🌻ವಡ್ಡಾರಾಧನೆ ಪರಿಚಯದ ಪ್ರಶ್ನೆಗಳು 🌻    


                ✍ ಸತೀಶ ಸಿ   ಹೇಮದಳ✍


೧) ಇದರಲ್ಲಿ ವಡ್ಡಾರಾಧನೆಗೆ ಸಂಬಂಧಿಸಿಲ್ಲದ ಸಾಲು ಯಾವುದು ?        
    # ಕನ್ನಡದ ಪ್ರಪ್ರಥಮ ಗದ್ಯಕೃತಿ          
     # ಕನ್ನಡದ ಪ್ರಪ್ರಥಮ ಕಥಾ ಸಂಕಲನ                   #  ಧಾರ್ಮಿಕ ಕಥಾಗುಚ್ಚ          
      #  ಉಪಸರ್ಗ ಕೇವಲಿಗಳ ಕಥೆ.
 👉 ಮೇಲಿನ ಎಲ್ಲವೂ ಸಂಬಂಧಿಸಿವೆ.

 ೨) ವಡ್ಡಾರಾಧನೆ ಗದ್ಯಕೃತಿಯ ಕಾಲವನ್ನು ೯೨೦ ಎಂದು ಅಭಿಪ್ರಾಯ ಪಟ್ಟವರಾರು?
 👉೨) ಡಿ,ಎಲ್,ನರಸಿಂಹಾಚಾರ್ಯರು.

 ೩)ವಡ್ಡಾರಾಧನೆಯ ಕರ್ತೃ......?
 👉 ೩) ಶಿವಕೋಟ್ಯಾಚಾರ್ಯರು

 ೪) ಶಿವಕೋಟ್ಯಾಚಾರ್ಯರ ಮೂಲ ನೆಲಯಾವುದು?
 👉 ೪) ಬಳ್ಳಾರಿ ಜಿಲ್ಲೆಯ,ಹೂವಿನಡಗಲಿಯ 'ಕೋಗಳಿ'

 ೫) ಶಿವಕೋಟ್ಯಾಚಾರ್ಯರ ಗುರುಗಳಾರು ?
 👉 ೫)ಸ್ವಾಮಿ ಸುಮಂತ ಭದ್ರಾಚಾರ್ಯರು.  

  ೬) ಹಳಗನ್ನಡದ ಪ್ರಪ್ರಥಮ ಕಥೆಗಾರ ಯಾರು ?
 👉 ೬)   ಶಿವಕೋಟ್ಯಚಾರ್ಯ

 ೭) ವಡ್ಡಾರಾಧನೆಯ ೫ ಮೂಲ ಪ್ರತಿಗಳನ್ನು ಸಂಪಾದಿಸಿದವರು ಯಾರು?
 👉 ೭) ಡಿ ಎಲ್ ನರಸಿಂಹಾಚಾರ್ಯರು.
೮) ಈ ಕೆಳಗಿನವುಗಳಲ್ಲಿ ತಪ್ಪಿರುವುದು  ಯಾವುದು?                
ಅ)ದೊಡ್ಡ ಆರಾಧನೆ,                      
 ಆ)ಬೃಹತ್ ಆರಾಧನೆ,            
ಇ)ಧಾರ್ಮಿಕ ಆರಾಧನೆ,          
 ಈ)ವೃದ್ಧರ ಆರಾಧನೆ,
👉೮)ಇ)ಧಾರ್ಮಿಕ ಆರಾಧನೆ.

೯) ವಡ್ಡಾರಾಧನೆಯ ಕಾಲವನ್ನು ೬ನೆಯ ಶತಮಾನಕ್ಕಿಂತ ಈಚಿಯದಲ್ಲ ಎಂದು ನಿಲುವಿಗೆ ಬಂದವರು ?
 👉೯) ಗೋವಿಂದ ಪೈ.      
 
೧೦) ವಡ್ಡಾರಾಧನೆ ೧೧ ನೆಯ ಶತಮಾನದಲ್ಲಿ ರಚಿತವಾಗಿರಬಹುದು ಎಂದವರು ?
👉೧೦) ಉಪಾಧ್ಯೆಯವರು.

೧೧) ಯಾವ ಎರಡು ಭಾಷೆಯ ನಾಣ್ಯಗಳ ಉಲ್ಲೇಖವು ಈ ಗ್ರಂಥದಲ್ಲವೆ .
ದೀನಾರ,ದಮ್ಮ ಎಂಬ ಗ್ರೀಕ್ & ರೋಮೀಯ ನಾಣ್ಯಗಳ.  

