ಹರಿಹರನ ಉಡತಡಿಯ ಅಕ್ಕಮಹಾದೇವಿ ರಗಳೆ



೧.ಯಾವ ಭಾಷೆಯಲ್ಲೂ ಕಾಣಸಿಗದ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ ಯಾವುದು?ಡಿಯ ಅಕ್ಕಮಹಾದೇವಿ ರಗಳೆ☄


೧.ಯಾವ ಭಾಷೆಯಲ್ಲೂ ಕಾಣಸಿಗದ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ ಯಾವುದು?
✍ವಚನ ಸಾಹಿತ್ಯ.

೨.ಯಾವ ಸಾಹಿತ್ಯದ ಉದಯದಿಂದ ಕನ್ನಡಕ್ಕೊಂದು ಕೋಡು ಮೂಡಿತು?
✍ವಚನ ವಾಙ್ಮಯ(ಸಾಹಿತ್ಯ).

೩.ಕನ್ನಡ ಸಾಹಿತ್ಯದ ನೂತನ ಯುಗ ಪ್ರವರ್ತಕನೆಂದು ಯಾರನ್ನು ಕರೆಯುತ್ತಾರೆ?
✍ಹರಿಹರ.

೪.ಹರಿಹರ ಯುಗ ಎಂದೇ ಕರೆದು ಯುಗದ ಕವಿಯ ಸ್ಥಾನ ನೀಡಿದವರು ಯಾರು?
✍ತ.ಶು.ಶಾಮರಾಯ.

೫.ಹರಿಹರನ ಕಾಲ ತಿಳಿಸಿ.
✍೧೨೦೦.

೬.ಈ ಅಂಶ ಹರಿಹರನಿಗೆ ಸಂಬಂಧಿಸಿಲ್ಲ.
ಅ.ಈತನ ಜನ್ಮಸ್ಥಳ ಹಂಪಿ
ಆ.ಮಹಾದೇವಭಟ್ಟ ಶರ್ವಾಣಿ ಪೋಷಕರು.
ಇ.ಹೊಯ್ಸಳರ ನರಸಿಂಹ ಬಲ್ಲಾಳನಲ್ಲಿ ಕರಣಿಕನಾಗಿದ್ದನು.
ಈ.ನಾಗವರ್ಮನ ಸಮಕಾಲೀನ.
✍ಈ. ನಾಗವರ್ಮನ ಸಮಕಾಲೀನ.✅

೭.ಹರಿಹರನ ತಂಗಿಯ ಹೆಸರೇನು?
✍ರುದ್ರಾಣಿ.

೮.ಹರಿಹರನ ಅಳಿಯ ಯಾರು?
✍ರಾಘವಾಂಕ.

೯.ಹರಿಹರನಗಿದ್ದ ಬಿರುದುಗಳು ಯಾವುವು?
✍ಉಭಯಕವಿ ಕಮಲರವಿ
☄ರಗಳೆಯ ಕವಿ.
☄ರಗಳೆ ಬ್ರಹ್ಮ
☄ಶಿವಕವಿ.
☄ದೇವಕವಿ.

೧೧.ಹರಿಹರನ ಕೃತಿಗಳನ್ನು ತಿಳಿಸಿ.
✍ಗಿರಿಜಾ ಕಲ್ಯಾಣ
☄ಪಂಪಾಶತಕ
☄ರಕ್ಷಾಶತಕ.
☄ಮುಡಿಗೆಯ ಅಷ್ಟಕ.
☄ಅಷ್ಟಶತಕ.

೧೨.ವೀರಶೈವ ಕವಿಗಳ ಶಾತಕ ಸಾಹಿತ್ಯ ಸೃಷ್ಟಿಗೆ ಯಾವ ಶತಕ ನಾಂದಿಯಾಗಿದೆ?
✍ಪಂಪಾಶತಕ.

೧೩.ಹರಿಹರನ ಸಾಹಿತ್ಯಾರಂಭ ಯಾವುದರಿಂದ ಪ್ರಾರಂಭವಾಯಿತು?
✍ಪಂಪಶತಕ.

೧೪.ಹರಿಹರಕವಿಯ ಪವಾಡ ನಿರೂಪಿಸುವ ಎಂಟು ವೃತ್ತಗಳ ಪುಟ್ಟ ಗ್ರಂಥ ಯಾವುದು?
✍ಮುಡಿಗೆಯ ಅಷ್ಟಕ.

೧೫.ಮುಡಿಗೆಯ ಅಷ್ಟಕದಲ್ಲಿ ಯಾವ ಅಕ್ಷರದ ಪ್ರಾಸ ಬಳಸಿರುವುದು ಆಶ್ಚರ್ಯಕರವಾಗಿದೆ.
✍"ಕ್ಷ" ಅಕ್ಷರ.

೧೬.ಹರಿಹರನು ಮಾಡಿದ ಪವಾಡ ಯಾವುದು?
✍ವಿರೂಪಾಕ್ಷ ದೇವಾಲಯದಲ್ಲಿ ನಡೆದ ಟೋಪಿ ಪವಾಡ.

