ಯಶೋಧರ ಚರಿತೆ -ಜನ್ನ
ಅವತಾರ➖೧
ಭಾಗ-1
೧.ಯಶೋಧರ ಚರಿತೆಯನ್ನು ಬರೆದವರು ಯಾರು?
✍ಜನ್ನ
೨.ಜನ್ನನ ತಂದೆ ತಾಯಿ ಯಾರು?
✍ತಂದೆ➖ಶಂಕರ,
ತಾಯಿ➖ಗಂಗಾದೇವಿ
೩.ಜನ್ನನ ವಂಶ ಯಾವುದು?
✍ಕಮ್ಮೆ.
೪.ಜನ್ನನ ತಂದೆಯ ಕೆಲಸ?
✍ಕಟಕೋಪಾದ್ಯಾಯ
೫.ಜನ್ನನ ತಂದೆಯ ಬಿರುದು?
✍ಸುಮನೊಬಾಣ.
೬.ಜನ್ನನ ಕಾಲ?
✍೧೨೨೬
೭.ಜನ್ನನ ಹೆಂಡತಿ ಹೆಸರು?
✍ಲಕುಮಾದೇವಿ.
೮.ಜನ್ನನ ಧಾರ್ಮಿಕ ಗುರು ಯಾರು?
✍ರಾಮಚಂದ್ರಮುನಿ.
೯.ಜನ್ನನ ಉಪಾಧ್ಯಾಯ ಯಾರು?
✍೨ನೇ ನಾಗವರ್ಮ.
೧೦.ಜನ್ನನ ಸೋದರಿಯ ಪತಿ ಮತ್ತು ಮಾವ ಯಾರು?
✍ಮಲ್ಲಿಕಾರ್ಜುನ.
೧೧.ಜನ್ನನ ಅಳಿಯ ಯಾರು?
✍ಕೇಶಿರಾಜ.
೧೨.ಜನ್ನನ ಬಿರುದಗಳು ಯಾವುವು?
ಕವಿಚಕ್ರವರ್ತಿ,
ನಾಳ್ಪ್ರಬುಜನಾರ್ಧನದೇವ,
ಸಾಹಿತ್ಯ ರತ್ನಾಕರ,
ಕವಿವೃಂದಾರಕವಾಸವ,
ಕವಿಕಲ್ಪಲತಾ,
ರಾಜವಿದ್ವತಬಾಕಲಹಂಸ,
೧೩.ಜನ್ನನ ಇತರ ಹೆಸರುಗಳೇನು?
ಜನ್ನಮರಸ
ಜನ್ನಿಗ
ಜನಾರ್ಧನ
ಜಾನಕಿ.
೧೪.ಜನ್ನ ಯಾರ ಆಸ್ಥಾನ ಕವಿ ಯಾಗಿದ್ದ?
✍ಹೊಯ್ಸಳರ ವೀರಬಲ್ಲಾಳನ ಆಸ್ಥಾನ.
೧೫.ನಿಂದಿರೆ ದಂಡಾಧೀಶಂ ಕುಳ್ಳಿರೆ ಮಂತ್ರಿ ತೋಡಂಕೆ ಕವಿ ಯಾರು?
✍ಜನ್ನ
೧೬.ವೀರಬಲ್ಲಾಳನ ತಂದೆ ಹೆಸರು?
✍ನರಸಿಂಹ.
೧೭.ಜನ್ನ ಏನೇನು ಕಟ್ಟಿಸಿದ್ದಾನೆ?
✍ಅನಂತನಾಥ ಬಸದಿಗೆ,ಪಾರ್ಶ್ವ ಜಿನೇಶ್ವರನ ಬಸದಿಯ ದ್ವಾರ.
೧೮.ಜನ್ನ ಬರೆದ ಶಾಸನಗಳು ಯಾವುವು?
✍ಚೆನ್ನರಾಯಪಟ್ಟಣದ ೧೭೯ನೇ ಶಾಸನವನ್ನು (ಕ್ರಿ.ಶ.೧೧೯೧ರಲ್ಲಿ)
ತರೀಕೆರೆ ೪೫ನೇ ಶಾಸನವನ್ನು(೧೧೯೭ರಲ್ಲಿ) ಕೆತ್ತಸಿದ.
೧೯.ಜನ್ನನ ಗ್ರಂಥಗಳಾವುವು?
ಯಶೋಧರ ಚರಿತೆ(ಕಂದ,ವೃತ್ತ)
ಅನಂತನಾಥ ಪುರಾಣ(ಚಂಪೂ)
ಅನುಭವ ಮುಕುರ(ಸಾಂಗತ್ಯ)
೨೦."ಅರುಹನ ಮೂರ್ತಿಯಂತಿರೆ ನಿರಾಭರಣ" ಯಾವ ಗ್ರಂಥ?
✍ಅನಂತನಾಥ ಪುರಾಣ.
೨೧.ಆರ್ ನರಸಿಂಹಚಾರ್ಯ ಯಶೋಧರ ಚರಿತೆ ಕುರಿತಾಗಿ ಬರೆದ ಕೃತಿ ಯಾವುದು?
✍ಕವಿಚರಿತೆ.
೨೨.ಪಂಚ ಪರಮೇಷ್ಟಿಗಳು ಯಾವುವು?
✍ಜಿನ, ಸಿದ್ದ, ಆಚಾರ್ಯ, ಉಪಾದ್ಯಾಯ, ಸಾಧು.
೨೩.ಈ ಕೃತಿಯ ಆದಿಯಲ್ಲಿ ಯಾರನ್ನು ಸ್ಮರಿಸಲಾಗಿದೆ?
✍ಮುನಿ ಸುವ್ರತ.
೨೪.ಸುವ್ರತ ಯಾರು?
✍೨೦ನೇ ತೀರ್ಥಂಕರ.
೨೫.ಅಸಹಾಯ ಶೂರ ಭುಜಕ್ಕೆ ಜಯಂ ಸಮಾಸಲ್ಗೆ ಎಂದು ಜನ್ನ ಯಾರನ್ನು ಆಶಿರ್ವಾದಿಸಿದ್ದಾನೆ?
✍ವೀರಬಲ್ಲಾಳ.
೨೬.ಜನ್ನ ಯಶೋಧರ ಚರಿತೆಯನ್ನು ಬರೆದು ಮಯಗಿಸಿದ್ದು ಯಾವಾಗ?
✍೧೨೦೯.
೨೭.ರಾಜಪುರದ ರಾಜ ಯಾರು?
✍ಮಾರಿದತ್ತ
೨೮.ಮಾರಿದತ್ತ ಯಾವ ದೇವತೆಯ ತೃಪ್ತಿಗಾಗಿ ನರಬಲಿಯನ್ನು ಕೊಡುತ್ತಿದ್ದನು?
✍ಚಂಡಮಾರಿ ದೇವತೆ.
೨೯.ನಿರ್ಮಲ ಧರ್ಮದಿಂದೆ ಪಾಲಿಸು ಧರೆಯಂ ಎಂದವರು ಯಾರು ಯಾರಿಗೆ?
✍ಅಭಯರುಚಿ ಮಾರಿದತ್ತನಿಗೆ
೩೦.ಮಾರಿದತ್ತನ ತಂಗಿಯ ಹೆಸರೇನು?
✍ಕುಸುಮಾವಳಿ.
೩೧.ಸಳ ಯಾವ ವಂಶದವನು?
✍ಹೊಯ್ಸಳ ವಂಶದವನು.
ಭಾಗ-2
👉ಜನ್ನ ಯಾರ ಆಸ್ಥಾನದಲ್ಲಿ ಕವಿಯಾಗಿದ್ದನು
🌷ವೀರಬಲ್ಲಾಳ
👉ಯಾರ ಆಸ್ಥಾನದಲ್ಲಿ ಕವಿಯಾಗುವುದರ ಜೊತೆಗೆ ಮಂತ್ರಿ ದಂಡಾದೀಶನಾಗದ್ದ
🌷ವೀರ ನರಸಿಂಹ
👉ಜನ್ನನಿಗೆ ಕವಿಚರ್ಕವರ್ತಿ ಬಿರುದು ಕೊಟ್ಟವರು
🌷ವೀರಬಲ್ಲಾಳ
👉ಮನ್ನಿಸಿ ಬಲ್ಲಾಳಂ ಕುಡೆ ಜನ್ನಂ ಕವಿಚಕ್ರವರ್ತಿವೆಸರಂ ಪಡೆದಂ-ಇದನ್ನು ಜನ್ನ ಎಲ್ಲಿ ಹೇಳಿಕೊಂಡಿದ್ದಾನೆ
🌷ಯಶೋಧರ ಚರಿತೆ
👉ಜಗದೊಳ್ ತಾನಿತ್ತ ಕೈಯಲೂಲದೆ ಒಡ್ಡಿದ ಕೈಯಲ್ಲದ ಪೆಂಪು ಎಂದು ತನ್ನ ಶ್ರೀಮಂತಿಕೆಯ ಕುರಿತಾಗೆ ಜನ್ನ ಎಲ್ಲಿ ಹೇಳಿಕೊಂಡಿದ್ದಾನೆ
🌷ಅನಂತನಾಥ ಪುರಾಣ
👉ರನ್ನಂ ವಯ್ಯಾಕರಣಮಂ ಜನ್ನಂ ಮೇಣ್ ಕವಿಗಳೊಳಗೆ ವೈಯಾಕರಣಂ ಎಂದು ಹೇಳಿದವರು ಯಾರು
🌷ಜನ್ನ
👉ಕವಿಚಕ್ರವರ್ತಿಗಳಲ್ಲಿ ಜನ್ನನು ಸುಕವಿ ಎಂದು ಹೇಳಿದವರು ಯಾರು
🌷ಜನ್ನ
👉ಯಶೋಧರ ಚರಿತೆಗೆ ಆಕರ ಕೃತಿ ಯಾವುದು
🌷ವಾದಿರಾಜನ ಯಶೋಧರ ಚರಿತೆ
👉ಜನ್ನ ಯಶೋಧರ ಚರಿತೆಯ ಆಶ್ವಾಸಗಳಿಗೆ ಏನೆಂದು ಹೆಸರಿಟ್ಟಿದ್ದಾನೆ
🌷ಅವತಾರ
👉ಸಾಹಿತ್ಯಕಮಲಮತ್ತಮರಾಳ ಇದು ಯಾರ ಬಿರುದು
🌷ವೀರಬಲ್ಲಾಳ
👉'ಸರಸಪದ ಪದ್ಧತಿ' ಇದು ಯಾವ ಕಾವ್ಯದಲ್ಲಿ ಬಳಕೆಯಾಗಿದೆ
🌷ಯಶೋಧರ ಚರಿತೆ
👉ನವವಯ್ಯಾಕರಣಂ ತಕಳವಿನೋದಂ ಭರತ ಸುರತ ಶಾಸ್ತ್ರ ವಿಳಾಸಂ-ಎಂದು ಜನ್ನನ ಪಾಂಡತ್ಯವನ್ನು ಕುರಿತು ಹೇಳಿದವರು ಯಾರು
🌷ಜನ್ನ
👉'ವನಹರಿಣಯುಗಮಂ ತರಕ್ಷು ಪಿಡಿವಂತೆ'
🌷ಚಂಡಕರ್ಮ ಮಕ್ಕಳನ್ನು ಹಿಡಿದಿರುವುದು
👉'ಅಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್'
🌷ಅಭಯರುಚಿ ಅಭಯಮತಿಗೆ ಹೇಳಿದ್ದು
👉ನೀತಿಯನಾರ್ ಮೀರುವೆದಪರ್ ಭಯಮಾವುದೋ ಮುಟ್ಟಿದೆಡೆಗೆ ಸೈರಿಸುವುದೇ ಕೇಳ್
🌷ಅಭಯರುಚಿ ಅಭಯಮತಿಗೆ
👉'ಮಾಡಿದುದಂ ನಾವುಣ್ಣದೆ ಪೋಕುಮೇ ಕಣ್ಣಭವ ಪ್ರಕೃತಿ ವಿಕೃತಿ ನಾವರುದುದೇ'
🌷ಅಭಯಮತಿ ಅಭಯರುಚಿಗೆ
ಭಾಗ-3
೧.ಆವಂತಿದೇಶ ಹೇಗೆ ಶೋಭಿಸುತ್ತದೆ?
ಭೂದೇವಿಯ ಮುಖದಂತೆ
೨. ಆವಂತಿದೇಶದ ಮುಗುಳು ಮೂಗಿನಂತೆ ಇರುವ ನಗರ ಯಾವದು?
😊 ಉಜ್ಜಯನಿಪುರ
೩.ಪದ್ಮರಾಗದ ದೀಪದಂತೆ ಬೆಳಗುತ್ತಿರುವದು ಯಾವದು?
😊 ಯಶೌಘನ ತೇಜಸ್ಸು
೪. ಯಶೌಘನ ರಾಣಿ ಹೆಸರು?
😊 ಚಂದ್ರ ಮತಿ
೫. ಚಂದ್ರ ಮತಿಯನ್ನು ಅಂಗರಕ್ಷಕ ತಮಗೆ ಕಾಯುವುದು ಯಾವದು?
😍 ರಾಜನ ಕಣ್ಣುಗಳು
೬ಸರದಿಯ ಪ್ರಕಾರ ಅಂಗರಕ್ಷಕ ರಾಗಿದ್ದವರು?
😒 ಹಗಲಿನಲ್ಲಿ ವಸಂತ ರಾತ್ರಿಯಲ್ಲಿ ಚಂದ್ರ
೭. ಯಶೌಘನ ಮತ್ತು ಚಂದ್ರ ಮತಿ ತರುವಾಯ ಮಗ ಯಾರು?
😊 ಯಶೋಧರ
೮.ಇವನು ಹುಟ್ಟಿದ ವರ್ಣನೆ ಹೋಲಿಕೆ
😄 ಕಬ್ಬಿನ ಬಿಲ್ಲಿಗೂ ನೆನೆಯ ಹಗ್ಗಕ್ಕೂ
ಜನಮೋಹನ ಬಾಣ ಹುಟ್ಟುವಂತೆ
೯. ಯಶೋಧರನನ್ನು ಕಾಣುವಾಗ ಯಾವ ಭಾವನೆ ಉಂಟಾಗುತ್ತದೆ?
