ವಡ್ಢಾರಾಧನೆ ಕಥೆಗಳು
 ಭದ್ರಬಾಹು ಭಟ್ಟಾರಕರ ಕಥೆ

೧,ಭದ್ರಬಾಹು ಭಟ್ಟಾರರ ಕತೆ ಯಾವ ಗಾಹೆಯಿಂದ ಆರಂಭವಾಗುತ್ತದೆ?
ಉ-ಓಮೋದರಿಏ ಘೋರಾಎ ಭದ್ರಬಾಹು ಅಸಂಕಿಲಿಟ್ಟಮದೀ.....
೨,ಕೌಡಿನಿ ನಗರದ ಅರಸ ಯಾರು?ಆತನ ಹೆಂಡತಿಯ ಹೆಸರೇನು?
ಉ-ಪದ್ಮರಥ ಪದ್ಮಶ್ರೀ
೩,ಪದ್ಮರಥನ ಪುರೋಹಿತ ಯಾರು?
ಉ-ಸೋಮಶರ್ಮ
೪,ಭಾರ್ಯೆ ಪದದ ಅರ್ಥವೇನು?
ಉ-ಹೆಂಡತಿ
೫,ಪ್ರತ್ಯಕ್ಷ ಶ್ರೀಯಾದೇವತೆಯನೆ ಬಳಲುವವರು ಯಾರು?
ಉ-ಸೋಮಶ್ರೀ
೬,ಭದ್ರಬಾಹುವಿನ ತಂದೆ ತಾಯಿಯ ಹೆಸರೇನು?
ಉ-ಸೋಮಶರ್ಮ ಸೋಮಶ್ರೀ
೭,ಭದ್ರಬಾಹುವಿಗೆ ಎಲ್ಲಾ ವಿಧದ ಶಾಸ್ತ್ರಗಳನ್ನು ಕಲಿಸಿದವರಾರು?
ಉ-ಗೋವರ್ಧನ ಭಟಾರರು
೮,ಭದ್ರಬಾಹು ಯಾರ ಬಳಿ ತಪಸ್ಸನ್ನು ಕೈಗೊಂಡ?
ಉ-ಗೋವರ್ಧನಭಟಾರರು
೯,ಜೈನಮುನಿ ಪರಂಪರೆಯಲ್ಲಿ ಮೂರನೆ ಮುನಿ ಯಾರು?
ಉ-ವರ್ಧಮಾನ
೧೦,ಕೋಟೆಗಳಿಂದ ಪರಿವೇಷ್ಟಿತವಾದದ್ದು?
ಉ-ಖೇಡ
೧೧,ತೊವೆ ಪದದ ಅರ್ಥ?
ಉ-ಪಾಯಸ
೧೨,ಈ ಕತೆಯಲ್ಲಿ ಯಾರ ಬೆಳವಣಿಗೆಯನ್ನು ಬಿದಿಗೆಯ ಚಂದ್ರನಿಗೆ ಹೋಲಿಸಲಾಗಿದೆ?
ಉ-ಭದ್ರಬಾಹು
೧೩,ಕೌಡಿನಿ ನಗರ ಯಾವ ನಾಡಲ್ಲಿದೆ?
ಉ-ಪುರವರ್ಧನ
೧೪,ವರ್ಧಮಾನ ಭಟ್ಟಾರರು ಮೋಕ್ಷ ಹೊಂದಿದ ಬಳಿಕ ಬಂದ ನಾಲ್ಕನೆ ಶ್ರುತಕೇವಳಿಗಳು ಯಾರು?
ಉ-ಗೋವರ್ಧನ ಭಟ್ಟಾರರು
೧೫,ಭದ್ರಬಾಹು ಭಟಾರರಿಗೆ ದಶದಿಕ್ಕುಗಳಲ್ಲಿ ನಿನ್ನ ಪಾಂಡಿತ್ಯದ ಯಶಸ್ಸನ್ನು ಪಸರಿಸು ಎಂದವರು ಯಾರು?
