ಮಹಾಭಾರತದಲ್ಲಿ ಬರುವ ಕೆಲವು ಪಾತ್ರಗಳ ಪರಿಚಯ

✍ಶಂತ ಮಹಾರಾಜ. ಇವನು ಗಂಗೆ ಮತ್ತು ಸತ್ಯವತಿ ಗಂಡ. ಭೀಷ್ಮ (ಗಂಗೆ)ಮತ್ತು ವಿಚಿತ್ರವೀರ್ಯ (ಸತ್ಯವತಿ)ಇವನ ಮಕ್ಕಳು.

✍ಭೀಷ್ಮ➖ಶಂತನು ಮತ್ತು ಗಂಗಾದೇವಿ ಇವರ ಮಗ ಭೀಷ್ಮ  ಮಹಾಭಾರತ ಯುದ್ದದಲ್ಲಿ ಶಿಖಂಡಿಯಿಂದ ಸಾವು. ಕೌರವರು ಮತ್ತು ಪಾಂಡವರ ತಾತ ಕೌರವರ ಪಕ್ಷಪಾತಿ.ಇವನಿಗೆ ಅಂಬಾಲಿ ಶಾಪ ಇರುವುದು.

✍ದ್ರೋಣಾಚಾರ್ಯ.
ಇವರ ಜನನ ಮಡಕೆಯಲ್ಲಾದ ಕಾರಣ ಇವನಿಗೆ ಕುಂಬೋದ್ಭವ ಎಂದು.ದ್ರೋಣ ಮತ್ತು ದ್ರುಪದ ಗೆಳೆಯರು.ದ್ರುಪದನಿಂದ ಅವಮಾನಿತನಾದ ವ್ಯಕ್ತಿ. ಕೃಪಾಚಾರ್ಯರ ತಂಗಿ ಕೃಪಿ ಇವನ ಹೆಂಡತಿ. ಇವರ ಮಗ ಅಶ್ವತ್ಥಾಮ. ಇವನು ದ್ರುಷ್ಟ್ಯದುಮ್ನನಿಂದ ಹತನಾಗುತ್ತಾನೆ.

✍ದೃತರಾಷ್ಟ್ರ . ವಿಚಿತ್ರವೀರ್ಯ ಮತ್ತು ಅಂಬಿಕೆಯ ಮಗ. ಕುರುಡ ಈತನ ಹೆಂಡತಿ ಗಾಂಧಾರಿ ಇವನ ಮಕ್ಕಳೇ ಕೌರವರು.೧೦೧ ಜನ ೧೦೦ ಗಂಡುಮಕ್ಕಳು ೧ ಹೆಣ್ಣು(ದುಶ್ಯಲೆ).

✍ಪಾಂಡುರಾಜ.
ವಿಚಿತ್ರವೀರ್ಯ ಮತ್ತು ಅಂಬಾಲಿಕೆಯ ಮಗ.
ಕುಂತಿ ಮತ್ತು ಮಾದ್ರಿಯ ಗಂಡ ಇವರ ಮಕ್ಕಳೇ ಪಾಂಡವರು ೫ (ಐದು). ಭೀಮ, ಅರ್ಜುನ, ಧರ್ಮರಾಯ, ಕುಂತಿಯಲ್ಲಿ.
ನಕುಲ, ಸಹದೇವ ಮಾದ್ರಿಯಲ್ಲಿ.ಇವನು ಶಾಪದಿಂದ ಮರಣ ಹೊಂದುತ್ತಾನೆ.

✍ಶಕುನಿ➖ಗಾಂಧಾರಿಯ ಅಣ್ಣ. ದುರ್ಯೋದನನ ಮಾವ ಕೌರವರ ಅವನತಿಗೆ ಕಾರಣನಾದವನು. ಇವನು ಸಹದೇವನಿಂದ ಹತನಾಗುತ್ತಾನೆ.

✍ಶಲ್ಯ➖ಮಾದ್ರ ದೇಶದ ರಾಜ.ನಕುಲ ಸಹದೇವರ  ತಾಯಿ ಮಾದ್ರಿಯ ಅಣ್ಣ.ಇವನು ಕೌರವರ ಪಕ್ಷ.