😊 ಬಾಲಚಂದ್ರ.ಮನ್ಮಥನನ ಬಾಣ.ಮಲಯಮಾರುತನೋ ಎಂಬ ಭಾವ
೧೦. ಯಶೋಧರ ಸೌಂದರ್ಯದಲ್ಲಿ ಯಾರನ್ನು ಹೋಲುತ್ತಿದ್ದ
😊 ವಿದ್ಯಾಧರ
೧೧.ಅವನ ಬಾಹುಗಳನ್ನು ಯಾವುದಕ್ಕೆ ಹೋಲಿಸಿದೆ
😊 ಲಕ್ಷ್ಮೀ ಯಂಬ ಹೆಣ್ಣಾನೆಯನ್ನು ತಡೆಯುವ ರತ್ನದ ಕಂಬಗಳಿಗೆ
೧೨. ಯಶೌಘನು ರಾಜ್ಯ ತ್ಯಜಿಸಲು ಕಾರಣ?
😘 ಕನ್ನಡಿಯಲ್ಲಿ ಮುಖ ನೋಡಿದಾಗ ಕೂದಲು ನೆರೆತುದು ಕಾಣಿಸಿದ್ದು
೧೩.ಕೂದಲಿನ ನೆರೆಯನ್ನು ಹೋಲಿಸಿದ್ದು
😊 ಅರಮನೆಯಮತ ಮುಖದೋಳಗೆ ನೆರೆಯಂಬ ಕಾಡು ಪಾರಿವಾಳ ಹೊಕ್ಕಿದ್ದು
೧೪.ರಾಜ ತಪಸ್ಸಿಗೆ ಹೋದಾಗ. ಅವನ ಹಿಂದೆ ಹೋದ ರಾಜರೆಷ್ಟು?
😊 ೧೦೦ ಜನ
೧೫.ಭೂದೇವಿಯ ವಿರಹದ ತಾಪ ಕಡಿಮೆ ಮಾಡಿಕೊಂಡಿದ್ದು ಇದರಿಂದ
😊 ಯಶೋಧರನ ಕೀರ್ತಿಯಂಬ ಹರಿಚಂದ ಲೇಪನ
೧೬.ಅಯ್ಯೋ ಕಷ್ಟವೇ ತಂದೆ ತೊಲಗಿಸಿ ಬಿಟ್ಟ. ರಾಜ್ಯವನ್ನು ನೀನು ಕೈ ಹಿಡಿದೆಯಲ್ಲ
😊 ಕೀರ್ತಿ ಕಾಮಿನಿ
೧೭.ಇಡಿ ಭೂಮಂಡಲ ಯಶೋಧರನ ಹೇಗಲೆರಿದ್ದು ಹೇಗೆ ಕಾಣಿಸುತ್ತಿತ್ತು
😊 ಕಸ್ತೂರಿ ತಿಲಕದಂತೆ
೧೮.ಯಶೋಧರ ಶಯ್ಯಾಗ್ರಹಕ್ಕೆ ಹೋದದ್ದು
ಹೇಗೆ ಕಾಣಿಸುತ್ತಿತ್ತು
😊 ಆಕಾಶ ಗಂಗೆಯ ಪುಲಿನ ಸ್ಥಳಕ್ಕೆ ಏರಿ ಹೋಗುವ ಹಂಸದಂತೆ
೧೯.ಶರತ್ಕಾಲದ ಮೇಘಮಾಲೆಯಲಿ ದಂಪತಿಗಳು ಹೇಗೆ ಶೋಭಿಸುತ್ತಿದ್ದರು
😄 ಗಂಧರ್ವ ದಂಪತಿಯಂತೆ
೨೦.ಪರಸ್ಪರ ನೋಟಕ್ಕೆ ಕರಗಿ ನೀರಾಗಿದ್ದನ್ನು ಇದಕ್ಕೆ ಹೋಲಿಸಿದೆ.
😄 ಚಂದ್ರಕಾಂತ ಮಣಿ ಬೊಂಬೆ
೨೧.ಅರಮನೆಯ ಪಕ್ಕದಲ್ಲಿ ಕೇಳಿ ಬರುತ್ತಿದ್ದ ಹಾಡು ಯಾರದು
😄 ಮಾವುತ(ಅಷ್ಟಾವಂಕ)
೨೨.ಕತಕಬೀಜ ಎಂದರೆ
😘 ತಿಳಿಗೋಳಿಸುವ ಬೀಜ
೨೩.ಮಾವುತ ಬಳಸಿದ ರಾಗ
😄 ಮಾಳವ ಶ್ರೀಯಂಬ ದೇಶಿರಾಗ
೨೪.ಮಾಳಿಗೆಯೊಳಗಿನ ದೀಪದ ಜ್ವಾಲೆ ಹೆಚ್ಚು ಪ್ರಕಾಶ ಪಡೆದಂತೆ ಈ ರಾಗವು------+--ಪಡೆಯಿತು
😊 ರಂಗಶೃಂಗಾರ
೨೫.ರಾಣಿಗೆ ಕಾಡಿದ ಚಿಂತೆ ಯಾವದು
😄 ಬೆಳಗಾಗುವವರೆಗು ಅವನನ್ನು ಹೇಗೆ ನೋಡಲಿ. ಕೂಡಿಕೊಳ್ಳಲಿ
೨೬ಮಾವುತನ ಬಗ್ಗೆ ತಿಳಿಯಲು ರಾಣಿ ಕಳಿಸಿದ್ದು ಯಾರನ್ನು
😄 ನೆಚ್ಚಿನ ಗೆಳತಿ
೨೭.ಅಯ್ಯೋ ದೇವರೆ ಅಮೃತಮತಿಯಲ್ಲಿ
ರೂಪಾಧಮನಾದ ಅಷ್ಟಾವಂಕನೆಲ್ಲಿ ಈ ಮಾತು ಹೇಳಿದವರು
😄 ಗೆಳತಿ
೨೮.ಚಿತ್ರಂ ಆಪಾತ್ರೆ ರಮಂತೆ ನಾರಿ ಇದರರ್ಥ
😄 ಆಶ್ಚರ್ಯ ಹೆಂಗಸು ಅಯೋಗ್ಯನೋಡನೆ ರಮಿಸುತ್ತಾಳೆ
೨೯.ಆ ಸುಟ್ಟ ವಿಧಿಗೆ ಕಣ್ಣೇ ಇಲ್ಲವೋ ಈ ಮಾತನ್ನು ಹೇಳಿದವಳು
😊 ಗೆಳತಿ
೩೦. ಕಾಮನ ಕೈಯ ಖಡ್ಗದಂತೆ ಚೆಲುವು ಪಡೆದ ತನುಗಾತ್ರಿ ನೀನು ಇದನ್ನು ಯಾರು ಯಾರಿಗೆ ಹೇಳಿದ್ದು
😊 ಗೆಳತಿ- ಅಮೃತಮತಿ
೩೧.ಮಾವುತನ ದೇಹದ ಬಣ್ಣ ಹೇಗಿದೆ
😊 ಮುದಿ ಕರಡಿಯ ಹಳೆ ಚರ್ಮ ಕರಿಯ ಬಣ್ಣಕ್ಕೆ
೩೨.ಅವನ ಶರೀರವನ್ನು ಯಾವ ಮರಕ್ಕೆ ಹೋಲಿಸಿದೆ
😘 ತಾಳೆ ಮರ
೩೩.ಕಾಡಿನ ಜಿಂಕೆಗೆ ಬೇಡನ ಬಾಣ ಮಾಡಿದಂತೆ ಈ ಮಾತು ಬಂದ ಸಂದರ್ಭ
😄 ದೂತಿ ಮಾವುತನ ಬಗ್ಗೆ ಹೇಳಿದಾಗ
೩೪.ಕಾಮದೇವ ಎಂಬ ಪದ ಬಳಸಿದ್ದು ಯಾರಿಗೆ
😄 ಮಾವುತನಿಗೆ
೩೫.ಅಮೃತಮತಿ ವಿಕಟಾಂಗನ ಕೂಡಿಕೆ ಕವಿ ಹೋಲಿಸಿದ್ದು ಇದಕ್ಕೆ
😊 ಬೇವನ್ನು ಮೆಚ್ಚಿದ ಕಾಗೆ ಮಾವು ಅರಸುವಂತೆ
೩೬.ನೈದಿಲೆಯೋಳಗೆ ಸಿಕ್ಕು ಬಿದ್ದ ಹೆಣ್ಣು ದುಂಬಿ ಹಗಲಿಗಾಗಿ ಕಾಯುವಂತೆ ಇದರ ಅರ್ಥ
😄 ಜಾರನನ್ನು ಕೂಡುವ ತವಕ
೩೭.ಗಿಡುಗನು ------ ಮೇಲೆ ಎರಗುವಂತೆ
😄 ರಾಜಹಂಸದ
೩೮.ಅವಳ ಬೆನ್ನಿನ ಮೇಲೆ ಹೊಡೆದದ್ದು ಇದರಿಂದ
ಚರ್ಮದ ಬಾರುಕೋಲು
೩೮.ನಲ್ಲನೆ ತಡವಾದುದು ನಿಜ ಇಷ್ಟಬಂದಂತೆ ಬಡಿ ಕೋಪ ಮಾತ್ರ ಬೇಡ ಈ ಮಾತು ಯಾರು ಯಾರಿಗೆ ಹೇಳುವರು
😄 ಅಮೃತಮತಿ.- ಮಾವುತ
೩೯.ಆಗಳ ಬಾಳ ನಿಮಿರ್ದುದು ತೋಳ್ ತೂಗಿದುದು ಇಲ್ಲಿ ಬಾಳ್ ಎಂದರೆ
😊 ಖಡ್ಗ
೪೦.ಬೇರೆ ಗಂಡಸರೆಲ್ಲ ಸಹೋದರ ಸಮಾನರು ಎಂದವರು
😊 ಅಮೃತಮತಿ
೪೧.ನನ್ನ ಕರವಾಲ ನರೇಂದ್ರರನ್ನು ಇರಿಯಬೇಕೆ ಹೊರತು ಈ ಕ್ಷುದ್ರರನ್ನಲ್ಲ ಈ ಮಾತು ಹೇಳಿದವರು
😊 ಯಶೋಧರ
೪೨.ರಣರಂಗದಲ್ಲಿ ವೀರಪುಂಗವರ ರಕ್ತದಲ್ಲಿ ವಿಂದು ಮಡಿಯಾದ ಅಸಿಲತೆ ಯಾರು & ಕರಿಮುಸುಡ ಕೊಳಕ ಯಾರು
😘 ಖಡ್ಗ. ಮಾವುತ
೪೩.ಯಶೋಧರನ ಕೀರ್ತಿ ಏನಾಗಿದೆ
😄 ಕಹಿ ಸೊರೆ ರುಚಿಯಿಲ್ಲದ ಅಮೃತ
೪೪.ಅಂತಹ ಗಂಡನನ್ನು ಅಪ್ಪಿಕೊಂಡು ತೊಳ ಪೊಗಂಡ ಮಾಡಿದ್ದು ವಿಧಿ ಅದರ ಮೂಗನ್ನು ಇಟ್ಟಿಗೆಯಿಂದ ತಿಕ್ಕದೆ ಹಾಗೆ ಬಿಟ್ಟನೆ? ಈ ಮಾತು ಹೇಳಿದವರು
😘 ಮಾರಿದತ್ತ--ಅಭಯರುಚಿ
೪೫.ಮನಸಿಜನ ಮಾಯೆ ವಿಧಿ ವಿರಸನದ ಕೊಂದು ಕೂಗದೆ ನರರಂ ಈ ಮಾತ ಹೇಳಿದವರು
😊 ಅಭಯರುಚಿ
೪೬.ಕಿವಿಯ ಆಭರಣ ನೆಯ್ದಲ ಹೂ ಈಗ ಏನಾಗಿದೆ
😊 ಆಯುದವಾಗಿದೆ
೪೭.ಅಮೃತಮತಿಗೆ ಯಶೋಧರ ಶೃಂಗಾರದಿಂದ ಯಾವ ಹೂವಿಂದ ಹೊಡೆದ
😊 ನೈದಿಲೆ
೪೮.ಅಯ್ಯಯ್ಯೋ ಬಹಳ ನೋವಾಯಿತು ಈ ಮಾತು ಹೇಳಿದ್ದು
😊 ಯಶೋಧರ
೪೯.ಯಶೋಧರನಿಗೆ ಪವಿತ್ರ ಸ್ನಾನವಾದದ್ದು ಇದರಿಂದ
😘 ತಾಯಿ ಎದೆ ಹಾಲು
೫೦.ಸ್ತ್ರೀಯರ ಯಾವ ಬಗೆಯ ನಂಟು ನನಗೆ ಬೇಕಾಗಿಲ್ಲ ಈ ಮಾತು ಹೇಳಿದವರು
😊 ಯಶೋಧರ
ಭಾಗ-4
ಜನ್ನನ "ಯಶೋದರ ಚರಿತೆ" ೨ ನೇ ಅವತಾರ.
೦೧. "ರಾಯ ದಂಡಾಧಿನಾಥಕೃತಾಂತಂ ಪೆಸರ್ವೆತ್ತ ಚಾಕಣನಪತ್ಯಂ ರೇಚಯಂ ಪೆತ್ತ ಪುತ್ರಿ"ಯಾರು?
✅ ಜನ್ನನ ಹೆಂಡತಿ ಲಕುಮಾದೇವಿ
೦೨. ಜನ್ನನ ಶಾಸನಗಳು _____ವಾಕ್ಯದಿಂದ ಅಂತ್ಯವಾಗುತ್ತದೆ.