ಉ-ಗೋವರ್ಧನ ಭಟಾರರು
೧೬,ಪ್ರತಿಮಾಯೋಗ ಕೈಗೊಂಡವರು ಯಾರು?
ಉ-ಭದ್ರಬಾಹು ಭಟಾರರು
೧೭,ಸಮಾಧಿ ಮರಣವನ್ನು ಸಾಧಿಸಿದವರು ಯಾರು?
ಉ-ಗೋವರ್ಧನ ಭಟಾರರು
೧೮,ಚತುರ್ದಶಪೂರ್ವದಾರಿಗಳುಂ ಕಡೆರಿಸಿಯಯ್ದನೆಯ ಶ್ರುತಕೇವಳಿಗಳವಧಿಜ್ಞಾನಿಗಳು ಯಾರು?
ಉ-ಭದ್ರಬಾಹು ಭಟಾರರು
೧೯,ವಡ್ಡಾರಾಧನೆಯಲ್ಲಿ ಭದ್ರಬಾಹು ಭಟ್ಟಾರರ ಕತೆ ಎಷ್ಟನೆಯದು?
ಉ-ಆರನೆಯದು
೨೦,ಜೈನಧರ್ಮದಲ್ಲಿ ಎಷ್ಟು ಧರ್ಮಶಾಸ್ತ್ರಗಳಿವೆ?
ಉ-೧೮
೨೧,ದ್ರೋಣಾಮುಖ ಎಂದರೇನು?
ಉ-ಜಲಮಾರ್ಗ ಮತ್ತು ಭೂಮಾರ್ಗ ಎರಡನ್ನು ಹೊಂದಿರುವ ಊರು
೨೨,ಬೋಳಹ ಬೋಳಹ ಭಟ್ಟಾರಾ ಎಂದವರು ಯಾರು?
ಉ-ತೊಟ್ಟಿಲೊಳಗಿದ್ದ ಅವ್ಯಕ್ತ ಕಿರುಗೂಸು
೨೩,ಕಿರುಗೂಸು ಎಷ್ಟು ವರ್ಷಗಳ ಕಾಲ ದುರ್ಭೀಕ್ಷೆ ಎಂದು ಹೇಳಿತು?
ಉ-೧೨ ವರ್ಷ
೨೪,ಎಲ್ಲಾ ರಿಸಿಗಳಿಗೆ ದಕ್ಷಿಣಾಪಥಕ್ಕೆ ಹೋಗಲು ಸೂಚಿಸಿದವರು ಯಾರು?
ಉ-ಭದ್ರಬಾಹು
೨೫,ಸಂಪ್ರತಿ ಚಂದ್ರಗುಪ್ತ ಕಂಡ ಕೆಟ್ಟ ಕನಸುಗಳನ್ನು ಅರ್ಥೈಸಿದವರು ಯಾರು?
ಉ-ಭದ್ರಬಾಹು ಭಟಾರರು
೨೬,ಭದ್ರಬಾಹು ಭಟಾರರ ಜೊತೆ ದಕ್ಷಿಣಾಪಥಕ್ಕೆ ಹೋಗದವರು ಯಾರ್ಯಾರು?
ಉ-ರಾಮಿಲಾಚಾರ್ಯ,ಸ್ಥೂಲಾಚಾರ್ಯ,ಸ್ಥೂಲಭದ್ರಾಚಾರ್ಯ
೨೭,ಸಿಂಧುದೇಶಕ್ಕೆ ಹೋದವರು ಯಾರ್ಯಾರು?
ಉ-ರಾಮಿಲಾಚಾರ್ಯ,ಸ್ಥೂಲಾಚಾರ್ಯ,ಸ್ಥೂಲಭದ್ರಾಚಾರ್ಯ
