ದಾಸ ಸಾಹಿತ್ಯ


     ಕನಕದಾಸರು


೧.ಕನಕದಾಸರ ತಾಯಿಯ ತವರೂರು ಯಾವುದು?
✍ಕುಮ್ಮೂರು.

೨.ಎಪ್ಪತೆಂಟು(೭೮)ಹಳ್ಳಿಯ ಪಾಳೆಯಗಾರ(ಡಣಾಯಕ) ಯಾರು?
✍ವರದಪ್ಪನಾಯಕ.

೩.ತಿಮ್ಮಪ್ಪ ಎಂಬ ಹೆಸರು ಬರಲು ಕಾರಣವೇನು?
✍ತಿರುಪತಿಯ ತಿಮ್ಮಪ್ಪನ ವರಪ್ರಸಾದದಿಂದ ಜನಿಸಿದ್ದರಿಂದ ತಿಮ್ಮಪ್ಪ ಎಂಬ ಹೆಸರು ಬಂತು.

೪.ಕನಕ ಯುದ್ದ ಮಾಡಿರುವ ಕುರಿತು ರಚನೆಯಾಗಿರುವ ಕೀರ್ತನೆ ಯಾವುದು?
✍ಕನಕದಳದಲಿ ಬಂದು ಫೌಜು ಕಲೆತನೆಂದರೆ.
ಕನಕ ಮನಕಾಗುವುದು ಹರಿಯೆ.

೫.ಕನಕನಾಯಕ ಎಂಬುವನು ಕನಕದಾಸ ಆಗಿದ್ದು ಹೇಗೆ?
✍ಯುದ್ದದಲ್ಲಿ ಘಟಿಸಿದ ಮಾರಣಾಂತಿಕ ಹಲ್ಲೆಗಳಿಂದ ಬದುಕಿದ, ತನ್ನ ಜೀವನವನ್ನು ರಕ್ಷಿಸಿದವನು ಶ್ರೀಹರಿ ಎಂದು ತನ್ನ ಜೀವನವನ್ನು ಹರಿಸೇವೆಗೆ ಮೀಸಲಿರಿಸಿದ ಅಂದಿನಿಂದ ಕನಕನಾಯಕ ಕನಕದಾಸನಾದ.

೬.ಅಧಿಕಾದಿಂದ:ಶ್ರೀಕೃಷ್ಣದೇವರಾಯ::ಅನುಭಾವದಿಂದ:.....
✍ವ್ಯಾಸರಾಯ.

೭.ಕನಕದಾಸರು ವಿಜಯನಗರ ಪ್ರವೇಶಿಸಿದಾಗ ಎದುರಾದ ಕೂಟಗಳು.
✍ವ್ಯಾಸಕೂಟ.  ದಾಸಕೂಟ.

೮.ಕನಕದಾಸರ ಕೃತಿಗಳು ಯಾವುವು?
✍ಮೋಹನ ತರಂಗಿಣಿ.
☄ನಳಚರಿತ್ರೆ.
☄ರಾಮಧಾನ್ಯಚರಿತೆ.
☄ಹರಿಭಕ್ತಿಸಾರ.
☄ಕೀರ್ತನ ಮತ್ತು ಮುಂಡಿಗೆಗಳು

೯.ಮೋಹನ ತರಂಗಿಣಿಯಲ್ಲಿ ಇರುವ ಪದ್ಯಗಳು, ಸಂಧಿಗಳ ಸಂಖ್ಯೆ ಎಷ್ಟು?
✍ಎರಡು ಸಾವಿರದ ಎಂಟನೂರು(೨೮೦೦) ಪದ್ಯಗಳು. (೪೨) ನಲವತ್ತೆರೆಡು ಸಂಧಿಗಳು.

೧೦.ಮೋಹನ ತರಂಗಿಣಿಗೆ ಮೂಲ ಪ್ರೇರಣೆ ಯಾವುದು?
✍ಮಹಾಭಾರತ, ಸ್ಕಂದಪುರಾಣ, ವಿಷ್ಣುಪುರಾಣ, ಹರಿವಂಶ, ಭಾಗವತ.

