ಶಾಸನಗಳು


೧. ಅಶೋಕನ ಶಾಸನಗಳು ಶಾಸನಗಳೇ ಆದರೂ ಅವುಗಳನ್ನು ಅವು ತಮ್ಮನ್ನು ಹೀಗೆಂದು ಕರೆಯಲಾಗುತ್ತದೆ?

೨. 'ಸುಜನೋತ್ತಂಸ'  ಇದು ಯಾವ ಶಾಸನಕಾರನ ಬಿರುದು?

೩. ' ಮದವಳಿಗೆ ಕಲ್ಲು' ಗಳೆಂದು ಈ ಶಾಸನ ಗಳನ್ನು ಕರೆಯಲಾಗುತ್ತದೆ?

೪. ಸಲ್ಲೇಖನವ್ರತದಿಂದ ಮರಣಹೊಂದಿದುದನ್ನು ತಿಳಿಸುವ ಶಾಸನ ಪ್ರಕಾರ ಯಾವುದು?

೫. 'ಚಪಡೇನ ಲಿಖಿತೇ ಲಿಪಿ ಕರೇಣ' ಎಂಬ ಉಲ್ಲೇಖ ಇರುವ ಶಾಸನ ಯಾವುದು?

೬. ತಾನು ಕಾಳಿದಾಸ ಭಾರವಿಯರಿಗೆ ಸಮಾನ ವೆಂದು ಕರೆದುಕೊಂಡ ಶಾಸನಕಾರ ಯಾರು?

೭. ರಾಷ್ಟಕೂಟರ ೩ನೇ ಕೃಷ್ಣ ಚೋಳರ ಮೇಲೆ ಯುದ್ಧ ಮಾಡಿದ ಉಲ್ಲೇಖ ಇರುವ ಶಾಸನ ಯಾವುದು?

೮. ದೇಕಬ್ಬೆಯ  ಶಾಸನ ಎಂದೇ ಸುಪ್ರಸಿದ್ಧ ವಾಗಿರುವ ಶಾಸನ ಯಾವುದು?

೯. ಕುವರಲಕ್ಷ್ಮಣನ ರಾಜಭಕ್ತಿ, ಸುಗ್ಗಲದೇವಿಯ ಪಾತಿವ್ರತ್ಯಗುಣವನ್ನು ತಿಳಿಸುವ ಶಾಸನ ಯಾವುದು ?

ಉತ್ತರಗಳು

1) ಧಮ್ಮ ಲಿಪಿ
2) ಬೊಪ್ಪಣ್ಣ ಪಂಡಿತ
3)ಮಾಸ್ತಿಗಲ್ಲು
4)ನಿಸದಿಗಲ್ಲು
5)ಬ್ರಹ್ಮಗಿರಿ ಶಾಸನ
6)ರವಿಕೀರ್ತಿ
7)ಆತಕೂರು ಶಾಸನ
8)ಬೆಲತೂರು ಶಾಸನ
9)ಕುವರಲಕ್ಷ್ಮಣನ ಶಾಸನ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