ವಡ್ಡಾರಾಧನೆ-ಚಾಣಕ್ಯರಿಷಿಯಕಥೆ



೦೧."ದೇವಾ ನಿಮ್ಮ ಸಾರಮಪ್ಪ ದ್ರವ್ಯಮನಾರುಮರಿಯದಲ್ಲಿ ಮಡಗಿ ನಾಮುಚ್ಚವಿಗ್ರಹದೊಳ್ ನಿಂದು ಕಾದುವಮ್" ಎಂದು ಯಾರು ಯಾರಿಗೆ ಹೇಳಿದರು?
✅ಕಾಪಿ(ವಿಶ್ವಸೇನ)

೦೨."ನಾಮಿನಿಬರುಂ ಸಾವರು ಮಲ್ಲ ಬಾಳ್ವರುಮಲ್ಲೆಮ್ಮೊಳಾವನೊರ್ವಂ ನಮ್ಮ ಪಗೆಯನಿರಿಯಲುಂ" ಎಂದವರು ಯಾರು?
✅ಕಾಪಿ(ವಿಶ್ವಸೇನ)

೦೩.ವಸಂತಕನು ಒಬ್ಬ....?
✅ಮಾಲೆಗಾರ

೦೪."ಪ್ರಪಂಚವು ಮರದ ಕೊಂಬೆಯಿಂದ ನಡುಕಗೊಂಡಿದೆ" ಎಂಬ ವಸಂತಕನ ಮಾತಿನಲ್ಲಿ ಪ್ರಪಂಚವು ಯಾರನ್ನು ಸೂಚಿಸುತ್ತದೆ?
✅ವಿಶ್ವಸೇನ

೦೫.ನಮ್ಮ ಶತೃವನ್ನು ಘಾತಿಸಲೂ ನಂದ ವಂಶವನ್ನು ನಿರ್ಮೂಲನ ಮಾಡಲೂ ನಾನು ಸಮರ್ಥನಾಗುವೆನು" ಎಂದವರು ಯಾರು?
✅ಸಂಬಂಧು(ಮಂತ್ರಿ)

೦೬.ಯಾವ ನದಿಯ ತೀರದಲ್ಲಿ ಚಾಣಕ್ಯನ ಕಾಲನ್ನು ಒಂದು ಎಳೆಯ ದರ್ಬೆ ಚುಚ್ಚಿ ರಕ್ತ ಸುರಿಯಿತು?
✅ಶೋಣೆ

೦೭.ನವನಂದನರ ಸರಿಯಾದ ಅನುಕ್ರಮಣಿಕೆ ತಿಳಿಸಿ.
೧.ವಿಜಯ,
೨.ನಂದನ,
೩.ನಂದಮಹಾರಾಜ,
೪.ನಂದಿವರ್ಧನ,
೫.ಸುನಂದನ,
೬.ನಂದ,
೭.ಮಹಾಪದ್ಮ,
೮.ಶ್ರೀನಂದನ,
೯.ಪದ್ಮ.
✅೩೧೨೫೪೬೮೯೭

೦೮."ಆ ರಾಣಿಗೆ ಹುಟ್ಟಿದ ಮಗುವನ್ನು ನನಗೆ ಕೊಡುವುದಾದರೆ ರಾಣಿಯ ಬಯಕೆಯನ್ನು ಈಡೇರಿಸುವೆನು" ಎಂದು ಯಾರು ಯಾರಿಗೆ ಹೇಳಿದರು?
✅ಚಾಣಕ್ಯ- ಕುಮುದನಿಗೆ

೦೯.ಸಿದ್ದರಸದ ಬಾವಿ____ಯಂತೆ ನಾತ ಬಡಿಯುತ್ತಿತ್ತು.
✅ಹುಳಿಮಜ್ಜಿಗೆ

೧೦.ನೇಕಾರರ ಮುದುಕಿ ಕಂಡಂತೆ ಈ ಲೋಕದಲ್ಲಿ ೦೩ ಮಂದಿ ಮೂರ್ಖರು ಯಾರು?
✅ಅಂಬಲಿಯನ್ನು ಉಂಡವ(ಚಾಣಕ್ಯ), ನಂದ, ಚಾಣಕ್ಯ.

