📜ಪಂಪನ ಆದಿಪುರಾಣ 14ನೇ ಆಶ್ವಾಸ 📜

🌞ಪ್ರಶ್ನೆಗಳು: ಪ್ರಭಾಕರ

1 .ದಿಗ್ವಿಜಯದಲ್ಲಿಯೇ ಅರವತ್ತು ಸಾವಿರ ವರ್ಷಗಳನ್ನು ಕಳೆದವರು?

ಉತ್ತರ: ಭರತ

2.ಚಕ್ರರತ್ನದ ರಕ್ಷಕರಾಗಿದ್ದವರು ಯಾರು?

ಉತ್ತರ: ಯಕ್ಷ ಸಹಸ್ರರು

3.ಚಕ್ರ ರತ್ನವು ಅಯೋಧ್ಯಾಪುರವನ್ನು ಒಳ ಹೋಗದೇ ನಿಂತುದ್ದನ್ನು ಕಂಡು ಅಲ್ಲಿ ನೆರದವರಾರು?

ಉತ್ತರ: ಯಕ್ಷ ಸಹಸ್ರರೊಡನೆ ಗಣಬದ್ಧ ದೇವರು

4.ನನಗೂ ಶತೃಗಳು ಇರುವರೆಂಬ ವಿಷಯವನ್ನು ತಿಳಿಸಿದವರು ಯಾರು?

ಉತ್ತರ: ಚಕ್ರರತ್ನ

5.ನೀನು ಆದಿರಾಜ ನಿನಗೆ ಸಾಮದಾನಗಳೇ ಮೊದಲಾದ 4  ರಾಜ ವಿದ್ಯೆಗಳು ತಿಳಿದಿವೆ ಎಂದು ಯಾರು ಯಾರಿಗೆ ಹೇಳಿದರು?

ಉತ್ತರ: ಪರೋಹಿತ ಭರತನಿಗೆ

6. ಯಾವ ಯಾವ ದ್ವಾರಗಳನ್ನು ದಾಟಿ ಭರತ ಲವಣ ಸಮುದ್ರವನ್ನು ಹೊಕ್ಕನು?

ಉತ್ತರ: ಗಂಗಾ,ವೈಜಯಂತಿ,ಸಿಂಧೂ

7.ಮಿಂಚಿನ ಕಾಂತಿಯಂತೆ ಚಂಚಲವಾದ ರಾಜ್ಯ ವ್ಯಾಮೋಹನ್ನು ಕಳಚುವುದು ಕಷ್ಟ ಎಂದವರು?

ಉತ್ತರ: ಬಾಹುಬಲಿ

8.ಆದಿಪುರಾಣದ 14ನೇ ಆಶ್ವಾಸ ಮುಂದಿನ ಯಾವ ಕವಿಯ ಕಾವ್ಯಕ್ಕೆ ಆಕರವಾಯಿತು?

ಉತ್ತರ: ರತ್ನಾಕರವರ್ಣಿಯ ಭರತೇಶ ವೈಭವ

9.ನೆತ್ತಿಯ ಮೇಲೆ ಕತ್ತಿಯಿಂದ ಗೀರಿ   ಅಕಾರಣವಾಗಿ ಛಲದಿಂದ ತಲೆಬಾಗಿಸ ಹೊರಟವನಿಗೆ ಎರಗವುದು ಅಂಜುಬುರುಕತನವಲ್ಲವೇ ಎಂದವರು?

ಉತ್ತರ: ಬಾಹುಬಲಿ

10.ಭರತನು ನಮ್ಮ ಕಾಲುಗಳ ಮೇಲೆ ಬೀಳುವಂತಾಗಲು ಯೋಗ್ಯವೆನಿಸಿದ ತಪವನ್ನು ಅನುಗ್ರಹಿಸು ಎಂದು ಹೇಳಿದವರಾರು?

ಉತ್ತರ: ಭರತನ ತಮ್ಮಂದಿರು

11.ಕೊಂಕು ನುಡಿಯಲ್ಲಿ ನುರಿತವನು ನಂಬಲು ಯೋಗ್ಯವಾದ ಮಾತುಳ್ಳವನು ಎಲ್ಲಾ ದೇಶ ಭಾಷೆಗಳ ಪರಿಚಿತನೂ ವಯೋಬುದ್ಧಿಗಳಲ್ಲಿ ವೃದ್ಧನೂ ಆದವನು ಯಾರು?