೧೨) ಶ್ರವಣಬೆಳಗೊಳವನ್ನು "ಕಳ್ಬಿಪ್ಪು"ಎಂದು ಯಾರ ಕಥೆಯಲ್ಲಿ ಕರೆಯಲಾಗಿದೆ ?
 👉೧೨) ಭದ್ರಬಾಹು ಬಟ್ಟಾರರ ಕಥೆಯಲ್ಲಿ.

೧೩) ಶ್ರವಣಬೆಳಗೊಳದ ಶಾಸನಗಳಲ್ಲಿ  "ಕಳ್ಬಪ್ಪನ್ನು" ಯಾವ ಹೆಸರಿನಿಂದ ಕರೆಯಲಾಗಿದೆ ?
 👉೧೩)"ಬೆಳ್ಗೊಳ".
 ೧೪) ಹೊಂದಿಸಿ                       ಅ)ಶಿವಕೋಟಿಯ.         ಅ) ಉತ್ತರ ಪುರಾಣ        ಆ)ಜಟಾಸಿಂಹನಂದಿಯ ಆ)ಭಗವತೀ ಆರಾಧನೆ      ಬ)ಗುಣಭದ್ರನ.           ಬ)ವರಾಂಗ ಚರಿತೆ.
👉೧೪)
ಬ) ಭಗವತೀ ಆರಾಧನೆ  
ಕ)ವರಾಂಗ ಚರಿತೆ                  
ಅ) ಉತ್ತರ ಪುರಾಣ

 ೧೫) ಹರಷೇಣನ ಕೃತಿ ಯಾವುದು?
👉೧೫)ಕಥಾಕೋಶ/ಹರಿಕೋಶ  

೧೬) ವಡ್ಡಾರಾಧನೆ ಕಥೆಗಳ ಪ್ರಾರಂಭದಲ್ಲಿ ಒಂದೊಂದು ಗಾಹೆಗಳು‌(ಗಾಥೆ) ಮತ್ತು ಕಥೆಗಳ ನಡುನಡುವೆ, ಅಲ್ಲಲ್ಲಿ ಯಾವ ಭಾಷೆಯ ಶ್ಲೋಕಗಳು ಬರುತ್
👉೧೬)ಸಂಸ್ಕೃತ ಭಾಷೆಯ

೧೭) ಹೇಳಿಕೆ : ಉಪಾಧ್ಯೇಯವರ ಹೇಳಿಕೆಯ ಮೇರೆಗೆ ಆರಾಧನೆ ಎಂದರೆ:-                           ವಿವರಣೆ :- ಜ್ಞಾನ, ದರ್ಶನ,ಚಾರಿತ್ರ್ಯ,ತಪಸ್ಸು ಈ ನಾಲ್ಕು ಜೈನ ಯತಿಯ ಆದರ್ಶಗಳ ಸ್ಥಿರವಾದ ಸಾಧನೆ,ಮರಣ ಸಮಯದಲ್ಲಿ ಅಂದರೆ ಸಮಾಧಿಮರಣದಲ್ಲಿ,ಆ ಆದರ್ಶಕ್ಕನುಸರಿಸಿ ತೋರುವ ಉಚ್ಚತಮವಾದ ಆಚರಣೆ.                  ಅ)ಹೇಳಿಕೆ ಸರಿ  ವಿವರಣೆ ಸರಿ      
ಆ) ಹೇಳಿಕೆ ಸರಿ; ವಿವರಣೆ ತಪ್ಪು  
 ಇ) ಹೇಳಿಕೆ ತಪ್ಪು; ವಿವರಣೆ ತಪ್ಪು    
ಈ) ಹೇಳಿಕೆ ತಪ್ಪು; ವಿವರಣೆ ಸರಿ;
 👉೧೭)ಅ) ಹೇಳಿಕೆ ಸರಿ,ವಿವರಣೆ ಸರಿ.

 ೧೮) ಭಗವತೀ ಆರಾಧನ ಎಂಬುದು ಯಾವ ಭಾಷೆಯ ಗ್ರಂಥ ?
 👉೧೮) ಪ್ರಾಕೃತ ಗ್ರಂಥ.

