ರಸಪ್ರಶ್ನೆ ಸರಣಿ -1

೧. "ಮೊಳೆದ ಸಂಧ್ಯಾಂಗನೆಗಂಬುಧಿ ನಿವಾಳಿಸಲೆಂದು ತಳೆದ ಮಾಣಿಕದ ಪೆರ್ಜೊಡರೊ" ಈ ವಾಕ್ಯವು ಯಾವ ಅಲಂಕಾರ ಕ್ಕೆ ಉದಾಹರಣೆ?

೨. ತನ್ನ ಕೃತಿಯು " ಛಂದಸ್ಸು ಲಕ್ಷಣದಲಂಕಾರ ಭಾವರಸವೊಂದಿ ಕಳೆಬೆತ್ತ ಸತ್ಕೃತಿ ಚಮತ್ಕೃತಿಯುಕ್ತವೊಂದುಮಿಲ್ಲದ ಕಾವ್ಯಮಶ್ರಾವ್ಯಂ" ಎಂದೂ' ವಿನೂತನ ಕವಿತೆ' ಎಂದು ಹೇಳಿದ ಕವಿ ಯಾರು?

೩. "ಕವಿತೆ ನೆಗಳ್ತೆಯಂ ನಿರಿಸೆ ಜೋಳದಪಾಳಿ ನಿಜಾಧಿನಾಥನಾಹವದೊಳಾರತಿ ನಾಯಕರ ಪಟ್ಟನೆ ಪಾರಿಸಿ ಸಂದ ಪೆಂಪು" ಎಂದು ಹೇಳಿದವರು ಯಾರು?

೪. 'ಜಿನಶಾಸನ ದೀಪಿಕೆ', 'ಜಿನ ಧರ್ಮ ಪತಾಕೆ' ಎಂದು ಯಾರನ್ನು ವರ್ಣಿಸಲಾಗಿದೆ?

೫. ದುರ್ಗಸಿಂಹನ ಪಂಚತಂತ್ರ ಕೃತಿಯಲ್ಲಿ ಅತೀ ದೀರ್ಘ ಪ್ರಕರಣ ಯಾವುದು?

೬. ಯಾರ ವಚನಗಳನ್ನು'ರೂಪಕ ಕಾವ್ಯ'ಗಳೆಂದು ಕರೆಯಲಾಗಿದೆ?

೭. "ವಿಚಾರಿಸಬೇಡದರಿಂ ರಳಕುಳಕ್ಷಳಂಗಳನಿದರೊಳ್" ಎಂದು ಹೇಳಿದವರು ಯಾರು?

೮. "ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ" ಈ ಮಾತಿನ ಉಲ್ಲೇಖ ಇರುವುದು ಯಾವ ಗ್ರಂಥದಲ್ಲಿ?

೯. "ಬುದ್ಧದೇವನೇ ದೇಶ ಭಾಷಾ ಸಾಹಿತ್ಯಗಳ ಬೀಜವನ್ನ ಬಿತ್ತಿದನೆಂದು" ಪ್ರತಿಪಾದಿಸಿದ ವಿದ್ವಾಂಸರು ಯಾರು?

೧೦. "ದೋಷವುಳ್ಳವ ನಾನು ಭಾಷೆಯುಳ್ಳವ ನೀನು ಮೋಸ ಹೋದೆನೋ ಭಕ್ತಿರಸವ ಬಿಟ್ಟು" ಈ ಕೀರ್ತನೆಯ ರಚನಾಕಾರರು ಯಾರು?