✅ಜನ್ನಯ್ಯನ ಕವಿತೆ
೦೩.ಅಮೃತಮತಿ ______ನರಕದಲ್ಲಿ ತೊಳಲುತ್ತಾಳೆ.
✅ಧೂಮಪ್ರಭೆ
೦೪.ಯಶೋಧರ ಚರಿತೆಯಲ್ಲಿ, ಧರ್ಮದಲ್ಲಿ ನಿಶ್ಚಲವಾದ ನಂಬುಗೆಯೇ_____
✅ನಿರ್ಮಲವಾದ ಸಮ್ಯಕ್ ದೃಷ್ಟಿ
೦೫.ಚಂಡಮಾರಿ ಯಾವ ಕಲೆಯಲ್ಲಿ ಒಳ್ಳೆಯ ಪಾಂಡಿತ್ಯ ಹೊಂದಿದ್ದಳು?
✅ಪಾಪದ ಕಲೆಯಲ್ಲಿ
೦೬.ಭೂದೇವಿಯ ಮುಖದಂತೆ ಶೋಭಿಸುತ್ತಿದ್ದುದು ಯಾವುದು?
✅ಆವಂತಿ ದೇಶ
೦೭.ಯಶೌಘನಿಗೆ "ಕಂಬಂದಪ್ಪಿದ ಕರಿಯಂತೆ" ಸಂತೋಷವಾದುದು ಯಾವಾಗ?
✅ರಾಜ್ಯಭಾರವನ್ನು ಯಶೋಧರನಿಗೆ ವಹಿಸಿದಾಗ
೦೮.ಯಶೌಘನು ತಫೋವನಕ್ಕೆ ಹೊರಟುಹೋದ ಮೇಲೆ ಭೂದೇವಿಗೆ ಆದುದು?
✅ವಿರಹದ ಸಂತಾಪ ಹೆಚ್ಚಿತು
೦೯."ಗುರು ಬಿಟ್ಟ ರಾಜ್ಯಲಕ್ಷ್ಮೀಗೆ ವರನಾದೈ....ನಿನ್ನೊಳ್ ನೆರೆದಿರ್ಪುದಲ್ಲದೆಂಬಂತಿರೆ" ಯಶೋಧರನನ್ನು ಬಿಟ್ಟು ಹೋಗಿದ್ದು ಯಾರು?
✅ಕೀರ್ತಿ ಕಾಮಿನಿ
೧೦."ಗುರು ಬಿಟ್ಟ ರಾಜ್ಯಲಕ್ಷ್ಮೀಗೆ ವರನಾದೈ" ಎಂಬುದರಲ್ಲಿ ಗುರು ಎಂದರೆ ಯಾರು?
✅ಯಶೌಘ
೧೧."ಸಕಲ ಧರಣಿ ಯೌವನ ಭೂತಾವಳಿಯೆನೆ ತಿರ್ದುವನಾ ನೃಪಕುಳಶೇಖರ" ಎಂದರೆ ಯಾರು?
✅ಯಶೋಧರ
೧೨.ಅರಮನೆಯ ಶಯ್ಯಾಗೃಹದಿಂದ ಹೊಗೆಯು ಯಾವ ಹಕ್ಕಿಯ ರೆಕ್ಕೆಯಂತೆ ಕಪ್ಪು ಬಣ್ಣದಾಗಿತ್ತು?
✅ಪಾರಿವಾಳ
೧೩."ಶರದಭ್ರದೊಳೆಸೆವ ಖಚರದಂಪತಿಗಳವೋಲ್" ಖಚರ ಎಂದರೆ?
✅ಗಂಧರ್ವ
೧೪.ಅಷ್ಟಾವಂಕನು(ಬದಗ) ಹಾಡಿದ ರಾಗ ಯಾವುದು?
✅ಮಾಳವಸಿರಿಯೆಂಬ ದೇಶೀರಾಗ
೧೫."ಚಿತ್ರಮಪಾತ್ರೇ ರಮತೇ ನಾರೀ" ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುವಳು ಯಾರು?
✅ದೂದವಿ/ದೂತಿ
೧೬."ಪರೆದಲೆ ಕುಳಿನೊಸಲಳಿಗಣ್ಣೊರೆವಾಯ್ ಹಪ್ಪಳಿಕೆ ಮೂಗು...ಅಡಂಗಿದ ಜಘನಂ"ಇದು ಯಾರ ವರ್ಣನೆ?
✅ಅಷ್ಟಾವಂಕ/ಬದಗ
೧೭.ಅಮೃತಮತಿಯು " ಪುಳಿಂದನ ಕಣೆ ನಟ್ಟು ನಿಂದ ವನಹರಿಣಿಯವೊಲ್" ಸ್ತಭ್ಧಳಾಗಲು ಕಾರಣ?
✅ಅಷ್ಟಾವಂಕನ ವರ್ಣನೆ ಕೇಳಿ
೧೮.ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್ ಎಂಬ ಉಕ್ತಿಯಿರುವ ಕೃತಿ?
✅ಯಶೋಧರ ಚರಿತೆ
೧೯.ಅಷ್ಟಾವಂಕನನ್ನು ಸೇರಿದ ಮೇಲೆ ಅಮೃತಮತಿಯ ಯಾವ ವರ್ತನೆಯಲ್ಲಿ ಬದಲಾವಣೆಗಳಾದವು?
✅ನೋಡುವ,ಮಾತಾಡುವ,ಮುದ್ದಿಸುವ
೨೦.ಅಮೃತಮತಿ ಜಾರನಲ್ಲಿಗೆ ಯಶೋಧರ ಆಕೆಯ ಬೆನ್ನತ್ತಿ ಹೋಗುವುದನ್ನು ಕವಿ ಯಾವುದಕ್ಕೆ ಹೋಲಿಸಿದ್ದಾರೆ?
✅ದೋಷದ ಬೆನ್ನೊಳೆ ಸಂದಿಸುವ ದಂಡಕ.(ದೋಷವನ್ನು ಹಿಂಬಾಲಿಸಿಕೊಂಡು ಹೋಗುವ ದಂಡನೆಯಂತೆ)
೨೧. "ಕಳಹಂಸೆಗೆ ಗಿಡಗನೆರಗಿದಂತೆ" ಅಮೃತಮತಿಗೆ ಬಡಿದವರು ಯಾರು?
✅ಅಷ್ಟಾವಂಕ
೨೨.ಅಷ್ಟಾವಂಕನಲ್ಲಿಗೆ ತಡವಾಗಿ ಬಂದುದಕ್ಕೆ ಅಮೃತಮತಿಯು ನೀಡುವ ಕಾರಣ?
✅ಅರಸನೆಂಬ ಪಾತಕನು ಶೃಂಗಾರ ಚೇಷ್ಟೆಗೆ ತೊಡಗಿದ
೨೩."ಆ ಗಂಡನನಪ್ಪಿದ ತೋಳ್ ಪೋಗಂಡನನಪ್ಪುವಂತೆ ಮಾಡಿದುದು ವಿಧಿ" ಎಂದವರು?
✅ಮಾರಿದತ್ತ
೨೪."ಮನಸಿಜನಮಾಯೆ ವಿಧಿವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ" ಎಂಬ ವಾಕ್ಯವಿರುವ ಕೃತಿ?
✅ಯಶೋಧರ ಚರಿತೆ
೨೫."ಪ್ರಣಯ ಕಥೆಯೇ ಯಶೋಧರ ಚರಿತೆಯ ತಿರುಳು" ಎಂದವರು?
✅ತೀ.ನಂ.ಶ್ರೀ
೨೬."ಯಶೋಧರ ಚರಿತೆ ಕಾವ್ಯದ ಆಕರ್ಷಣವು ಅದರ ಪ್ರಣಯ ಕಥೆಯಲ್ಲಿಯೇ ಇದೆ" ಎಂದವರು?
✅ರಾ.ಯ.ಧಾರವಾಡಕರ
೨೭."ಅಮೃತಮತಿಯ ಪ್ರಣಯ ಒಂದು ವಿಪರೀತ ಮನೋವಿಕಾರ" ಎಂದವರು?
✅ಕುವೆಂಪು
೨೮.ಬದಗನಂಥ ರೂಪಾಧಮನಲ್ಲಿ ಅನುರಕ್ತಳಾದ ಅಮೃತಮತಿಯ ಸ್ಥಿತಿಯನ್ನು ಕುರಿತು "ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ" ಎಂದವರು?
✅ದೂದವಿ/ ದೂತಿ
೨೯."ಅಮೃತಮತಿಯೆಂಬ ಪಾತಕಿಯ ಮಾಯೆ ಬನವಾಯ್ತು" ಈ ಮಾಯೆಯ ಬನದಲ್ಲಿ ಮೈಮರೆತು ವಿಹರಿಸುತ್ತಿದ್ದ ಕುರಂಗ ಯಾರು?
✅ಯಶೋಧರ
೩೦. ಅಮೃತಮತಿ ಯಶೋಧರನನ್ನು ಮೆಚ್ಚದಂತಾದುದು "ಬೇವಂ ಮೆಚ್ಚಿದ ಕಾಗೆಗೆ________" ಆಗುತ್ತದೆ.
✅ಮಾವಿಳಿದಪ್ಪಂತೆ
ಯಶೋಧರ ಚರಿತೆಯ ಕಾಮ :ವಿಚಾರದ ಮನಶಾಸ್ತ್ರೀಯ ವಿವೇಚನೆ :
ಜನ್ನನ ಯಶೋಧರ ಚರಿತೆಯ ಕುರಿತು ಈಗಾಗಲೇ ಅನೇಕ ಬಗೆಯ ಚರ್ಚೆಗಳು ಬಂದಿವೆ. ಆದರೂ ಜನ್ನನ ಯಶೋಧರ ಚರಿತೆಯ ಕುರಿತು ಯಾಕೆ
ಇಷ್ಟೊಂದು ಚರ್ಚೆಗಳು ಆಗ್ತಾ ಇವೆ? ಅಂದ್ರೆ ನಮ್ಮ ಸಮಾಜದ ಬದುಕಿನ
ನಿಯಮಗಳ ಆಚೆ ಇರುವ ಅನೂಹ್ಯಲೋಕದ ಕಥನವೊಂದನ್ನು ವಿವರಿಸಿಕೊಡ್ತಾ
ಇದೆಯಾ ಅಥವಾ ಮಾನವಲೋಕದಾಚೆಗಿನ ನಿಗೂಢ ಪ್ರಪಂಚವನ್ನ ವಿವರಿಸುತ್ತಾ
ಇಂಥ ಹಲವು ಪ್ರಶ್ನೆಗಳು ಯಶೋಧರ ಚರಿತೆಯ ಮೂಲಕ ಕೇಳಿಕೊಳ್ಳಬೇಕಾ?
ಎನ್ನುವ ಜಿಜ್ಞಾಸೆ ಮೂಡುತ್ತದೆ.
ಕಾವ್ಯದಲ್ಲಿ ನಡೆಯುವ ಪ್ರೇಮ, ಕಾಮ, ದಾಂಪತ್ಯ, ವಿರಸ ಇತ್ಯಾದಿ
ಪ್ರಸಂಗಗಳು ನಡೆದರೂ ಕೃತಿ ತನ್ನ ಅಂತರಂಗದಲ್ಲಿ ಬೇರೆನೋ ಹೇಳಲು
ಹೊರಟಂತಿದೆ. ಅಂದರೆ, ಯಶೊಧರ, ಅಮೃತಮತಿಯರ ದಾಂಪತ್ಯ ನಾವು
ನೋಡುತ್ತಿರುವ ಚೌಕಟ್ಟಿನಲ್ಲಿವೆ. ಆದರೆ ಅಲ್ಲಿ ಬರುವ ವಿವರಗಳು ಕಥನಕಗಳು
ಅಪೇಕ್ಷೆಗಳು, ಆಯ್ಕೆಗಳು, ಸಾಮಾಜಿಕ ಎಚ್ಚರಗಳನ್ನು ಮೀರಿ ಹೋಗುತ್ತವೆ.
ಜೊತೆಗೆ ದೊಡ್ಡ ದ್ವಂದ್ವವನ್ನು ಹುಟ್ಟುಹಾಕುತ್ತವೆ, ಮತ್ತೆ ಮನುಷ್ಯ ಸಂಬಂಧಗಳನ್ನು
ಸಮಸ್ಯೆಯನ್ನಾಗಿ ಇಡುತ್ತದೆ. ಇದಕ್ಕೆ ಪರಿಹಾರಗಳು ಲೌಕಿಕ ಸಂಬಂಧದಲ್ಲೇ
ಇದೇನಾ? ಅಥವಾ ಧಾರ್ಮಿಕ ನೆಲೆಯಲ್ಲೇನಾದರೂ ಕಾಣುತ್ತಾ? ಇಂಥ
ಹೊಣೆಗಾರಿಕೆಯನ್ನ ಕವಿ ನಮ್ಮ ಮುಂದೆ ಇಟ್ಟಿದ್ದಾನೆ ಇದನ್ನ ಮನಃಶಾಸ್ತ್ರದ
ಹಿನ್ನೆಲೆಯಲ್ಲಿ ಒಂದು ಪಸೋಸನರ್ ಎಂದು ಕರೆಯಬಹುದು. ಅಂದ್ರೆ ಮುಖವಾಡ-
ಮಾನವ ಸಮಾಜ ಜೀವಿ. ಅವನ ವರ್ತನೆ ಸಮಾಜದ ಕಟ್ಟುಪಾಡುಗಳಿಗೆ
ಒಳಪಟ್ಟಿರಬೇಕು, ಇಷ್ಟವಿರಲಿ ಇಲ್ಲದಿರಲಿ ಕೆಲವು ಕಾರ್ಯಗಳನ್ನು ಮಾಡಬೇಕಾಗುತ್ತದೆ.