 ೧೯) ಗಿಡಿಗಿಡಿ ಜಂತ್ರಂ,ಮಿಳಿಮಿಳಿ ನೇತ್ರಂ,ಸೊಪ್ಪು ನಾರಾಗಿ ಬಡಿ,ಬೈಕಂಗಳ ಬೇಡು,ಸೊದೆ ಮೊತ್ತಸೆಪಟ್ಟನಂತೆ....ಈ ವಾಕ್ಯ ಯಾವ ಗ್ರಂಥದಲ್ಲಿದೆ ?
👉೧೯)ವಡ್ಡಾರಾಧನೆಯಲ್ಲಿ        

೨೦) ವಡ್ಡಾರಾಧನೆಗೆ ಮೂಲ ಆಕರ .....?
👉೨೦)ಹರಿಷೇಣನ-ಕಥಾಕೋಶ/ಹರಿಕೋಶ  

೨೧)ವಡ್ಡಾರಾಧನೆಯಲ್ಲಿ ಎಷ್ಟು ಕಥೆಗಳ ಸಂಗ್ರಹವಿದೆ ?
 👉೨೧)೧೯ ಕಥೆಗಳು    

೨೨) ವಡ್ಡಾರಾಧನೆಯಲ್ಲಿ ಬರುವ ಕಥೆಗಳಲ್ಲಿ ಮೊದಲ ಕಥೆಯಾವುದು ?
 👉೨೨)  ಸುಕುಮಾರ ಸ್ವಾಮಿ ಕಥೆ

೨೩) ಮೊದಲಿಗೆ ವಡ್ಡಾರಾಧನೆಯ ಕರ್ತೃ ರೇವಣಚಾರ್ಯರು ಎಂದು ಮಾತನಾಡಿದವರು ಯಾರು ?
 👉೨೩)ಕೆ ಬಿ ಪಾಠಕ್

 ೨೪) ಕೆ ಬಿ ಪಾಠಕ್ ರವರ ಕೃತಿ ಯಾವುದು ?
 👉೨೪)" ಇಂಡಿಯನ್ ಆಂಟಿಕ್ವೆರಿ"

 ೨೫) ಈ ಗ್ರಂಥಕ್ಕೆ ಕ್ರಿ ಶ ೯೨೦ ಕಾಲ ವನ್ನು ಕೊಡಬಹುದೆಂದು ಹೇಳಿದವರಾರು ?
 👉೨೫) ಡಿ ಎಲ್ ನ --(ವಡ್ಡಾರಾಧನೆ-  ೧೯೭೦)

೨೬) ವಡ್ಡಾರಾಧನೆಯಲ್ಲಿ ಎಷ್ಟು ಬಗೆಯ ಆರಾಧನೆಗಳಿವೆ,ಅವು ಯಾವುವು?
  👉೨೬) ೪ ಬಗೆ  
ಅ)ತಪ್ಪಸ್ಸಿನಾರಾಧನೆ ಆ)ದರ್ಶನಾರಾಧನೆ ಇ)ಜ್ಞಾನಾರಾಧನೆ   ಈ)ಚಾರಿತ್ರಾರಾಧನೆ

೨೭)ವಡ್ಡಾರಾಧನೆಯ ಕಥೆಗಳಲ್ಲಿ ೩ ನ್ನು ಡಿ ಎಲ್ ನ ರವರು ೧೯೩೫ ರಲ್ಲಿ ಯಾವ ಪತ್ರಿಕೆಯಲ್ಲಿ ಪ್ರಕಟಿಸಿದ್ದರು
 👉೨೭) " ಕರ್ಣಾಟಕ ಸಾಹಿತ್ಯ ಪರಿಷತ್"  ಪತ್ರಿಕೆಯಲ್ಲಿ

೨೮) ಈ ಗ್ರಂಥದಲ್ಲಿ ಉಲ್ಲೇಖವಾಗಿರುವ ಪರೀಷಹಗಳೇಷ್ಷು ?
 👉೨೮) ೨೦ ಬಗೆಯ ಪರೀಷಹಗಳು

೨೯)"ನಮಃ ಶ್ರೀ ವರ್ಧಮಾನಾಯ ನಿರ್ಧೂತ ಕಲಿಲಾತ್ಮನೇ ಸಾಲೋಕಾನಾರ ತ್ರೀಲೋಕನಾಂ ಯದ್ದಿದ್ಯಾ ದರ್ಪಣಾಯತೇ"ವಡ್ಡಾರಾಧನೆಯ ಯಾವಾ ಭಾಗದಲ್ಲಿ ಬರುವ ಸಾಲಾಗಿದೆ ?
 👉೨೯) ಪೀಠಿಕಾ ಭಾಗ/ಆರಂಭಿಕ ಭಾಗ

೩೦) ದೀನಾರದಮ್ಮ ಈ ಗ್ರೀಕ್ ನಾಣ್ಯಗಳ ಹೆಸರು ಬಂದಿರುವ ಕನ್ನಡ ಕೃತಿಯಾವುದು
👉೩೦)ವಡ್ಡಾರಾಧನೆಯಲ್ಲಿ.

