ರಗಳೆ ಪರಿಚಯ 

೦೧.ರಗಳೆ ಮೊದಲು ಛಂದೋಬಂಧವಾಗಿ ಕಂಡುಬರುವುದು ಯಾವ ಕೃತಿಯಲ್ಲಿ?
✅ಆದಿಪುರಾಣ

೦೨.ರಗಳೆಯ ಉಲ್ಲೇಖ ಮೊದಲು ಕಂಡುಬರುವುದು...?
✅ಛಂದೊಂಬುದಿ

೦೩.ಕವಿರಾಜಮಾರ್ಗದಲ್ಲಿ ರಗಳೆಯ ಪ್ರಸ್ತಾಪ ಇದೆಯೇ?
✅ಇಲ್ಲ

೦೪.ಆದಿಪುರಾಣದಲ್ಲಿ ರಗಳೆ ಛಂದೋಬಂಧವಾಗಿ ಯಾವ ಹೆಸರಿನಲ್ಲಿ ಕಂಡುಬರುತ್ತೆ?
✅ಮಂದಾನಿಲ ರಗಳೆ

೦೫.ಛಂದಸ್ಸಿನ ವೃತ್ತ,, ಜಾತಿ, ಛಂದ ಎಂಬ ವರ್ಗಗಳಲ್ಲಿ ರಗಳೆಯನ್ನು ಯಾವುದರಲ್ಲಿ ಸಮಾವೇಶಗೊಂಡಿದೆ?
✅ಜಾತಿ

೦೬."ಗಣನಿಯಮವಿಪರ್ಯಾಸದೊಳೆಣೆವಡೆದು ತಾಳದ ಗಣನೆಗೊಡಂಬಡುವ ರಗಳೆಯು ದೇಶೀಯವಾಗಿಯೇ ಇರುವ ಹಾಡು" ಎಂದವರು?
✅ಮುಳಿಯ ತಿಮ್ಮಪ್ಪಯ್ಯರವರು

೦೭.ರಗಳೆಯಲ್ಲಿ ಹೆಚ್ಚಾಗಿ ಯಾವ ಪ್ರಾಸ ಬಳಕೆಯಾಗಿವೆ?
✅ಅಂತ್ಯ ಪ್ರಾಸ

೦೮."ಪಾದದ್ವಂದ್ವಸಮಾಕೀರ್ಣ" ಎಂದು ರಗಳೆಯ ಬಗ್ಗೆ ಹೇಳಿದವರು?
✅ಜಯಕೀರ್ತಿ

೦೯."ಪದ್ದತಿ ಒಂದು ಬಗೆಯ ಮಾತ್ರಾವೃತ್ತ.ಅಪಭ್ರಂಶ ಕವಿತೆಯಲ್ಲಿ ಅದರ ಬಳಕೆ ಹೆಚ್ಚು" ಎಂದವರು?
✅ಪ್ರೊ.ಎಚ್.ಡಿ ವೆಲಂಕರ

೧೦.ಯಾವ ಛಂದೋಬಂಧದ ಲಯವನ್ನೂ, ಗಣಯೋಜನೆಯನ್ನೂ ಹೋಲುವ ರಗಳೆಯನ್ನು ಪಂಪನು ಪ್ರಯೋಗಿಸಿದ್ದಾನೆ?
✅ಪ್ರಾಕೃತದ ಪಜ್ಝಟಿಕಾ

೧೧.ರಗಳೆ ಎಂಬ ಹೆಸರು ಯಾವ ಭಾಷೆಯದು?
✅ಕನ್ನಡ

೧೨.ಅಂತ್ಯಪ್ರಾಸವನ್ನು ಹೊಂದಿದ ಛಂದೋಬಂಧವು ಸಂಸೃತದಲ್ಲಿದೆಯೇ?
✅ಇಲ್ಲ

೧೩."ರಗಡ" ದ ಪ್ರಸ್ತಾಪ ಬರುವುದು ಯಾವ ಕೃತಿಯಲ್ಲಿ?
✅ಅಪ್ಪಕವಿಯ "ಅಪ್ಪಕವೀಯಮು" ಕೃತಿ

೧೪.ಪೊನ್ನನು ಶಾಂತಿಪುರಾಣದಲ್ಲಿ ಮಂದಾನಿಲ ರಗಳೆಗೆ ಕೊಟ್ಟ ಹೆಸರು?
✅ತ್ವರಿತ ರಗಳೆ

೧೫.ನವವಿಧ ರಗಡಲು ಯಾವ ಭಾಷೆಯಲ್ಲಿದೆ?
✅ತೆಲುಗು

೧೬.ಲಲಿತರಗಳೆಯ ಗತಿ___ಗತಿಯಂತೆ ಗಂಭೀರ.
✅ಗಜದ(ದ್ವಿರದ)