ಕೆಲವನ್ನು ಅವನು ಮಾಡಬಾರದು ಅವನಿಗೆ ತೋಚಿದಂತೆ ವರ್ತಿಸಲು ಸಮಾಜ
ಬಿಡುವುದಿಲ್ಲ. ಆದುದರಿಂದ ಅವನ ಆಂತರಿಕ ಭಾವನೆಗಳೆನೇ ಇದ್ದರೂ ಅವುಗಳನ್ನು
ತೋರಗೊಡದೆ, ತಾನು ಸಮಾಜದ ನಿಯಮಗಳಿಗೆ ಅನುಸಾರವಾಗಿಯೇ
ವರ್ತಿಸುವಂತೆ ನಟಿಸುತ್ತಾನೆ. ಎಂದು ಯೂಂಗ್ ಹೇಳುತ್ತಾನೆ.
ಯಾವುದೇ ಕೃತಿಯಲ್ಲಿ ಪುಸ್ತುತ ಜೀವನದಲ್ಲಿ ಸಂಭವಿಸುವ ಘಟನೆ
ಅದರಲ್ಲೂ ವಿಶೇಷವಾಗಿ ಕಾಮ-ಪ್ರೇಮಕ್ಕೆ ಸಂಬಂದಿಸಿದಂತಹ ಘಟನೆ ಸಾಹಿತ್ಯ
ಕೃತಿಯಲ್ಲಿ ಪ್ರಖರವಾಗಿ ಒಡಮೂಡಿದಾಗ, ಅದು ಬಹು ಓದುಗರ ಮನಸ್ಸನ್ನು
ಸೆಳೆಯುತ್ತದೆ. ಜನ್ನನ ಯಶೋಧರ ಚರಿತೆಯ ಮೂಲ ಉದ್ದೇಶ ಧಾಮರ್ಿಕವಾದುದು
ನಿಜ. ಆದರೆ ಅಮೃತಮತಿ-ಅಷ್ಟಾವಂಕನ ಸಂಬಂಧ ಪರಸ್ತ್ರೀ ಪರಪುರುಷರ
ಪರಸ್ಪರ ಒಲಿಯುವಂತಹ ಸಂಬಂಧ, ಸಮಾಜ ಬಾಹಿರವಾದುದು. ಇದು
ವರ್ತಮಾನದ ನೆಲೆಯಲ್ಲಿ ವಿರಳವಾಗಿಯಾದರೂ ಸಂಭವಿಸುತ್ತಲೇ ಇರುವಂತಹದು.
ಇದೇನು ಅಸಹಜವೇನಲ್ಲ ಎಂದು ಕೆಲ ವಿಮರ್ಶಕರು ಹೇಳಿದ್ದಾರೆ. ಇಂಥ ಪರಸ್ತ್ರೀ-
ಪರಪುರುಷರ ಆಕಷರ್ಿಣೀಯ ಸಂಬಂಧಗಳ ಕುರಿತು ಅನೇಕ ಪ್ರಸಂಗಗಳು
ಕನ್ನಡ ಸಾಹಿತ್ಯದಲ್ಲಿ ಬಂದಿವೆ. ಉದಾ: ಅಜರ್ುನ-ಊರ್ವಶಿ, ಕುಮಾರರಾಮ ರತ್ನಾಜಿ,
ಇಂದ್ರ-ಅಹಲ್ಯೆ ಯಂತಹ ಪ್ರಸಂಗಗಳು ಇವೆ. ಹಾಗೇ ಇಲ್ಲಿ ಜನ್ನ ತನ್ನ
ಕಾವ್ಯದ ಉದ್ದೇಶ ಮತ್ತು ಪರಿಕಲ್ಪನೆಯನ್ನು ಪರಂಪರೆಗೆ ಅನುಗುಣವಾಗಿ
ವಿವೇಚಿಸಿದ್ದಾನೆ. ಹಾಗೇ ಯಶೋಧರ ಚರಿತೆಯ ನಾಂದಿಯಲ್ಲಿ ಹೀಗೆ ಹೇಳುತ್ತಾನೆ.
ಶ್ರಾವಕ ಜನದುಪವಾಸಂ
ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗ-
ಳ್ಗೀವಸ್ತುಕಥನದಿಂದು- (1:24)
ಜೀವದಯಾಷ್ಟಮಿಯೊಳಾಗೆ ಉಪವಾಸ ವ್ರತಹಿಡಿದು ಕೂತ ಗೃಹಸ್ಥರಿಗೆ
ಪಾರಣೆಯಾಗಲಿ, ಎಂದು ಇದರಿಂದ ಪರೆವುದು ದುರಿತ ತಮಿಶ್ರಂ ಎಂದು
ಹೇಳುತ್ತಾನೆ. ಹೀಗೆ ತಾನು ಪ್ರತಿಪಾದಿಸುವ ಕಾವ್ಯ ಕೃತಿ ಜೈನಧರ್ಮ ಅನುಗುಣವಾಗಿ
ರಾಜ-ರಾಜಮಾತೆಯರು, ಜನ್ಮಾಂತರಗಳು, ನಿರೂಪಿತವಾಗಿ, ಭವಾವಳಿಯ ಅಕಂಪನ
ಮುನಿಗಳ ದೇಹಾತ್ಮ ವಾಖ್ಯಾನ, ಅಣುವ್ರತ, ಬೋಧನೆ, ಮಾರಿದತ್ತನ ಹೃದಯ
ಪರಿವರ್ತನೆ-ಇವು ಕಾವ್ಯದ ಅನುಭವ ಮತ್ತು ಜೈನಧರ್ಮದ ನಂಬಿಕೆಯನ್ನು
ಹೇಳುತ್ತದೆ.
ಹಾಗೇ ಇವೆರಡರ ನಡುವೆ ಮನುಷ್ಯನ ಅದೃಷ್ಟದ ಬಗ್ಗೆ,
ಮನುಷ್ಯಾನುಭವದಲ್ಲಿ ಬರುವ ಸಾಮಾಜಿಕ ನೈತಿಕ ಪ್ರಶ್ನೆಗಳ ಬಗ್ಗೆ ಪ್ರವೃತ್ತಿ ಸಂಸ್ಕಾರಗಳ
ಬಗ್ಗೆ ದೇಹಾತ್ಮ, ಇಂದ್ರಿಯಾನುಭವ ಜಿತೇಂದ್ರಿಯತ್ವ-ದಾಂಪತ್ಯ, ಹಾದರ, ವ್ಯಕ್ತಿ-
ಸಮಾಜ, ಗಂಡು ಹೆಣ್ಣು, ಹಿಂಸೆ-ಅಹಿಂಸೆ, ಧರ್ಮದ ಶುದ್ಧ ಸತ್ವ-ಮತಾಚರಣೆ
ಇಂಥ ಹಲವು ನೆಲೆಗಳ ಸಂಕೀರ್ಣತೆಯನ್ನು ಈ ಕೃತಿ ಒಳಗೊಂಡಿದೆ.
ಈ ಕೃತಿಯನ್ನು ಕುರಿತು ಅನೇಕ ವಿಮರ್ಶಕರು ಚಚರ್ಿಸಿದ್ದಾರೆ,
ಇಡೀ ಜನ್ನನ ಯಶೋಧರ ಚರಿತೆ, ಕೃತಿಯಲ್ಲಿ ಅಮೃತಮತಿ
ಅಷ್ಟಾವಾಂಕನನ್ನು ಮೋಹಿಸುವ ಘಟನೆ ಅತ್ಯಂತ ಮುಖ್ಯವಾದ ಕೇಂದ್ರ
ವಸ್ತುವಾಗುತ್ತದೆ. ಆದರೆ ಇದು ಅವಳ ವೈಯಕ್ತಿಕ ನೆಲೆಯಲ್ಲಿ ವ್ಯಕ್ತಗೊಂಡಿರುವುದು
ಅಥವಾ ಸಾಮಾಜಿಕ ಸಂಬಂಧಗಳ ಬಿರುಕಿನಲ್ಲಿ ಹೀಗೆ ಇಂಥ ಅವಘಡಕ್ಕೆ
ಕಾರಣವಾಯಿತು? ಅಂತಾ ಅವರ ಸಂಬಂಧದ ನೆಲೆಗಳನ್ನು ನೋಡಿದರೆ ಈ
ಮೇಲಿನ ಮಾತು ಹೆಚ್ಚು ಸ್ಪಷ್ಟವಾದಿತು. ವ್ಯಕ್ತಿಗತವಾದ ಸಂಬಂಧದಲ್ಲಿ ಯಶೋಧರ ಮತ್ತು ಚಂದ್ರಮತಿಯ ಸಂಬಂಧವು ಮತ್ತು ಅಮೃತಮತಿ ಮತ್ತು ಚಂದ್ರಮತಿಯ ಸಂಬಂಧವು ಒಂದು ರೀತಿಯ ವಿಘಟನಾ ಸ್ವರೂಪದ ಕಾರಣವಿರಬಹುದೇ? ಎಂಬ ಪ್ರಶ್ನೆಗಳು ಕಂಡುಬರುತ್ತವೆ.
ಇಲ್ಲಿ ಸುಖದ ಎರಡು ಪರಿಕಲ್ಪನೆಗಳಿವೆ ನಯ -ನಾಜೂಕಿನ ಉಗುರು
ಬೆಚ್ಚಗಿನ ದಾಂಪತ್ಯದ ಹೊಂದಾಣಿಕೆಯ ನಾಗರಿಕ ಜಗತ್ತಿನದು ಇದಕ್ಕೆ ತದ್ವಿರುದ್ದವಾಗಿ
ಮಾರಿ ಗುಡಿ, ಮಾರಿ ದೇವತೆಯ ಜಾತ್ರೆ ಮತ್ತು ಹಿಂಸೆಯ ಮೂಲಕ ಸುಖದ
ಉದ್ದೀಪನವಾಗಬಲ್ಲದು ಎಂದುಕೊಳ್ಳುವ ಇನ್ನೊಂದು ಜಗತ್ತಿನ ಪರಿಕಲ್ಪನೆಯಿದೆ.
ಮತ್ತೊಂದು ಮಾನವ ಜಗತ್ತಿನ ಅನೂಹ್ಯಲೋಕ ಎಂದು ಕರೆಯಬಹುದಾದ
ನಾವು ಪ್ರತಿಯೊಬ್ಬರು ನಮ್ಮೊಳಗೆ ಹೊತ್ತುಕೊಂಡು ತಿರುಗಾಡುವ ಲೋಕ. ಇದು
ಒಂದು ಹಂತದಲ್ಲಿ ಮನುಷ್ಯನೇ (ಪು-16) ಪ್ರವೃತ್ತಿಗಳ ಕತ್ತಲ ಲೋಕದ
ಸಂಘರ್ಷದ ಹಿನ್ನಲೆಯಲ್ಲಿ ಯಶೋಧರ ಚರಿತೆಯ ಕಾಮದ ಅರ್ಥ ನಮಗೆ
ಹೊಳೆದಿತು.
ಕೃತಿಯ ಕೇಂದ್ರದಲ್ಲಿರುವ ಅಮೃತಮತಿ ಅಷ್ಟಾವಾಂಕನನ್ನು ಮೋಹಿಸುವ ಅಮೃತಮತಿ ಅಷ್ಟಾವಾಂಕನ ಹಾಡು ಕೇಳಿ ತನ್ನ ಮನಸ್ಸನ್ನು ಅವನಿಗೆ ಕೊಟ್ಟುಬಿಟ್ಟಳು. ಮುಂದಿನ ಅವಘಡಗಳಿಗೆ ಕಾರಣವಾಯಿತೆನ್ನಬಹುದು. ಹೊರಗೆ ಗಸ್ತು ಹೊಡೆಯುವ ಸದ್ದುಗಳು ಕೂಡ ಮುಳುಗಿಹೊಗಿರುವ ಜಾವದಲ್ಲಿ ಅಂದಿನ ದಿನ ಪಾಳಿಯಲ್ಲಿ ಆನೆಯನ್ನು ಕಾಯುತ್ತಿರುವ ಬದಗ ತನ್ನ ವಿನೋದಕ್ಕಾಗಿ ಹಾಡುತ್ತಿರುವ ಹಾಡು ಅಮೃತಮತಿಯ ನಿದ್ದೆಯ ಜಗತ್ತನ್ನು ಪ್ರವೇಶಿಸುತ್ತದೆ. ಆ ವಾತಾವರಣದ ಹಿಂದೆ ಇರುವುದು ಸುರತದ ಜಗತ್ತು. ಆ ಸುರತದ ಜಗತ್ತಿನಲ್ಲಿ ಯಶೋಧರ ಮತ್ತು ಅಮೃತಮತಿ ಕಾಮನ ಕೈಗೊಂಬೆಗಳಾಗಿದ್ದರು ಎನ್ನುತ್ತಾರೆ ಜನ್ನ.
ತನು ಸೊಂಕಾಲಿಂಗನ ಚುಂ
ಬನದೆ ಸುರತದಿಂ ಸವಿ ರತಫ್ರೌಢಿಯಿನಾ
ತನುವಂ ಮÙರೆಯಿಸಿ ಅರಿಯದೆ
ಮನೋಜನಾಡಿಸುವ ಜಂತ್ರದಂತಿರೆ ನೆರೆದರ್ (2:24)
ಹೀಗೆ ಅಮೃತಮತಿ ಮತ್ತು ಯಶೋಧರ ಇಬ್ಬರು ದೈಹಿಕವಾಗಿ ಅತ್ಯಂತ
ಆತ್ಮೀಯವಾದ ಸಂಬಂಧವನ್ನು ವಣರ್ಿಸುವ ಜಗತ್ತು, ಸಂಭೋಗ ಕೂಡ ಅವರು
ಎಚ್ಚರದಲ್ಲಿ ಸ್ವೀಕರಿಸಿದರು ಪ್ರಜ್ಞಾಪೂರ್ವದ ಸ್ಥಿತಿ ಇಲ್ಲ ಹೀಗಿದ್ದಾಗ-ಅದೇವೇಳೆ
ಮುಂದಿನ ಪ್ರಸಂಗ ಬದಗನ ಸಂಗೀತ ಪ್ರವೇಶ ಮಾಡುವುದು.
