ವಚನ ಸಾಹಿತ್ಯ
ಅಷ್ಟಾವರಣಗಳು ಯಾವವು?ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ

ಪಂಚ ಆಚಾರಗಳು ಯಾವವು?ಶಿವಾಚಾರ, ಸದಾಚಾರ, ಲಿಂಗಾಚಾರ, ಭೃತ್ಯಾಚಾರ, ಗಣಾಚಾರ

ಷಟಸ್ಥಲಗಳು ಯಾವವು?
ಭಕ್ತ , ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ

ಅಷ್ಟಮದಗಳು ಯಾವವು?ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದ

ಬಸವಣ್ಣನವರ ಕಾರ್ಯಸ್ಥಳ ಯಾವುದು?
ಬಸವ ಕಲ್ಯಾಣ

ಅಕ್ಕಮಹಾದೇವಿ ಜನ್ಮಸ್ಥಳ ಯಾವುದು?
ಉಡುತಡಿ

ಉಡತಡಿ ಸದ್ಯಕ್ಕೆ ಯಾವ ಜಿಲ್ಲೆಯಲ್ಲಿದೆ?

ಶಿವಮೊಗ್ಗ ಜಿಲ್ಲೆ

ಅಲ್ಲಮ ಪ್ರಭುಗಳ ಜನ್ಮಸ್ಥಳ
ಬಳ್ಳಿಗಾವಿ

ಅಲ್ಲಮ ಪ್ರಭುದೇವರ ಪೂರ್ವಾಶ್ರಮದ ಜಾತಿ ಯಾವುದು?
ನಟವರ ಜಾತಿ

ಅಲ್ಲಮ ಪ್ರಭುಗಳ ತಂದೆ ಹೆಸರು ಏನು?
ನಿರಹಂಕಾರ

ಅಲ್ಲಮ ಪ್ರಭುಗಳ ತಾಯಿ ಹೆಸರು ಏನು?
ಸುಜ್ಞಾನಿದೇವಿ

ಅಲ್ಲಮ ಪ್ರಭುಗಳ ದೀಕ್ಷಾಗುರುಗಳು ಯಾರು?ಅನಿಮಿಷದೇವ

ವ್ಯೋಮಕಾಯ ಬಿರುದು ಪಡೆದವರು ಯಾರು?ಅಲ್ಲಮಪ್ರಭು

ಅನುಭವ ಮಂಟಪದ ಪ್ರಥಮ ಅಧ್ಯಕ್ಷರು ಯಾರು?ಅಲ್ಲಮಪ್ರಭು

ಅನುಭವ ಮಂಟಪದ ದ್ವೀತೀಯ ಅಧ್ಯಕ್ಷರು ಯಾರು?ಚನ್ನ ಬಸವಣ್ಣ

ಅನುಭವ ಮಂಟಪದ ತೃತೀಯ ಅಧ್ಯಕ್ಷರು ಯಾರು?ಸಿದ್ಧರಾಮೇಶ್ವರ

ಕನ್ನಡದ ಪ್ರಥಮ ಕವಿಯತ್ರಿ
ಅಕ್ಕಮಹಾದೇವಿ

ಶರಣನಾಗಿ ಮಾರ್ಪಟ್ಟ ಕಾಶ್ಮೀರದ ರಾಜನ ಹೆಸರು ಯಾವುದು?
ಮಹಾದೇವ ಭೂಪಾಲ

ಬಸವಣ್ಣನವರ ತಂದೆ ಹೆಸರು ಏನು?
ಮಾದರಸ

ಬಸವಣ್ಣನವರ ತಾಯಿ ಹೆಸರು ಏನು?