೩೧) ಇವು ಗದ್ಯ ಗ್ರಂಥಗಳು?          
೧)ಸಾಹಸ ಭೀಮ ವಿಜಯ              
೨) ಚಾವುಂಡರಾಯ ಪುರಣ                  
೩) ಚಕ್ರೇಶ್ವರ ಚರಿತೆ                    
೪) ವಡ್ಡಾರಾಧನೆ .                              
 ಅ)೨ &  ೪. ಆ) ೧ & ೩ .
ಇ) ೨ & ೩.ಈ) ೧ & ೪.    
👉೩೧) ಈ) ೧ & ೪

 ೩೨) ಮೊದಲು 'ಉಪಸರ್ಗ ಕೇವಲಿಗಳ ಕಥೆ'ಎಂದವರು ಯಾರು ?
 👉೩೨)ಕೆ ಬಿ ಪಾಠಕ್

 ೩೩) ಡಿ ಎಲ್ ನ ರವರ ಅಭಿಪ್ರಾಯ ಪಟ್ಟಿರುವಂತೆ ಎಷ್ಟುಜನ ಶಿವಕೋಟ್ಯಾಚಾರ್ಯರು ಇದ್ದರು ಎಂದಿದ್ದರೆ ?
👉೩೩)ಇಬ್ಬರು.

೩೪)ಈ ಗ್ರಂಥದಲ್ಲಿ 'ಸಂಚಾರವನ್ನು'ಕುರಿತು ಹೇಳುವಾಗ ಸಾಮಾನ್ಯವಾಗಿ ಬರುವ  ಉಲ್ಲೇಖಗಳಾವುವು ?
 👉೩೪) ಗ್ರಾಮ,ನಗರ,ಖೇಡ,ಖರ್ವಡ,
ಮಡಂಬ,ಪತ್ತನ,ದ್ರೋಣಮುಖ

  ೩೫)" ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮರಗಳಗೊಡೆಯೊಳ್" ಯಾವುದನ್ನು ಹೇಳುವಾಗ ಈ ವಾಕ್ಯವನ್ನು ಬಳಲಾಗಿದೆ ?
 👉೩೫) ಸ್ತ್ರೀ ಸೌಂದರ್ಯವನ್ನು ಹೇಳುವಾಗ.

 ೩೬) "ವಡ್ಡಾರಾಧನ ಕಥಾಲೋಕ" ಕರ್ತೃ ಯಾರು ?
 👉೩೬) R .L.ಅನಂತರಾಮಯ್ಯ

೩೭)ಧವಳಶ್ರೀಯವರ ಕೃತಿ ಯಾವುದು ?
👉೩೭)ವಡ್ಡಾರಾಧನೆಯಲ್ಲಿ ಸ್ತ್ರೀ

 ೩೮) "ವಡ್ಡಾರಾಧನೆಯ ಕಥೆಗಳು "ಕೃತಿಯನ್ನು ಬರೆದವರು ?
 👉೩೮) ಕೆ ನಾಗೇಂದ್ರಪ್ಪ

೩೯)ವಡ್ಡಾರಾಧನೆಯ ಕಥೆಗಳಲ್ಲಿ ಐತಿಹಾಸಿಕ ಮೌಲ್ಯಗಳುಳ್ಳ ಕಥೆಗಳು ಯಾವುವು ?
 👉೩೯) *ಭದ್ರಬಾಹು ಭಟಾರರ ಕಥೆ                                *ಚಾಣಕ್ಯ ರಿಸಿಯ ಕಥೆ    
             *ಚಿಲಾತ ಪುತ್ರನ ಕಥೆ                                        *ಗುರುದತ್ತ ಭಟಾರರ ಕಥೆ

 ೪೦) ತಪಸ್ಸಿನಲ್ಲಿ ಕುಳಿತಿರುವ ಯತಿಗೆ ದೇವತೆ,ಮನುಷ್ಯ, ಪ್ರಾಣಿ,ಜಡವಸ್ತು ತೊಂದರೆಗಳು ಎದುರಾಗುವುದಕ್ಕೆ ಎನೆಂದು ಕರೆಯುತ್ತಾರೆ
 👉೪೦)"ಉಪಸರ್ಗ" ಎನ್ನುವರು.                  
    🌷ಚಿತ್ತರಗಿ ಗ್ರೂಪ್🌷

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