೨೮,ಕಳ್ವಪ್ಪುನಾಡು ಎಂದು ಈಗಿನ ಯಾವ ಊರನ್ನು ಕರೆಯಲಾಗುತ್ತದೆ?
ಉ-ಶ್ರವಣಬೆಳಗೊಳ
೨೯,ದ್ರವಿಳ ವಿಷಯಕ್ಕೆ ಹೊರಟ ಋಷಿಗಳ ಸಂಖ್ಯೆ?
ಉ-೮೦೦೦
೩೦,ಭದ್ರಬಾಹು ಭಟಾರರು ಸತ್ತು ಹುಟ್ಟಿದ್ದು ಯಾವ ಕಲ್ಪದಲ್ಲಿ?
ಉ-ಬ್ರಹ್ಮಕಲ್ಪದಲ್ಲಿ
೩೧,ಅಮಿತಕಾತಿಯೆಂಬ ದೇವನಾಗಿ ಹುಟ್ಟಿದವರು ಯಾರು?
ಉ-ಭದ್ರಬಾಹು ಭಟಾರರು
೩೨,ಅಮಿತಕಾತಿಯ ಆಯಸ್ಸೆಷ್ಟು?
ಉ-ಹತ್ತುಸಾಗರೋಪಮಾಯುಷ್ಯ
೩೩,ಭದ್ರಬಾಹು ಭಟಾರರ ನಿಸಿಧಿ ಇದ್ದದ್ದು ಎಲ್ಲಿ?
ಉ-ಶ್ರವಣಬೆಳಗೊಳದಲ್ಲಿ
೩೪,ಭದ್ರಬಾಹು ಭಟಾರರು ಸಂಪ್ರತಿ ಚಂದ್ರಗುಪ್ತನಿಗೆ ಕಲಿಯುವದು ಸ್ವರೂಪವನ್ನು ಯಾವ ವೃತ್ತದಲ್ಲಿ ನಿರೂಪಿಸಿದ್ದಾರೆ?
ಉ-ಹರಿಣಿ ವೃತ್ತದಲ್ಲಿ
೩೫,ಭದ್ರಬಾಹು ಭಟಾರರ ಜೊತೆ ದಕಷಿಣಾಪಥಕ್ಕೆ ಹೋದ ಋಷಿಗಳ ಸಂಖ್ಯೆ?
ಉ-೨೦೦೦೦
೩೬,ಭದ್ರಬಾಹು ಬಟಾರರು ಹಿರಿಯ ಸಮುದಾಯವನ್ನು ಕಟ್ಟಿಕೊಂಡು ಎಲ್ಲಿಗೆ ಬಂದರು?
ಉ-ಉಜ್ಜಯನಿಗೆ
೩೭,ಕಾಡಿನಲ್ಲಿ ಬೇಡುವ ಭಿಕ್ಷೆ ಯಾವುದು?
ಉ-ಕಾಂತಾರಭಿಕ್ಷೆ
೩೮,ಭದ್ರಬಾಹು ಭಟಾರರು ಯಾವ ದೀಕ್ಷೆಯನ್ನು ಕೈಗೊಂಡರು?
ಉ-ಅವಮೋದರ್ಯ ದೀಕ್ಷೆ
೩೯,ಭದ್ರಬಾಹು ತನ್ನ ಓರಿಗೆಯವರೊಂದಿಗೆ ಯಾವ ಆಟ ಆಡುತಿದ್ದನು?
ಉ-ಬಟ್ಟಾಟ
೪೦,ಭದ್ರಬಾಹು ಎಷ್ಟು ಬಟ್ಟುಗಳನ್ನು ಜೋಡಿಸಿಕೊಂಡು  ಆಟ ಆಡುತಿದ್ದನು?
ಉ-೧೪ ಬಟ್ಟುಗಳು