೧೧.ಹರೆ ಎಂಬುದು....
✅ತಂಬಟೆ (ಒಂದು ವಾದ್ಯ)
[14/05 18:59] ಕುಬೇರನಾಯ್ಕ ಎಸ್.: ೧೨.ಜೈನಧರ್ಮದಲ್ಲಿ ರತ್ನತ್ರಯಗಳೆಂದರೆ ಯಾವುವು?
✅ದರ್ಶನ, ಜ್ಞಾನ, ಚಾರಿತ್ರ್ಯ.

೧೩.ಮಗಧೆ ನಾಡಿನ ಪದ್ಮನಲ್ಲಿ ಮಂತ್ರಿಯಾಗಿದ್ದವರು ಯಾರು?
✅ಕಾಪಿ

೧೪.ವಿಶ್ವಸೇನ ಸುಂದರಿಯಲ್ಲಿ ಮೋಹಗೊಂಡು ಏನೆಂದು ಬಗೆದನು?
✅ಅರಸನಂ ಕೊಂದರಸಿಯೊಳ್ ಬಾಳ್ವೆನ್

೧೫.ಮಂತ್ರಿ ವಿಶ್ವಸೇನ, ಪದ್ಮರಾಜನನ್ನು ಕೊಂದುದನ್ನು ನೋಡಿದವರು ಯಾರು?
✅ವಸಂತಕನೆಂಬ ಮಾಲೆಗಾರ

೧೬.ನಂದವಂಶದ ಕೊನೆಯ ರಾಜ ಯಾರು?
✅ಮಹಾಪದ್ಮ

೧೭.'ಆರಯ್ವೆ' ಎಂಬ ಪದದ ಅರ್ಥವೇನು?
✅ಹುಡುಕು

೧೮.ಮಹಾಪದ್ಮಂಗೆ ರಾಜ್ಯಾಭಿಷೇಕಂ ಗೆಯ್ದು ಪಟ್ಟಂಗಟ್ಟಿ ಸುವ್ರತೆಯೆಂಬರಸಿಗೆ ಮಹಾದೇವಿ ಪಟ್ಟಂಗಟ್ಟಿ ಸುಂದರಿ ಮಹಾದೇವಿಯೊಡನೆ_______
✅ಮರಿವಾಳುತ್ತಿರ್ಕುಂ (ರಹಸ್ಯವಾಗಿ ಸುಖಪಡುತ್ತಿದ್ದನು)

೧೯.ಹೊಂದಿಕೆಯಾಗದ ಜೋಡಿಯನ್ನು ಗುರುತಿಸಿ.
೧.ಪದ್ಮ-ಮಹಾಪದ್ಮ
೨.ಸೋಮಶರ್ಮ-ಚಾಣಕ್ಯ
೩.ವಿಶ್ವಸೇನ-ಸುಬಂಧು
೪.ವಿಜಯ-ಸುನಂದನ.
✅೪.ವಿಜಯ-ಸುನಂದನ

೨೦.ಹೊಂದಿಸಿ ಬರೆಯಿರಿ.
೧.ಮಹಾಪದ್ಮ-------ಎ)ಯಶೋಮತಿ
೨.ಪದ್ಮ-----------ಬಿ)ಮಂದೆ
೩.ಸಂಬಂಧು---ಸಿ)ವನಮಾಲೆ
೪.ಸೋಮಶರ್ಮ--ಡಿ)ಸುಂದರಿ
೫.ಚಾಣಕ್ಯ----------ಇ)ಕಪಿಳೆ
೬.ಕುಮುದ------ಎಫ್)ಸುವ್ರತೆ
೭.ವಸಂತಕ-------ಜಿ)ನಂದವತಿ
✅೧-ಎಫ್,೨-ಡಿ,೩-ಜಿ,೪-ಇ,೫-ಎ,೬-ಬಿ,೭-ಸಿ,