ಮಾದಲಾಂಬಿಕೆ

ಅಕ್ಕಮಹಾದೇವಿ ತಂದೆ ಹೆಸರು ಏನು?
ನಿರ್ಮಲಶೆಟ್ಟಿ

ಅಕ್ಕಮಹಾದೇವಿ ತಾಯಿ ಹೆಸರು ಏನು?ಸುಮತಿ

ಬಸವಣ್ಣವನರು ಮನೆ ಬಿಟ್ಟಾಗ ವಯಸ್ಸು ಎಷ್ಟು?
ಎಂಟು

ಅಕ್ಕಮಹಾದೇವಿಯ ವಚನಾಂಕಿತ ಯಾವುದು?ಚನ್ನಮಲ್ಲಿಕಾರ್ಜುನ

ಗುಹೇಶ್ವರ ಇದು ಯಾರ ವಚನಾಂಕಿತ
ಅಲ್ಲಮಪ್ರಭು

ಚನ್ನಬಸವಣ್ಣನವರ ವಚನಾಂಕಿತ ಯಾವುದು?ಕೂಡಲಚನ್ನಸಂಗಮದೇವ

ಬಸವಣ್ಣವನರು ಸೋದರಳಿಯ ಯಾರು?ಚನ್ನಬಸವಣ್ಣ

ಮಾರಯ್ಯಪ್ರಿಯ ಅಮರೇಶ್ವರಲಿಂಗ ಇದು ಯಾರ ವಚನಾಂಕಿತ?
ಆಯ್ದಕ್ಕಿ ಲಕ್ಕಮ್ಮ

ಅಕ್ಕನಾಗಮ್ಮನ ಮಗ ಯಾರು?ಚನ್ನಬಸವಣ್ಣ

ಚನ್ನಬಸವಣ್ಣನವರ ತಂದೆ ಯಾರು?
ಶಿವಸ್ವಾಮಿ

ಅಕ್ಕನಾಗಮ್ಮನ ಪತಿಯ ಹೆಸರು?
ಶಿವಸ್ವಾಮಿ

ಅಕ್ಕನಾಗಮ್ಮನ ವಚನಾಂಕಿತ ಯಾವುದು?
ಬಸವಣ್ಣಪ್ರಿಯ ಚನ್ನಸಂಗ

ವೀರ ಗಣಾಚಾರಿ ಯಾರ ಬಿರುದು?
ಮಡಿವಾಳ ಮಾಚಿದೇವ

ಕಲಿದೇವರ ದೇವ ಇದು ಯಾರ ವಚನಾಂಕಿತ?
ಮಡಿವಾಳ ಮಾಚಿದೇವ

ಅನುಭವ ಮಂಟಪದಲ್ಲಿ ಅಂತರ್ಜಾತಿ ವಿವಾಹಕ್ಕೋಳಗಾದ ವಧುವರರು ಹೆಸರು?ಶೀಲವಂತ ಹಾಗೂ ಲಾವಣ್ಯವತಿ

ಶಿಲವಂತನ ತಂದೆ ಯಾರು?ಹರಳಯ್ಯ

ಶಿಲವಂತನ ತಾಯಿ ಯಾರು?ಕಲ್ಯಾಣಮ್ಮ

ಲಾವಣ್ಯವತಿಯ ತಂದೆ ಯಾರು?
ಮಧುವರಸ

ಕಲ್ಯಾಣ ಕ್ರಾಂತಿಗೆ ಕಾರಣ?ಅಂತರ್ಜಾತಿ ವಿವಾಹ

ಕಲ್ಯಾಣದಲ್ಲಿ ಅನುಭವ ಮಂಟಪದ ಕಾಲಾವದಿ
27ವರ್ಷಗಳು


ಬಸವಣ್ಣನವರ ಲಿಂಗೈಕ್ಯ ಸ್ಥಳ?ಕೂಡಲಸಂಗಮ

ಅಕ್ಕಮಹಾದೇವಿಯ ಲಿಂಗೈಕ್ಯ ಸ್ಥಳ?
ಕದಳಿಬನ (ಶ್ರೀ ಶೈಲ)

ಅಲ್ಲಮ ಪ್ರಭುದೇವರಲಿಂಗೈಕ್ಯ ಸ್ಥಳ?(ಶ್ರೀ ಶೈಲ)