೧೭.ಹೊಂದಿಸಿ ಬರೆಯಿರಿ.
೧)ತರಗವಲ್ಗನಮು   -         ಅ) ಮಂದಾನಿಲ
೨)ಮಧುರಗತಿ           -          ಆ) ಲಲಿತ
೩)ದ್ವಿರದಗತಿ             -         ಇ) ಉತ್ಸಾಹ
✅೧-ಇ, ೨-ಅ, ೩-ಆ

೧೮.ತೆಲುಗಿನಲ್ಲಿ "ಹಯಪ್ರಚಾರಮಂ" ಎಂಬ ಹೆಸರು ಯಾವ ರಗಳೆಗೆ ಇದೆ?
✅ಉತ್ಸಾಹ

೧೯.ರಗಳೆಯ ೦೨ ನೇ ಘಟ್ಟ ಯಾವ ಕಾಲದಲ್ಲಿ?
✅೧೨ನೇ ಶತಮಾನದ ಅಂತ್ಯ

೨೦.ನಾಗವರ್ಮನು ರಗಳೆಯ ಲಕ್ಷಣವನ್ನು ಯಾವ ಪದ್ಯ ಜಾತಿಯಲ್ಲಿ ಹೇಳಿದ್ದಾನೆ?
✅ಕಂದಪದ್ಯ

೨೧."ರಗಡಾ ಧ್ರುವಕ" ಎಂಬ ಪದದ ಬಳಕೆ ಕಂಡು ಬರುವುದು ಎಲ್ಲಿ?
✅ಛಂದೋನುಶಾಸನ ಮತ್ತು ಛಂದಶ್ಯೇಖರ

೨೨.ಸಂಸ್ಕೃತದ ದಂಡಕವೇ ರಘಟಾ ಎಂದು ಕರೆದವರು ಯಾರು?
 ✅ಕುಕ್ಕಿಲ ಕೃಷ್ಣಭಟ್ಟ

೨೩.ರೇಫೆಯಿಂದ ಆರಂಭವಾಗುವ ಪದ ಸಹಜವಾಗಿ ದೇಶೀಯವಾಗಿರಲಾರ ಎಂಬ ಅಭಿಪ್ರಾಯ ಯಾರದು?
✅ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ

೨೪.ರಗಳೆಯ ಒಂದು ಪ್ರಭೇದದ ಮೂಲ ಅಂಶ ಛಂದಸ್ಸಿನ ಕರ್ಣಾಟಕ ವಿಷಯಜಾತಿಯೇ ಎಂಬ ಸಂದೇಹ ವ್ಯಕ್ತಪಡಿಸಿದವರು ಯಾರು?
✅ಬಿ.ಎಂ.ಶ್ರೀ

೨೫.ರಗಳೆಯ ಮೂಲವನ್ನು ಅಪಭ್ರಂಶ  ಸಾಹಿತ್ಯದಲ್ಲಿ ಗುರುತಿಸಿದವರು ಯಾರು?
✅ವಿ.ಸೀತಾರಾಮಯ್ಯ, ತೀನಂಶ್ರೀ, ಡಿಎಲ್ಎನ್

೨೬.ರಗಳೆಯ ಮೂಲದ ಸ್ಪಷ್ಟವಾದ ಕುರುಹು ದೊರೆಯುವುದು ಯಾರಲ್ಲಿ?
✅ಜಯಕೀರ್ತಿಯ ಛಂದೋನುಶಾಸನ

೨೭.ಪಂಪನ ಆದಿಪುರಾಣದಲ್ಲಿ ಕಂಡು ಬರುವ ರಗಳೆಗಳೆಷ್ಟು?
✅೦೨(ಮಂದಾನಿಲ,ಲಲಿತ)

೨೮.ನಾಗವರ್ಮನ "ಗಣನಿಯಮ ವಿಪರ್ಯಾಸ" ಎಂಬ ಪದಪ್ರಯೋಗಕ್ಕೆ ಜಯಕೀರ್ತಿಯು ಬಳಸಿದ ಪದ ಯಾವುದು?
✅ಸ್ವಚ್ಛಂದ ಸಂಜ್ಞಾ

೨೯.ಕನ್ನಡದಲ್ಲಿ ರಗಳೆಯ ವಿಕಾಸದ ಚರಮಸೀಮೆ ನಮಗೆ ಗೋಚರವಾಗುವುದು___?
✅ಹರಿಹರನಲ್ಲಿ

೩೦.ಉತ್ಸಾಹ ರಗಳೆಯೆಂದು ಹೇಳಲಾಗುವ ರಗಳೆಯ ಪ್ರಯೋಗ ಕನ್ನಡ ಕಾವ್ಯದಲ್ಲಿ ಮೊದಲ ಪ್ರಯೋಗ ಮಾಡಿದವರು?
✅ರನ್ನ(ಅಜಿತಪುರಾಣ)

💐💐💐💐💐💐💐💐

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