ಗದಾಯುದ್ಧದ ೦೫ ನೇ ಆಶ್ವಾಸದ ಪ್ರಶ್ನೆಗಳು.


ಸಂಗ್ರಹ: ಬಸಮ್ಮ

೦೧.ಮೃಗರಾಜ ಪತಾಕ ಎಂದರೆ ಯಾರು?
✅ಭೀಮ

೦೨."ಶ್ರೀಕಾಂತಂ ಸಮರಜಯ ಶ್ರೀಕಾಂತಂ ರಿಪುದರ್ಪೋದ್ರೇಕಹರಂ"ಎಂದು  ಭೀಮನ ಪರಾಕ್ರಮದ ಬಗ್ಗೆ ಯಾರು ಯಾರಿಗೆ ಹೇಳಿದರು?
✅ಸಂಜಯ ದುರ್ಯೋಧನನಿಗೆ

೦೩.ಭೀಮನು ಯಾರ ಆನೆಯ ಜೊತೆಗೆ ಹೋರಾಡಿದನೆಂದು ಸಂಜಯ ದುರ್ಯೋಧನನಿಗೆ ಹೇಳಿದನು?
✅ಭಗದತ್ತನ ಆನೆ

೦೪."ಧಾತ್ರಿಸುತನಿಭದೊಳಿಭಂ ಪೋರ್ವವೊಲ್ ಪೋರ್ದ ತಾಣಂ"ಇದರಲ್ಲಿರುವ ಅಲಂಕಾರ ಯಾವುದು?
✅ಉಪಮಾ

೦೫.ಭೀಮನು ದುಶ್ಯಾಸನನ ರಕ್ತವನ್ನು ಹೇಗೆ ಕುಡಿದನೆಂದು ಸಂಜಯ ಹೇಳುತ್ತಾನೆ?
✅ಗೊಟ್ಟವೆತ್ತಿ /ಗೊಟ್ಟಂಗುಡಿದಂ

೦೬.ಕಳಿಂಗರಾಜನ ಯಾವ ಸೈನ್ಯವನ್ನು ಭೀಮನು ಕೊಂದಿದ್ದನು?
✅ಗಜ ಸೈನ್ಯ

೦೭.ಹೊಂದಿಸಿ ಬರೆಯಿರಿ.
a)ಕಾಗೆಗಳು  1)ಪಕ್ಕೆಯ ಬಳಿ ಬಂದು ಕಾಡುವ
b)ಹದ್ದುಗಳು   2)ಕಣ್ಣನ್ನು ಕುಕ್ಕುವ
c)ನರಿಗಳು     3)ರಕ್ತನಾಳವನ್ನು ಸೆಳೆಯುವ
d)ಬಳ್ಳುಗಳು   4)ನರವನ್ನು ಕೀಳುವ
e)ಸೀಳ್ನಾಯಿಗಳು 5) ಕರುಳ ತೊಡಕನ್ನು ಹಿಡಿದೆಳೆಯುವ
✅a-2,  b-5,  c-4,  d-1,  e-3

೦೮.ಪುಣ್ಣ ಪದದ ಅರ್ಥವೇನು?
✅ಗಾಯ

೦೯."ನಡುವುಡಿವನ್ನಮೇರಿ ಬರೆಯಲ್ವುಡೆವನ್ನೆಗಮೊತ್ತಿ" ಇದು ಯಾರ ಶವದ ಸ್ಥಿತಿಯನ್ನು ಸೂಚಿಹುತ್ತದೆ?
✅ದುಶ್ಯಾಸನನ

೧೦.ದುಶ್ಯಾಸನನು ಯಾರಿಂದ ಪಂಚತ್ವವನ್ನು ಹೊಂದಿದನು?
✅ಭೀಮನ ಭೀಮಗದೆಯಿಂದ

೧೧.ಹೊಂದಿಸಿ ಬರೆಯಿರಿ
1) ಜೀವ.    a)ನಿಶಾಚರಿಯ ಕೈಯಲ್ಲಿ
2)ಮಾಂಸ.    b)ಕುರುಕ್ಷೇತ್ರದಲ್ಲಿ
3)ರಕ್ತ.          c)ಪರಲೋಕದಲ್ಲೆ
4)ತಲೆ.           d)ವೈರಿಯ ಹೊಟ್ಟೆಯಲ್ಲಿ
5)ದೇಹ.            e)ಪಿಶಾಚಿಗಳ ಕೈಯಲ್ಲಿ
✅1-c,  2-e,  3-d,  4-a,  5-b