ಈ ರಸಪ್ರಶ್ನೆ ತಯಾರಕರು

ಜಿ ಶಿವಶಂಕರ್ ಮುಖ್ಯೋಪಾಧ್ಯಾಯರು
ಸರ್ಕಾರಿ ಪ್ರೌಢಶಾಲೆ ಜಾಲಮಂಗಲ ರಾಮನಗರ ಜಿಲ್ಲೆ ೯೬೬೩೫೯೯೯೨೩

ರಸಪ್ರಶ್ನೆ ಸರಣಿ ಉತ್ತರಗಳು-1

೧. ಉತ್ಪ್ರೇಕ್ಷೆ

೨. ಲಕ್ಷ್ಮೀಶ

೩. ಪಂಪ

೪. ಅತ್ತಿಮಬ್ಬೆ

೫. ಭೇಧ ಪ್ರಕರಣ

೬. ಬಸವಣ್ಣ

೭. ಹರಿಹರ

೮. ಕವಿರಾಜಮಾರ್ಗ

೯. ಟಿ.ಎಸ್.ವೆಂಕಣ್ಣಯ್ಯನವರು

೧೦. ಪುರಂದರದಾಸ


################################

ರಸಪ್ರಶ್ನೆ ಸರಣಿ-2

೧. 'ಬೆಳುಗನ್ನಡ' ಎಂಬ ಹೊಸತೊಂದು ಕನ್ನಡದ ಪ್ರಕಾರ ವನ್ನು ತಿಳಿಸಿದ ಕವಿ ಯಾರು?

೨. "ಕರ್ಣ ಮತ್ತು ಅರ್ಜುನ ಕೃಷ್ಣರು ವೈರಿಗಳು" ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆ?

೩. 'ಅಭಿನವ ಪಾಣಿನಿ' ಎಂಬ ಬಿರುದಾಂಕಿತ ಲಾಕ್ಷಣಿಕ ಯಾರು?

೪. 'ಧವಳಗ್ರಂಥ'ಗಳ ಕರ್ತೃ ಯಾರು?

೫. 'ಕನ್ನಡ ಭಾಗವತ'ದ ಕರ್ತೃ ಯಾರು?

೬. ಚಾವುಂಡರಾಯ ನ ಜೀವನವನ್ನು ಆಧರಿಸಿ ಬರೆದ ಕಾದಂಬರಿ ಯಾವುದು?

೭. ಅಕ್ಕಮಹಾದೇವಿ ಯ ಜೀವನಾಧಾರಿತ ಹೆಚ್ ತಿಪ್ಪೇರುದ್ರಸ್ವಾಮಿ ರವರ ಕಾದಂಬರಿ ಯಾವುದು?

೮. ಕನ್ನಡದ ಮೊದಲ ಗೀತನಾಟಕ ಯಾವುದು?

೯. 'ಸುರಗಿ' ಎಂಬ ಆತ್ಮಕಥೆಯ ಕರ್ತೃ ಯಾರು?

೧೦. ಬೆಂದ್ರೆಯವರು 'ಷಟ್ಪದಿ'ಯಲ್ಲಿ ರಚಿಸಿದ ಮೊದಲ ಕವನಸಂಕಲನ ಯಾವುದು?

ಈ ರಸಪ್ರಶ್ನೆ ತಯಾರಕರು

ಜಿ ಶಿವಶಂಕರ್
ಮುಖ್ಯೋಪಾಧ್ಯಾಯ ರು
ಸರ್ಕಾರಿ ಪ್ರೌಢಶಾಲೆ, ಜಾಲಮಂಗಲ, ರಾಮನಗರ


ರಸಪ್ರಶ್ನೆ ಸರಣಿ ಉತ್ತರಗಳು-2

೧. ನಿಜಗುಣ ಶಿವಯೋಗಿ

೨. ವಿರೋಧಾಭಾಸ ಶ್ಲೇಷಾಲಂಕಾಕ

೩. ಭಟ್ಟಾಕಳಂಕ

೪. ವೀರಸೇನಾಚಾರ್ಯ

೫. ಚಾಟುವಿಠಲನಾಥ

೬. ಶಿಲ್ಪಶ್ರೀ - ತ.ರಾ.ಸು

೭. ಕದಳಿಯ ಕರ್ಪೂರ

೮. ಮುಕ್ತಾ ದ್ವಾರ - ಕಾರಂತರು

೯. ಯು.ಆರ್. ಅನಂತಮೂರ್ತಿ

೧೦. ಕೃಷ್ಣಕುಮಾರಿ





*ರಸಪ್ರಶ್ನೆ ಕಾರ್ಯಕ್ರಮ -3

ಸಂಯೋಜಕರು:- ಸಹ ಸಂಚಾಲಕರು*
👉 *_"ಶ್ರೀಮತಿ ಅರುಣಪಲ್ಲವಿ.ಎ."_*
                   *ಎಮ್.ಎ.,ಎಮ್.ಇಡಿ.*
               *ಉಪನ್ಯಾಸಕರು*
                     *ಕೋಲಾರ್*

