ಸಾಹಸಭೀಮ ವಿಜಯ


    🌷ಪ್ರಶ್ನೆ - ಶ್ರುತಿ ಹೆಚ್🌷

1. ಕನ್ನಡದ ರತ್ನತ್ರಯರುಗಳನ್ನು ತಿಳಿಸಿ.
🔑ಪಂಪ ಪೊನ್ನ ರನ್ನ

 2.ರತ್ನತ್ರಯರಲ್ಲಿ ರನ್ನ ಎಷ್ಟನೆಯವನು?
🔑ಮೂರನೆಯವನು

 3.ರತ್ನತ್ರಯರನ್ನು ಮೊದಲ ಬಾರಿಗೆ ಹೆಸರಿಸಿದವರು ಯಾರು?
🔑 ರನ್ನ

4.ರನ್ನ ತನ್ನ ವೈಯಕ್ತಿಕ ವಿಷಯಗಳನ್ನು ಯಾವ ಕೃತಿಗಳಲ್ಲಿ ಹೇಳಿಕೊಂಡಿದ್ದಾನೆ?
🔑ಅಜಿತನಾಥ ಪುರಾಣ ಹಾಗೂ ಗದಾಯುದ್ದ

5.ರನ್ನ ಹುಟ್ಟಿದ್ದು ಯಾವಾಗ?ಯಾವ ಸಂವತ್ಸರದಲ್ಲಿ?
🔑ಕ್ರಿ.ಶ.949 ಸೌಮ್ಯ ಸಂವತ್ಸರ.