ಭಾಗ -2


ವಡ್ಡಾರಾಧನೆ ಭದ್ರಬಾಹುಭಟ್ಟಾರರ ಕಥೆ.

ಪ್ರಶ್ನೆ : ನಿವೇದಿತಾ ☄

೧.ಸಂಪ್ರತಿ ಚಂದ್ರಗುಪ್ತ ಯಾರು.
✍ಮಗದ ರಾಜ್ಯದ ದೊರೆ ಕುಣಾಳನ ಮಗ ಅಶೋಕನ ಮೊಮ್ಮಗ,✅

೨.ಮಗದದ ರಾಜಧಾನಿ ಯಾವುದು?
✍ಪಾಟಲಿಪುತ್ರ,✅

೩. ಮಗಾಧವನ್ನು ಮೌರ್ಯರಿಗಿಂತ ಮೊದಲು ಆಳುತ್ತಿದ್ದ ರಾಜವಂಶ ಯಾವುದು.
✍ನಂದರು✅

೪.ನಂದ ವಂಶದ ಕೊನೆಯ ರಾಜ ಯಾರು.
✍ನಂದರಾಜ.✅

೫.ನಂದರಾಜನನ್ನು ನಾಶಗೊಳಿಸಿದವನು ಯಾರು.
✍ ಚಾಣಕ್ಯ ✅

೬.ಚಾಣಕ್ಯ ನಂದರಾಜನನ್ನು ನಾಶಗೊಳಿಸಲು ಕಾರಣವೇನು.
✍ಚಾಣಕ್ಯನನ್ನು ನಂದ ಅಪಮಾನಗೊಳಿಸಿದ್ದರಿಂದ✅

೭.ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು?
✍ಚಂದ್ರಗುಪ್ತ ಮೌರ್ಯ✅

೮.ಚಂದ್ರಗುಪ್ತ ಮೌರ್ಯನ ಗುರು ಯಾರು?
✍ಚಾಣಕ್ಯ.

೯.ಮೌರ್ಯರ ವಂಶಾವಳಿಯನ್ನು ಪೂರ್ಣಗೊಳಿಸಿ.
೧.ಚಂದ್ರಗುಪ್ತ,  ೨.ಬಿಂದುಸಾರ  ೩.ಅಶೋಕ,  ೪.ಕುಣಳ,
೫.ಸಂಪ್ರತಿ ಚಂದ್ರಗುಪ್ತ,✅

೧೦.ಕುಣಾಳನ ಪತ್ನಿಯ ಹೆಸರೇನು.
✍ಚಂದ್ರಾನನೇ✅

೧೧.ಕಳವೆಯ ಕೊಳು ಮ್ ತುಪ್ಪಮಂ ತೊವೆಯಂ ಉಣಲ್ ಕೊಟ್ಟು ಕುಮಾರನೋದಿಸುವುದು - ಇದು ಯಾವುದರ  ಸಾಲು?
✍ಅಶೋಕ ಮಂತ್ರಿಗಳಿಗೆ ಬರೆದ ಪತ್ರದ ಸಾಲು✅

೧೨.ಉಪಾದಾಯಂ ಶಾಲಿಂ ಕೋರಂಚ ಮಶಿಂಘ್ರುತಂದ ತ್ವಾಕುಮಾರಾಮಾಂಧಾಪಯೇತ್‌, ಎಂಬಲ್ಲಿ ಕುಮಾರ ಯಾರು.
✍ಕುಣಾಳ ✅

೧೩.ಅಶೋಕ ಯಾರಿಗೆ ರಾಜ್ಯಾಭಿಷೇಕ ಮಾಡಿದನು?.
✍ಮೊಮ್ಮಗ ಸಂಪ್ರತಿ ಚಂದ್ರಗುಪ್ತನಿಗೆ✅✅

೧೪.ಅಶೋಕಲ್ಲಿ ಕುಣಾಳನು ಏನನ್ನು ಬೇಡಿದನು?
✍ಕಾಕಿಣಿ ಎಂಬ ಚಿಂತಾರತ್ನ✅

೧೫.ಕಾಕಿಣಿ ರತ್ನ ಯಾರಿಗೆ ಮಾತ್ರ ಸಲ್ಲಬೇಕಾದುದು.
✍ಚಕ್ರವರ್ತಿಗೆ

೧೬.ಅಶೋಕನು ಯಾರಿಂದ ಜಿನದೀಕ್ಷೆಯನ್ನು ಪಡೆದು ಪರದೀಕ್ಷೆಯನ್ನು ಹೊಂದಿದನು.
✍ಸುವ್ರತ

೧೭.ಸಂಪ್ರತಿ ಚಂದ್ರಗುಪ್ತನ ಕಾಲದಲ್ಲಿ ಪಾಟಲಿಪುತ್ರಕ್ಕೆ ಬಂದ ತ್ರಿಕಾಲಜ್ಞಾನಿ ಯಾರು.
✍ಸಮಾಧಿಗುಪ್ತ ಆಚಾರ್ಯರು.✅