✍ವಿಧುರ ➖ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಮಗ.ಇವನು ಮಾಂಡವ್ಯ ಮುನಿಯ ಶಾಪಗ್ರಸ್ತನಾದ ಯಮನ ಅವತಾರ ಎಂಬ ಊಹೆ.ಇವನು ಗಂಗಾನದಿಯಲ್ಲಿ ಮರಣಪರೀಕ್ಷಿತ್

✍ಉತ್ತರಾ(ಉತ್ತರೆ)
ವಿರಾಟರಾಜನ ಮಗಳು ಅಭಿಮನ್ಯುವಿನ ಹೆಂಡತಿ ಇವಳ ಮಗ(ಪರೀಕ್ಷಿತ್)

✍ಗಾಂಧಾರಿ
ಗಾಂಧಾರ ದೇಶದ ರಾಜನಾದ ಸುಬಲನ ಪುತ್ರಿ. ದೃತರಾಷ್ಟ್ರನ ಹೆಂಡತಿ. ಕೌರವರ ತಾಯಿ ೧೦೧ ಜನ ಮಕ್ಕಳು.

✍ಅಭಿಮನ್ಯು.
ಅರ್ಜುನ ಮತ್ತು ಸುಭದ್ರೆಯರ ಮಗ ಇವನ ಹೆಂಡತಿ ಉತ್ತರೆ. ಮಗ ಪ್ರತಿಕ್ಷಿತ್. ಇವನು ದ್ರೋಣಾಚಾರ್ಯರ ಚಕ್ರವ್ಯೂಹದಲ್ಲಿ ಮರಣ ಹೊಂದುತ್ತಾನೆ.

✍ಕೃಪಾಚಾರ್ಯ
ಹಸ್ತಿನಾಪುರದ ರಾಜಕುವರರಿಗೆ ವಿದ್ಯೆ ಕಲಿಸುತ್ತಿದ್ದನು ಮತ್ತು ಆಸ್ಥಾನ ಪರೋಹಿತ. ಇವನ ತಂಗಿ ಕೃಪಿ. ಏಳು ಜನ ಚೀರಂಜೀವಿಗಳಲ್ಲಿ ಇವನು ಒಬ್ಬ.

✍ಉಪಪಾಂಡವರು
ಧರ್ಮರಾಯನ ಮಗ➖ಪ್ರತಿವಿಂದ್ಯ
ಭಿಮನಾರ್ಜುನಮಗ➖ಶ್ರುತಸೋಮ
ಅರ್ಜುನಮಗ➖ಶ್ರುತಕೀರ್ತಿ.
ನಕುಲನ ಮಗ➖ಶತಾನೀಕ
ಸಹದೇವನ ಮಗ➖ಶ್ರುತಸೇನ.
ಇವರನ್ನು ಅಶ್ವತ್ಥಾಮ ಮಲಗಿದ ಸಮಯದಲ್ಲಿ ಪಾಂಡವರು ಎಂದು ತಿಳಿದು ಇವರ ರುಂಡ ತೆಗೆಯುತ್ತಾನೆ.

✍ಅಶ್ವತ್ಥಾಮ
ದ್ರೋಣಾಚಾರ್ಯರ ಮಗ ಇವನ ತಾಯಿ ಕೃಪಿ. ಉಪಪಾಂಡವರನ್ನು ಕೊಂದವ.

✍ಶಿಖಂಡಿ
ಪಾಂಚಾಲ ದೇಶದ ರಾಜನಾದ ದ್ರುಪದನ ಮಗಳು ಮಹಾಭಾರತ ಯುದ್ದದಲ್ಲಿ ಭೀಷ್ಮನ ಕೊಂದವ.

ಧುರ್ಯೋದನ, ದುಶ್ಯಾಸನ, ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ, ಕುಂತಿ, ಮಾದ್ರಿ, ದುಶ್ಯಲೆ, ಕರ್ಣ, ಇನ್ನು ಪ್ರಮುಖವಾದ ಪಾತ್ರಗಳು ಬರುತ್ತವೆ.