6.ರನ್ನನ ತಂದೆ ತಾಯಿಯ ಹೆಸರೇನು
🔑ಜೀನೇಂದ್ರ ವಲ್ಲಭ ಅಬ್ಬಲಬ್ಬೆ

7.ರನ್ನನ ಸಹೋದರರ ಹೆಸರೇನು?
🔑ರೇಚಣ ದೃಡಬಾಹು ಮಾರಯ್ಯ

 8.ರನ್ನ ಜನಿಸಿದ ಸ್ಥಳ ಯಾವುದು?
🔑ಮುದುವೊಳಲ್

9.ರನ್ನ ನ ಮಡದಿಯರ ಹೆಸರೇನು?
🔑ಜಕ್ಕಿ ಶಾಂತಿ

10.ರನ್ನನ ಮಕ್ಕಳ ಹೆಸರೇನು?ಯಾರ ನೆನಪಿಗಾಗಿ ಆ ಹೆಸರು ಇಡಲಾಗಿದೆ?
🔑ರಾಯ ಅತ್ತಿಮಬ್ಬೆ

9.ರನ್ನನ ವಂಶದ ಕುಲಕಸುಬು ಯಾವುದು?
🔑ಬಳೆಗಾರ ವೃತ್ತಿ

10.ರನ್ನನ ವಿದ್ಯಾಭ್ಯಾಸದ ಗುರುಗಳು ಯಾರು?
🔑ಶ್ರವಣ ಬೆಳಗೊಳದ ಜಿನಸೇನಾಚಾರ್

11.ರನ್ನ ಯಾವ ಮತಧರ್ಮಕ್ಕೆ ಸೇರಿದವನು?
🔑ಜೈನ

12.ರನ್ನನ ಮತ್ತೋರ್ವ ಗುರು ಯಾರು?
🔑ಗಂಗ ಮಂಡಲದ ಅಜಿತ ಸೇನಾಚಾರ್ಯ

13.ರನ್ನ ಮೊದಲು ಯಾರ ಆಶ್ರಯದಲ್ಲಿದ್ದ?
🔑ಚಾವುಂಡರಾಯ

14.ರನ್ನನು ಕವಿಯಾಗುವುದಕ್ಕೆ ಮೊದಲು ಏನಾಗಿದ್ದ?
🔑ಪಂಡಿತ

15.ರನ್ನನಿಗೆ ಆಶ್ರಯ ನೀಡಿದ ದೊರೆ ಯಾರು?
🔑ಚಾಲುಕ್ಯ ಚಕ್ರವರ್ತಿ ಸತ್ಯಾಶ್ರಯ

16.ರನ್ನನಿಗೆ ಇದ್ದ ಬಿರುದುಗಳಾವುವು ?
🔑ಕವಿಮುಖಚಂದ್ರ
      ಕವಿಚಕ್ರವರ್ತಿ
      ಕವಿರಾಜ ಶೇಖರಂ
      ಕವಿಚೂಡರತ್ನಂ
       ಕವಿತಿಲಕಮ್
       ಕವಿಚತುರ್ಮುಖ
       ಕವಿರತ್ನ

17.ರನ್ನನ ಕೃತಿಗಳನ್ನು ತಿಳಿಸಿ ?
🔑ಪರಶುರಾಮ ಚರಿತೆ ಚಕ್ರೆಶ್ವರ ಚರಿತೆ  ಅಜಿತಪುರಾಣ  ತಿಲಕ  ಸಾಹಸಭೀಮ ವಿಜಯ

18.ರನ್ನನ ಯಾವ ಕೃತಿಗಳು ದೊರೆತಿಲ್ಲ ?
🔑ಪರಶುರಾಮ ಚರಿತೆ ಚಕ್ರೆಶ್ವರ ಚರಿತೆ

19.ರನ್ನ ಬರೆದಿರುವ ನಾಲ್ಕನೆಯೆ ಕೃತಿ ಯಾವುದು ?
🔑ಗದಾಯುದ್ದ

20.ರನ್ನನ ಧಾರ್ಮಿಕ ಕಾವ್ಯ ಯಾವುದು ?
🔑ಅಜಿತಪುರಾಣ

21.ಅಜಿತ ಪುರಾಣ ತಿಲಕದಲ್ಲಿ ಎಷ್ಟು ಆಶ್ವಾಸಗಳಿವೆ ?
🔑ಹನ್ನೆರಡು ಆಶ್ವಾಸ

22. ಅಜಿತ ಪುರಾಣವನ್ನು ಬರೆಸಿದವರು ಯಾರು ?
🔑ಅತ್ತಿಮಬ್ಬೆ

23. ಸಾಹಸ ಭೀಮ ವಿಜಯಕ್ಕಿರುವ ಮತ್ತೊಂದು ಹೆಸರೇನು ?
🔑ಗದಾಯುದ್ದ

24. ಸಿಂಹಾವಲೋಕನ ಕ್ರಮದಿಂದ ಭಾರತದ ಕಥೆ ಇರುವ ಕೃತಿ ಯಾವುದು , ಬರೆದವರು ಯಾರು ?
🔑ಗದಾಯುದ್ದ  ರನ್ನ

25. ಸಾಹಸ ಭೀಮ ವಿಜಯದ ಮುಖ್ಯ ಕಥಾ ವಸ್ತು ಯಾವುದು ?
🔑ಮಹಾಭಾರತದ ಕಟ್ಟ ಕಡೆಯ ಭಾಗ / ಗದಾಯುದ್ಧ

 26.ಅಜಿತ ನಾಥ ಎಷ್ಟನೇ ತೀರ್ಥಂಕರ  ?
🔑ಎರಡನೇ ತೀರ್ಥಂಕರ

 27.ಅಜಿತ ಪುರಾಣವನ್ನು ಯಾವಾಗ ಬರೆದನು ?
🔑ಕ್ರಿ.ಶ.993

 28. ಅಜಿತ ಪುರಾಣ ಯಾರ ಕಥೆಯನ್ನು ಒಳಗೊಂಡಿದೆ ?
🔑ಎರಡನೇ ತೀರ್ಥಂಕರ ಅಜಿತನಾಥ ಹಾಗೂ ಎರಡನೇ ಚಕ್ರವರ್ತಿ ಸಗರನ ಚರಿತ್ರೆ

