ಕೆ ಮೂರು ದೃಶ
‘ಕುಸುಮಬಾಲೆ’ ಒಂದಿಷ್ಟು ಕತೆ ದೇವನೂರು ಮಹಾದೇವ ಅವರ ಕುಸುಮ ಬಾಲೆ ಪ್ರಕಟಗೊಂಡಿದ್ದು 1984 ರಲ್ಲಿ ಆ ವೇಳೆಗೆ ದಲಿತ – ಬಂಡಾಯ ಚಳುವಳಿಗಳು ತನ್ನ ಉನ್ನತಿಯನ್ನು ಹಾಗೆಯೇ ಕ್ವಚಿತ್ತಾಗಿ ಮುಖಹೀನತೆಯನ್ನು ಅನುಭವಿಸಿದ್ದವು. ಈ ಕಾದಂಬರಿಯನ್ನು ಓದುವಾಗ ನಾವು ಯಾವುದೇ ಒಂದು ಸಿದ್ಧಾಂತವನ್ನಾಗಲೀ ಅದರ ಪ್ರಣಾಳಿಕೆಯನ್ನಾಗಲೀ ಹಿನ್ನೆಲೆಯಾಗಿಟ್ಟುಕೊಂಡು ಪ್ರವೇಶ ಮಾಡಿದರೆ ಅದರಿಂದ ಆಗುವ ‘ಪ್ರಯೋಜನ’ , ‘ಅರ್ಥಗಳು’ ದಕ್ಕುವುದು ಕಡಿಮೆ. ಒಂದು ಜೀವಂತ ಕೃತಿ, ಸಿದ್ಧಾಂತಗಳ ಭಾರದಿಂದ ತಪ್ಪಿಸಿಕೊಂಡಾಗ ಮಾತ್ರ ಬಹುಕಾಲ ಬಾಳಬಹುದು. ಆ ಬಗೆಯ ಕಾದಂಬರಿ ಕಾವ್ಯಗಳಲ್ಲಿ ಕುಸುಮಬಾಲೆಯೂ ಒಂದು. ಕಥನ-ಕಾವ್ಯ ಎರಡನ್ನೂ ಅಧ್ವೈತಗೊಳಿಸಿಕೊಂಡ ಕೃತಿ ಇದು. ಹಾಗೆ ನೋಡಿದರೆ ದೇವನೂರು ಮಹಾದೇವರ ಎಲ್ಲಾ ಬರೆಹಗಳೂ ಕಡತಂದ ಸಿದ್ಧಾಂತಗಳ ಭಾರದಿಂದ ತಪ್ಪಿಸಿಕೊಂಡು ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಂಡಿವೆ. ಅವರ ಒಟ್ಟು ಬರಹಲೋಕವು ಮಾನವೀಯ ಸಂಬಂಧಗಳ ಹುಡುಕಾಟವನ್ನೇ ಗರ್ಭೀಕರಿಸಿಕೊಂಡಿದೆ. ಇದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ಭಾಷೆ/ ಶೈಲಿ ಗಳು ಸಾಕಷ್ಟು ಕೆಲಸ ಮಾಡಿವೆ. ಗಧ್ಯಕ್ಕೆ ಅವರು ಕೊಡುವ ರೂಪಕ ಶಕ್ತಿಯೊಳಗೆ ಒಂದು ಜನಾಂಗದ ಸಾಂಸ್ಕೃತಿಕ ಅಸ್ಮಿತೆ ಅಡಗಿದೆ. ಆ ಸಮುದಾಯವನ್ನು ಎದುರುಗೊಳ್ಳುವ ಇತರ ಸಮುದಾಯಗಳ ಪರಿವರ್ತನೆಗೆ ಹಾತೊರೆಯುತ್ತದೆ. ಕಾದಂಬರಿಯ ಪ್ರಾರಂಭದಲ್ಲಿ ಅಲ್ಲಮನ ವಚನವನ್ನು ದೇವನೂರು ಉಧ್ಧರಿಸುತ್ತಾರೆ. ಇದಕ್ಕೆ ಎರಡು ಕಾರಣಗಳಿವೆ ಎನ್ನಬಹುದು. ಒಂ
