ರಸಪ್ರಶ್ನೆ ಸರಣಿ-1

೧.  'ಬ್ರಾಹ್ಮಣ-ಶೂದ್ರ' ಎಂಬ ತಾತ್ವಿಕ ಪರಿಕಲ್ಪನೆಯ ಚರ್ಚೆಯನ್ನು ಮೊದಲು ಮಾಡಿದವರು ಯಾರು?


೨. ಮೌಲ್ಯಗಳ ವಿಘಟನೆ ಹಾಗೂ ಅಸ್ತಿತ್ವದ ಆಭದ್ರತೆಯನ್ನು ಸಶಕ್ತವಾದ ಬಂಧದಲ್ಲಿ ಹಿಡಿದ 'ತಬ್ಬಲಿಗಳು' ಎಂಬ ಕಥೆಯ ಕರ್ತೃ ಯಾರು?

೩. "ಇತರ ತತ್ವಜ್ಞಾನಿಗಳ ಬರಹಗಳೇ ತನ್ನ ತತ್ವಜ್ಞಾನದ ಪ್ರೇರಣೆಗಳಯ" ಹೀಗೆಂದವರು ಯಾರು?

೪. 'ಅಮೃತ ಮತ್ತು ಗರುಡ' ಎಂಬ ವಿಮರ್ಶೆ ಲೇಖನದ ಕರ್ತೃ ಯಾರು?

೫. 'ನಾನೇಕೆ ಬರೆಯುತ್ತೇನೆ' ಎಂಬ ವಿಮರ್ಶಾ ಗ್ರಂಥದ ಕರ್ತೃ ಯಾರು?

೬. ಎಂ. ಗೋಪಾಲಕೃಷ್ಣ ಅಡಿಗರ 'ಭೂಮಿಗೀತ' ಕವನ ಸಂಕಲನ ಕ್ಕೆ ಮುನ್ನುಡಿಯನ್ನು ಬರೆದವರು ಯಾರು?

೭. ಯು.ಆರ್.ಅನಂತಮೂರ್ತಿ ರವರ ವಿಮರ್ಶೆಯ ತಿರುಳು ಯಾವುದು?

೮. 'ಮನಃಶಾಸ್ತ್ರದ ಕೀಲಿಕೈ' ಎಂಬ ಲೇಖನದ ಕರ್ತೃ ಯಾರು?

೯. 'ಕಾವ್ಯಕುತೂಹಲ' ಎಂಬ ವಿಮರ್ಶಾ ಗ್ರಂಥದ ಕರ್ತೃ ಯಾರು?

೧೦. 'ಬಂಡಾಯ ಸಾಹಿತ್ಯ - ದಲಿತ ಸಾಹಿತ್ಯ' ಎಂಬ ತಾತ್ವಿಕ ವೈಚಾರಿಕ ಆಕೃತಿಯ ರುವಾರಿಗಳು ಯಾರು?



ಪ್ರಶ್ನೆಗೆ ಉತ್ತರಗಳು-1

೧. ಯು.ಆರ್. ಅನಂತಮೂರ್ತಿ

೨. ರಾಘವೇಂದ್ರ ಖಾಸನೀಸ

೩. ಜಿ. ಇ. ಮೂರ್

೪. ಡಿ ಆರ್ ನಾಗರಾಜ

೫. ಎಸ್ ಎಲ್ ಭೈರಪ್ಪ

೬. ಯು ಆರ್ ಅನಂತಮೂರ್ತಿ

೭. ರಾಜಕೀಯ ಮತ್ತು ಸಾಮಾಜಿಕ ಕಾಳಜಿ

೮. ಜಿ ಎಸ್ ಶಿವರುದ್ರಪ್ಪ

೯. ಪು.ತಿ.ನರಸಿಂಹಾಚಾರ್

೧೦. ಚಂದ್ರಶೇಖರ್ ಪಾಟೀಲ


ರಸಪ್ರಶ್ನೆ ಸರಣಿ -2

೧. 'ಜಡಭರತರ ಕನಸುಗಳು' ಎಂಬ ವಿಮರ್ಶಾ ಲೇಖನದ ಕರ್ತೃ ಯಾರು?