 ೧) *ಅಮೃತಮತಿಯ ಪಾತ್ರ ಬರುವುದು_____ ಕೃತಿಯಲ್ಲಿ.*

ಅ)ಅನಂತನಾಥ ಪುರಾಣ
ಆ)ಯಶೋಧರ ಚರಿತೆ
ಇ)ರಾಮನಾಥ ಚರಿತೆ
ಈ)ಅನುಭವ ಮುಕುರ

 ಆ✅✅

 ೨) *ನಾಟಕೀಯ ಶೈಲಿಯಲ್ಲಿ ರಚಿತವಾದ ಕೃತಿ___*

ಅ)ಹರಿಶ್ಚಂದ್ರ ಕಾವ್ಯ
ಆ)ಕರ್ನಾಟಕ ಕಾದಂಬರಿ
ಇ)ಭೀಮ ಪುರಾಣ
ಈ)ಜಗನ್ನಾಥ ವಿಜಯ

 ಅ✅✅ ರಾಘವಾಂಕನ ಷಟ್ಪದಿ ಕಾವ್ಯ

 ೩) *ಕೇಶೀರಾಜನ ಸೋದರಮಾವ_____*

ಅ) ಮಲ್ಲಿಕಾರ್ಜುನ
ಆ)ಸುಮನೋಬಾಣ
ಇ)ಕಶ್ಯಪ
ಈ)ಜನ್ನ

 ಈ✅✅

೪) *ತಿಮ್ಮಣ್ಣ ಕವಿ ಯಾರ ಆಶ್ರಯ ಪಡೆದಿದ್ದ?*

ಅ)ಚಿಕ್ಕದೇವರಾಯ
ಆ)ಶ್ರೀ ರಂಗರಾಜ
ಇ)ಕೃಷ್ಣದೇವರಾಯ
ಈ)ದೇವರಾಯ

 ಇ✅✅

 ೫) *"ಕೊಡೆಗಳು" ನಾಟಕ ಬರೆದವರು_____*

ಅ)ಚಂದ್ರಶೇಖರ ಪಾಟೀಲ
ಆ)ಚಂದ್ರಶೇಖರ ಕಂಬಾರ
ಇ)ಲಂಕೇಶ್
ಈ)ಬಸವಲಿಂಗಯ್ಯ

 ಅ✅✅

 ೬) *ಚಂದ್ರಯ್ಯಗೌಡ ಪಾತ್ರ ಬರುವ ಕೃತಿ______*

ಅ)ಮಲೆಗಳಲ್ಲಿ ಮದುಮಗಳು
ಆ)ಕಾನೂರು ಹೆಗ್ಗಡತಿ
ಇ)ಮಲೆನಾಡಿನ ಚಿತ್ರಗಳು
ಈ) ಬೆರಳ್ ಗೆ ಕೊರಳ್

 ಆ✅✅

 ೭) *ಚಂದ್ರಹಾಸನ ಕಥೆ ಬರೆದವರು_____*

ಅ)ಸಂಚಿಯ ಹೊನ್ನಮ್ಮ
ಆ)ಹೆಳವನಕಟ್ಟೆ ಗಿರಿಯಮ್ಮ
ಇ)ಗೀತ ನಾಗಭೂಷಣ
ಈ)ದೇವನೂರು ಮಹದೇವ

 ಆ✅✅

 ೮) *ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದವರು_______*

ಅ)ಹಾ.ಮಾ.ನಾಯಕ
ಆ)ದೇ.ಜ.ಗೌ
ಇ)ಹಿ.ತಿ. ರಾಮಚಂದ್ರೇಗೌಡ
ಈ)ಚಕ್ಕೆರೆ ಶಿವಶಂಕರ್