 29. ಅಜಿತನಾಥ ಕೃತಿಯ ವೈಶಿಷ್ಟ್ಯವೇನು ?
🔑ಕೇವಲ ಒಂದೇ ಒಂದು ಭವಾವಳಿ ಕತೆ

 30. ಇತ್ತೀಚೆಗೆ ಲಭಿಸಿರುವ ರನ್ನನ ನಿಘಂಟು ಯಾವುದು ?
🔑ರನ್ನಕಂದ

31. 33 ವರ್ಷದ ರನ್ನ ಗದಾಯುದ್ಧವನ್ನು ಬರೆದಿದ್ದಾನೆ ಎಂದು ಯಾರು ಊಹಿಸಿದ್ದಾರೆ ?
🔑ಬಿ.ಎಂ.ಶ್ರೀ.ರವರು

32. ಗಧಾಯುದ್ಧದಲ್ಲಿರುವ ರಸ ಯಾವುದು ?
🔑ವೀರ ರಸ

33. ರನ್ನನ ಗಧಾಯುದ್ಧಕ್ಕೆ ಪ್ರೇರಕವಾದ ಕೃತಿಗಳಾವುವು ?
🔑ವೇಣಿಸಂಹಾರ ದೂತವಾಕ್ಯ ಊರುಭಂಗ ವಿಕ್ರಮಾರ್ಜುನ ವಿಜಯ

34. ಗದಾಯುದ್ಧದ ಕಾವ್ಯದ ಮೇಲೆ ಪ್ರಭಾವ ಬೀರಿರುವ ಪ್ರಮುಖ ಸಂಸ್ಕೃತ ನಾಟಕಕಾರರನ್ನು ಹೆಸರಿಸಿ .
🔑ಭಾಸ  ಭಟ್ಟನಾರಾಯಣ

35. ಊರು ಭಂಗ ಮತ್ತು ವೇಣಿಸಂಹಾರ ನಾಟಕಗಳ ಕರ್ತೃ ಯಾರು ?
🔑ಭಾಸ  ಭಟ್ಟನಾರಾಯಣ

36.ದೂತವಾಕ್ಯ ನಾಟಕಕಾರನ ಹೆಸರನ್ನು ಹೆಸರಿಸಿ.
✍ಭಾಸ✅

೩೭.ರನ್ನನ ಗದಾಯುದ್ದ ಕಾವ್ಯಕ್ಕೆ ನೇರ ಆಕರವಾಗಿರುವ ಪಂಪನ ಕಾವ್ಯ ಯಾವುದು.
✍ವಿಕ್ರಮಾರ್ಜುನ ವಿಜಯ✅

೩೮.ರನ್ನನು ಭೀಮನನ್ನು ಸಮೀಕರಿಸಿ ಬರೆದಿರುವ ದೊರೆ ಯಾರು?
✍ಚಾಲುಕ್ಯ ಚಕ್ರವರ್ತಿ ಇರಿವ ಬೆಡಂಗ ಸತ್ಯಾಶ್ರಯ✅