ಉತ್ತರ:ಭರತನ ದೂತ ಮಹತ್ತರ

12. ಭರತನು ಬಾಹುಬಲಿಗೆ ಕಳುಹಿಸಿದ ಪತ್ರ ಸಂದೇಶದ ಆರಂಭದ ಮಾತು ಯಾವುದು?

ಉತ್ತರ: ಎನಗೊರ್ವಂಗೆ ಉಪಭೊಗ್ಯಮಲ್ತು ವಸುಧಾ ಸಾಮ್ರಾಜ್ಯಂ

13.ಭರತ: ಅಯೋಧ್ಯಾಪುರ:: ಬಾಹುಬಲಿ: ...........?

   ಉತ್ತರ: ಪೌದನಪುರ

14.ನಾವೇ ಅಕ್ಕಿ ಕೊಟ್ಟು ಅವನು ತಿಂದು ಮಿಕ್ಕ ಎಂಜಲುಂಬಂತಾಗುವುದಿಲ್ಲವೇ ಇದನ್ನು ಹಳಗನ್ನಡದಲ್ಲಿ ಹೇಳಿ?

ಉತ್ತರ:ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ

15.ಯಾರ ಕೋಪವು ದಿಗ್ವನಿತೆಯರಿಗೆ ರಕ್ತ ಬಲಿಯನ್ನು ಕೊಡುವಂತಿತ್ತು?

ಉತ್ತರ:ಭರತ

16.ಭರತನು ತನ್ನ ದಿಗ್ವಿಜಯದಿಂದ ದಕ್ಷಿಣೋತ್ತರ ಪಂಕ್ತಿಯ ಯಾವ ಯಾವ ಅರಸರನ್ನು ಆಜ್ಞಾವಿಧೇಯರನ್ನಾಗಿ ಮಾಡಿಕೊಂಡನು?

ಉತ್ತರ: ನಮಿ,ವಿನಮಿ,ವಿದ್ಯಾಧರ

17. ಪುರಾಣ ಪುರುಷರವೋಲಿಂ ತವಿಹತಗತಿಯಿಂ ಮುನ್ನನ್ವವಾಯುಭೂಧರದ ಶಿಖರಮಂ ಮುಟ್ಟಿದರಾರ್ ಯಾರು ಯಾರನ್ನು ಕುರಿತು ಹೇಳಿದ ಮಾತು?

ಉತ್ತರ: ಭರತ ತನ್ನತಮ್ಮಂದಿರ ಕುರಿತು

18.ವಿನಯ ಸಹಜಂ ಇರುವದು ಯಾರಲ್ಲಿ?

ಉತ್ತರ: ಬಾಹುಬಲಿ

19.ಅತ್ಯುನ್ನತಿಯಲ್ತೆನಗಾತಂ ಮುನ್ನೆರಗದೊಡೆಂದು ಬೆಸಸಿಯಟ್ಟಿದನೆನ್ನಂ ಎಂದು ಹೇಳಿದವರು?

ಉತ್ತರ: ಭರತನ ದೂತ ಮಹತ್ತರ

20.
ಭರತ ರಾಜನ ಅರಸುತನ ಎಷ್ಟೇ  ದೊಡ್ಡದಾಗಿದ್ದರೂ ನನಗೇನೆಂದು ಬಲಿತವರು ಯಾರು?

ಉತ್ತರ: ಬಾಹುಬಲಿ

21.ಭರತೇಶ್ವರ ನಿನ್ನ ಕಾಲ್ದಾವರೆಗಳಿಗೆರಗಿ ನಿನ್ನ ತಮ್ಮಂದಿರು ಸುಖವನ್ನನುಭವಿಸಲಿ ಇಲ್ಲವೇ ಪುರುಪರಮೇಶ್ವರನ ಕಾಲ್ದಾವರೆಗಳಿಗೆ ಬಿದ್ದು ತಪಸ್ಸನ್ನು ಕೈಗೊಳ್ಳುಲಿ ಎಂದು ಹೇಳಿದವರಾರು?

ಉತ್ತರ: ಪುರೋಹಿತ

22.ಸಮರದಲ್ಲಿ ಸಂಘಟಿಸುವ ಸುಭಟರ ತೋಳ್ಬಲಗಳ ಗರ್ವವಿಧ್ವಂಸನ ಕ್ರೀಡೆಯಲ್ಲಿ ಆಸಕ್ತಿಯುಳ್ಳವರಾರು ?