 ಇ✅✅

 ೯) *"ಕಾವ್ಯಂ ತಾನಿದು ನವರಸಸೇವ್ಯಂ" ಎಂದು ಹೊಗಳಿಸಿಕೊಂಡ ಕೃತಿ______*

ಅ)ಪಂಪಾಶತಕ
ಆ)ರಕ್ಷಾ ಶತಕ
ಇ)ಗಿರಿಜಾ ಕಲ್ಯಾಣ
ಈ)ಮುಡಿಗೆಯ ಅಷ್ಟಕ

 ಇ✅✅

 ೧೦) *ವರ್ಗ ಸಂಘರ್ಷವನ್ನು ಹೊಂದಿದ ಕೃತಿ______*

ಅ)ನಳ ಚರಿತ್ರೆ
ಆ) ರಾಮಧಾನ್ಯ ಚರಿತ್ರೆ
ಇ)ಹೋರಾಟದ ಚರಿತ್ರೆ
ಈ)ಹರಿಭಕ್ತ ಸಾರ

 ಆ✅✅

 ೧೧) *"ಶಬ್ದಮಣಿದರ್ಪಣ ಕಾವ್ಯವೂ ಹೌದು ಶಾಸ್ತ್ರವೂ ಹೌದು " ಎಂದವರು______*

ಅ)ಆರ್.ನರಸಿಂಹಾಚಾರ್
ಆ)ಡಿ.ಎಲ್.ನರಸಿಂಹಾಚಾರ್
ಇ)ಕೃಷ್ಣಭಟ್
ಈ)ಹೆಚ್ .ಎಸ್. ಬಿಳಿಗಿರಿ

 ಆ✅✅

 ೧೨) *ಒತ್ತೆ+ಇಟ್ಟಂ= ಒತ್ತಿಟ್ಟಂ . ಯಾವ ಸಂಧಿ?*

ಅ)ಆಗಮ
ಆ)ಆದೇಶ
ಇ)ಲೋಪ
ಈ)ಯಣ್

 ಇ✅✅

 ೧೩) *"ಬಳೆ" ಧಾತುವಿನ ಭಾವವಾಚಕ_______*

ಅ)ಬಳೆಸು
ಆ)ಬೆಳೆಸು
ಇ)ಬಳವು
ಈ)ಬಳವಿ

 ಈ✅✅

 ೧೪) *ಬ್ರಹ್ಮಗಣ ಹೊಂದಿರುವ ಅಂಶಗಳು_____*

ಅ)ಒಂದು
ಆ)ಎರಡು
ಇ)ಮೂರು
ಈ)ನಾಲ್ಕು

 ಆ✅✅

 ೧೫) *ಶಬ್ದಾಲಂಕಾರಗಳಲ್ಲಿ ಇರುವ ವಿಧಗಳು______*

ಅ)ಮೂರು
ಆ)ನಾಲ್ಕು
ಇ)ಐದು
ಈ)ಆರು

 ಅ✅✅

 ೧೬) *ಭಾವಯಿತ್ರಿ ಪ್ರತಿಭೆ ಇರಬೇಕಾದುದು __ .*

ಅ)ಕವಿ
ಆ)ಸಹೃದಯ
ಇ)ಸಾಮಾನ್ಯರು
ಈ)ಲೇಖಕ

 ಆ✅✅

 ೧೭) *ಜಾನಪದ ಲೋಕ ಸ್ಥಾಪಿಸಿದವರು______*

ಅ)ಕೆರೆಮನೆ ಶಂಭು ಹೆಗಡೆ
ಆ)ಜೀ.ಶಂ.ಪರಮಶಿವಯ್ಯ
ಇ)ಪಿ.ಆರ್.ತಿಪ್ಪೇಸ್ವಾಮಿ
ಈ) ಹೆಚ್. ಎಲ್. ನಾಗೇಗೌಡ