೧೮.ಸಂಪ್ರತಿ ಚಂದ್ರಗುಪ್ತನ ಭವಾವಳಿಗಳನ್ನು ಹೇಳಿದವರಾರು.
✍ಸಮಾದಿಗುಪ್ತ
 ಆಚಾರ್ಯರು ✅

೧೯.ಸಂಪ್ರತಿ ಚಂದ್ರಗುಪ್ತನ ಪಟ್ಟಣದ ಉದ್ಯಾನವನದಲ್ಲಿ ಉಳಿದುಕೊಂಡ ಭಟ್ಟಾರರ ಯಾರು.
✍ ಭದ್ರಬಾಹು ಭಟ್ಟಾರರು

೨೦.ರಾಜನು ಎಷ್ಟು ದುಃಸ್ವಪ್ನಗಳನ್ನು ಕಂಡನು?
✍ ಹದಿನಾರು (೧೬).

೨೧.ಸಂಪ್ರತಿ ಚಂದ್ರಗುಪ್ತನ ಕನಸಲ್ಲದನ್ನು ಗುರುತಿಸಿ.
🦋ನೀರಿಲ್ಲದ ಕೆರೆಯ ದರ್ಶನ
🦋ಕರಿ ಕತ್ತೆ ಮೇಲೆ ರಾಜನ ಸವಾರಿ.
🦋 ಕಾಡ್ಗಿಚ್ಚು ಕಾಣಿಸಿದ್ದು
🦋 ಸಿಂಹಾಸನವೇರಿದ ಕೋಡಗ.
✍ಕರಿ ಕತ್ತೆ ಮೇಲೆ ರಾಜನ
ಸವಾರಿ ✅
೨೨.ಇವುಗಳ ಅರ್ಥ ತಿಳಿಸಿ.
🦋ಕಾಡ್ಗಿಚ್ಚು ಕಂಡದಕ್ಕೆ
✍ದುಷ್ಟಶಕ್ತಿಯ ಹೆಚ್ಚಳ.
🦋ಹೊನ್ನ ತಟ್ಟೆಯಲ್ಲಿ ನಾಯಿ ಉಣ್ಣುವುದು.
✍ಕೆಟ್ಟವರಿಗೆ ರಾಜರಿಂದ ಮಾನ್ಯತೆ.
🦋ತಳಕ್ಕೆ ಬರಲಿರುವ ವಿಮಾನ ಮದ್ಯದಿಂದಲೇ ಮೇಲಕ್ಕೆ ಹೋಗುವುದು.
✍ ಇನ್ನು ಮುಂದೆ ಇಲ್ಲಿಗೆ ದೇವತೆಗಳು ವಿದ್ಯಾಧರರು ಬರಲಾರರು.
🦋ಕೋಡಗ ಆನೆಯ ಮೇಲೆ ಕುಳಿತ ದೃಶ್ಯ
✍ರಾಜರೂ ಕುಲೀನರಲ್ಲದವರಲ್ಲಿ ದುಡಿಯುವರು
🦋ತಿಪ್ಪೆಯಲ್ಲಿ ತಾವರೆ ಹುಟ್ಟಿದುದಕ್ಕೆ
✍ಸದ್ದರ್ಮ ಪ್ರಲೋಭನೆಗೆ ಒಳಗಾಗುವುದು.
🦋 ಸಮುದ್ರವು ಎಲ್ಲೆ ಮೀರಿದುದಕ್ಕೆ
✍ಉತ್ತಮರು ಮರ್ಯಾದೆ, ಸತ್ಯ, ಶುಚಿತ್ವ, ನಾಡತೆಯಲ್ಲಿ ಕುಂಠಿತರಾಗುವರು.