ಉತ್ತರ:ಬಾಹುಬಲಿ

23.ಭೂಮಿಯಲ್ಲಿ...............ತಿರುಗುವಂತೆ ಚಕ್ರವು ತಿರುಗಿತು.

ಉತ್ತರ:ಕುಲಾಲ/ಕುಂಬಾರ ಚಕ್ರ

24.ಜೊತೆಯಲ್ಲಿ ಹುಟ್ಟಿದ್ದಕ್ಕಾಗಿ ನನ್ನ ಅಡಿಗೆರಗಿ ಎಂದು ಬೆದರಿಸಿದವರು?

ಉತ್ತರ:ಭರತ

25.ಭರತನ ತಾಯಿ:ಯಸಶ್ವಿನಿ:: ಬಾಹುಬಲಿಯ ತಾಯಿ: .............?

ಉತ್ತರ: ಸುನಂದೆ

26.ಚಿಲಾಕಾವರ್ತರು ಭರತನ ಸೈನ್ಯವನ್ನೆಲ್ಲಾ ಮುತ್ತಿ ಸುತ್ತಲೂ ಪರದಾಡಿಸಿ ಪೇಚನ್ನೊಡ್ಡಿದರು, ಬೇಡರ ಸೈನ್ಯ ಮೇಲೆ ಬಿದ್ದು ಚೆಲ್ಲಾಪಿಲ್ಲಿಗೊಳಿಸಿತು ಎಂದು ಯಾರು ಯಾರಿಗೆ ಹೇಳಿದರು?

ಉತ್ತರ: ಬಾಹುಬಲಿ ಮಹತ್ತರನಿಗೆ

27.ಷಟ್ಖಂಡ ಭೂಮಂಡಲವನ್ನು ಜಯಿಸಿದವರು?

ಉತ್ತರ:ಭರತ ಚಕ್ರಿ

28.ಭರತನ ಆನೆಯ ಹೆಸರು?

ಉತ್ತರ: ವಿಜಯ ಪರ್ವತ

29.ಆದಿ ದೇವನು ದಯಪಾಲಿಸಿದ ನೆಲಕ್ಕಾಗಿ ಯಾರೊಡನೆಯೂ ಸ್ಪರ್ಧೆ ಬೇಕಿಲ್ಲ ಎಂದವರು?

ಉತ್ತರ:ಬಾಹುಬಲಿ

30.ಧರ್ಮ ಯುದ್ಧವನ್ನು ಮಾಡಲು ಸಲಹೆ ನೀಡಿದವರು?

ಉತ್ತರ:ಉಭಯ ಪಕ್ಷಗಳ ಮಂತ್ರಿಗಳು

31.ಭರತಂಗೆರಗುವರೆಂಬಿದೆ
      ಪರಿಭವಮೆಮಗಿಂತು ಮಾನಭಂಗಂ --- ಯಾರು ಹೇಳಿದ ಮಾತು?

ಉತ್ತರ: ಭರತನ ತಮ್ಮಂದಿರು

32.ಚಕ್ರವನ್ನು ಮುಂದಿಟ್ಟುಕೊಂಡು ತಿರಿದು ತಂದು ಹಾಳು ವಸ್ತುಗಳನ್ನು ಭಿಕ್ಷೆ ಬೇಡಿ ತಂದಂತೆ ಎಂದು ಭರತನ ಉನ್ನತಿಯನ್ನು ವ್ಯಂಗ್ಯ ಮಾಡಿದವರು?

ಉತ್ತರ:ಬಾಹುಬಲಿ

33.ಭರತನ ಸೈನ್ಯವನ್ನು ಕುರಿತು ಪಂಪ ಮಾಡಿದ ವರ್ಣನೆ.....

     1.ವೀರ ಪತ್ನಿಯರ ಸಮೂಹಕ್ಕೆ ಆನಂದಯುಕ್ತವಾದ ಕಣ್ಣೀರನ್ನೆ ಸ್ತನಗಳ ಹಾರವನ್ನಾಗಿ ಮಾಡುತ್ತಾ ಯುದ್ಧ ಸನ್ನಾಹದ ಭೇರಿ ಶಬ್ದವು ಭೂಮ್ಯಂತರ್ಭಾಗವನ್ನು ವ್ಯಾಪಿಸಿತು.