 ಈ✅✅ ರಾಮನಗರದಲ್ಲಿ

 ೧೮) *"ಸರಸ್ವತಿ ಸಮ್ಮಾನ್ " ಪ್ರಶಸ್ತಿ ವಿಜೇತರು __*

ಅ)ಸಿದ್ಧಲಿಂಗಯ್ಯ
ಆ)ಎಸ್. ಎಲ್.ಭೈರಪ್ಪ
ಇ)ನಿರಂಜನ ದಾಸ್
ಈ)ಆರ್.ಕೆ.ರಾಮಚಂದ್ರನ್

 ಆ✅✅

 ೧೯) *"ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು " ಎಂಬ ಮಾತು ಯಾರದು?*

ಅ)ಎಸ್. ವಿ.ರಂಗಣ್ಣ
ಆ)ಪು.ತಿ.ನ
ಇ)ಜಿ.ಎಸ್. ಎಸ್
ಈ)ಹಾ.ಮಾ.ನಾಯಕ

 ಅ✅✅

 ೨೦) *"ತಾನು ಕನ್ನಡ ಕವಿತೆಯೊಳ್ ಅಸಗಗಂ ನೂರ್ಮಡಿ" ಎಂದವರು?*

ಅ)ಪಂಪ
ಆ)ಪೊನ್ನ
ಇ)ನಂಜುಂಡ
ಈ)ಹರಿಹರ

 ಆ✅✅

 ೨೧) *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಕೃತಿ______*

ಅ)ಬಿಂಬ
ಆ)ಕಾಡು
ಇ)ಕತ್ತಿಯಂಚಿನದಾರಿ
ಈ) ಮರದೊಳಗಣ ಕಿಚ್ಚು

 ಇ✅✅

 ೨೨) *ಇ‌‌ಱಿವೆಬೆಡಂಗಡನನ್ನು ನಾಯಕನನ್ನಾಗಿ ಹೊಂದಿದ ಕೃತಿ______*

ಅ)ಪಂಪಭಾರತ
ಆ)ಕುಮಾರವ್ಯಾಸ ಭಾರತ
ಇ)ಗದಾಯುದ್ಧ
ಈ)ಜೈಮಿನಿ ಭಾರತ

 ಇ✅✅

 ೨೩) *ತ್ರಿಷಷ್ಠಿ ಲಕ್ಷಣ ಮಹಾಪುರಾಣ ಗ್ರಂಥ ಯಾವುದು?*

ಅ)ಆದಿಪುರಾಣ
ಆ)ಮಹಾಪುರಾಣ
ಇ)ಉತ್ತರ ಪುರಾಣ
ಈ)ಚಾವುಂಡರಾಯ ಪುರಾಣ

 ಈ✅✅

೨೪) *"ತಲೆಯಿಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ"  ಎಂಬ ಮಾತು ಯಾರದು?*

ಅ)ಅಕ್ಕಮಹಾದೇವಿ
ಆ)ಅಲ್ಲಮಪ್ರಭು
ಇ)ಮಡಿವಾಳ ಮಾಚಯ್ಯ
ಈ)ಮಾಚಿಕಬ್ಬೆ

ಆ✅

 ೨೫) *"ಕದಳಿಗರ್ಭಶಾಮಂ" ಎಂದು ತನ್ನ ಬಗ್ಗೆ ಹೇಳಿಕೊಂಡ ಕವಿ______*

ಅ)ಪಂಪ
ಆ)ಪೊನ್ನ
ಇ)ರನ್ನ
ಈ)ಚಾವುಂಡರಾಯ

 ಅ✅✅




ರಸಪ್ರಶ್ನೆ ಸರಣಿ-4

೧. ’ಶಬ್ದಾವತಾರ’ ಎಂಬ ಸಂಸ್ಕೃತ ವ್ಯಾಕರಣ ಕೃತಿ ರಚಿಸಿದ ಗಂಗರ ದೊರೆ ಯಾರು?
ಉತ್ತರ : ದುರ್ವಿನೀತ

೨. ಎ.ಕೆ. ರಾಮಾನುಜನ್ ರವರು ಇಂಗ್ಲೀಷ್ ಗೆ ಅನುವಾದಿಸಿದ ಅನಂತಮೂರ್ತಿಯವರ ಕಾದಂಬರಿ?
ಉತ್ತರ : ಸಂಸ್ಕಾರ

೩. ’ಇಂದಿರಾಬಾಯಿ’ ಕಾದಂಬರಿಯ ಪರ್ಯಾಯ ಶೀರ್ಷಿಕೆ ಯಾವುದು?
ಉತ್ತರ : ಸದ್ಧರ್ಮ ವಿಜಯ

೪. ’ವಿಕ್ರಮಾರ್ಜುನ ವಿಜಯ’ದಲ್ಲಿರುವ ಒಟ್ಟು ಆಶ್ವಾಸ ಮತ್ತು ಪದ್ಯಗಳೆಷ್ಟು?
ಉತ್ತರ : ೧೪ ಆಶ್ವಾಸ - ೧೬೦೯ ಪದ್ಯ

೫. ರಾಷ್ಟ್ರಕವಿ ಕುವೆಂಪುರವರನ್ನು ’ಆಧುನಿಕ ವಾಲ್ಮೀಕಿ’ ಎಂದು ಕರೆದ ಭಾರತದ ಸಂತ, ಸಮಾಜ ಸುಧಾರಕ ಯಾರು?
ಉತ್ತರ : ವಿನೋಭಾ ಭಾವೆ