೧೭.ರಳ ಕುಳ ಕ್ಷಳಗಳ ವರ್ಣಮಾಲೆ ಕೈ ಬಿಟ್ಟವರು ಯಾರು?
✍ಹರಿಹರ.

೧೮.ಹರಿಹರ ನರಸಿಂಹ ಬಲ್ಲಾಳನಲ್ಲಿ ಕರಣಿಕನಾಗಿದ್ದನೆಂದು ಯಾವುದರಿಂದ ತಿಳಿದು ಬಂದಿದೆ?
✍ವೀರಶೈವಪುರಾಣ

೧೯.ಹಂಪೆಯ ರಾಜ ದೇವರಸ ಹರಿಹರನನ್ನು ಭಕ್ತಿಯಿಂದ ಬರಮಾಡಿಕೊಂಡ- ಈ ಹೇಳಿಕೆ ಯಾವುದರಲ್ಲಿದೆ.
✍ಪುರಾಣಗಳಲ್ಲಿ

೨೦.ಹಿರೇಮಲ್ಲೂರು ಈಶ್ವರನ್ ಹಾಗೂ ದೇವಿರಪ್ಪರವರ ಪ್ರಕಾರ ಹರಿಹರ ಎಷ್ಟು ರಗಳೆ ಬರೆದಿದ್ದಾನೆ?
✍೧೦೬ ಮತ್ತು ೯೧.

೨೧.ಹರಿಹರ ಯಾವುದನ್ನ ಆಧಾರವಾಗಿಟ್ಟುಕೊಂಡು ಕನ್ನಡದಲ್ಲಿ ಶಿವಶರಣರ ಕಥೆ ಬರೆದಿದ್ದಾನೆ?
✍ತಮಿಳುನಾಡಿನ ಪೆರಿಯಾರ್ ಪುರಾಣ.

೨೨.ಹರಿಹರ ರಚಿಸಿರುವ ಮಹಾದೇವಿಗೆ ಸಂಬಂದಪಟ್ಟ ರಗಳೆ ಯಾವುದು?
✍ಉಡತಡಿಯ ಮಹಾದೇವಿ ಅಕ್ಕನ ರಗಳೆ.

೨೩.ದೇವಿ ಎಮಗೋರ್ವ ಪುತ್ರಿಯನಿವುದಲೆ ತಾಯಿ ಎಂದು ಯಾರು ಯಾರಿಗೆ ಬೇಡಿಕೊಂಡರು?
✍ಭಕ್ತೆ ಪಾರ್ವತಿಯಲ್ಲಿ.

೨೪. ಕಲ್ಪತರುವಿಂ ಸಣ್ಣನನೆ ಹುಟ್ಟುವಂತೆ ಯಾರು ಹುಟ್ಟಿದರು?
✍ಮಹಾದೇವಿ.

೨೫.ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ,ಅಜಗಣ್ಣನ ಐದು ವಚನಕ್ಕೆ ಅಕ್ಕಳ ಒಂದು ವಚನ ಎಂದು ಹೇಳಿದವರು ಯಾರು?
✍ಚನ್ನಬಸವಣ್ಣ.

೨೬.ಅಕ್ಕಮಹಾದೇವಿಯಂತೆ ಬಾಳಿದ ತಮಿಳಿನ ಭಕ್ತೆ ಯಾರು.
✍ಅಂಡಾಳ್.

೨೭.ಹರಿಹರನಲ್ಲಿ:ಶಿವಭಕ್ತ ಶಿವಭಕ್ತೆ:: ಚಾಮರಸನಲ್ಲಿ:......
✍ನಿರ್ಮಲೆ ಸುಮತಿ.

೨೮.ಬೆಳಕಿಗೆ ಕತ್ತಲೆಯೊಡನೆ ಸ್ನೇಹವೇ? ಇಲ್ಲಿ ಬೆಳಕು ಹಾಗೂ ಕತ್ತಲೆ ಎಂದರೆ ಯಾರು?
✍ಬೆಳಕು(ಮಹಾದೇವಿ ಅಕ್ಕ) ಕತ್ತಲೆ(ಕೌಶಿಕ)

೨೯.ಎಲೆ ಭವಿಯೆ ನೋಡಿ ಪೋಡಮಡು ಎಂದು ಯಾರು ಯಾರಿಗೆ ಹೇಳಿದರು?
✍ಮಹಾದೇವ( ರುದ್ರಕನ್ನಿಕೆ)

೩೦.ಸಪ್ತಮಾತೃಕೆಯರನ್ನು ತಿಳಿಸಿ.
☄ಬ್ರಾಹ್ಮಿ(ಹಂಸ ವಾಹನ)
☄ಮಾಹೇಶ್ವರಿ(ವೃಷಭ ವಾಹನ)
☄ಕೌಮಾರಿ(ನವಿಲು ವಾಹನ)
☄ವೈಷ್ಣವಿ(ಗರುಡ ವಾಹನ)
☄ವಾರಾಹಿ(ಎಮ್ಮೆ ವಾಹನ)
☄ಇಂದ್ರಾಣಿ (ಆನೆ ವಾಹನ)
☄ಚಾಮುಂಡಿ(ಹುಲಿ ವಾಹನ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