🌹ಬಾಲಚಂದ್ರ ಎಸ್. ಕೆ.🌹



🌷ಶಂತನು ಮತ್ತು ಗಂಗೆಗೆ
 ಹುಟ್ಟಿದವನು ಭೀಷ್ಮ.
ಗಂಗಾ ಬಿಟ್ಟುಹೋದ ಮೇಲೆ ಶಂತನು ಮತ್ಸ್ಯರಾಜನ ಮಗಳು ಮತ್ಸ್ಯಗಂಧಿ/ದುರ್ಗಂಧಿ/ಯೋಜನಾಗಂಧಿ/ಸತ್ಯವತಿ ಇವಳನ್ನು ಮೋಹಿಸಿದ. ಆಗ ಆಕೆಯ ತಂದೆ ನನ್ನ ಮಗಳಿಗೆ ಹುಟ್ಟಿದ ಮಕ್ಕಳಿಗೆ ಪಟ್ಟ ಕಟ್ಟುವುದಾದರೆ ಮಾತ್ರ ತನ್ನ ಮಗಳನ್ನು ಕೊಡುವುದಾಗಿ ಹೇಳಿದ.ಈ ಸಂದರ್ಭದಲ್ಲಿಯೇ ಭೀಷ್ಮ ತಂದೆಗಾಗಿ ಬ್ರಹ್ಮಚಾರಿಯಾಗಿರುವೆನೆಂದು ಪ್ರತಿಜ್ಞೆ ಮಾಡಿದ.

ಇದೇ ಸತ್ಯವತಿಗೂ ಮತ್ತು ಪರಾಶರ ಮುನಿಗೂ ಈ ಪೂರ್ವದಲ್ಲಿ ಹುಟ್ಟಿದ ಮಗ ವ್ಯಾಸ. ಅವನೆ ವ್ಯಾಸ ಮಹರ್ಷಿ.

ಶಂತನು - ಸತ್ಯವತಿಗೆ ಚಿತ್ರಾಂಗದ/ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ ಇಬ್ಬರು ಮಕ್ಕಳು.ಇವರಿಗಾಗಿ ಭೀಷ್ಮ ಅಂಬೆ,ಅಂಬಿಕೆ,ಅಂಬಾಲಿಕೆಯರನ್ನು ಗೆದ್ದು ತರುತ್ತಾನೆ.ಇದರಲ್ಲಿ ಅಂಬೆ ಇದನ್ನು ವಿರೋಧಿಸಿ ಮುಂದೆ ನನ್ನಿಂದಲೆ ನಿನ್ನ ಸಾವು ಎಂದು ಭೀಷ್ಮನಿಗೆ ಶಾಪ ಹಾಕುವಳು. ಇವಳೆ ಮುಂದೆ ಶಿಖಂಡಿಯಾಗಿ ಭೀಷ್ಮನನ್ನು ಕೊಲ್ಲುವಳು.

ಚಿತ್ರವೀರೂಯನಿಗೆ ಅಂಬಿಕೆ, ವಿಚಿತ್ರವೀರ್ಯನಿಗೆ ಅಂಬಾಲಿಕೆಯರನ್ನು ಮದುವೆ ಮಾಡುವರು. ಸಂತಾನವಾಗುವ ಪೂರ್ವದಲ್ಲಿಯೇ ಚಿತ್ರವೀರ್ಯ ಸಾಯುವನು. ಆಗ ತಮ್ಮನ ಹೆಂಡತಿಯನ್ನು ವಿಚಿತ್ರವೀರ್ಯ ಪತ್ನಿಯನ್ನಾಗಿ ಸ್ವೀಕರಿಸುವನು. ನಂತರ ಇವನೂ ಸಂತಾನವಿಲ್ಲದೆ ಯುದ್ಧದಲ್ಲಿ ಮಡಿಯುವನು.