೨೧."ಎಮ್ಮರಸನಂ ಕೊಂದವನಂ ನೀನರಿವೆಯಂಜದೆ ಪೇರಲ್ಲದಿರ್ದೊಡೆ ನಿನ್ನಂ ಕೊಲಿಸಿದಪ್ಪೆನ್"ಎಂಬ ಮಾತನ್ನು ಯಾರು ಯಾರಿಗೆ ಹೇಳಿದರು?
✅ಮಹಾಪದ್ಮ- ವಸಂತಕನಿಗೆ

೨೨.ಮಹೋದಕ:ಪಟ್ಟಣ::ಶಾಲ್ಮಲಿ:_______?
✅ಅಗ್ರಹಾರ

೨೩.ಪದ್ಮರಾಜನ್ನು ವಿಶ್ವಸೇನ ಕೊಂದದ್ದು ಯಾವಾಗ?
✅ಬಯ್ಗಿರುಳಿನ ಜಾವದಲ್ಲಿ

೨೪.ಮಂತ್ರಿ ವಿಶ್ವಸೇನನ ಪುತ್ರ ಮಿತ್ರ ಕಳತ್ರ ಸ್ವಜನ ಬಾಂಧವ,ಸಾಮಂತಾದಿಗಳ ಸಹಿತ ನೆಲಮನೆಯಲ್ಲಿ ಎಷ್ಟು ವರ್ಷಕಾಲ ಬಂಧಿಸಿಟ್ಟಿದ್ದರು?
✅೦೩ ವರ್ಷ

೨೫.ಮಂತ್ರಿ ಸುಬಂಧು ಎಷ್ಟು ಬಾರಿ ಬಂಧನಕ್ಕೆ ಒಳಗಾಗುತ್ತಾನೆ?
✅೦೨ ಬಾರಿ

೨೬."ಸ ಚಾಣಕ್ಯಸ್ಚತುರ್ದಷ್ಟೋ(ಹ್ಯೇಷೋ) ನಂದಾನ್ವಯ ಕ್ಷಯಃ!
ರಾಜೋ ವಾ ರಾಜ ಮರ್ತ್ಯೋ ವಾ ಭವಿಷ್ಯತಿ ನ ಸಂಶಯಂ!!" ಎಂದು ಚಾಣಕ್ಯನ ಭವಿಷ್ಯ ನುಡಿದವರು ಯಾರು?
✅ವಸಂತಕನೆಂಬ ಶ್ರಾವಕ

೨೭."ಸ್ವವೈರಿ ವಿಧ್ವಂಸನಂಗೆಯ್ದಪ್ಪೆನ್" ಎಂದು ಯಾರು ಯಾರಿಗೆ ಹೇಳಿದರು?
✅ಚಾಣಕ್ಯ-ಸುಬಂಧುವಿಗೆ

೨೮.ಚಾಣಕ್ಯನ ಭವಿಷ್ಯದ ಪ್ರಸ್ತಾಪ ಎಷ್ಟು ಕಡೆ ಬಂದಿದೆ?
✅೦೨ ಕಡೆ

೨೯.ಭಟ್ಟಿಮಂಟಪ ಎಂದರೆ.....
✅ರಾಜನ ಸಭಾಮಂದಿರ

೩೦."ಶಕ್ಯಾಹ್ಯೇಕ ಶರೀರೇಣ ನೀತಿಶಾಸ್ತ್ರವಿಶಾದೈಃ! ವ್ಯವಸಾಯ ದ್ವಿತಿಯೇನ ಕೃತ್ಸ್ನಾ ಜೇತುಂ ವಸುಂಧರಾ!! ಎಂಬ ಶ್ಲೋಕವನ್ನು ಸಭಾಮಂಟಪದಲ್ಲಿ ಬರೆದವರಾರು?
✅ಚಾಣಕ್ಯ