ಬಿನ್ನದಕ್ಕೆ ಪಾಡುತ್ತಿವೆ ನುಣ್
ದನಿ ನಿದ್ರೆಗೆ ಕತಕ ಬೀಜ ಮಾಯ್ತೆನೆ ಮೃಗಲೋಚನೆ
ತಿಳಿದಾಲಿಸಿ ಮುಟ್ಟಿದ ಮನಮಂ ತೊಟ್ಟನೆ ಪಸಾಯದಾನಂ
ಕೊಟ್ಟಳ್
ಬದಗನ ಹಾಡು ಅಮೃತಮತಿಯ ನಿದ್ದೆಯ ಜಗತ್ತಿನಲ್ಲಿ ಕತಕದ ಬೀಜದಂತೆ
ಕೆಲಸ ಮಾಡಿತೆಂದರೆ ಅದು ತಿಳಿಗೊಳಿಸಿದ್ದು ಏನನ್ನೊ? ಬದಗನ ಸಂಗೀತದ
ಪ್ರವೇಶಕ್ಕೆ ಮುನ್ನ ತಿಳಿಯಾಗದೇ ಇದ್ದದ್ದು ಯಾವುದು? ಹಾಗಾದರೆ ಯಶೋಧರ
ಅಮೃತಮತಿಯರ ದಾಂಪತ್ಯವನ್ನು ನಾವು ಯಾವ ಚೌಕಟ್ಟಿನಲ್ಲಿ
ಅರ್ಥಮಾಡಿಕೊಳ್ಳಬೇಕು? (ರಾಜೇಂದ್ರ ಚೆನ್ನಿ)
ಯಶಸ್ತಿಲಕದಲ್ಲಿ ಅಮೃತಮತಿ ತನ್ನ ಮಾತುಗಳಲ್ಲಿ ತನ್ನ ಮತ್ತು
ಯಶೋಧರ ಸಂಬಂಧ ಮನಸ್ಸಿನಿಂದ ಕೂಡಿದ್ದಲ್ಲ ತಾನು ಅವನಿಗೆ ಒಲ್ಲದ
ಹೆಂಡತಿ ಎಂದು ಸ್ಪಷ್ಟಪಡಿಸುತ್ತಾಳೆ. ಬ್ರಾಹ್ಮಣರ ಮತ್ತು ದೈವದ ಸಮ್ಮುಖದಲ್ಲಿ
ದೇಹವನ್ನು ಮಾತ್ರ ಒಪ್ಪಿಸಬಹುದೇ ಹೊರತು ಆತ್ಮವನ್ನಲ್ಲಾ; ಪ್ರೇಮಿಸಿದವನಿಗೆ
ಮಾತ್ರ ತನ್ನ ದೇಹವನ್ನು ಮತ್ತು ಆತ್ಮಗಳನ್ನು ಒಪ್ಪಿಸಬಲ್ಲನೇ ಹೊರತು ಕೇವಲ
ದೇಹವನ್ನು ಮಾತ್ರ ಬಯಸುವ ವ್ಯಕ್ತಿಗಲ್ಲ ಎನ್ನುತ್ತಾಳೆ ಅಮೃತಮತಿ (ಕಲ್ಗುಡಿ,
ಪುಟ 116) ಇದಕ್ಕೆ ಪೂರಕವಾಗುವ ಒಂದೆರಡು ಪದ್ಯಗಳನ್ನ ನೋಡಬಹುದು.
ಅಮೃತಮತಿ ಗಡ ಯಶೋಧರ
ನ ಮನಃಪ್ರಿಯೆ ಆಕೆ ದೀವಮಾಗಿ ಪುಳಿಂದಂ
ಸುಮನೋಬಾಣಂ ತದ್ಭೂ
ರಮಣನನೊಲಿದಂತೆ ಗೋರಿಗೊಳಿಸುತ್ತಿಕರ್ುಂ
ಅಮೃತಮತಿ ಗಂಡ ಅಂದ್ರೆ ವ್ಯಂಗ್ಯವು ಇರಬಹುದು, ಯಶೋಧರನ
ಮನ ಪ್ರಿಯೇ ಇದು ವ್ಯಂಗ್ಯವಾಗಬಹುದು. ಏಕೇ ಆಕೆ ದೀಪವಾಗುವುದು ಇಲ್ಲಿಯ
ಮುಖ್ಯ ರೂಪಕ 'ಕಾಮ' ಇಲ್ಲಿ ಭೂರಮಣನೊಲಿದಂತೆ ಮೋಸ ಮಾಡುತ್ತಿದ್ದಾನೆ.
ಇದು ನಿಜವಾಗಿ ಒಲಿದ ಸ್ಥಿತಿಯಲ್ಲ ಬದಗನ ತೋರಿಕೆಯ ಸ್ಥಿತಿ ನಿಜವಾದ ಪ್ರೇಮ
ಇಲ್ಲದಿರುವ ಒಂದು ಸೂಕ್ಷ್ಮ ಸೂಚನೆಯನ್ನು ಇಲ್ಲಿ ಗುರುತಿಸಬಹುದು.
ಅಳವಡೆ ಭುಜದೊಳ್ ಮೃಗಮದ
ತಿಲಕದವೊಲ್ ಸಕಲಧರಿಣಿ ಯೌವನ ಭೂಪಾ
ವಳಿಯೆನೆ ತಿದರ್ುವನಾ ನೃಪ
ಕುಳಶೇಖರನಮೃತಮತಿಯ ಮುಖದರ್ಪಣದೊಳ್ (1:17)
(ಅಮೃತಮತಿಯು ಯಶೋಧರನಿಗೆ ತನ್ನ ಭುಜದಲ್ಲಿ ಕಸ್ತೂರಿ ಮೃಗದ
ತಿಲಕದ ಹಾಗೇ ಧರಿಸಿಕೊಂಡಿದ್ದಾನೆ). ಈ ಪ್ರತಿಷ್ಠೆಯ ರೂಪಕದಂತೆ, ಅವಳನ್ನು
ಪ್ರದರ್ಶನದ ಗೊಂಬೆಯಂತೆ ಸಮಾಜದಲ್ಲಿ ತನ್ನ ಗೌರವ ಸೂಚಕವಾಗಿ ವರಿಸಿರುವುದು
ಅವನಿಗೆ ಮುಖ್ಯವಾಗಿದೆ. ಅವನು ಅಮೃತಮತಿಯೆಂಬ ಮುಖ ಕನ್ನಡಿಯಲ್ಲಿ
ತಿದ್ದಿಕೊಳ್ಳುತ್ತಾನೆ. ಅಮೃತಮತಿ ಯಶೋಧರನ ದೃಷ್ಠಿಯಲ್ಲಿ ಒಂದು ಸಂಪತ್ತಿನ
ಭಾಗವೋ, ವಸ್ತುವೋ ಆಗಿದ್ದಾಳೆ ಅದು ಯಶೋಧರನ ಸಾರ್ವಜನಿಕ ವ್ಯಕ್ತಿತ್ವವನ್ನು
ಪ್ರತಿಬಿಂಬಿಸುತ್ತದೆ. ಯಶೋಧರನಿಗೆ ತನ್ನ ಸಾಮಾಜಿಕ ವ್ಯಕ್ತಿತ್ವವೇ ಮುಖ್ಯವಾಗಿತೆಂಬ
ಮತ್ತು ಅಮೃತಮತಿಯ ವ್ಯಕ್ತಿತ್ವ ಕೇವಲ ಅವನನ್ನು ಪ್ರತಿಬಿಂಬಿಸುವ
ಅಕರ್ಮಕವಸ್ತುವಾಗಿತೆಂದು ವಿನ್ಯಾಸವನ್ನು ಜನ್ಮ ಸೂಕ್ಷ್ಮವಾಗಿ ಬಳಸುತ್ತಾನೆ.
ಇನ್ನೊಂದಡೆ ಮನೋಜನಾಡಿಸುವ ಜಂತ್ರದಂತಿರೆ ನೆರೆದರ್ ಎಂಬ ಮಾತು
ಇದು ಯಶೋಧರನ ಬಗ್ಗೆ ಅನಿಷ್ಠತೆ ಹುದುಗಿದ್ದರೂ ಅನಿವಾರ್ಯವಾಗಿ
ಯಶೋಧರನೊಡನೆ ಇದ್ದಳೆಂದು ತೋರುತ್ತದೆ-ಅಲ್ಲದೆ ಯಶೋಧರ
ಅಮೃತಮತಿಯನ್ನು ಮೃಗಲೋಚನೆ ಎಂದು ಸಂಭೋಧಿಸುವುದರ ಮೂಲಕ
ಅವಳು ತನ್ನ ಅಧರ್ಾಂಗಿನಿ ಅನ್ನುವುದಕ್ಕಿಂತ ತನ್ನ ಕೀತರ್ಿಯ ಪ್ರತಿಷ್ಠೆಯ ಕುರುಹು
ಆಗಿದ್ದಳು ಎಂಬುದು ಇದರಿಂದ ದಿಟವಾಗುತ್ತದೆ.
ಇದನ್ನು ಯೂಂಗ್ ತನ್ನ ಮನೋವಿಜ್ಞಾನದ ಅಧ್ಯಯದಲ್ಲಿ ಅನಿಮಸ್
ಎಂದು ಹೇಳುತ್ತಾನೆ. ಅವನು ಸಾಮೂಹಿಕ ನೆಲೆಯಲ್ಲಿ ಗೌರವವನ್ನು ಪಡೆಯುವುದಕ್ಕೆ
ತಲೆತಲಾಂತರಗಳ ಅನುಭವಗಳಿಂದ ಅನುವಂಶಿಕ ಪ್ರತಿಷ್ಠೆಗಳನ್ನು ಅಪ್ರಜ್ಞಾತ್ಮಕವಾಗಿ
ಗಂಡು ಹೆಣ್ಣಿನ ಆಳಿಕೆಯಲ್ಲಿ ಬೆಳಸಿಕೊಂಡಿರುತ್ತಾನೆ. ಅವಳೆಂದು ಯುವತಿಯೆ
(ಷೋಡಶಿ) ಭೂಮಾತೆ ಕ್ಷಮಾಶಾಲಿನಿ ಹೀಗೆ ಪ್ರೀತಿಸುವಾಗ ಒಂದು ಮುಖವಾದರೆ-
ಇದು ಸಾಮಾನ್ಯ ಗಂಡಸರಲ್ಲೂ ಇಂಥ ಪ್ರಭಾವವನ್ನು ಕಾಣಬಹುದು. ಅವಳ
ದೈಹಿಕಾಕರ್ಷಣೆಯಿಂದ ಸಾಮಾನ್ಯ ಸ್ತ್ರೀಯಂತೆ ಕಂಡಾಗಲೂ ಗಂಡಸರಿಗೆ ಇದೇ
ಭಾವ ಇರಲಿಕ್ಕೆ ಸಾಧ್ಯವಿಲ್ಲ, ಏಕೇಂದರೆ ದೇಹಾಕರ್ಷಣೆಯಲ್ಲಿ ಹುಟ್ಟಿಕೊಂಡ
ಭಾವ ಮೋಹದಿಂದ ತುಂಬಿರುವಂತಾದ್ದು, ಇಂಥ ಮೋಹಾಕರ್ಷಣೆಯಲ್ಲಿ ತಾನು
ಮೆಚ್ಚುವಳು ಸರ್ವಸ್ವವು ಆಗುತ್ತಾಳೆ ಕೊನೆಗೆ ಇದು ಭೋಗಾಶಕ್ತಿಯ ನೆಲೆಯಲ್ಲಿ
ಹುಟ್ಟಿರುವಂತದ್ದು ಅಷ್ಟೇ.
ನಂತರ ಸಂಗೀತ ಕೇಳಿ ಮೆಚ್ಚಿದ (ಮಾರು ಹೋಗಿದ್ದ) ಮನ ಮನೆ
ತೊಟ್ಟನೆ ಪಸಾಯದಾನಂಗೊಟ್ಟಳ್ ಅಂದರೆ, ಆ ಕ್ಷಣದಲ್ಲಿ ಮಾನಸಿಕವಾಗಿ ತನ್ನನ್ನು
ಸಂಪೂರ್ಣವಾಗಿ ಅಪರ್ಿಸಿಕೊಂಡಳು. ಆ ಧ್ವನಿಯಲ್ಲಿ ಕಾಮೋದ್ಧೀಪಕ
ಶಕ್ತಿಯಿದ್ದರಬಹುದಾದ ಸಂಗೀತದಲ್ಲಿ ಅಷ್ಟಾವಂಕನ 'ನುಣ್ದನಿ' ಅಮೃತ ಮತಿಯಲ್ಲಿ
ಸುಪ್ತಾವಸ್ಥೆಯಲ್ಲಿದ್ದ ಬಯಕೆಯ ಅತೃಪ್ತಿ ಹೊರಬರುವುದಕ್ಕೆ ಕಾರಣವಾಗಿದೆಯಷ್ಟೇ
ಏಕೆಂದರೆ ಮುಂದೆ ಇನ್ನೆಲ್ಲೂ ಅವಳು ಅಷ್ಟಾವಂಕನಿಂದ ಹಾಡಿಸಿ ಸಹೃದಯ
ದೃಷ್ಠಿಯಿಂದ ಆನಂದಿಸುವುದಿಲ್ಲ ಹಾಗೇ ಆ ರಾಗದ ಮೋಹ ಎಷ್ಟಿತ್ತೆಂದರೆ
ಅಂತೆಸೆಯೆ ಪಾಡುತಿರೆ ತ
ದ್ದಂತಿಪನತಿನೂತ್ನಗೀತ ಪಾತನ ವಿಕಲ
ಸ್ವಾಂತೆಗೆ ನೋಡುವ ಕೂಡುವ
ಚಿಂತೆ ಕಡಲ್ವರಿದುದಂದು ಬೆಳಗಪ್ಪಿನೆಗಂ (2:32) ಎಂದಿದೆ.