೨೩. ಸರಿಯಾಗಿ ಹೊಂದಿಸಿ ಬರೆಯಿರಿ( ವಾಕ್ಯ ಸರಿಪಡಿಸಿ)
🦋ದರ್ಶನ, ಕೊಡಗದ,ಸಿಂಹಾಸನವೇರಿದ,
✍ಸಿಂಹಾಸನವೇರಿದ ಕೊಡಗದ ದರ್ಶನ.
🦋ಕತ್ತೆ ಎಳೆಯುವ ಬಿಳಿ ಹೊನ್ನರಥ ದರ್ಶನ.
✍ಬಿಳಿ ಕತ್ತೆ ಎಳೆಯುವ ಹೊನ್ನರಥ ದರ್ಶನ.
🦋ಮೇಲೆ ಬಿಳಿ ಕತ್ತೆಯ ಸವಾರಿ ರಾಜನ.
✍ಬಿಳಿ ಕತ್ತೆಯ ಮೇಲೆ ರಾಜನ ಸವಾರಿ.
೨೬. ಸಂಪ್ರತಿ ಚಂದ್ರಗುಪ್ತನ ಸಾಮ್ರಾಜ್ಯದಲ್ಲಿ ಭೀಕರ ಬರಗಾಲ ಬರುವುದನ್ನು ತಿಳಿಸಿದ ಜ್ಞಾನಿಗಳು ಯಾರು.
✍ಭದ್ರಬಾಹು ಭಟ್ಟಾರರು.

ಮುಂದುವರೆದು🔛

ಭಾಗ -3
ಭದ್ರಬಾಹು ಭಟ್ಟಾರರ ಕಥೆ


ಪ್ರಶ್ನೆ : ನಿವೇದಿತಾ ಹಾರೋಗೆರಿ.

೨೭. ಸಂಪ್ರತಿ ಚಂದ್ರಗುಪ್ತನ ಹಿರಿಯ ಮಗನ ಹೆಸರೇನು?
✍ಸಿಂಹಸೇನಾ.

೩೮.ಸಂಪ್ರತಿ ಚಂದ್ರಗುಪ್ತ ಯಾರ ಬಳಿ ತಪಸ್ಸನ್ನು ಕೈಗೊಂಡನು.
✍ಭದ್ರಬಾಹು ಭಟ್ಟಾರರ ಬಳಿ.

೨೯.ಸಂಪ್ರತಿ ಚಂದ್ರಗುಪ್ತ ಭದ್ರಬಾಹು ಭಟ್ಟಾರರ ಜೊತೆ ಎಲ್ಲಿಗೆ ಹೋದನು?
✍ಶ್ರವಣಬೆಳಗೊಳ.

೩೦.ಊರು ಕೇರಿಗಳಿಲ್ಲದ ಅಡವಿ ಇಲ್ಲೆಂತು ಭಿಕ್ಷೆಗೆ ಪೋಗಲಿ? ಯಾರು ಯಾರಿಗೆ ಹೇಳಿದರು?
✍ಸಂಪ್ರತಿ ಚಂದ್ರಗುಪ್ತ ಭದ್ರಬಾಹು ಭಟ್ಟಾರರಿಗೆ.

೩೧. ಕಾಂತಾರಭೈಕ್ಷಮೆಂಬುದಾಗಮದೊಳ್ ಪೆಲ್ದುದಾರಾನುಮ್ ಬಟ್ಟೆ ವೊಪರ್ ಬೀಡಂ, ಯಾರು ಯಾರಿಗೆ ಹೇಳಿದರು.
✍ಭದ್ರಬಾಹು ಸಂಪ್ರತಿ ಚಂದ್ರಗುಪ್ತನಿಗೆ .

೩೨.ಮರದಡಿ ಕುಳಿತು ಅಡುಗೆ ಮಾಡುತ್ತಿದ್ದವಳಾರು?
✍ದೇವತಾ ಸ್ತ್ರೀ.

೩೩. ಭಿಕ್ಷೆಯಂ ಪಿಡಿ ಎಂದವರು ಯಾರು?
✍ದೇವತಾ ಸ್ತ್ರೀ ಮರದ ಪೊಟರೆಯೊಳಗಿನ ಕೈ.

೩೪.ಯಾವುದರಲ್ಲಿ ಅಡುಗೆ ಮಾಡುತ್ತಿದ್ದಳು.
✍ಹೊನ್ನಿನ ಪಾತ್ರೆ(ಪೊನ್ನ ಮಡಕೆಯೊಳ್)

೩೫.ಸಂಪ್ರತಿ ಚಂದ್ರಗುಪ್ತಮುನಿಗೆ ಭಿಕ್ಷೆ ಎಲ್ಲಿ ದೊರೆಯಿತು.
✍ಕಾಡಿನ ಅರಣ್ಯ ಮಾಯಾ ಪಟ್ಟಣದೊಳಗೆ.