೩೧.'ಚಾಣಕ್ಯಂಗಂ ಯಶೋಮತಿಗೆಂದಿರ್ವರ್ಗಂ ನಿತ್ರಾವಮಂ' ತೆಗೆದುಕೊಂಡು ಬಂದವರು ಯಾರು?
✅ನಂದವತಿ

೩೨."ಲೋಕದೊಳ್_____ಬಿಟ್ಟು ಕಷ್ಟತಿಕೆಯೊಂದುಮಿಲ್ಲ ಅದುವೆ ಲೋಕದೊಳ್_____"
✅ದಾರಿದ್ರ್ಯದಿಂ, ಮಹಾಪಾತಕಮಂ

೩೩."ನಿಮಗೆ ದಾರಿದ್ರ್ಯ ಮೋಕ್ಷಮಕ್ಕುಂ ಷಷ್ಟಿಗ್ರಾಮ ಸಮನ್ವಿತಮಪ್ಪ ಅಗ್ರಾಸನಮನ್" ಎಂದು ಹೇಳಿದವರು ಯಾರು?
✅ಸುಬಂಧು

೩೪."ನಿಮ್ಮ ಬಲದಿಂದಮಾಮೆಮ್ಮ ಪದವಂ ಪಡೆವೆಮ್" ಎಂದು ಹೇಳಿದ್ದು ಯಾರು?
✅ಬ್ರಾಹ್ಮಣರು

೩೫."ಮಹಾರಾಜಾ ಕುಲಕ್ರಮಾಗತರೆಮುಂ ನಿಮ್ಮ ಪ್ರಸಾದದಿಂ ಬಾಳ್ವೆಮುಂ ಕ್ರಮದಿಂ ಬಂದುದೆಮ್ಮ ಪದಮಂ ನಿಮಗೆ ಕಿಡಿಸಲಾಗದು" ಎಂದವರು ಯಾರು?
✅ಬ್ರಾಹ್ಮಣರು

೩೬."ಕ್ಷತ್ರಿಯರ್ಗೆ ಪೂರ್ವಕ್ರಮಾಗತರೆಮುಂ ಕಿಡಿಸದೆ ಸಲಿಪುದೆ ಧರ್ಮಂ" ಈ ವಾಕ್ಯವಿರುವ ಕೃತಿ?
✅ವಡ್ಡಾರಾಧನೆ

೩೭."ಅರಸನಗ್ರಾಸನದಿಂ ಚಾಣಕ್ಯನಂ ಪಿಂಗಿಸಿ" ಎಂದು ಹೇಳಿದವರು ಯಾರು?
✅ಮಹಾಪದ್ಮ

೩೮."ನಂದನನಂದನಾಗೆ ಮಾಡುವೆಂ ಸಂಬಂಧುವನಬಂಧು ಮಾಡುವೆಂ" ಎಂದು ಪ್ರತಿಜ್ಞೆ ಮಾಡಿದವರು ಯಾರು?
✅ಚಾಣಕ್ಯ

೩೯.ಮಂದೆ ಎಂಬ ಮಹಾದೇವಿಯ ಬಯಕೆ ಯಾವುದು?
✅ಚಂದ್ರನಂ ನುಂಗುವ ಬಯಕೆ

೪೦."ಓರ್ವರೊಂದು ಪೇರು ಮಣ್ಣಂ ಶ್ರೀಪರ್ವತದ ಮೇಗೊಟ್ಟುವರವರ್ಗೊಂದು ಪೇರು ಪೊನ್ನಂ ಕುಡುವೆನೆಂದಾ ನಾಡೊಳ್ ಪೋಷಣೆಯಂ ಪೊಯ್ಸಿ"ದವರು ಯಾರು?
✅ಚಾಣಕ್ಯ