ಜನ್ನನು ಅಮೃತಮತಿಯ ಪಾತ್ರದ ಸ್ವರೂಪವನ್ನು 'ವಿಕಲಸ್ವಾಂತೆ'
ಎಂಬುದೊಂದು ಸಮರ್ಪಕ ಪದದಲ್ಲಿ ಹಿಡಿದಿಟ್ಟು ಅವಳಿಗೆ ಮತ್ತೆ ನಿದ್ರೆ ಬರಲೇ
ಇಲ್ಲವೆಂಬುದುದರ ಜೊತೆಗೆ ಅವಳ ಸುಪ್ತತೆಯ ಮನಸ್ಥಿತಿಯ ತುಡಿತದ
ಉನ್ಮಿಲತೆಯನ್ನು ಒಂದೇ ವಾಕ್ಯದಲ್ಲಿ 'ಕಡಲಸ್ಮಿ' ಅದರ ಮೇರೆ ಮಿರುವಿಕೆಯನ್ನೆ
ರೂಪಕವಾಗಿ ಬಳಸಿಕೊಂಡು ಚಿತ್ರಿಸಿದ್ದಾನೆ. ಇದನ್ನು ಅಹಂನ ಸೂಪ್ತಚೇತನ
ಎನ್ನಬಹುದು. ಅಂದರೆ, ಚೇತನದ ನೆಲೆಯಲ್ಲಿ ಆಕಷರ್ಿತವಾಗುವ ವಿಷಯ
ವಾಸನೆಗಳು ಕೆಲವು ಒಳ್ಳೆಯದಿರಬಹುದು ಕೆಲವು ಕೆಟ್ಟವು ಇರಬಹುದು. ಕೆಲವು
ಅಹಿತಕಾರಿಯು ಆಗಿರುತ್ತವೆ. ಆಗ ವ್ಯಕ್ತಿಯ ಅಂತರಂಗದಲ್ಲಿ ತಳಮಳ ಸುರುವಾಗುತ್ತೇ,
ಅವು ಅನೇಕಬಾರಿ ನೀತಿಬಾಹಿರ ಬಯಕೆಗಳಾಗಿ ಕಾಮುಕ ಪ್ರವೃತ್ತಿಗಳು
ಆಕ್ರಮಣಕಾರಿಯಾದ ಭಾವನೆಗಳು ಸುಪ್ತ ಚೇತನದಲ್ಲಿ ಸಂಗ್ರಹಿತವಾಗಿದ್ದು
ಜೀವಂತವಾಗಿದ್ದರೆ ಅವನ್ನು ಫ್ರಿಕಾನ್ಸಿಯಸ್ ಎಂದು ಪ್ರಾಯ್ಡ್ ಹೇಳ್ತಾನೆ.
ಇಲ್ಲೂಕೂಡಹಾಗೇ ಅಮೃತಮತಿ ಅತಿ ಶೀಘ್ರದಲ್ಲಿ ಅಷ್ಟಾವಂಕನನ್ನು ಕಾಣುವ
ಕೂಡವ ಕಾರ್ಯದಲ್ಲಿ ಪ್ರವೃತ್ತಳಾಗಿರುತ್ತಾಳೆ. ಹಾಗೇ ಒಮ್ಮೆ ಕೊಟ್ಟ ಮನಸ್ಸನ್ನು
ಹಿಂತೆಗೆದುಕೊಳ್ಳುವುದಿಲ್ಲ. ಈ ತೀಮರ್ಾನ ಎಷ್ಟು ಹಠಾತ್ತಾಗಿ ನಡೆಯುತ್ತದೆ ಅಂದ್ರೆ
ವ್ಯಕ್ತಿ ತನ್ನ ವೈಯಕ್ತಿಕ ಜವಾಬ್ದಾರಿಯ ಮೇಲೆ ತನ್ನ ತಿಳಿವಳಿಕೆಯ ಮೇಲೆ ತನ್ನ
ಆಯ್ಕೆ ಮಾಡಿಕೊಳ್ಳುತ್ತಾರೆ, ಎನ್ನುವ ಹ್ಯೂಮನ್ ತತ್ವದ ಮೇಲೆ ವಿವರಿಸಿದರು
ಕೃತಿ ಇನ್ನೇನೋ ಹೇಳುತ್ತದೆ.
ಮನಸಿಜನ ಮಾಯೆ ವಿಧಿವಿಳ
ಸನದ ನೆರೆಂಬಡೆಯ ಕೊಂದು ಕೂಗದೆ ನರರಂ (2:61)
ಅಮೃತಮತಿಯೆತ್ತ ರೂಪಾ
ಧಮನಷ್ಟಾವಂಕನೆತ್ತ ಚಿತ್ರಮಪಾತ್ರೇ
ರಮತೇ ನಾರೀ ಎಂಬುದು
ಸಮನಿಸಿದುದು ಬೆಂದ ಬಿದಿಗೆ ಕಣ್ಣೆಲ್ಲಕ್ಕುಂ (2:34) ಎಂಬಂತ ಮಾತುಗಳು
ಮತ್ತೆ ಮತ್ತೆ ಮನಷ್ಯ ಪ್ರವೃತ್ತಿಯೆ ವರ್ತನೆಗಳ ಬಗ್ಗೆ ಹೇಳುತ್ತದೆ ಹಾಗೇ
ಅನ್ನಿಸುತ್ತದೆ. ಏಕೇಂದರೆ ಇಲ್ಲಿ ನಡೆಯುವ ಕ್ರಿಯೆಗಳು ವೈಯಕ್ತಿಕ ತೀಮರ್ಾನಗಳ
ಪಾತಳಿಯಲ್ಲಿದ್ದರೂ ಇಲ್ಲಿ ಕಾಣದ ಯಾವುದೋ ಒಂದು ಅನೂಹ್ಯಲೋಕದ ಶಕ್ತಿ
ಅವರನ್ನು ಕೈ ಗೊಂಬೆಗಳನ್ನಾಗಿ ಹೀಗೆ ವತರ್ಿಸುವಂತೆ ಮಾಡಿದೆ. ಜನ್ನ ಇದನ್ನೆ
'ವಿಧಿ' ಎಂದು ಕರೆಯುತ್ತಾನೆ, ಏಕೆಂದರೆ ಅಮೃತಮತಿಯ ಆಯ್ಕೆ ನಾಗರಿಕ
ಜಗತ್ತಿನ ಮೌಲ್ಯಗಳಿಗೆ ಆಯ್ಕೆಗಳಿಗೆ ಸವಾಲೆಸೆಯುವಂತಾದ್ದು. ಯಾವುದನ್ನು ನಾವು
ಕತ್ತಲ ಖಂಡ ಎಂದು ಕರೆಯುತ್ತೇವೆಯೋ ಮನಸ್ಸಿನ ಜಗತ್ತು. ಆ ನೆಲೆಯಿಂದ
ಪ್ರೇರಣೆಯಾದದ್ದು.
ಜನ್ನ ಮುಂದುವರೆದು ಹೇಳುತ್ತಾನೆ. ಜೈನ ಕಾವ್ಯಗಳಲ್ಲಿ 'ಕರ್ಮ'
ನಿಯತಿಯನಾರ್ ಮೀರಿದಪರ್? ಎನ್ನುತ್ತಾನೆ ಜೈನ ಕಾವ್ಯಗಳಲ್ಲಿ ನಿಯತಿ
ಅಂದರೆ ಕರ್ಮ. ಇದು ಅಕ್ಷಯವಾಗಿರುವಂತಾದ್ದು. ಅದು ಕ್ಷಯಿಸಬೇಕು ಅದನ್ನು
ಮೀರಲು ಯಾರಿಗೆ ಸಾಧ್ಯ-ನಿಯತಿಯ ಲೋಕ ಪ್ರವೃತ್ತಿಗಳ ಲೋಕ ಅಕ್ಷಯವಾದ
ಕರ್ಮಗಳ ಲೋಕ ಅಮೃತ ಮತಿಯೂ ಅಷ್ಟಾವಂಕನನ್ನು ಕೂಡುವ ಬಯಕೆ
ಅವಳ ಒಳ ತುಡಿತ ಯೋಚಿಸಿ ತೀಮರ್ಾನ ಮಾಡುವಂಥದಲ್ಲ. ಮನಶಾಸ್ತ್ರೀಯವಾಗಿ
ಬೇರೊಂದು ರೀತಿಯಲ್ಲಿ ಹೇಳುವುದಾದರೆ ಪ್ರವೃತ್ತಿ ಮತ್ತು ವ್ಯಕ್ತಿತ್ವಗಳ ಆಧಾರದ
ಮೇಲೆ ಅಮೃತಮತಿಯ ಸ್ವಭಾವದ ವೈಶಿಷ್ಟವೆಂದರೆ, ಅವಳ ನಿಷ್ಠೆ ಒಮ್ಮೆ ದೇಹ-
ಆತ್ಮಗಳೆಲ್ಲವನ್ನು ಪಸಾಯದಾನವಾಗಿ ಕೊಟ್ಟಮೇಲೆ ಹಿಂದೆ ಮುಂದೆ ನೋಡುವ
ಪ್ರಶ್ನೆಯೇ ಬರುವುದಿಲ್ಲ. ಕೆಡಕಿಗೂ ನಿಷ್ಠೆತೋರಿಸುವ ಸಾಮಥ್ರ್ಯ ಅವಳಿಗಿದೆ
ಅದು ಶೋಧರನಲ್ಲಿ ಇಲ್ಲ.
ಪ್ರತಿಯೊಬ್ಬರ ವ್ಯಕ್ತಿತ್ವದಲ್ಲೂ ಅವರಿಗಿಷ್ಟವಿಲ್ಲದ ಸ್ವೀಕೃತ ಭಾವವೊಂದು
ಇರುತ್ತದೆ. ಅದಕ್ಕೆ ಅಮೃತಮತಿಯ ಸಂಕೀರ್ಣ ಅಸ್ತಿತ್ವವೇ ಜೀವಂತ ಸಾಕ್ಷಿ
ಪ್ರತಿಯೊಬ್ಬರಲ್ಲೂ ಮಾನಸಿಕವಾದ ತೀವ್ರ ಸಂವೇದನೆಯ ಭಾವ ತುಮುಲಗಳು
ಜರಗುತ್ತವೆ. ಅಮೃತಮತಿಯಲ್ಲೂ ಆಗಿದ್ದು ಇದೆ ಆಗಿದೆ. ಏಕೆಂದರೆ ದೂತಿ
ಬದಗನನ್ನು ನೋಡಿ ಬಂದು ರಾಣಿಯ ಹತ್ತಿರ ನಿಂತು ಮೊದಲು ವ್ಯಂಗ್ಯವಾಡುತ್ತಾಳೆ.
ಕಂತುವಿನ ಕಯ್ಯ ಕೂರಸಿಯಂತಿರೆ ಗರಗರಿಗೆ ಪಡೆದು ಪೊಳೆವ
ಅಸಿಯಳೆ ಎಂದು ದೂತಿ ಹೇಳುತ್ತಾಳೆ. ನೀನಿಂತಪ್ಪ-ಕಾಮ ದೇವಂಗೆ ಎಂತೆಂತು
ಆಯ್ದುರಿಸಿ ಕೂತರ್ೆಯಿಂದಾನರೆಯಂ ಎಂದು ಕಾಮದೇವನಿಗೆ ಹೋಲಿಸಿ
ಹಾಸ್ಯವಾಡುತ್ತಾಳೆ- ತೋರರ್ ಮೇದಿನಿಯೊಳ್ಗಾತನಲ್ಲದೆ ಇಲ್ಲ ಎನ್ನುತ್ತಾಳೇ.
ಆಗ ಅಮೃತಮತಿಗೆ ಅವನ ರೂಪ ವ್ಯಕ್ತಿತ್ವ ಕುರಿತು ಕೇಳುವ ಕಾತುರ ಎಷ್ಟಿತ್ತೆಂದರೆ
ಅವಳ ಮನಸ್ಸಿನ ಹೊಯ್ದಾಟದ ಸಂಕೇತದಂತೆ ಪೇಪ್ ವೇಚ್ ಕಾವಲನ್
ಅಂತಿರೆ ಚೆಲ್ವನೆ ದೂದವಿ ನೀ ನೆನ್ನ ಕೊಂದೆ ಎನ್ನುತ್ತಾಳೆ ನಂತರ ದೂತಿ-
ಅಷ್ಟಾವಂಕವನ್ನು ಅವನ ಕೂರುಪುತನವನ್ನು ವಣರ್ಿಸುತ್ತಾ ಹೊಗುತ್ತಾಳೆ ಅವನ
ತಲೆಗೂದಲು ಕಿತ್ತುಹೋಗಿದೆ ಹಣೆ ಹೊಂಡಬಿದ್ದಿದೆ. ಕಣ್ಣು ಕೊಳೆತು ಹೋಗಿದೆ
ಬಾಯಿ ಜೊಲ್ಲು ಸುರಿಸುತ್ತಿದೆ. ಚಪ್ಪಟಿಯಾದ ಮೂಗು ಮುರುಟಿದ ಕಿವಿ, ಬಿರಿದ
ಹಲ್ಲು, ಕೊರಳು ಕುಗ್ಗಿ ಎದೆ ಒಳನುಗ್ಗಿ ಬೆನ್ನು ಹೊರಚಾಚಿದೆ ಹೊಟ್ಟೆಬಾತುಕೊಂಡಿದೆ.