ವಚನ ಸಾಹಿತ್ಯ ಅಷ್ಟಾವರಣಗಳು ಯಾವವು?ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ ಪಂಚ ಆಚಾರಗಳು ಯಾವವು?ಶಿವಾಚಾರ, ಸದಾಚಾರ, ಲಿಂಗಾಚಾರ, ಭೃತ್ಯಾಚಾರ, ಗಣಾಚಾರ ಷಟಸ್ಥಲಗಳು ಯಾವವು? ಭಕ್ತ , ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಅಷ್ಟಮದಗಳು ಯಾವವು?ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದ ಬಸವಣ್ಣನವರ ಕಾರ್ಯಸ್ಥಳ ಯಾವುದು? ಬಸವ ಕಲ್ಯಾಣ ಅಕ್ಕಮಹಾದೇವಿ ಜನ್ಮಸ್ಥಳ ಯಾವುದು? ಉಡುತಡಿ ಉಡತಡಿ ಸದ್ಯಕ್ಕೆ ಯಾವ ಜಿಲ್ಲೆಯಲ್ಲಿದೆ? ಶಿವಮೊಗ್ಗ ಜಿಲ್ಲೆ ಅಲ್ಲಮ ಪ್ರಭುಗಳ ಜನ್ಮಸ್ಥಳ ಬಳ್ಳಿಗಾವಿ ಅಲ್ಲಮ ಪ್ರಭುದೇವರ ಪೂರ್ವಾಶ್ರಮದ ಜಾತಿ ಯಾವುದು? ನಟವರ ಜಾತಿ ಅಲ್ಲಮ ಪ್ರಭುಗಳ ತಂದೆ ಹೆಸರು ಏನು? ನಿರಹಂಕಾರ ಅಲ್ಲಮ ಪ್ರಭುಗಳ ತಾಯಿ ಹೆಸರು ಏನು? ಸುಜ್ಞಾನಿದೇವಿ ಅಲ್ಲಮ ಪ್ರಭುಗಳ ದೀಕ್ಷಾಗುರುಗಳು ಯಾರು?ಅನಿಮಿಷದೇವ ವ್ಯೋಮಕಾಯ ಬಿರುದು ಪಡೆದವರು ಯಾರು?ಅಲ್ಲಮಪ್ರಭು ಅನುಭವ ಮಂಟಪದ ಪ್ರಥಮ ಅಧ್ಯಕ್ಷರು ಯಾರು?ಅಲ್ಲಮಪ್ರಭು ಅನುಭವ ಮಂಟಪದ ದ್ವೀತೀಯ ಅಧ್ಯಕ್ಷರು ಯಾರು?ಚನ್ನ ಬಸವಣ್ಣ ಅನುಭವ ಮಂಟಪದ ತೃತೀಯ ಅಧ್ಯಕ್ಷರು ಯಾರು?ಸಿದ್ಧರಾಮೇಶ್ವರ ಕನ್ನಡದ ಪ್ರಥಮ ಕವಿಯತ್ರಿ ಅಕ್ಕಮಹಾದೇವಿ ಶರಣನಾಗಿ ಮಾರ್ಪಟ್ಟ ಕಾಶ್ಮೀರದ ರಾಜನ ಹೆಸರು ಯಾವುದು? ಮಹಾದೇವ ಭೂಪಾಲ ಬಸವಣ್ಣನವರ ತಂದೆ ಹೆಸರು ಏನು? ಮಾದರಸ ಬಸವಣ್ಣನವರ ತಾಯಿ ಹೆಸರು ಏನು?