೧೨." ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ" ದುರ್ಯೋಧನ ಈ ಮಾತನ್ನು ಎಷ್ಟು ಬಾರಿ ಬಳಸುತ್ತಾನೆ?
✅೦೨ ಬಾರಿ

೧೩."ಅನುಜನ ನೆತ್ತರನೀಂಟಿದವನನಿಂದಾಪ್ರಾಣಸಹಿತಮೀಂಟದೆ ದುರ್ಯೋಧನನೆಂಬ ಪೆಸರ್ಗೆ ಮುಯ್ಯಾಪೆನೆ " ಈ ಮಾತನ್ನು ಹೇಳಿದವರು ಯಾರು?
✅ದುರ್ಯೋಧನ

೧೪.ಪಿಂಗಾಕ್ಷ ಎಂದರೆ ಯಾರು?
✅ದುರ್ಯೋಧನ

೧೫."ತನ್ನ ಮುಂ ತೆಗೆದ ದಕ್ಷಿಣಮುಷ್ಟಿಯೆ ಕರ್ಣಮೂಲದೊಳ್ ಸೊಗಯಿಸಿ" ಇಲ್ಲಿ ಯಾರ ಶವದ ಸ್ಥಿತಿಯನ್ನು ಹೇಳಲಾಗಿದೆ?
✅ಕರ್ಣನ

೧೬."ಆತನುಂ ಕಳಿದ ಬಳಿಕ್ಕಾನುಂ ನೀನೆ ದಲ್" ಈ ಮಾತಿನಲ್ಲಿ ಅಳಿದವರು ಯಾರು ಉಳಿದವರು ಯಾರು?
✅ದುಶ್ಯಾಸನ, ಕರ್ಣ

೧೭."ನೀನಿಲ್ಲದಹಿತರೊಳ್ ಸಂಧಾನ ಮಾಡುವೆನೆ" ಯಾರು ಯಾರಿಗೆ ಹೇಳಿದರು?
✅ದುರ್ಯೋಧನ ಕರ್ಣನಿಗೆ

೧೮.ದುರ್ಯೋಧನ:ಲಕ್ಷಣಕುಮಾರ :: ಕರ್ಣ:
✅ವೃಷಸೇನ

೧೯."ಅಣ್ಮಿಂದಂ ಕೂರ್ತಳಿದಿವರಂ ಪಗೆದನೊ ಪಚ್ಟಳೆದೆನೊ ಪೇಳ್" ಇದು ಯಾರ ಮಾತು?
✅ದುರ್ಯೋಧನ

೨೦.ದೇಹ ಮೂರಿದ್ದರೂ ಒಂದೇ ಜೀವವಾಗಿ ಇದ್ದವರು ಯಾರು?
✅ದುರ್ಯೋಧನ , ದುಶ್ಯಾಸನ, ಕರ್ಣ

೨೧."ಮಱಸುಂದೆರ್ದಪೆಯೊ ಮೇಣ್ಬಳಲ್ದಿರ್ದಪೆಯೊ" ಎಂದು ದುರ್ಯೋಧನ ಈ ಮಾತನ್ನು ಯಾರಿಗೆ ಹೇಳುತ್ತಾನೆ?
✅ಕರ್ಣನಿಗೆ

೨೨.ಸತ್ಯ,ತ್ಯಾಗ,ಪರಾಕ್ರಮಕ್ಕೆ ಅಗ್ರಗಣ್ಯನಾದವನು ಯಾರು?
✅ಕರ್ಣ

೨೩.ಕರ್ಣನ ರಾಜ್ಯದಲ್ಲಿ ಯಾವುದಕ್ಕೆ ಜಾಗವಿರಲಿಲ್ಲ?
✅ಅನೃತ(ಸುಳ್ಳು), ಲೋಭ, ಭಯ

೨೪.ಕರ್ಣನ ಜನ್ಮರಹಸ್ಯವನ್ನು ಅರಿತಿದ್ದವರು ಯಾರು?
✅ದುರ್ಯೋಧನ,ಕೃಷ್ಣ,ಕುಂತಿ,ಸೂರ್ಯ, ಸಹದೇವ

೨೫."ನೀನುಳ್ಳೊಡುಂಟು ರಾಜ್ಯಂ ನೀನುಳ್ಳೊಡೆ ಪಟ್ಟಮುಂಟು "ಎಂದು ದುರ್ಯೋಧನ ಯಾರ ಕುರಿತಾಗಿ ಈ ಮಾತುಗಳನ್ನು ಹೇಳುತ್ತಾನೆ?
✅ಕರ್ಣನ ಕುರಿತಾಗಿ