ಜಘನವು ಅಡಗಿಯೇ ಹೋಗಿದೆ ಕರೆ ಮೆತ್ತಿದೆ ಚರ್ಮ, ಹೊಂಡವನ್ನು
ಹೊರತೆಗೆದಂತಹ ವಾಸನೆ ಅವನ ದೇಹದಿಂದ ಹಬ್ಬುತಾ ಇದೆ. ಅವನ ಕೈಗಳು
ಚಿಕ್ಕ ಕಣ್ಣುಗಳು ಗೂನು ಬೆನ್ನು ಗಿಡ್ಡ ಕಾಲುಗಳ ಸೊಂಟ ಮುರಿದ ಕತ್ತೆಯಂತೆ
ಅವನ ರೂಪ ಅಷ್ಟಾವಂಕನ ಕೂರುಪದ ವರ್ಣನೆಯನ್ನು ಕಾಮಾತುರದಿಂದ
ಗದ್ದದಾನನೆಯೆಂದ ಅಮೃತಮತಿ. ಒಂದು ಕ್ಷಣ ಹೇಗಾಯ್ತು ಎಂಬುದನ್ನು
ಗರಗರಿಕೆಗೆ ಕೊರಲೊಳ್, ಈ ಕ್ಷಣದೊಳ್
ವಾವರ್ಿಂದು ಮಿಡುಕು
ಎದರ್ೆಯೊಳ್ ಪುಳಿಂದನ ಕಣೆ ನಟ್ಟುನಿಂದ ವನಹರಿಣಿವೊಲ್ (2:41)
ಇದು ಎಂಥ ವಿಚಿತ್ರ ಸ್ಥಿತಿಯಂದರೆ, ಪೂತರ್ಿ ಜೀವ ಕಳೆಯೊಡನೆ
ಲವಲವಿಕೆಯಿಂದ ಇರದನೆ ಅಜರ್ೀವವಾದ ಹರಿಣಿ ಬಾಣನಾಲೆಯಾದುದರಿಂದ
ಏದುಸಿರು ಬಿಡುತ್ತಾ ಪುಳಿಂದನ ಕಣ್ಣಿನಟ್ಟುನಿಂದ ವನಹರಿಣಿ, ಅವಳ ಮನಸ್ಸಿನ
ಕ್ಷೊಬೆಯನ್ನು ಚಿತ್ರಿಸುತ್ತದೆ. ಕ್ಷಣಾರ್ಧದಲ್ಲೆ ಸಾವರಿಸಿಕೊಂಡು ಮರುಳೇ
ಪೊಲ್ಲಮೆಯೇ ಲೇಸು ನಲ್ಲರ ಮೆಯೊಳ್ ಎಂದು ಹೇಳುತ್ತಾ ಮುಂದುವರೆದು
ಹೇಳುತ್ತಾಕೆ
ಒಲವಾದೊಡೆ ರೂಪಿನ ಕೋ
ಟಲೆಯೇವುದೊ ಕಾರ್ಯಮಾಗೆ ಕಾರಣದಿದಂ
ಫಲಮೇನಿಂದನಗಾತನೆ
ಕುಲದೈವಂ ಕಾಮದೇವನಿಂದ್ರ ಚಂದ್ರಂ (2:43)
ಮನಸ್ಸು ಮೆಚ್ಚಿದೆಯಾದ ಮೇಲೆ ಮತ್ತೆ ರೂಪದ ಪ್ರಶ್ನೆಯೇ ಏಳುವುದಿಲ್ಲ, ಎಂದು
ತನ್ನ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸುತ್ತಾಳೆ, ಅಮೃತ ಮತಿ ಬದಗನನ್ನು ಕಾಮಿಸಿ
ಕೂಡುವಷ್ಟು ಬಯಕೆ ಬಂದಿತಾದರೂ, ಈಗ ಸರಿ ಇಲ್ಲವೆಂದು ತಿರಸ್ಕರಿಸುವುದಾದರೂ
ಹೇಗೆ? ಮನಸ್ಸು ಮೆಚ್ಚಿಗೆಯಾಗಿದೆ ಎಂಬ ದಿಟ್ಟತನದ ನಿಲುವಿಗೆ ಬರುತ್ತಾಳೆ.
ಆದರೂ ಈ ಸಂಕಟ ಯಾಕೆ ಎಂಬ ಪ್ರಶ್ನೆ ಏಳುತ್ತದೆ. ಅಷ್ಟಾವಂಕ ಕುರೂಪಿಯಂದಾ?
ರಾಜನನ್ನು ತೊರೆಯಬೇಕಲ್ಲಾ ಎಂದಾ? ರಾಣಿಯಾಗಿ ಮರ್ಯಾದೆಗಾಗಿಯಾ?
ಯಾಕಗಿ ಈ ಸಂಕಟ ಇದು ಬುದ್ದಿಯೆ ವಿಚಾರವಲ್ಲ ಮನಸ್ಸಿನ ವಿಚಾರ, ಹಾಗಾಗಿಯೇ
ಜನ್ನ ಇದನ್ನು
ಮನಸಿಜನ ಮಾಯೆ ವಿಧಿವಿಳ
ಸನದ ನೆರೆಂಬಡೆಯ ಕೊಂದು ಕೂಗದೆ ನರರಂ (2:61)
ಅಮೃತಮತಿಯೆತ್ತ ರೂಪಾ
ಧಮನಷ್ಟಾವಂಕನೆತ್ತ ಚಿತ್ರಮಪಾತ್ರೇ
ರಮತೇ ನಾರೀ ಎಂಬುದು
ಸಮನಿಸಿದುದು ಬೆಂದ ಬಿದಿಗೆ ಕಣ್ಣೆಲ್ಲಕ್ಕುಂ (2:34)
ಎಂಬಂಥ ಮಾತುಗಳು ಮತ್ತೆ ಮತ್ತೆ ಬರುತ್ತವೆ. ಎರಡನೆಯ ಅವಸ್ಥೆಯಲ್ಲಿ
ಮುಂದಿನ ಜೀವನಕ್ಕೆ ಕಾಲಿಡುತ್ತಾಳೆ ತನ್ನ ಸಹಜ ಸ್ಥಿತಿಗೆ ಬರುವುದಕ್ಕೆ ಕಣ್ನಂಚಿನಿಂದ
ವನಹರಿಣಿಯಷ್ಟೆ ನೋವನ್ನು ತಿನ್ನುತ್ತಾಳೆ. ಯಾಕೆ ಇಂಥ ಸ್ಥಿತಿಗೆ ಬಂದೆ ಅನ್ನುವುದು
ಆಕೆಗೆ ತಿಳಿಯದು ಕಾರ್ಯಮಾಗೆ ಕಾರಣದಿಂದಂ ಫಲಮೇನ್ ಎಂದು ಬಿಡುತ್ತಾಳೆ.
ಅಂದು ರಾತ್ರಿ ಅಮೃತಮತಿಯ ಮೇಲೆ ಯಶೋಧರನಿಗೆ ಸಂ
ಶಯ ಬಂದು ಅವಳ ಮೇಲೆ ಕೈ ಹಾಕಿ ನಿದ್ರೆ ಬಂದವನಂತೆ ನಟಿಸುತ್ತಾ ಮಲಗಿದಾಗ
ತೋಳ್ಸೆರೆಯಿಂ. ನುಸುಳ್ದು' ಎಂದಿದೆ. ಯಶೋಧರನ ತೋಳ್ ಅಪ್ಪುಗೆಯಲಿ
ಅಮೃತಮತಿಯ ಮನಸಿರಲಿಲ್ಲ-ಯಶೋಧರನ ಮನಪ್ರಿಯೆ ಇಂಥವಳು ತನ್ನನ್ನು
ಬಿಟ್ಟಿದ್ದು ಯಾಕೆ ಎಂಬ ದಿಗಿಲು ಕಾಡಿದೆ ಯಾವುದೇ ವ್ಯಕ್ತಿ ಅನುಭವಿಸಬಹುದಾದ
ಗರಿಷ್ಠ ಯಾತನೆ ಇದು ಅದಕ್ಕಿಂತ ಹೆಚ್ಚಿನ ಅವಮಾನ ಹಿಂಸೆ, ಆಘಾತ
ಮತ್ತೊಂದಿರಲಾರದು. ಅವಳ ನಡವಳಿಕೆಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸುತ್ತಾನೆ.
ಅದಾದ ಮೇಲೆ, ಅವಳನ್ನು ಬೆನ್ನ ಹತ್ತಿ ಹೋಗುತ್ತಾನೆ. ಅಲ್ಲಿ ಅವಳಾಡುವ
ಮಾತುಗಳನ್ನು ಕೇಳುತ್ತಾನೆ ಆಕೆ ಒಬ್ಬ ಆದರ್ಶ ಪ್ರೇಮಿಗೆ ಹೇಳುವ ಮಾತಿನಂತೆ
ಹೇಳುತ್ತಾಳೆ, ಆ ಅದ್ಭುತ ಮಾತು ಕೇಳಿ ಯಶೋಧರ ಹಿಂತಿರುಗಿ ಬರುತ್ತಾನೆ.
ಕಾಮ ಅನ್ನುವುದೇ ಹಾಗೇ. ಇದು ತಾನು ಒಲಿದವನಿಗೆ ಮಾತ್ರ ಅನ್ಯರಿಗೆ
ಒಳಗಾಗುವುದಿಲ್ಲ. ಲೌಕಿಕ ಪ್ರಪಂಚದಲ್ಲಿ ಯಶೋಧರ ಗಂಡ ಆದರೆ ಅವಳ
ಅಂತರಂಗದ ಪ್ರಪಂಚದಲ್ಲಿ ಅಷ್ಟಾವಂಕ ಅವಳ್ ಇನಿಯಾ ಹೇಗಿರುವಾಗ ಕಾಮ
ಅನ್ನುವುದು ಲೌಕಿಕ ಪ್ರಪಂಚದ ನಿಯಮಗಳಿಗೆ ಬದಲಾವಣೆ ಹೊಂದಾಬಾರದು
ಅದು ತಾನು ಇಷ್ಟಪಟ್ಟವರನ್ನ ಕೂಡಿದಾಗಲೆ ಮನಸ್ಸಿನ ಮೇಲೆ ಉಂಟಾಗುವ
ಪರಿಣಾಮ ತೀವ್ರವಾದದ್ದು. ಇದನ್ನೆ ಪ್ರಾಯಡ್ ಬೇರೋಂದು ರೀತಿಯಲ್ಲಿ ಹೇಳುತ್ತಾನೆ
ಪ್ರತಿಯೊಬ್ಬ ವ್ಯಕ್ತಿಯೂ ಏಕ ಕಾಲಕ್ಕೆ ಇಬ್ಬರನ್ನು ಪ್ರೀತಿಸ್ತಾನಂತೆ ಒಂದು ತನ್ನ
ಎದುರು ಇರುವ ವ್ಯಕ್ತಿ ಇನ್ನೊಂದು ತನ್ನ ಅಂತರಂಗದಲ್ಲಿ ಇರುವ ವ್ಯಕ್ತಿ ಇಲ್ಲೂ
ಕೂಡಾ ಹಾಗೆ ಅಮೃತ ಮತಿ ಬಾಹ್ಯವಾಗಿ ಯಶೋಧರನಿಗೆ ಪ್ರಿಯ ಮನದನ್ನೆ
ಆಗಿದ್ದರೂ ಅವಳ ಅಂತರಂಗದಲ್ಲಿ ಅಷ್ಟಾವಂಕನಿದ್ದಾನೆ ಅವಳ ನಿಷ್ಠೆ ಇರುವುದು
ಕೂಡಾ ಅಷ್ಟಾವಂಕನ ಮೇಲೆ ಎರಿಕ್ ಫ್ರಾಂ ಹೇಳುವಂತೆ ಈ ಮನಸ್ಥಿತಿ
ಸುಪ್ತವಾಗಿದ್ದು ಕಾಲ ಸ್ಥಳಕ್ಕೆ ಅನುಗುಣವಾಗಿ ಪ್ರೇರಣೆಗೊಳಗಾಗಿ ಗೋಚರವಾಗುತ್ತದೆ.
ಇದು ಇಂದ್ರಿಯ ಗ್ರಹಿತವಾದದ್ದು ಹಾಗೇ ಬದಗನ ಒಳಗೆ ತಡವಾಗಿ ಹೋದಾಗ
ಬದಗ ಇವಳನ್ನು ಒರಟಾಗಿ ನಡೆಸಿ ಕೊಳ್ಳುತ್ತಾನೆ.
ತಡವಾದುದುಂಟು ನಲ್ಲನೆ
ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ
ತೊಡೆಯೇÙರಿಸಿ ಕೇಳಿಕೆಯಾ
ದೊಡೆ ನೋಡುತ್ತಿದರ್ೆನುಂತೆ ನಿಲಲಣ್ಮುವನ್ನೇ
ಇದು ಅವಳಿಗೆ ಇನ್ನು ಸಂಕಟದ ವಿಚಾರ ಇಷ್ಟಾವಾಗದವರ ಜೋತೆಯಲ್ಲಿ
ರತಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಹಿಂಸೆಗಿಂತ ಹಿಂಸೆ ಬೇರೊಂದಿಲ್ಲ, ಕೃತಕವಾಗಿ
ಒಬ್ಬಗಂಡಿನ ಅಥವಾ ಹೆಣ್ಣಿನ ಜೊತೆ ಮೈ ಹಂಚಿಕೊಳ್ಳುವಾಗ ಹಿಂಸೆಯನ್ನು
ಅಮೃತಮತಿ ಯಶೋಧರನ ಜೊತೆ ಅನುಭವಿಸಿದ್ದಾಳೆ, ಯಶೋಧರ ನಡೆಸಿದ
ರತಿ ಕ್ರೀಡೆಯಲ್ಲಿ ಆಕೆ ಮೂಕ ಪ್ರೇಕ್ಷಕಳಾಗಿದ್ದಳಂತೆ ಅಮೃತಮತಿಯ ನಿಜವಾದ
ಬಯಕೆಯಂದರೆ, ಸಾಮಾಜಿಕ ಕಟ್ಟುಪಾಡುಗಳಿಂದ ಬಿಡುಗಡೆ ಪಡೆಯುವ ಸ್ವಾತಂತ್ರ್ಯ-
ಎಂದು ಜಿ.ರಾಜಶೇಖರ ಅಭಿಪ್ರಾಯ ಪಡುತ್ತಾರೆ, ಹಾಗಾಗಿಯೇ ಕುರುಪನಾದ
ಅಷ್ಟಾವಂಕ ಕುರುಪನಾದರೂ ಸುರುಪನೆ ನೊಡುವ ಕಣ್ಣಳ್ ಸಿರಿ, ಮಾತಾಡುವ
ಬಾಯ್ಗೆಳ ರಸಾಯನಂ ಸಂತಸದಿಂ ಕೂಡುವ ತೋಳ್ಗಳ ಪುಣ್ಯಂ ಆಗಿರುವ
ಅಮೃತಮತಿಗೆ ನೋಡುವ ಮಾತಾಡುವ ಬಾಯ್ ಕೂಡುವ ಪದನ್ ಹೇಗೆ
ತಾನೇ ಬೇಡವಾಗುತ್ತೆ, ಅಷ್ಟೇ ಅಲ್ಲದೆ 'ಅವಧರಿಸುವ ಗಜವೆಂಡಗ ಎನ್ನುವಲ್ಲಿ
ಅವಳ ದಿಟ್ಟತನ ಹಾಗೂ ವಿಶ್ವಾಸ ಮೆಚ್ಛತಕ್ಕದ್ದೆ.