ಆಗ ಸತ್ಯವತಿ ಈ ವಂಶ ಇಲ್ಲಿಗೆ ನಿಂತು ಹೋಗಬಾರದೆಂದು ಯೋಚಿಸಿ ತನ್ನ ಸೊಸೆಯಂದಿರರಿಗೆ ಮಕ್ಕಳನ್ನು ನೀಡಬೇಕೆಂದು ಭೀಷ್ಮನಲ್ಲಿ ಕೇಳಿಕೊಂಡಾಗ ಭೀಷ್ಮ ತಾನು ಮಾಡಿದ ಪ್ರತಿಜ್ಞೆ ಮುರಿಯದೆ  ಅದಕ್ಕೆ ಬೇರೆ ದಾರಿ ತೋರಿಸಿದ. ಈ ಮೊದಲು ಸತ್ಯವತಿ  ಪರಾಶರರಿಗೆ ಹುಟ್ಟಿದ ಮಗ ವ್ಯಾಸರಿಂದ ಪಡೆಯಲು ಹೇಳಿದ.

ವ್ಯಾಸ ತಾಯಿಯ ಮಾತನ್ನು ಮೀರಲಾಗದೆ ಒಪ್ಪಕೊಂಡ. ಆದರೆ ತನ್ನ ಕುರೂಪವನ್ನು ನಿನ್ನ ಸೊಸೆಯಂದಿರು ಸಹಿಸಿಕೊಳ್ಳಬೇಕಾದರೆ  ಸ್ವಲ್ಪ ಕಾಲ ಕಾಯಬೇಕೆಂದು ಹೇಳಿದ. ಆದರೆ ಸತ್ಯವತಿಗೆ ಕಾಯುವ ತಾಳ್ಮೆ ಇರಲ್ಲಿಲ್ಲ.

ಸತ್ಯವತಿ ತನ್ನ ಸೊಸೆಯರಿಗೆ ನನ್ನ ಇನ್ನೊಬ್ಬ ಮಗನಿಂದ ನೀವು ಮಕ್ಕಳನ್ನು ಪಡೆಯಬೇಕಂದು ಹೇಳಿದಳು.ಅವರಿಬ್ಬರೂ ಭೀಷ್ಮ ಎಂದೇ ಭಾವಿಸಿ ಒಪ್ಪಿಕೊಂಡರು.

ಮೊದಲಿಗೆ ಅಂಬಿಕೆಯನ್ನು ವ್ಯಾಸರ ಹತ್ತಿರ ಕಳುಹಿಸುವಳು(ಅಂಬಿಕೆಗೆ ವ್ಯಾಸ ಎನ್ನುವುದು ಗೊತ್ತಿಲ್ಲ).  ಸಮಾಗಮದ ಸಂದರ್ಭದಲ್ಲಿ ಅಂಬಿಕೆಗೆ ಅಸಹ್ಯವೆನಿಸಿ ಕಣ್ಣು ಮುಚ್ಚಿಕೊಳ್ಳುವಳು ಅದಕ್ಕಾಗಿ ಅವಳಿಗೆ ಕುರುಡು ಮಗ ಧೃತರಾಷ್ಟ್ರ ಹುಟ್ಟುವನು.
 ಹೀಗೆ ಅಂಬಾಲಿಕೆ ಬಿಳಿಚಿಕೊಂಡಿರವುದರಿಂದ ತೊನ್ನು ರೋಗಿ ಪಾಂಡು ಹುಟ್ಟುವನು.

ಸತ್ಯವತಿ  ಆರೋಗ್ಯವಂತ ಮಗುವನ್ನು ಪಡೆಯಲು ಮತ್ತೊಮ್ಮೆ ಅಂಬಿಕೆಯನ್ನು ಕಳುಹಿಸುವಳು. ಈಗಾಗಲೇ ಅರಿತಿದ್ದ ಅಂಬಿಕೆ ಈ ಬಾರಿ ತಾನು ಹೋಗದೆ ತನ್ನ ವೇಷಭೂಷಣವೆಲ್ಲ ದಾಸಿಗೆ ತೊಡಸಿ ಕಳುಹಿಸುವಳು. ಆಗ ಆ ದಾಸಿಗೆ ಹುಟ್ಟಿದ ಮಗನೆ ವಿಧುರ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