೬. ನಾಗವರ್ಮನ ’ಕರ್ಣಾಟಕ ಕಾದಂಬರಿ’ ಕೃತಿಯಲ್ಲಿ ವರ್ಣಿತವಾಗಿರುವ ಸರೋವರ?
ಉತ್ತರ : ಅಚ್ಛೋದ ಸರೋವರ

೭. ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
ಉತ್ತರ : ದ್ವೈತ

೮. ’ತಿರುಕ’ ಕಾವ್ಯನಾಮವುಳ್ಳ ಕವಿಯ ಪೂರ್ಣ ಹೆಸರೇನು?
ಉತ್ತರ : ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ

೯. ’ಭಾರತೀಯ ನಾಟ್ಯರಂಗ’ ಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡರ ನಾಟಕ ಯಾವುದು?
ಉತ್ತರ : ಹಯವದನ

೧೦. ಶ್ರೀ ಪಾದರಾಜರ ಕೀರ್ತನೆಗಳ ಅಂಕಿತ ಯಾವುದು?
ಉತ್ತರ : ಶ್ರೀರಂಗವಿಠಲ



ರಸಪ್ರಶ್ನೆ ಸರಣಿ-5

೧. "ಗೂಗೆಗಳು ತುಂಬಿದ್ದ ಗುಹೆಯನ್ನು ಕಾಗೆಗಳು ಸುಟ್ಟ ಕಥೆ" ಯು ಯಾವ ಗ್ರಂಥದಲ್ಲಿದೆ?

ಉತ್ತರ: ದುರ್ಗಸಿಂಹನ ಕರ್ಣಾಟಕ ಪಂಚತಂತ್ರಂ

೨. "ಸತಿಧರ್ಮಸಾರ" ಕೃತಿಯ ಕರ್ತೃ ಯಾರು?

ಉತ್ತರ: ಬಂಧುವರ್ಮ

೩. ಜೈನ ರತ್ನತ್ರಯಗಳನ್ನು ಪ್ರತಿಪಾದಿಸುವ ರತ್ನಾಕರವರ್ಣಿಯ ಕೃತಿ ಯಾವುದು?

ಉತ್ತರ: ರತ್ನಾಕರಾಧೀಶ್ವತ ಶತಕ

೪. ಅಲ್ಲಮಪ್ರಭುವಿನ ಬೆಡಗಿನ ವಚನಗಳನ್ನು ಏನೆಂದು ವರ್ಣಿಸಲಾಗಿದೆ?

ಉತ್ತರ: ತಾತ್ವಿಕ ಕಾವ್ಯಗಳು

೫. ಕೃಷ್ಣನನ್ನು'ಅರ್ಧ ಚಕ್ರವರ್ತಿ' ಎಂದು ಕರೆದ ಕವಿ ಯಾರು?

ಉತ್ತರ: ಬಂಧುವರ್ಮ - ಹರಿವಂಶಾಭ್ಯುದಯ ದಲ್ಲಿ

೬. "ಬಡತನದ ಮಂತ್ರವಾದಿ" ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆ?

ಉತ್ತರ: ರೂಪಕಾಲಂಕಾರ

೭. ಪಾಶ್ಚಾತ್ಯ ವಿಮರ್ಶಕ ಟಿ.ಎಸ್. ಎಲಿಯಟ್ ನ objective correlative ಪರಿಕಲ್ಪನೆ ಗೆ ಭಾರತೀಯ ಕಾವ್ಯಮೀಮಾಂಸಕರು ಏನೆಂದು ಪರಿಭಾವಿಸಿದ್ದಾರೆ?

ಉತ್ತರ: ಪ್ರೌಢೋಕ್ತಿ

೮. "ಚಾಯಣಭಾರತ" ಎಂಬ ಷಟ್ಪದಿ ಕಾವ್ಯದ ಕರ್ತೃ ಯಾರು?

ಉತ್ತರ: ಜಾಯಗೌಂಡ

೯. "ಗುಣಮಂ ಬಯ್ತಿಡವೇಡ ನಿಲ್ವೊಡೆ ಗುಣಂ ನಿಲ್ಗುಂ ಧನಂ ನಿಲ್ಲುಮೇ" ಎಂದು ಹೇಳಿದವರು ಯಾರು?