ಚನ್ನಬಸವಣ್ಣ ಲಿಂಗೈಕ್ಯ ಸ್ಥಳ?ಉಳವಿ

ಸಿದ್ಧರಾಮೇಶ್ವರ ಲಿಂಗೈಕ್ಯ ಸ್ಥಳ?ಸೋಲಾಪೂರ

ಬಸವಣ್ಣನವರ ಧರ್ಮಪತ್ನಿಯ ಲಿಂಗೈಕ್ಯ ಸ್ಥಳ?
ತಂಗಡಗಿ

ಶಿವನಾಗಮಯ್ಯ ಇವರ ವಚನಾಂಕಿತ ಯಾವುದು?ನಾಗಪ್ರಿಯ

 ಚೆನ್ನರಾಮೇಶ್ವರಕದಳಿಬನ ಯಾವ ರಾಜ್ಯದಲ್ಲಿದೆ?ಆಂಧ್ರಪ್ರದೇಶ

ಚಿನ್ಮಯಜ್ಙಾನಿ ಬಿರುದು ಪಡೆದವರು ಯಾರು?ಚನ್ನಬಸವಣ್ಣ

ಬಸವಣ್ಣನವರ ಮಾವನವರ ಹೆಸರು?
ಬಲದೇವರಸ

ಬಸವಣ್ಣನವರ  ಯಾವ ರಾಜನ ಮಂತ್ರಿಯಾಗಿದ್ದರು?ಬಿಜ್ಜಳ

ಬಸವಣ್ಣನವರಿಗೆ ಏನು ಶಿಕ್ಷೆ ವಿಧಿಸಲಾಯಿತು?
ಗಡಿಪಾರು ಶಿಕ್ಷೆ

ಬಸವಣ್ಣನವರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?ಶಕ್ತಿವಿಶಿಷ್ಟಾದ್ವೈತ

ಬಸವಣ್ಣನವರ ಮಗನ ಹೆಸರು?
ಬಾಲಸಂಗಯ್ಯ

ಸಿದ್ಧಾಂತಗಳು ಎಷ್ಟು ಪ್ರಕಾರ
4

ಸಿದ್ಧಾಂತಗಳು ಯಾವವು?
ದ್ವೈತ, ಅದ್ವೈತ, ವಿಶಿಷ್ಟಾದ್ವೈತ , ಶಕ್ತಿವಿಶಿಷ್ಟಾದ್ವೈತ


ಹಡಪದ ಅಪ್ಪಣ್ಣನ ವಚನಾಂಕಿತ ಯಾವುದು?ಬಸವಪ್ರಿಯ ಕೂಡಲ ಚನ್ನಸಂಗ

ಶರಣೆಯಾಗಿ ಮಾರ್ಪಟ್ಟ ವೇಶ್ಯ ಯಾರು?
(ಸೂಳೆ)ಸಂಕವ್ವೆ

ಸೂಳೆಸಂಕವ್ವೆ ವಚನಾಂಕಿತ ಯಾವುದು?
ನಿರ್ಲಜ್ಜೇಶ್ವರ

ಹಡಪದ ಅಪ್ಪಣ್ಣನ ಪತ್ನಿಯ ಹೆಸರು?
ಲಿಂಗಮ್ಮ

ಮುಕ್ತಾಯಕ್ಕನ ವಚನಾಂಕಿತ ಯಾವುದು?
ಅಜಗಣ್ಣ

ಮೋಳಿಗೆ ಮಾರಯ್ಯನ ಧರ್ಮಪತ್ನಿ ಯಾರು?ಮಹಾದೇವಿ

ಆಯ್ದಕ್ಕಿ ಮಾರಯ್ಯನ ಧರ್ಮಪತ್ನಿ ಯಾರು?
ಲಕ್ಕಮ್ಮ

ಅನುಭವ ಮಂಟಪದಲ್ಲಿ ಪ್ರಸಾದ ಸಿದ್ಧಪಡಿಸುತ್ತಿದ್ದವರು ಯಾರು?
ಪಾಕದ ಭೀಮಣ್ಣ

ಅಮರೇಶ್ವರಲಿಂಗ ಯಾರ ವಚನಾಂಕಿತ
ಆಯ್ದಕ್ಕಿ ಮಾರಯ್ಯ

ಅಂಬಿಗರ ಚೌಡಯ್ಯ ಯಾರ ವಚನಾಂಕಿತ
ಅಂಬಿಗರ ಚೌಡಯ್ಯ

ಉರಿಲಿಂಗಪೆದ್ದಿಗಳ ವಚನಾಂಕಿತ ಯಾವುದು?ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ

ಬಸವಣ್ಣನವರ ಆಪ್ತ ಸಹಾಯಕ ಯಾರು?
ಹಡಪದ ಅಪ್ಪಣ್ಣ

ಕಾಮ ಭೀಮ ಜೀವನದೊಡೆಯ ಯಾರ ವಚನಾಂಕಿತ
ಒಕ್ಕಲಿಗ ಮುದ್ದಣ್ಣ


ರಾಮನಾಥ ಯಾರ ವಚನಾಂಕಿತ
ಜೇಡರ ದಾಸಿಮಯ್ಯ (ದೇವರ ದಾಸಿಮಯ್ಯ)

ಶರಣೆಯಾದ ರಾಜನರ್ತಕಿ ಯಾರು?
ಮಾಯಾದೇವಿ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಇದು ಯಾರ ವಚನದ ಭಾಗ
ಬಸವಣ್ಣ