೨೬.ಗೋಗ್ರಹಣದಲ್ಲಿ ಅರ್ಜುನ ಯಾವ ಅಸ್ತ್ರವನ್ನು ಪ್ರಯೋಗಿಸಿ ಕರ್ಣನಿಗೆ ನಿದ್ರೆಯ ಮಂಪರು ಬರುವಂತೆ ಮಾಡಿದ್ದನು?
✅ಸಮ್ಮೋಹನಾಸ್ತ್ರ

೨೭.ಕಸವರಮಂ ದ್ವಿಜದಾನಕ್ಕೆ ಪೊಸಜೌವನಮಂ ಸ್ವದಾರ ಸಂತೋಷಕ್ಚೆ ಅಸುವಂ ಪತಿ ಕಾರ್ಯಕ್ಕೆ ಅರ್ಪಿಸಿಬಿಟ್ಟವರು ಯಾರು?
✅ಕರ್ಣ

೨೮." ನಯನದೊಳಮೆರ್ದೆಯೊಳಂ ನಿನ್ನಯ ರೂಪಿರ್ದುಪುದು ನಿನ್ನ ಮಾತಿರ್ದಪುದೆನ್ನಯ ಕಿವಿಯೋಳ್" ದುರ್ಯೋಧಪ ಯಾರನ್ನು ಕುರಿತು ಈ ಮಾತನ್ನು ಹೇಳುತ್ತಾನೆ.
✅ಕರ್ಣ

೨೯.ಇಂದಾನಾದೆಂ ಮೇಣಿನನಂದನ ಕೇಳ್ ಪಾಂಡುತನಯರಾದರ್ " ಯಾರು ಯಾರಿಗೆ ಹೇಳಿದರು?
✅ದುರ್ಯೋಧನ ಕರ್ಣನಿಗೆ

೩೦.ಕರ್ಣನಿಂದ ವಜ್ರಕವಚ ಪಡೆದುಕೊಂವರು ಯಾರು?
✅ಇಂದ್ರ

೩೧.ಕರ್ಣನನ್ನು ಕೊಂದವರು ಐವರು ಎಂದು ದುರ್ಯೋಧನ ಹೇಳುತ್ತಾನೆ ಆ ಐವರು ಯಾರು?
✅ಪರಶುರಾಮ,ಕೃಷ್ಣ,ಇಂದ್ರ,ಭೂಮಿತಾಯಿ ಮತ್ತು ಕುಂತಿ

೩೨."ಕಲ್ಲೆರ್ದೆತನದಿಂದೆನ್ನಂತು ಬರ್ದನಾವನುಮೊಳನೆ"ಈ ಮಾತನ್ನು ಹೇಳುವವರು ಯಾರು?
✅ದುರ್ಯೋಧನ

೩೩.ಕೆಳೆಯಂಗಾಯ್ತು ಸುಮೋಕ್ಷಮಾಗದೆನಗೆ.........
✅ಬಾಷ್ಪಾಂಬುಮೋಕ್ಷಂ

೩೪."ಜಲದಾನಕ್ರಿಯೆಯಂ ದೃಗ್ಜಲದಿಂ ಕೋಪಾಗ್ನಿಯಿಂದೆ ದಹನಕ್ರಿಯೆಯಂ ಕೆಳೆಯಂಗೆ ಮಾಡಿದಯ್" ಎಂದವರು ಯಾರು?
✅ಸಂಜಯ

೩೫.ಅಹರ್ಪತಿ ಎಂದರೆ ಯಾರು?
✅ಸೂರ್ಯ

೩೬."ಪೆಂಡಿರ್ ಪಳಯಿಸುವಂದದೆ ಗಂಡರ್ ಪಳಯಿಸಿದೊಡಾಯಮಂ ಛಲಮಂ ಕಯ್ ಕೊಂಡೆಸಪರಾರೊ"ಯಾರು ಯಾರಿಗೆ ಹೇಳಿದರು?
✅ಸಂಜಯ ದುರ್ಯೋಧನನಿಗೆ

        🌹ಬಸಮ್ಮ🌹
   💐ಚಿತ್ತರಗಿ ಗ್ರೂಪ್💐

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