ನೀನು ಪೆ ದೊಡೆ ಸಾವದಳೆನೆಗೆ ಮಿಕ್ಕಗಂಡರ್ ಸವ ಸೋದರರ್
ಎನ್ನುತ್ತಾಳೆ. ಇದು ಹೆರಾಕ್ಲೈಸನ ಪ್ರಕಾರ ಒಂದನ್ನೊಂದು ವಿರೋಧಿಸುತ್ತಲೆ ದೃಡತೆಯ
ಶಕ್ತಿ ಹೆಚ್ಚುತ್ತಾಹೋಗುತ್ತದೆ ಈ ಎರಡು ಘಟಕಗಳ ಮಧ್ಯೆ ವಿರೋಧ ಹೆಚ್ಚಿದಷ್ಟು
ಶಕ್ತಿಯ ಸಮರ್ಥನ ಶಕ್ತಿ ಹೆಚ್ಚಾಗುತ್ತದೆ. ಈ ಲಿಬಿಡೊ ಒಂದು ಧ್ರುವವನ್ನು ಇನ್ನೊಂದು
ಧ್ರುವಕ್ಕೆ ವಿರುದ್ಧವಾಗಿ ವಗರ್ಾಯಿಸಲ್ಪಡುತ್ತದೆ. ಒಂದು ದ್ವೇಷ ಮಿತಿ ಮೀರಿದಾಗ
ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ. ಹಾಗೇ ಕುರುಪ-ಸುರುಪಗಳು ಕೂಡ
ಇಷ್ಟವಾಗುತ್ತವೆ. ಹಾಗೇ ಗಂಧ, ರುಚಿ, ವಾಸನೆ, ಸ್ವರ್ಶಗಾಯನ ಪಂಚೇಂದ್ರಿಯಗಳಲ್ಲಿ
ಇವುಗಳ ಆಕರ್ಷಣೆ ತಡೆಯುವುದು ಸಾಧ್ಯವಿಲ್ಲ, ಇವುಗಳಲ್ಲಿ ಯಾವುದೇ ಒಂದು
ಆಕಷರ್ಿತವಾದರು ಮಾನವನ ಮನಸ್ಸು ಎಷ್ಟರ ಮಟ್ಟಿಗೆ ಲೈಂಗಿಕತೆಯನ್ನು
ಆವರಿಸಲ್ಪಟ್ಟಿದೆ ಎಂಬುದನ್ನು ಊಹಿಸಿಕೊಳ್ಳಬೇಕು.
ಅಮೃತಮತಿ ಯಶೋಧರನ ಬಗೆಗೆ ತನಗಿರುವ ಜಿಗುಪ್ಸೆಯನ್ನು
ತೋರಿಸುವಂತೆ ಇಲ್ಲಿ ಬದಗನಿಗೂ ಸಮಜಾಯಿಸಿ ಹೇಳುತ್ತಾಳೆ. ತಾನು (ಬದಗನನ್ನು)
ಪ್ರೀತಿಸುವ ಅಗಾದತೆಯ ಪರಿಣಾಮವನ್ನು ಹಾಗೂ ತನ್ನನ್ನು ಆತನು ಮನಸಾರೆ
ಕಾಮಿಸಲೆಂದು ನಂಬಿಕೆಯನ್ನುಂಟು ಮಾಡುವುದಗೊಸ್ಕರ ಆತನಿಗೆ ಮನದಟ್ಟು
ಮಾಡಿಕೊಡುತ್ತಾಳೆ. ಇತ್ತ ಯಶೋಧರ
ಒಲಿಸಿದ ಪೆಣ್ ಪೆರರೊಳ್ ಸಂ
ಚರಿಸಿದೊಡಿದು ಸುಖಮೆ ಪರಮಸುಖಸಂಪದಮಾ
ಸಲಿಸಿ ಸಲೆ ನೆರೆವ ಮುಕ್ತಿಯ
ನೊಲಿಸುವೆನಿನ್ನೊಲ್ಲೆನುÙಳಿದ ಪೆಂಡಿರ ನಣ್ಪಂ (2:64)
ಅಂದರೆ ಯಶೋಧರನ ಮಾತಲ್ಲಿ ಅಮೃತಮತಿ ಒಲಿದ ಹೆಣ್ಣಲ್ಲಾ ಒಲಿಸಿದ
ಹೆಣ್ಣು. ಅಂದರೆ ಒಲಿಸಿಕೊಂಡ ಹೆಣ್ಣು ಎಂದರ್ಥವಾಗುತ್ತದೆ. ಇಲ್ಲಿ ಅಮೃತಮತಿಯ
ಮತ್ತು ಅಷ್ಟಾವಂತಕನ ಕಾಮ ವಿಚಾರ ಕಾಲರ್್ಯೂಂಗನ ಪ್ರಕಾರ ಸ್ವಯಂ
ನಿಯಂತ್ರಿತ, ಗತಿಶೀಲಗೊಂಡ ವ್ಯವಸ್ಥೆ-ಇದು ಪ್ರತಿಯೊಬ್ಬ ವ್ಯಕ್ತಿಯ ಚಲನೆಯಲ್ಲಿ
ಯೋಚನೆಯಲ್ಲಿ ಮನಶಕ್ತಿ ಅಗಾಧವಾಗಿರುತ್ತದೆ. ಹಾಗೇ ಇಲ್ಲಿ ಅಮೃತ ಮತಿಯ
ಸಕಲ ವರ್ತನೆಗಳು ಅವಳ ಮನೋ ಶಕ್ತಿ ಲೈಂಗಿಕ ಶಕ್ತಿಯಾಗಿ ಕ್ರಿಯಾತ್ಮಕ
ಶಕ್ತಿಯಾಗಿ ಮಾರ್ಪಡುತ್ತದೆ. ಇವೆಲ್ಲಾ ಅಪ್ರಜ್ಞಾವಲಯದಲ್ಲಿ ಇರುತ್ತದೆ ಎಂದು
ಯೂಂಗ್ ಹೇಳುತ್ತಾನೆ. ಇಂಥ ಪ್ರವೃತ್ತಿಗಳ ಎದುರು ಮನುಷ್ಯ ಲೋಕ ಪ್ಯಾಸಿವ್
ಆಗಿ ನಿಂತು ಯೋಚಿಸಿ ನಿಷ್ಕೆಷರ್ೆ ಮಾಡುವಂಥದಲ್ಲ ಎಂದು ರಾಜೇಂದ್ರ
ಚೆನ್ನಿಯವರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ಕಾಮದ ಮತ್ತೊಂದು ಚಿತ್ರಣವನ್ನು ನೋಡಬಹುದು. ಅಮೃತಮತಿಯ ಈ ಮನಸ್ಥಿತಿಗೆ ಬರಲು ಯಶೋಧರನ ತಾಯಿ ಅವಳ ಕೊಡುಗೆಯೇನು? ಅಂತಾ ಅಂದ್ರೆ ಅಮೃತಮತಿ ಯಶೋಧರನ ಸಂಸಾರಿಕ ಜೀವನದಲ್ಲಿ ಬಿರುಕು ಉಂಟಾಗುದಕ್ಕೆ ಮೊದಲು ಕೊಡುವ ಕಾರಣ ಗಜವೆಡಂಗನ ಗಾಯನ ಎಂದು ಹೇಳುವ ಹಾಗೇ ಯಶೋಧರ-ಚಂದ್ರಮತಿಯರಲ್ಲಿ ಒಂದು ರೀತಿಯ ಇಡಿಫಸ್ ಕಾಂಪ್ಲೆಕ್ಸ್ ಇದ್ದಂತಿದೆ. ಏಕೆಂದರೆ ಯಶೋಧರನು ವೈರಾಗ್ಯನಾದಾಗ ತಪಸ್ಸಿಗೆ ಹೋದ ಮೇಲೆ ಚಂದ್ರಮತಿ ಅವನ ಜೊತೆ ಹೋಗದೆ ರಾಜ್ಯದಲ್ಲೆ ಇದ್ದದ್ದು ಕುತೂಹಲ ಮೂಡಿಸುತ್ತದೆ. ಹಾಗೇ ಯಶೋಧರ ತನಗಾದ ತಳಮಳವನ್ನು ತಾಳಿಕೊಳ್ಳಲಾರದೆ ತಾಯಿಬಳಿ ಹೋಗುತ್ತಾನೆ, ಹಾಗೇ ಚಂದ್ರ ಮತಿ ಸೊಸೆಯ ಮೇಲೆ ಕಣ್ಣಿಟ್ಟರೆ ಈ ಘಾಟಿ ಸೊಸೆ ಅತ್ತೆಯ ಚಲನ ವಲನಗಳ ಮೇಲೆ ಕಣ್ಣಿಟ್ಟಳು ಕುಶಲಮತಿಯಾದ ಆಕೆಗೆ ಅರ್ಥವಾಯಿತು. ತನಗೆ ಆದ ಅನ್ಯಾಯಕ್ಕೆ ಆಶಾಭಂಗಕ್ಕೆ ಹೀಗೆ ಪ್ರತಿಕಾರ ಮಾಡುವ ಹಾಗೇ ಯಶೋಧರನನ್ನು ಮಾನಸಿಕವಾಗಿ ಹಿಂಸೆಸುವ ಉದ್ದೇಶವಾಗಿರಬೇಕು. ಇನ್ನು ಮುಂದಿನ ಘಟನೆಗಳಾಗಿ ಯಶೋಧರ ಮತ್ತು ಚಂದ್ರಮತಿಯ ತಾಯಿ ಮಗನಾಗಿ ಇದ್ದವರು ಭವಾವಳಿಯಲ್ಲಿ ಇವರಿಬ್ಬರು ಹೊತ ಮೇಕೆ, ಮನೋಮ್ಮತ್ತರಾಗಿ ಬೇದೆಯಾದ ತಾಯನೇರಿತ್ತು. ಇನ್ನೊಂದು ಹೊತ ಅದನ್ನು ಇರಿದುದರಿಂದ ಸತ್ತಿತು. ಆದರೆ ಅವರ ಜೀವದ ಅಂಶ ಹೆಣ್ಣಾಡಲ್ಲಿ ಅಂಶ ಈಗಾಗಲೆ ಸೇರಿತ್ತು. ಮನಸಿಜನ ಮಾಯೆ ಕರಾಳ ಮುಖದ ಪ್ರಭಾವದಿಂದ ತನ್ನ ತಾಯ ಬಸಿರಲ್ಲಿ ತನ್ನನ್ನೆ ಇರಿಸಿ ಅಲ್ಲಿ ಈ ಹೊತ ಬೆಳೆಯುತ್ತದೆ. ಆಮೇಲೆ ಕೋಳಿ ಹುಂಜವಾಗುವುದು, ಮೀನು, ಮೊಸಳೆ, ಹಾವು ನವಿಲಾಗಿ ನಂತರ ರಾಣಿ ಕುಸುಮಾವತಿಯ ಗರ್ಭದಲ್ಲಿ ಅವಳಿ ಮಕ್ಕಳಾಗಿ ಹುಟ್ಟುತ್ತಾರೆ. ಹೀಗೆ ಕಾಮವಾಸನೆ ಹೋರಳಾಡಿಸಿಕೊಂಡ ಮೇಲೆಯೇ ಇವರಿಗೆ ಭವ ದೋಷ ಮಾನವನಿಗೆ ಮೋಕ್ಷ ಪ್ರಾಪ್ತಿಯಾಗಬೇಕಾದರೆ, ಆತ ರುಚಿಯಲ್ಲಿ ಮತಿಯಲ್ಲಿ ಸರಿಯಾಗಿರಬೇಕು, ಆಗಲೇ
ಅವರಿಗೆ ಭವದ ಕುರಿತು ಅಭಯ ಇವೆಲ್ಲಾ ಬಹಳ ಪ್ರಜ್ಞಾ ಪೂರಕವಾಗಿ ಕಾವ್ಯದ ನೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಒಟ್ಟಾರೆ ಜನ್ನ ತನ್ನ ಯಶೋಧರ ಚರಿತೆಯಲ್ಲಿ ಕಾಮದ ಬಗೆಗಿನ ಅಥವಾ ಗಂಡು -ಹೆಣ್ಣಿನ ಸಂಬಂಧದ ಬಗೆಗಿನ ವಾಸ್ತವ ನಾವು
ನಂಬಿರುವ ಅಥವಾ ಪೋಷಿಸಿಕೊಂಡು ಬಂದಿರುವ ಭ್ರಮೆಗಳಿಗಿಂತ ಭಿನ್ನವಾದ ಬೇರೆಯೇ ಆದ ಸಾಧ್ಯತೆಗಳನ್ನು ಹೊಂದಿದೆ ಎಂಬ ಸತ್ಯವನ್ನು ತೆರೆದು ತೋರಿಸುತ್ತಾನೆ.

ಧನ್ಯವಾದಗಳು
ಪ್ರತ್ಯುತ್ತರಅಳಿಸಿತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು
ಅಳಿಸಿ
ಪ್ರತ್ಯುತ್ತರಅಳಿಸಿYashodharana nannu yarige holisalagide ans send me