ವೈದ್ಯಶಾಸ್ತ್ರ ಪ್ರಾಚೀನ ಕಾಲ        ಕರ್ನಾಟಕದ ಉತ್ತರ ಭಾಗ ಅಶೋಕನ ರಾಜ್ಯದಲ್ಲಿದ್ದುದರಿಂದ ಆತ ಸ್ಥಾಪಿಸಿದ್ದ ಮನುಷ್ಯರ ಮತ್ತು ಪಶುಗಳ ಔಷಧಾಲಯಗಳು ಈ ಪ್ರದೇಶದಲ್ಲಿ ಇದ್ದಿರಬಹುದೆಂದು ಊಹಿಸಿ ಕರ್ನಾಟಕದ ವೈದ್ಯ ಇತಿಹಾಸವನ್ನು ಪ್ರ.ಶ.ಪೂ. ೨೬೦ ರಿಂದ ಪ್ರಾರಂಭಿಸಬಹುದು. ರಸಾಯನ ಮತ್ತು ಲೋಹಶಾಸ್ತ್ರಗಳ ಪಿತನೆಂಬ ಗೌರವಕ್ಕೆ ಪಾತ್ರನಾಗಿದ್ದ, ಸಾತವಾಹನರ ಕಾಲದ ಬೌದ್ಧಬಿಕ್ಷು ನಾಗಾರ್ಜುನ , ಶ್ರೀಶೈಲ ಪರ್ವತದಲ್ಲಿ ವಾಸವಾಗಿದ್ದು ರಸಾಯನ ಪ್ರಯೋಗಗಳಲ್ಲಿ ತೊಡಗಿದ್ದ. ರಸರತ್ನಾಕರ, ಲೋಹಶಾಸ್ತ್ರ ಮುಂತಾದ ವೈದ್ಯಗ್ರಂಥಗಳನ್ನು ಬರೆದ ಈತನನ್ನು ಕರ್ನಾಟಕದ ಪ್ರಥಮ ವೈದ್ಯವ್ಯಕ್ತಿ ಎನ್ನಬಹುದಾಗಿದೆ.        ಸಾತವಾಹನರ ಅನಂತರ ರಾಜ್ಯ ಕಟ್ಟಿದ ಗಂಗರು ಜೈನಧರ್ಮಾವಲಂಬಿಗಳಾಗಿದ್ದರು. ಗಂಗರಸ ದುರ್ವಿನೀತನ (೬೦೫-೬೫೦) ಗುರುವಾಗಿದ್ದ ದಿಗಂಬರ ಜೈನಯತಿ ಪುಜ್ಯಪಾದ ವೈದ್ಯಶಾಸ್ತ್ರದಲ್ಲಿಯೂ ಪಂಡಿತನಾಗಿದ್ದ. ಇವನು ಬರೆದ ಕಲ್ಯಾಣಕಾರಕ ಎಂಬ ಸಂಸ್ಕೃತ ವೈದ್ಯಗ್ರಂಥವನ್ನು ಮುಂದಿನ ಎಲ್ಲ ವಿದ್ವಾಂಸರೂ ಗೌರವದಿಂದ ಸ್ಮರಿಸಿದ್ದಾರೆ. ಈತನ ಸೋದರಳಿಯ ಸಿದ್ಧ ನಾಗಾರ್ಜುನ (೬೯೦) ರಸಾಯನ ಮತ್ತು ಲೋಹವಿದ್ಯೆಗಳಲ್ಲಿ ಖ್ಯಾತಿಯನ್ನು ಪಡೆದಿದ್ದ. ರಸೇಂದ್ರ ಮಂಗಳ, ಕಕ್ಷಪುಟತಂತ್ರ, ನಾಗಾರ್ಜುನತಂತ್ರ ಮುಂತಾದುವು ಈತನ ಕೃತಿಗಳು.      ಕರ್ನಾಟಕದ ದಕ್ಷಿಣಭಾಗದ ಬನ್ನೂರಿನಲ್ಲಿ ರಾಜ್ಯವಾಳುತ್ತಿದ್ದ ಗಂಗರಾಜ ಶ್ರೀಪುರುಷ(೭೭೫) ಗಜಶಾಸ್ತ್ರವನ್ನೂ ಆತನ ಮಗನಾದ ಸೈಗೊಟ್ಟ ಶಿವಮಾ