2.ಭರತನ ಸೈನ್ಯವು ತನ್ನ ಕಾಲ್ತುಳಿತದಿಂದೆದ್ದ ಧೂಳಿನಿಂದ ದಿಗ್ಯುವತಿಯರ ಮುಖವನ್ನು ಕಪ್ಪುಗೊಳಿಸಿತು.




☄ಬಾಲಚಂದ್ರ ಎಸ್ ಕೆ ☄
🌹 ಚಿತ್ತರಗಿ ಗ್ರುಪ್ 🌹

ದಿನಾಂಕ:08-05-2017



🌹ಆದಿಪುರಾಣದ ೧೪ನೇ ಆಶ್ವಾಸ🌹

ಪ್ರಶ್ನೆ➖ರಾಜು.

೧.ಭರತನು ನನಗೆ ಹದಿನಾಲ್ಕು ರತ್ನಗಳಲ್ಲಿ ಶ್ರೇಷ್ಟವಾದುದು ಎಂದುದು?
✍ಚಕ್ರರತ್ನ.

೨.ತನ್ನಭಿಮಾನದ ಭುಜಬಲದುನ್ನತಿಯನೆ ಮೆರೆವವನು ಯಾರು?
✍ಬಾಹುಬಲಿ.

೩.ಭರತನ ಕೋಪವನ್ನು ಯಾವ ಲೀಲೆಗೆ ಹೋಲಿಸಲಾಗಿದೆ.
✍ಯಮನ ಲೀಲೆಗೆ.

೪.ಪಿರಿಯಣ್ಣನು ಯಾರಿಗೆ ಸಮ
✍ತಂದೆಗೆ ಸಮ.

೫.ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ ಎಂದವರು?
✍ಭರತನ ತಮ್ಮಂದಿರು(ಬಾಹುಬಲಿ ಹೊರತು ಪಡಿಸಿ).

೬.ಭರತನ ತಮ್ಮಂದಿರು ಯಾರಿಗೆ ಎರಗುವುದು ಪರಾಭವ ಎಂದು ತಿಳಿದಿದ್ದರು.
✍ಭರತನಿಗೆ

೭.ಭರತನ ತಾಯಿ ಯಾರು?
✍ಯಶಶ್ವತಿ ದೇವಿ.

೮.ಭರತ ರೂಪದಲ್ಲಿ ಯಾರನ್ನು ಹೋಲುತ್ತಿದ್ದನು.
✍ಪುರುದೇವನನ್ನು.

೯.ಷಟ್ಖಂಡ ಮಂಡಲಗಳನ್ನು ಗೆದ್ದವರು ಯಾರು?
✍ಭರತ.

೧೦.ನೀ ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ ಎಂದವರು?
✍ಬಾಹುಬಲಿ.

೧೧.ಸೋದರರೊಳು ಸೋದರರಂ ಕಾದಿಸುವುದು ಯಾವುದು?
✍ರಾಜಲಕ್ಷ್ಮಿ.

೧೨.ಭರತ ಬಾಹುಬಲಿ ಯುದ್ದಕ್ಕೆ ನಿಂತಾಗ ಹೇಗೆ ಕಾಣುತ್ತಿದ್ದರು.
✍ಅವನಿ.

೧೩.ಚಕ್ರರತ್ನದ ರಕ್ಷಕರು ಯಾರು?
✍ಯಕ್ಷಸಹಸ್ರರು.

೧೪.ಚಕ್ರರತ್ನವು ಯಾವ ಊರಿನ ಒಳಗೆ ಹೋಗದೆ ನಿಂತಿತು.
✍ಅಯೋಧ್ಯ.

೧೫.ಭರತನ ತಮ್ಮಂದಿರಲ್ಲಿ ಅತಿ ಶೂರ ಪರಾಕ್ರಮಿ ಯಾರು.
✍ಬಾಹುಬಲಿ.

೧೬.ಬಾಹುಬಲಿ ಭರತನನ್ನು ಮೇಲಕ್ಕೆ ಎತ್ತಿದ್ದು ಯಾವುದಕ್ಕೆ ಹೋಲಿಸಿದೆ.
✍ಕನಕಾಚಲವನ್ನು ಘನ ಮರಕಶೈಲವು ಹೊತ್ತಿದೆಯಂಬಂತೆ.