ಉತ್ತರ: ರನ್ನ

೧೦. 'ಪ್ರಸಾದ, ಮಾಧುರ್ಯ, ಓಜಸ್' ಎಂಬ ಮೂರೇ ಗುಣಗಳನ್ನು ವಿವೇಚಿಸಿದ ಲಾಕ್ಷಣಿಕ ಯಾರು?

ಉತ್ತರ: ಬಾಮಹ

ರಸಪ್ರಶ್ನೆ ತಯಾರಕರು

ಜಿ ಶಿವಶಂಕರ್
ಮುಖ್ಯೋಪಾಧ್ಯಾಯರು
ಸರ್ಕಾರಿ ಪ್ರೌಢಶಾಲೆ ಜಾಲಮಂಗಲ ರಾಮನಗರ ಜಿಲ್ಲೆ
೯೬೬೩೪೯೯೯೨೩




ರಸಪ್ರಶ್ನೆ ಸಂಚಿಕೆ-6


1) 'ಬಾಳಬಟ್ಟೆಯ ಪರಮಾಗಮ' ಎನ್ನಿಸಿಕೊಂಡಿರುವ ಕಾವ್ಯ

2) 'ಕರಿದಾದೊಡೆ ಕಸ್ತೂರಿಯಂ ಇಳಿಕಯ್ವರೆ ? ' -ಈ ವಾಕ್ಯ ಬಂದಿರುವ ಕಾವ್ಯ

3) 'ಕರ್ಣಾಟ ಕೃತಿಗೆ ಸೀಮಾಪುರುಷಂ' ಎಂದು ಹೊಗಳಿಸಿಕೊಂಡವನು

4) 'ನುಣ್ದನಿ ನಿದ್ರೆಗೆ ಕತಕ ಬೀಜಮಾಯ್ತನೆ  ' -ಈ ವಾಕ್ಯ ಬಂದಿರುವ ಕಾವ್ಯ

5) 'ಕಲ್ಪಕುಜದಂತೆ ರಸಾನ್ವಿತಮಾದೀಕೃತಿ ' ಯಾವುದು ?

6) ' ಜೀವದಯೆಯ ಮಹತ್ವ ' ವನ್ನು ತಿಳಿಸಿಕೊಡುವ ಕಾವ್ಯ

7)  ನಾಗಚಂದ್ರನ ಕೃತಿಯ ಯಾವ ಗುಣ ತನ್ನ ಕಾವ್ಯದಲ್ಲಿ ನೆಲೆಸಲಿ ಎಂದಿದ್ದಾನೆ ?

8) ಇದೊಂದು ವರ್ಣಕ ಪ್ರಬಂಧ ಕಾವ್ಯ

9) "ಉತ್ಕರ್ಷ ವಿಳಾಸನದ ಭೂಮಿ ಸಕಲಜನಕ್ಕಂ" ಎಂದು ಜನ್ನ ಯಾವ ಸ್ಥಳವನ್ನು ವರ್ಣಿಸಿದ್ದಾನೆ?

10)ಯಾವ ರಾಜನಲ್ಲಿ ಜನ್ನನು  " ನಿಂದಿರೆ ದಂಡಾದೀಶಂ ಕುಳ್ಳಿರೆ ಮಂತ್ರಿ ,ತೋಡಂಕೆ ಕವಿ " ಆಗಿದ್ದನು?


 ಬಸವರಾಜ.ಟಿ.ಎಂ:

ರಸಪ್ರಶ್ನೆ ಸಂಚಿಕೆ -6 ಉತ್ತರಗಳು

1) ಅನಂತನಾಥ ಪುರಾಣ

2) ಯಶೋಧರ ಚರಿತೆ

3) ಜನ್ನ

4) ಯಶೋಧರ ಚರಿತೆ

5) ಯಶೋಧರ ಚರಿತೆ

6) ಯಶೋಧರ ಚರಿತೆ

7) ರಸಭಾವ

8)  ಯಶೋಧರ ಚರಿತೆ

9) ರಾಜಪುರ (ಯಶೋಧರ ಚರಿತೆಯಲ್ಲಿ )

10) ನಾರಸಿಂಹ ಬಲ್ಲಾಳ (ಹೊಯ್ಸಳ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