ಕರ್ನಾಟಕದ ಸಾಹಿತ್ಯ ಲೋಕ  ಪ್ರಥಮರು 323) ಕನ್ನಡದ ಮೊದಲ ಕೃತಿ ಯಾವುದು? - ಕವಿರಾಜಮಾರ್ಗ 324) ಕನ್ನಡದಲ್ಲಿ ರಚನೆಗೊಂಡ ಮೊದಲ ಕಾವ್ಯ ಯಾವುದು? - ಆದಿಪುರಾಣ 325) ಕನ್ನಡದ ಮೊದಲ ಗದ್ಯ ಕೃತಿ ಯಾವುದು? - ವಡ್ಡಾರಾಧನೆ 326) ಕನ್ನಡದಲ್ಲಿ ರಚನೆಗೊಂಡ ಮೊದಲ ನಾಟಕ ಯಾವುದು? - ಮಿತ್ರಾವಿಂದಾ ಗೋವಿಂದಾ 327) ಕನ್ನಡದ ಮೊದಲ ಗೀತ ನಾಟಕ ಯಾವುದು? - ಮುಕ್ತದ್ವಾರ 328) ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು? - ಜಾತಕ ತಿಲಕ ( ಶ್ರೀಧರಾಚಾರ್ಯ ) 329) ಕನ್ನಡದ ಮೊದಲ ಸ್ವತಂತ್ರ ಪೌರಾಣಿಕ ನಾಟಕ ಯಾವುದು? - ಪೃಥು ವಿಜಯ 330) ಕನ್ನಡದಲ್ಲಿ ರಚನೆಗೊಂಡ ಮೊದಲ ಗಾದೆಗಳ ಸಂಕಲನ ಯಾವುದು? - ಕನ್ನಡ ಗಾದೆಗಳು 331) ಕನ್ನಡದಲ್ಲಿ ರಚನೆಗೊಂಡ ಮೊದಲ ಒಗಟುಗಳ ಸಂಗ್ರಹ ಯಾವುದು? - ಮಕ್ಕಳ ಒಡಪುಗಳು 332) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರಬಂಧ ಸಂಕಲನ ಯಾವುದು? - ಲೋಕರಹಸ್ಯ 333) ಕನ್ನಡದ ಮೊದಲ ಛಂದಶಾಸ್ತ್ರ ಗ್ರಂಥ ಯಾವುದು? - ಛಂದೋಂಬುಧಿ 334) ಕನ್ನಡದ ಮೊದಲ ವೈದ್ಯ ಗ್ರಂಥ ಯಾವುದು? - ಗೋವೈದ್ಯ ( ಕೀರ್ತಿವರ್ಮ ) 335) ಕನ್ನಡದ ಮೊದಲ ವಿಷಯ ವಿಶ್ವಕೋಶ ಯಾವುದು? - ವಿವೇಕ ಚಿಂತಾಮಣಿ 336) ಕನ್ನಡದ ಮೊದಲ ವಿಶ್ವಕೋಶ ಯಾವುದು? - ಲೋಕೋಪಕಾರ 337) ಕನ್ನಡದಲ್ಲಿ ರಚನೆಗೊಂಡ ಮೊದಲ ಮಕ್ಕಳ ವಿಶ್ವಕೋಶ ಯಾವುದು? - ಬಾಲ ಪ್ರಪಂಚ 338) ಕನ್ನಡದ ಮೊದಲ ನವ್ಯತೆಯನ್ನೊಳಗೊಂಡ ಕಾದಂಬರಿ ಯಾವುದು? - ವಿಶ್ವಾಮಿತ್ರನ ಸ