೪೧.ಶ್ರೀಪರ್ವತದ ಮೇಲೆ ಒಂದು ಹೇರು ಮಣ್ಣು ತಂದು ಹಾಕಿದವರು ಯಾರು?
✅ವಕ್ಕಲಿಗ

೪೨.ಮಹಾಪದ್ಮನಿಂದ ಸೋತ ನಂತರ ಚಾಣಕ್ಯ ಯಾವ ಕೆರೆಗೆ ಹೋದನು?
✅ತಾವರೆ

೪೩.'ರಸವಾದಕ'ನೆಂಬ ಪಾತ್ರವಿರುವ ಕಥೆ ಯಾವುದು?
✅ಚಾಣಕ್ಯ ರಿಸಿಯ ಕಥೆ

೪೪."ತನ್ನ ಮುಳಿಸನೆ ನೋಳ್ಕುಂ ಕಜ್ಜಮನರಿಯಂ ಮೂಲ ತಂತ್ರಮನೊಡೆಯನಂ ಕ್ಷತ್ರಿಯನುಮಲ್ಲಂ ಪೃಥ್ವೀಶ್ವರನೊಡಲ್ ಕಾದಲ್ ಬರ್ಕುಮ್" ಎಂದು ಯಾರು ಯಾರನ್ನು ಕುರಿತು ಹೇಳಿದರು?
✅ನೇಕಾರರ ಮುದುಕಿ-ಚಾಣಕ್ಯನನ್ನು ಕುರಿತು

೪೫.'ಲಟಹ' ಎಂದರೇನು?
✅ರಮ್ಯ, ಸುಂದರ

೪೬.ಚಾಣಕ್ಯನು ಎಷ್ಟು ವರ್ಷಗಳಲ್ಲಿ ನಂದವಂಶವನ್ನು ಮಾಶಮಾಡುತ್ತೇನೆಂದು ಪ್ರತಿಜ್ಞೆ ಮಾಡುತ್ತಾನೆ?
✅೧೨ ವರ್ಷಗಳಲ್ಲಿ

೪೭."ಈ ಚಂದ್ರಭುಕ್ತಂ ಮೊದಲಾಗಿ ಪೃಥ್ವಿಯನೇಕಚ್ಛತ್ರಚ್ಛಾಯೆಯಿಂ ದಶಮಯೂರರ್ಕಳಾಳ್ದರೆಂದಾಶಂಗೆಯ್ದವರು ಯಾರು?
✅ಚಾಣಕ್ಯ
೪೮.ಮಗುವಿನ ತಲೆಯ ಮೇಲೆ ಕೊಂಚವಾಗಿ ವಿಷದ ಬಿಂದುಗಳು ಹನಿ ಹನಿಯಾಗಿ ಬಿದ್ದುದರಿಂದ ಆ ಮಗುವಿಗೆ ಇಟ್ಟ ಹೆಸರೇನು?
✅ಬಿಂದುಸಾಗರ

೪೯.ಬಿಂದುಸಾರನಿಗೆ ಮಂತ್ರಿಯಾಗಿದ್ದವರು ಯಾರು?
✅ಸುಬಂಧು

೫೦.ಚಾಣಕ್ಯನು ವೈರಾಗ್ಯ ಹೊಂದಿ ಯಾರ ಬಳಿಯಲ್ಲಿ ತಪಸ್ಸಿಗೆ ಉಪದೇಶವನ್ನು ಪಡೆದನು?
✅ಮತಿವರ ಆಚಾರ್ಯ

೫೧.ಚಾಣಕ್ಯನು ಉಗ್ರತಪಸ್ಸಿನ ನಂತರ ಎಲ್ಲಿಗೆ ಬಂದು ವಾಸವಾಗಿದ್ದನು?
✅ಶೋಣೆ ನದೀ ದಡದಲ್ಲಿನ ತುರುಪಟ್ಟಿ(ಆಕಳಹಟ್ಟಿ)

೫೨.ಮುಂದೆ ಚಾಣಕ್ಯ ಋಷಿ ಹುಟ್ಟದ್ದು ಎಲ್ಲಿ?
✅ಸನತ್ಕುಮಾರ ಕಲ್ಪದೊಳ್, ಸರ್ವಾರ್ಥಮೆಂಬ ವಿಮಾನದೊಳ್


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