೨. ಸ್ವಪ್ನ ವಿಜ್ಞಾನ ಎಂಬ ಮನೋವಿಜ್ಞಾನಕ್ಕೆ ಸಂಬಂಧಿಸಿದ ಗ್ರಂಥದ ಕರ್ತೃ ಯಾರು?

೩. ಯಶವಂತ ಚಿತ್ತಾಲರ 'ಶಿಕಾರಿ' ಕಾದಂಬರಿಯು ಸೈಕಾಲಾಜಿಕಲ್ ಥ್ರಿಲ್ಲರ್ ಎಂದವರು ಯಾರು?

೪. ಜನ್ನನ ಯಶೋಧರ ಚರಿತೆಯಲ್ಲಿ"ಲೈಂಗಿಕ ಮನಃಶಾಸ್ತ್ರದ ವಿಕೃತ ಪಾತ್ರ ನಿರೂಪಣೆಯ ಅತ್ಯುತ್ತಮ ಉದಾಹರಣೆಯೆಂಬಂತೆ ಅಮೃತಮತಿ ಚಿತ್ರಿತಳಾಗಿದ್ದಾಳೆ" ಎಂದು ಹೇಳಿದವರು ಯಾರು?

೫. 'ವೈಪರೀತ್ಯ ಮನಃಶಾಸ್ತ್ರ' ಎಂಬ ನುಡಿಗಟ್ಟು ಬಳಸಿದವರು ಯಾರು?

೬. ಸಿಗ್ಮಂಡ್ ಫ್ರಾಯ್ಡ್ ನ ಮನೋವಿಶ್ಲೇಷಣೆಯ ಸಿದ್ಧಾಂತ ದಲ್ಲಿ ಈಡಿಪಸ್ ತ್ರಿಕೋನದ ಪ್ರಧಾನ ಶೃಂಗ ತಾಯಿಯಾದಾಗ ಉಂಟಾಗುವ ಮನಸ್ಥಿತಿಯನ್ನು ಏನೆಂದು ಕರೆಯಲಾಗಿದೆ?

೭. ಪು.ತಿ.ನ. ರವರ ಕಾವ್ಯದಲ್ಲಿ ಹಾಸುಹೊಕ್ಕಾಗಿರುವ ಸಿದ್ಧಾಂತ ಯಾವುದು?

೮. ಬೇಂದ್ರೆಯವರ ಕಾವ್ಯದ ದಿಕ್ಕು ದೆಸೆಗಳನ್ನು ಬದಲಾಯಿಸಿದ ತತ್ತ್ವಜ್ಞಾನಿ ಯಾರು?

೯. ಕ್ರಾಂತಿಕಾರಿ ಮಾನವೀಯತಾವಾದದ ಪ್ರತಿಪಾದಕರು ಯಾರು?

೧೦. 'ಈಡಿಪಸ್ ಕಾಂಪ್ಲೆಕ್ಸ್ : ಒಂದು ಸರಳ ವಿವರಣೆ' ಎಂಬ ಕೃತಿಯ ಕರ್ತೃ ಯಾರು?




ರಸಪ್ರಶ್ನೆಗೆ ಉತ್ತರಗಳು -2

೧. ಕೀರ್ತಿನಾಥ ಕುರ್ತಕೋಟಿ

೨. ದ.ರಾ.ಬೇಂದ್ರೆ

೩. ಕೀರ್ತಿನಾಥ ಕುರ್ತಕೋಟಿ

೪. ಎಲ್.ಆರ್.ಹೆಗಡೆ

೫. ಕುವೆಂಪು

೬. ಫಿಡ್ರ ಕಾಂಪ್ಲೆಕ್ಸ್

೭. ಸಾಂಖ್ಯಾ ಸಿದ್ಧಾಂತ

೮. ಅರವಿಂದ ಘೋಷ್

೯. ಎಂ.ಎನ್.ರಾಯ್

೧೦. ಎಂ ಬಸವಣ್ಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