ಪಾಶ್ಚಾತ್ಯ ಕಾವ್ಯಮೀಮಾಂಸೆ ೧. ಅನುಕರಣ  ತತ್ವ ( Theory of Imitation) ವನ್ನು ಪ್ರತಿಪಾದಿಸಿದವರು ಯಾರು? ೨. ಕ್ರಿ.ಶ. ೩ ನೇ ಶತಮಾನದಿಂದ ೧೬ನೇ ಶನಮಾನದ ವರೆಗಿನ ಅವಧಿಯನ್ನು ಪಾಶ್ಚಾತ್ಯ ವಿಮರ್ಶೆ ಯ ದೃಷ್ಟಿಯಿಂದ ಹೀಗೆಂದು ಕರೆಯಲಾಗುತ್ತದೆ? ೩. ಇಟಾಲಿಯನ್ ಭಾಷೆಯಲ್ಲಿಯೇ ಮೊಟ್ಟ ಮೊದಲು ಕಾವ್ಯಮೀಮಾಂಸೆಯನ್ನು ಬರೆದವರು ಯಾರು? ೪. Defence of poesie ಕೃತಿಯ ಕರ್ತೃ ಯಾರು? ೫. ಪಾಶ್ಚಿಮಾತ್ಯ ಕಾವ್ಯಮೀಮಾಂಸೆ ದೃಷ್ಟಿಯಿಂದ ೧೭-೧೮ನೇ ಶತಮಾನಗಳನ್ನು ಹೀಗೆಂದು ಕರೆಯಲಾಗುತ್ತದೆ? ೭. Defence poetry ಕೃತಿಯ ಕರ್ತೃ ಯಾರು? ೮. The principles of literary criticism ಕೃತಿಯ ಕರ್ತೃ ಯಾರು? ** ಉತ್ತರಗಳು ೧. ಅರಿಸ್ಟಾಟಲ್ ೨. ಅಂಧಕಾರ ಯುಗ ೩. ಡ್ಯಾನಿಯಲ್ಲೋ ೪. ಡ್ಯಾನಿಯಲ್ಲೋ ೫. ಅಭಿನವ ಸಂಪ್ರದಾಯ ಯುಗ ೬. ಈ ಕ್ರಮ ಸಂಖೆಯ ಪ್ರಶ್ನೆ ಇಲ ೭. ವಡ್ಸ್ ವರ್ತ್ ೮. ಡಿ. ಎ. ರಿಚರ್ಡ್ಸ್
ಮಹಾಭಾರತದಲ್ಲಿ ಬರುವ ಕೆಲವು ಪಾತ್ರಗಳ ಪರಿಚಯ ✍ಶಂತ ಮಹಾರಾಜ. ಇವನು ಗಂಗೆ ಮತ್ತು ಸತ್ಯವತಿ ಗಂಡ. ಭೀಷ್ಮ (ಗಂಗೆ)ಮತ್ತು ವಿಚಿತ್ರವೀರ್ಯ (ಸತ್ಯವತಿ)ಇವನ ಮಕ್ಕಳು. ✍ಭೀಷ್ಮ➖ಶಂತನು ಮತ್ತು ಗಂಗಾದೇವಿ ಇವರ ಮಗ ಭೀಷ್ಮ  ಮಹಾಭಾರತ ಯುದ್ದದಲ್ಲಿ ಶಿಖಂಡಿಯಿಂದ ಸಾವು. ಕೌರವರು ಮತ್ತು ಪಾಂಡವರ ತಾತ ಕೌರವರ ಪಕ್ಷಪಾತಿ.ಇವನಿಗೆ ಅಂಬಾಲಿ ಶಾಪ ಇರುವುದು. ✍ದ್ರೋಣಾಚಾರ್ಯ. ಇವರ ಜನನ ಮಡಕೆಯಲ್ಲಾದ ಕಾರಣ ಇವನಿಗೆ ಕುಂಬೋದ್ಭವ ಎಂದು.ದ್ರೋಣ ಮತ್ತು ದ್ರುಪದ ಗೆಳೆಯರು.ದ್ರುಪದನಿಂದ ಅವಮಾನಿತನಾದ ವ್ಯಕ್ತಿ. ಕೃಪಾಚಾರ್ಯರ ತಂಗಿ ಕೃಪಿ ಇವನ ಹೆಂಡತಿ. ಇವರ ಮಗ ಅಶ್ವತ್ಥಾಮ. ಇವನು ದ್ರುಷ್ಟ್ಯದುಮ್ನನಿಂದ ಹತನಾಗುತ್ತಾನೆ. ✍ದೃತರಾಷ್ಟ್ರ . ವಿಚಿತ್ರವೀರ್ಯ ಮತ್ತು ಅಂಬಿಕೆಯ ಮಗ. ಕುರುಡ ಈತನ ಹೆಂಡತಿ ಗಾಂಧಾರಿ ಇವನ ಮಕ್ಕಳೇ ಕೌರವರು.