೩೬.ಭಿಕ್ಷಾನ್ನವನ್ನು ಉಂಡು ಸಂಪ್ರತಿ ಎಷ್ಟು ವರ್ಷ ಸುಖವಾಗಿದ್ದ?.
✍ ಹನ್ನೆರಡು ವರ್ಷ(೧೨)

೩೭. ಸಂಪ್ರತಿ ಚಂದ್ರಮುನಿ ಯಾರು ಯಾರು ಮಾಡಿದ ಅಡುಗೆ ಉಣ್ಣುತ್ತಿದ್ದ?
✍ದೇವತೆಗಳು.

೩೮.ಕಮಂಡಲಾವನ್ನು ಮರೆತು ಬಂದವರಾರು?
✍ವಿಶಾಖಾಚಾರ್ಯರು.

೩೯.ಕಮಂಡಲ ಎಲ್ಲಿತ್ತು?
✍ಮರದ ತುದಿಯಲ್ ( ಮರದ ತುತ್ತತುದಿಯಲ್ಲಿ)

೪೦.ರಾಮವಿಲಾಚಾರ್ಯ, ಸ್ತೂಲಭದ್ರಾಚಾರ್ಯ, ಸ್ತೂಲಾಚಾರ್ಯರು ಎಲ್ಲಿಗೆ ಹೋಗಿದ್ದರು?
✍ಸಿಂಧೂ ದೇಶಕ್ಕೆ.

೪೧. ಅವರು ಏನನ್ನು ತಿನ್ನುತ್ತಿದ್ದರು?
✍ಮನುಷ್ಯರನ್ನ.

೪೨.ಮಧ್ಯದೇಶದಲ್ಲಿ ಋಷಿಗಳು ಏನಾಗಿದ್ರು?
✍ದಿಗಂಬರ.

೪೩.ಮಧ್ಯದೇಶದ ಜನರ ಸ್ವಭಾವ ಮತ್ತು ಕೆಟ್ಟತನ ಯಾರಿಂದ ತಿಳಿಯಿತು.
✍ಶ್ರಾವಕರಿಂದ.

೪೪.ಮಧ್ಯದೇಶದಲ್ಲಿ ಭಿಕ್ಷಕ್ಕೆ ಯಾವಾಗ ಹೋಗಬೇಕಾಗಿತ್ತು.
✍ರಾತ್ರಿ.

೪೫.ಸಂಪ್ರತಿ ಚಂದ್ರಮುನಿ ಸತ್ತು ಏನಾದ?
✍ಶ್ರೀಧರ ದೇವನಾದ.

೪೬.ಗುಂಪಿಗೆ ಸೇರದ ಪದ ಗುರುತಿಸಿ.
☄ನಂದಿಮಿತ್ರ.
☄ಕನಕ.
☄ಧ್ವಜ.
☄ಸಂಪ್ರತಿ.
☄ಶ್ರೀಧರ.
☄ಶ್ರೀಕಾಂತ.
✍ಶ್ರೀಕಾಂತ.✅

೪೭.ಕಮಂಡಲವನ್ನು ತರಲು ವಿಶಾಖದತ್ತರು ಯಾರಿಗೆ ಹೇಳಿದರು?
✍ಬ್ರಹ್ಮಯ್ಯನಿಗೆ.

೪೮.ಸೂರ್ಯನು ಮುಳುಗಿದ್ದರ ಕನಸಿನ ಅರ್ಥ,
✍ಪೂರ್ವಜ್ಞಾನಿಗಳು ಅವಧಿ ಜ್ಞಾನಿಗಳು ಸುಳಿಯರು.

೪೯.ಹನ್ನೆರೆಡು ತಲೆಯ ಹಾವಿನ ಕನಸಿನ ಅರ್ಥ.
✍ಹನ್ನೆರೆಡು ವರ್ಷ ಬರಗಾಲ.

೫೦.ವಳಭಿ ಪಟ್ಟಣ ಎಲ್ಲಿತ್ತು?
✍ಸುರಥ ನಾಡಲ್ಲಿ.