೩೯.ಅಜಿತ ಪುರಾಣಕ್ಕಿರುವ ಇನ್ನೊಂದು ಹೆಸರೇನು?
✍ಪುರಾಣತಿಲಕ✅

೪೦.ಅಜಿತಪುರಾಣದಲ್ಲಿ ಕಾವ್ಯ ಧರ್ಮಕ್ಕಿಂತ ........ ಪ್ರಧಾನವಾಗಿದೆ.
✍ಧರ್ಮ✅

೪೧.ರನ್ನನ ದುರ್ಯೋಧನ ಮಹಾನುಭಾವ ಎಂದವರು ಯಾರು?
✍ಅನಂತರಂಗಚಾರ✅

೪೨.ದುರ್ಯೋಧನನೆ ನಾಯಕ ರೌದ್ರವಡ ಮುಖ್ಯರಸ ಎಂದು ಯಾವ ಕೃತಿಯಲ್ಲಿ ಹೇಳಲಾಗಿದೆ.
✍ರನ್ನ ಪ್ರಶಸ್ತಿ✅

೪೩.ನಿನ್ನಂ ಪೆತ್ತಳ್ ವೊಲೆ ವೊತ್ತಳೆ ವೀರ ಜನನಿವೆಸಮ್ ವೆತ್ತಳ್ ಎಂಬ ವಾಕ್ಯ ಯಾರು ಯಾರನ್ನು ಕುರಿತು ಹೇಳಲಾಗಿದೆ.
✍ದುರ್ಯೋದನ ಅಭಿಮನ್ಯವಿನ ಕಳೆಬರ ನೋಡಿ ಹೇಳುತ್ತಾನೆ.✅

೪೪.ರನ್ನನ ಕೃರಿಗಳ ಕುರಿತು ಬರೆದಿರುವ ಕೃತಿ ಹಾಗೂ ಕರ್ತೃಗಳನ್ನು ಹೊಂದಿಸಿ ಬರೆಯಿರಿ.
✍ಬಿ.ಎಂ.ಶ್ರೀ-ಕನ್ನಡ ಕೈಪಿಡಿ
☄ತಿ.ನಂ.ಶ್ರೀ-ಗದಾಯುದ್ದ
☄ಕುವೆಂಪು-ಶಕ್ತಿಕವಿ ರನ್ನ
☄ದೊರೆಸ್ವಾಮಿ-ರನ್ನಯುಗ✅

೪೫.ವಾಗ್ದೇವಿಯ ಬಂಡಾರದ ಮುದ್ರೆಯನೊಡೆದಂ ಎಂದು ಎದೆ ತಟ್ಟಿಕೊಂಡ ಕವಿ ಯಾರು.
✍ರನ್ನ✅

೪೬.ರನ್ನ ಯಾವ ಕೃತಿಯನ್ನು ತಾನು ಬರೆದಿಲ್ಲ ಎಂದು ಅಜಿತನಾಥ ಪುರಾಣದಲ್ಲಿ ಹೇಳಿಕೊಂಡಿದ್ದಾನೆ?
✍ಗದಾಯುದ್ದ✅

೪೭.ಅಜಿತನಾಥ ಪುರಾಣದಲ್ಲಿ ಅತ್ಯಂತ ಹೃದಯ ಸ್ಪರ್ಶಿಯಾಗಿ ಮೂಡಿ ಬಂದಿದೆ.
✍ಅಜಿತಸ್ವಾಮಿ ವಿರಕ್ತಿ  ಹೊಂದಿ ತಪಸ್ಸಿಗೆ ಹೋಗುವುದು.✅

೪೮.ರನ್ನ ಯಾರಿಗೆ ಪಟ್ಟ ಕಟ್ಟಿ ಸತ್ಯಾಶ್ರಯನ ಇತಿಹಾಸ ಹೇಳುತ್ತಾನೆ?
✍ಭೀಮ✅

೪೯.ಗದಾಯುದ್ದದ ಪ್ರಮುಖ ಪಾತ್ರಗಳು ಯಾವುವು?
✍ಭೀಮ, ದುರ್ಯೋದನ,ದ್ರೌಪದಿ‌,

೫೦.ಗುಣಕ್ಕೆ ಮಚ್ಚರವುಂಟೆ ಎಂದು ಯಾರು ಏಕೆ ಹೇಳಿದ್ದಾರೆ
✍ಪಂಪ ರನ್ನನ ಸಾಹಿತ್ಯ ಗುಣಮೆಚ್ಚಿ✅

೫೧.ರನ್ನ ಬೀಮನನ್ನೆ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೇನು?
✍ಭೀಮನ ಉದಾತ್ತ ಗುಣ ಹಾಗೂ ಪರಾಕ್ರಮ.