೧೭.ಭರತನು ಪೂರ್ವಜನ ಹೆಸರನ್ನು ಅಳಿಸಿ ತನ್ನ ಹೆಸರನ್ನು ಬರೆಸಿದ ಸ್ಥಳ.
ಷಭಾಚಲದಲ್ಲಿ.

೧೮.ಭರತ ಬಾಹುಬಲಿ ಯಾವ ಯಾವ ದ್ವಂದ್ವ ಯುದ್ದ ಮಾಡಿದರು?
✍ದೃಷ್ಟಿಯುದ್ದ, ಮಲ್ಲಯುದ್ದ, ಜಲಯುದ್ದ,.

೧೯.ವಜ್ರಗಿರಿಯನ್ನು ವಜ್ರವು ನಾಶಪಡಿಸಲು ಸಾಧ್ಯವೇ ಈ ಮಾತನ್ನು ಯಾರು ಯಾರಿಗೆ ಹೇಳಿದರು.
✍ಬಾಹುಬಲಿ ಭರತನಿಗೆ.

೨೦.ಪ್ರತಿಮಾಯೋಗ ಎಂದರೆ.
✍ಒಂದೇ ಸ್ಥಳದಲ್ಲಿದ್ದು ತಪಸ್ಸನಾಚರಿಸುವುದು.

೨೧.ಅಯೋಧ್ಯೆಯ ಇನ್ನೊಂದು ಹೆಸರು.
✍ಸಾಕೇತನಗರ.

೨೨.ಬಾಹುಬಲಿಯ ಮಗನ ಹೆಸರು.
✍ಮಹಾಬಲಿ.

೨೩.ಗರ್ಭಿಣಿಯಾಗಿದ್ದಾಗ ವೀರಪುತ್ರೋಯದ ಬಯಕೆಗಳು ಯಾರಿಗೆ ಮೂಡುತ್ತಿದ್ದವು.
✍ಯಶಸ್ವತಿಗೆ.

೨೪.ಚಕ್ರಿ ಎಂದರೆ ಯಾರು.
✍ಭರತ

೨೫.ವೃಷಭಾಚಲದಲ್ಲಿ ಭರತನು ಯಾವುದರಿಂದ ಪ್ರಶಸ್ತಿಯನ್ನು ಬರೆಯಿಸಿದನು.
✍ಕಾಕಿಣಿಯಿಂದ.

೨೬.ಚಕ್ರರತ್ನವನ್ನು ಕುಂಬಾರನ ಚಕ್ರ ಎಂದವರು.
✍ಬಾಹುಬಲಿ.

೨೭.ಬೆಂಡಾದರು ಮುಳುಗುವ ಗುಂಡಾದರು ತೇಲುವ ಹೊಳೆಗಳಿಗೆ ಸೇತುವೆ ಕಟ್ಟಿದವನು.
✍ಸ್ಥಪತಿರತ್ನ.

೨೮.ನಿನ್ನ ಸೋದರರು ಅತಿ ಮದದಿಂದ ಮೆರೆಯುತ್ತಿದ್ದಾರೆ ಅವರಲ್ಲಿ ಬಾಹುಬಲಿಯಂತು ಎರಗುವವನೇ ಅಲ್ಲ ಈ ಮಾತನ್ನು ಯಾರು ಯಾರಿಗೆ ಹೇಳಿದರು.
✍ಪುರೋಹಿತ ಭರತನಿಗೆ.

೨೯.ನಾಡೋಜ ಪಂಪ ಎಂಬ ಕೃತಿ ಬರೆದವರು.
✍ಮುಳಿಯ ತಿಮ್ಮಪ್ಪಯ್ಯ.

೩೦.ಪಿರಿಯಣ್ಣಯೆರಗುವದೆಂ ಪರಿಭವಮೆ ಕಿರಿನೆತ್ತಿಯೊಳ್ ಈ ಮಾತು ಹೇಳಿದವರು.
✍ಬಾಹುಬಲಿ.

೩೧.ಪ್ರತಿಮಾಯೋಗದಲದಲ್ಲಿ ಬಾಹುಬಲಿ ನಿಂತಿದ್ದು ಎಷ್ಟು ವರ್ಷ.
✍ಒಂದು ವರ್ಷ.

🌹ಬಾಲಚಂದ್ರ. ಎಸ್.ಕೆ🌹

☄ಚಿತ್ತರಗಿ ಗ್ರೂಪ್ ☄

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