೫೧.ವಳಭಿಯ ರಾಜನಾರು?
✍ವಜ್ರಪಾಳ.

೫೨.ವಜ್ರಪಾಳನ ಹೆಂಡತಿಯ ಹೆಸರೇನು?
✍ಸ್ವಾಮಿನೀ.

೫೩.ಜೈನರಲ್ಲಿ ಯಾವ ಪ್ರಭೇದ ಸ್ಥಾಪಿಸಲಾಯಿತು.
✍ಜೀನಕಲ್ಪ ಮತ್ತು ಸ್ಥವಿರಕಲ್ಪ

೫೪. ದಿಗಂಬರತ್ವ ಕ್ರಮೇಣ ಏನಾಯಿತು.
✍ಅರ್ಧವಸ್ತ್ರ ಪರಂಪರೆ.

೫೫.ಯಾರು ಪೂರ್ಣ ವಸ್ತ್ರವನ್ನು ಧರಿಸುವಂತೆ ಆದೇಶವಿಟ್ಟರು?
✍ವಿಪ್ರಪಾಲ.

೫೬.ಪೂರ್ಣ ವಸ್ತ್ರವನ್ನು ಧರಿಸುವ ಜೈನರ ಪಂಗಡ ಯಾವುದು?
✍ಶ್ವೇತಾಂಬರ.

೫೭.ಶ್ವೇತಾಂಬರ ಸಂಘಕ್ಕೆ ದಕ್ಷಿಣದಲ್ಲಿ ಮೂಲ ಪುರುಷ ಯಾರು?
✍ಸಾಮಳಿ ಪುತ್ರ.

೫೮.ಇವನು ಯಾವ ನಗರದ ಶಾಖೆಯ ಮೂಲ ಪುರುಷನಾದನು?
✍ಜಾಪುಲಿ ನಗರದ.

೫೯.ಜೈನರಲ್ಲಿ ಅರೆ ವಸ್ತ್ರ ಪದ್ದತಿ ಹೇಗೆ ಯಾಕೆ ಪ್ರಾರಂಭವಾಯಿತು
✍ವೇಳಾಸ್ವಾಮಿನಿ ಶಾಪದಿಂದ.
ಉತ್ತರ ಭಾರತದಲ್ಲಿ ೧೨ ವರ್ಷ ಬರಗಾಲ ಬಂದಿದ್ದಾಗ ಜನ ಹಗಲು ಅಡಿಗೆ ಮಾಡುತ್ತಿರಲಿಲ್ಲ ಜನ ಆಹಾರವನ್ನು ಕದೆಯುತ್ತಾರೆಂದು ರಾತ್ರಿ ಅಡುಗೆ ಮಾಡುತ್ತಿದ್ದರು. ದಿಗಂಬರರು ರಾತ್ರಿ ಭಿಕ್ಷೆ ಬೇಡುತ್ತಿದ್ದರು. ಒಮ್ಮೆ ಗರ್ಭಿಣಿ ವೇಳಾ ಸ್ವಾಮಿನಿ, ಅಮವಾಸ್ಯೆಯ ಕತ್ತಲಲ್ಲಿ ದಿಗಂಬರ ನನ್ನು ನೋಡಿ ಹೆದರಿ ಆಕೆಯ ಬಸಿರಿಳಿಯಿತು ಮತ್ತು ಮನುಷ್ಯರನ್ನೇ ತಿಂದ ದಿಗಂಬರರಿಗೆ ಪ್ರಾಯಶ್ಚಿತ್ತವಾಗಿ ಬಟ್ಟೆಯನ್ನು ಧರಿಸಲು ತಿಳಿಸಲಾಯಿತು. ಆದರೆ ಮುಂದೆ ಅರೆ ವಸ್ತ್ರ ಪದ್ದತಿಯಾಗಿ ಮುಂದೆ ರಾಜ ವಪ್ರಪಾಳನಿಂದ ಪೂರ್ಣ ವಸ್ತ್ರ ಪದ್ದತಿ ಬಂತು.

🍀ಬಾಲಚಂದ್ರ ಎಸ್  ಕೆ
ಚಿತ್ತರಗಿ ಗ್ರೂಪ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