೫೨.ಕೌರವ ಸೇನೆ ಎಂಬ ಅರಳೆಗೆ ಪ್ರಳಯಕಾಲದ ಬಿರುಗಾಳಿಯಂತಿದ್ದವರಬಿ ಎಚ್ಚರಿಸಿ ಸ್ಪೂರ್ತಿ ನೀಡುವವಳು ಯಾರು?
✍ಭೀಮ✅

೫೩. ಗದಾಯುದ್ದ ಎಷ್ಟು ಆಶ್ವಾಷಗಳನ್ನು ಹೊಂದಿದೆ.
✍೧೦ ಆಶ್ವಾಸ✅

೫೪.ಎಷ್ಟು ಆಶ್ವಾಸಗಳಲ್ಲಿ ಮಾತ್ರ  ಭೀಮ ಕಾಣಿಸಿಕೊಳ್ಳುತ್ತಾನೆ.
✍ನಾಲ್ಕು ಮತ್ತು ಐದು ಆಶ್ವಾಸಗಳಲ್ಲಿ✅

೫೫.ಗದಾಯುದ್ದದಲ್ಲಿ ಪ್ರೀತಿ ಸ್ನೇಹ ಕರಣೆಯ ಸಾಕಾರಮೂರ್ತಿಯಾಗಿ ಮರುರೂಪ ಪಡೆದಿರುವವರು ಯಾರು.
✍ದುರ್ಯೋಧನ✅

೫೬.ಗದಾಯುದ್ದಕ್ಕೆ ಮೂಲ ಕರ್ತಳು ಯಾರು?
✍ದ್ರೌಪದಿ✅

೫೭.ಸಿಂಹಾವಲೋಕನ ಕ್ರಮ ಎಂದರೆ.
✍ಹಿಂದೆ ತಿರುಗಿ ಮತ್ತೊಮ್ಮೆ ನೋಡು/ ಹಿನ್ನೋಟ.✅

೫೮.ಕಾವ್ಯದೇವಿಯ ಅಲಂಕಾರಗಳು ಎಷ್ಟೆಂದು ರನ್ನ ಹೇಳಿದ್ದಾನೆ.
✍ಮೂವತ್ತಾರು(೩೬)✅

೫೯.ರನ್ನ ಯಾವ ಪಾತ್ರವನ್ನು ಉಜ್ವಲ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿಸಿದ್ದಾನೆ.
✍ದುರ್ಯೋಧನ✅

೬೦.ಕಾವ್ಯ ಕೀರ್ತಿಗೆ ಕಿರೀಟ ಎಂಬ ಪ್ರಶಂಸೆ ಪಡೆದಿರುವ ಕಾವ್ಯ ಯಾವುದು?
✍ಸಾಹಸಭೀಮ ವಿಜಯ

೬೧.ರನ್ನನಿರುವ ಕೃತಿಯಲ್ಲಿ ಧಕ್ಕೆ ಎಂದು ಯಾರು ಯಾವ ಕೃತಿಯಲ್ಲಿ ಹೇಳಿದ್ದಾರೆ.
✍ಕುವೆಂಪು ವಿಭೂತಿಪೂಜೆಯಲ್ಲಿ.

೬೨.ಜಿನೇಂದ್ರ ಪಾದ ಕಮಲ ಭ್ರಮರ ಎಂದು ಯಾರ ಬಗ್ಗೆ ಹೇಳಲಾಗಿದೆ.
✍ರನ್ನನ ತಂದೆ ಜೀನೇಂದ್ರವಲ್ಲಭನ ಬಗ್ಗೆ✅

೬೩.ಪತಿವ್ರತ ಗುಣ ಭೂಷಣೆ ಎಂದು ಯಾರ ಬಗ್ಗೆ ಹೇಳಲಾಗಿದೆ.
✍ಅಬ್ಬಲಬ್ಬೆ✅

🌹ಚಿತ್ತರಗಿ ಗ್ರೂಪ್🌹

✍✍ ಬಿ.ಎಸ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