ಬಸವಣ್ಣನವರ ಅಕ್ಕನ ಹೆಸರು?
ಅಕ್ಕನಾಗಮ್ಮ

ಬಸವಣ್ಣನವರ ಶಿಕ್ಷಾ ಗುರು ಯಾರು?
ಜಾತವೇದ ಮುನಿ

ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಾಂಕಿತ ಯಾವುದು?
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭು

ಅಖಂಡೇಶ್ವರ ಯಾರ ವಚನಾಂಕಿತ
ಷಣ್ಮುಖ ಶಿವಯೋಗಿಗಳು

ಸಿದ್ಧರಾಮೇಶ್ವರರ ಪೂರ್ವಾಶ್ರಮದ ಹೆಸರು?ಧೂಳಿಮಹಾಂಕಾಳಯ್ಯ

ಯೋಗಿನಾಥ ಯಾರ ವಚನಾಂಕಿತ
ಸಿದ್ಧರಾಮೇಶ್ವರರ

ಅಕ್ಕಮಹಾದೇವಿ ದೀಕ್ಷಾ ಗುರು ಯಾರು?
ಗುರುಲಿಂಗಸ್ವಾಮಿ

ಸಿದ್ಧರಾಮೇಶ್ವರರ ದೀಕ್ಷಾ ಗುರು ಯಾರು?
ಚನ್ನಬಸವಣ್ಣ

ಅಕ್ಕನಾಗಮ್ಮನವರ ದೀಕ್ಷಾ ಗುರು ಯಾರು?ಬಸವಣ್ಣ

ಬಸವಪುರಾಣಮು ಬರೆದವರಾರು?
ಪಾಲ್ಕುರಿಕೆ ಸೋಮನಾಥ

ಬಸವ ಪುರಾಣ ಬರೆದವರಾರು?
ಭೀಮ ಕವಿ

ಬಸವಣ್ಣನವರ ಕುರಿತಾದ ಹರಿಹರನ ಕೃತಿ ಯಾವುದು?ಬಸವರಾಜದೇವರ ರಗಳೆ

ಸಂಸತ ಭವನದ ಮುಂದೆ ಬಸವಣ್ಣನವರ ಪುತ್ಥಳಿ ಸ್ಥಾಪಿತ ವರ್ಷ ಯಾವುದು?
2003

ಸಂಸತ ಭವನದ ಮುಂದೆ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದವರು ಯಾರು?
ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ

ಅಷ್ಟವಿಧಾರ್ಚನೆ ಎಂದರೇನು?ಜಲ, ಗಂಧ, ಅಕ್ಷತೆ, ಪತ್ರ-ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ

ಅಷ್ಟಾಂಗ ಯೋಗಗಳು ಯಾವುವು?ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ

ಆದಿ ಅಕ್ಷರ ಯಾವುದು?
ಓಂ

ಓಂಕಾರ ಸ್ವರೂಪಿ ಯಾರು?ಪರಾತ್ಪರ ಪರವಸ್ತು (ಪರಶಿವ)

ಓಂ ಅಕ್ಷರದಲ್ಲಿರುವ ಅಡಕಗಳು ಯಾವುವು?
ಅ, ಉ, ಮ

ಷಟ್ ಚಕ್ರಗಳು ಯವುವು?ಆಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ

ಪ್ರಭುಲಿಂಗ ಲೀಲೆ ಬರೆದವರಾರು?
ಚಾಮರಸ

ವಚನ ಪಿತಾಮಹ ಯಾರು?ಫ.ಗು. ಹಳಕಟ್ಟಿ

ಫ.ಗು. ಹಳಕಟ್ಟಿ ಪೂರ್ಣ (ಪೂರ್ತಿ) ಹೆಸರೇನು?
ಫಕೀರಪ್ಪ ಗುಂಡಪ್ಪ ಹಳಕಟ್ಟಿ

ಸಪ್ತಧಾತುಗಳು ಯಾವುವು?ರಸ, ರುಧಿರ, ಮಾಂಸ, ಮಜ್ಜೆ, ಮೆದಸ್ಸು, ಅಸ್ಥಿ, ಶುಕ್ಲ

ಸಮಗ್ರ ವಚನ ಸಂಪುಟ ಪ್ರಕಟಿಸಿದ ಮುಖ್ಯಮಂತ್ರಿ ಯಾರು?
ಎಂ. ವೀರಪ್ಪ ಮೊಯಿಲಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