೧೦೧ ಜನ ೧೦೦ ಗಂಡುಮಕ್ಕಳು ೧ ಹೆಣ್ಣು(ದುಶ್ಯಲೆ). ✍ಪಾಂಡುರಾಜ. ವಿಚಿತ್ರವೀರ್ಯ ಮತ್ತು ಅಂಬಾಲಿಕೆಯ ಮಗ. ಕುಂತಿ ಮತ್ತು ಮಾದ್ರಿಯ ಗಂಡ ಇವರ ಮಕ್ಕಳೇ ಪಾಂಡವರು ೫ (ಐದು). ಭೀಮ, ಅರ್ಜುನ, ಧರ್ಮರಾಯ, ಕುಂತಿಯಲ್ಲಿ. ನಕುಲ, ಸಹದೇವ ಮಾದ್ರಿಯಲ್ಲಿ.ಇವನು ಶಾಪದಿಂದ ಮರಣ ಹೊಂದುತ್ತಾನೆ. ✍ಶಕುನಿ➖ಗಾಂಧಾರಿಯ ಅಣ್ಣ. ದುರ್ಯೋದನನ ಮಾವ ಕೌರವರ ಅವನತಿಗೆ ಕಾರಣನಾದವನು. ಇವನು ಸಹದೇವನಿಂದ ಹತನಾಗುತ್ತಾನೆ. ✍ಶಲ್ಯ➖ಮಾದ್ರ ದೇಶದ ರಾಜ.ನಕುಲ ಸಹದೇವರ  ತಾಯಿ ಮಾದ್ರಿಯ ಅಣ್ಣ.ಇವನು ಕೌರವರ ಪಕ್ಷ. ✍ವಿಧುರ ➖ಹಸ್ತಿನಾಪುರದ ರಾಣ
‬ ಶಾಸನಗಳು ೧. ಅಶೋಕನ ಶಾಸನಗಳು ಶಾಸನಗಳೇ ಆದರೂ ಅವುಗಳನ್ನು ಅವು ತಮ್ಮನ್ನು ಹೀಗೆಂದು ಕರೆಯಲಾಗುತ್ತದೆ? ೨. 'ಸುಜನೋತ್ತಂಸ'  ಇದು ಯಾವ ಶಾಸನಕಾರನ ಬಿರುದು? ೩. ' ಮದವಳಿಗೆ ಕಲ್ಲು' ಗಳೆಂದು ಈ ಶಾಸನ ಗಳನ್ನು ಕರೆಯಲಾಗುತ್ತದೆ? ೪. ಸಲ್ಲೇಖನವ್ರತದಿಂದ ಮರಣಹೊಂದಿದುದನ್ನು ತಿಳಿಸುವ ಶಾಸನ ಪ್ರಕಾರ ಯಾವುದು? ೫. 'ಚಪಡೇನ ಲಿಖಿತೇ ಲಿಪಿ ಕರೇಣ' ಎಂಬ ಉಲ್ಲೇಖ ಇರುವ ಶಾಸನ ಯಾವುದು? ೬. ತಾನು ಕಾಳಿದಾಸ ಭಾರವಿಯರಿಗೆ ಸಮಾನ ವೆಂದು ಕರೆದುಕೊಂಡ ಶಾಸನಕಾರ ಯಾರು? ೭. ರಾಷ್ಟಕೂಟರ ೩ನೇ ಕೃಷ್ಣ ಚೋಳರ ಮೇಲೆ ಯುದ್ಧ ಮಾಡಿದ ಉಲ್ಲೇಖ ಇರುವ ಶಾಸನ ಯಾವುದು? ೮. ದೇಕಬ್ಬೆಯ  ಶಾಸನ ಎಂದೇ ಸುಪ್ರಸಿದ್ಧ ವಾಗಿರುವ ಶಾಸನ ಯಾವುದು? ೯. ಕುವರಲಕ್ಷ್ಮಣನ ರಾಜಭಕ್ತಿ, ಸುಗ್ಗಲದೇವಿಯ ಪಾತಿವ್ರತ್ಯಗುಣವನ್ನು ತಿಳಿಸುವ ಶಾಸನ ಯಾವುದು ? ಉತ್ತರಗಳು 1) ಧಮ್ಮ ಲಿಪಿ 2) ಬೊಪ್ಪಣ್ಣ ಪಂಡಿತ 3)ಮಾಸ್ತಿಗಲ್ಲು 4)ನಿಸದಿಗಲ್ಲು 5)ಬ್ರಹ್ಮಗಿರಿ ಶಾಸನ 6)ರವಿಕೀರ್ತಿ 7)ಆತಕೂರು ಶಾಸನ 8)ಬೆಲತೂರು ಶಾಸನ 9)ಕುವರಲಕ್ಷ್ಮಣನ ಶಾಸನ