೧೧.ಮೋಹನ ತರಂಗಿಣಿಯಲ್ಲಿರುವ ಕತೆ ಯಾರನ್ನು ಸಮೀಕರಿಸಿ ರಚಿಸಲಾಗಿದೆ?
✍ವಿಜಯನಗರದ ಶ್ರೀಕೃಷ್ಣದೇವರಾಯನ ಜೊತೆ ಭಾಗವತದ ಶ್ರೀಕೃಷ್ಣನ ಕತೆಯನ್ನು ಸಮೀಕರಿಸಲಾಗಿದೆ.

೧೨.ಮೋಹನ ತರಂಗಿಣಿ ಯಾವ ಶೈಲಿಯಲ್ಲಿ ರಚಿತವಾಗಿದೆ?
✍ದೇಶಿ ಶೈಲಿಯಲ್ಲಿ ಹಾಡುಗಬ್ಬವನ್ನು ಬಳಸಲಾಗಿದೆ.

೧೩.ಮೋಹನ ತರಂಗಿಣಿ.....ಕಾವ್ಯ.
✍ಪೌರಾಣಿಕ ಕಾವ್ಯ.

೧೪.ಯಾರ ಯಾರ ನಡುವೆ ಶ್ರೀಕೃಷ್ಣನೇ ಎತ್ತರದ ವ್ಯಕ್ತಿ.
✍ಕಾಮ,ರತಿ,ಅನಿರುದ್ದ, ಉಷಾ, ಶಂಬರಾಸುರರೆಲ್ಲರ ನಡುವೇ ಕೃಷ್ಣನೇ ಎತ್ತರದ ವ್ಯಕ್ತಿ.

೧೫.ಮೋಹನ ತರಂಗಿಣಿ ಎಷ್ಟು ವರ್ಣನೆಗಳಿಂದ ಕೂಡಿರುವುದು.
✍ಹದಿನೆಂಟು(೧೮) ವರ್ಣನೆಗಳಿಂದ.

೧೬.ನಳಚರಿತ್ರೆ ಯಾವ ಷಟ್ಪದಿಯಲ್ಲಿ ರಚಿತವಾಗಿದೆ?ಎಷ್ಟು ಷಟ್ಪದಿಗಳಿವೆ?
✍ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ. ೪೮೧ ಭಾಮಿನಿ ಷಟ್ಪದಿಗಳಿವೆ.

೧೭.ನಳಚರಿತ್ರೆಯಲ್ಲಿರುವ ವಸ್ತು ಯಾವುದು?
✍ನಳದಮಯಂತಿಯರ ಪ್ರೀತಿ-ಪ್ರೇಮ, ವಿರಹ,ವೈರಾಗ್ಯ.
ಸ್ತ್ರೀ ಜೀವನದ ಉತ್ತುಂಗತೆ ಸಾರುವುದೇ ಕಾವ್ಯದ ಉದ್ದೇಶ.

೧೮.ಚೌಂಡರಸ ರಚಿಸಿದ ಕನ್ನಡ ಕೃತಿ ಯಾವುದು?
✍ನಳಚಂಪು.

೧೯.ನಳಚರಿತ್ರೆಗೆ ಮೂಲ ಪ್ರೇರಣೆಯ ಆಕರಗಳು.
✍ಮಹಾಭಾರತದಲ್ಲಿ ಬರುವ ಒಂದು ಉಪಖ್ಯಾನ. ಚೌಂಡರಸನ "ನಳಚಂಪು"

೨೦.ದಮಯಂತಿ ತಂದೆ ಯಾರು?
✍ವಿದರ್ಭ ದೇಶದ ಭೀಮಸೇನ.

೨೧.ದಮಯಂತಿಗೆ ಕಷ್ಟಕೊಟ್ಟವರು ಯಾರು?
✍ಕಲಿಪುರುಷ.

೨೨.ನಳನು ಯಾರ ಸಲಹೆಪಡೆದ ಮತ್ತು ಏನಾದ?
✍ಕಾರ್ಕೋಟಕನ ಸಲಹೆ ಪಡೆದ, ಮತ್ತು ಋತುಪರ್ಣನಲ್ಲಿ "ಬಾಹುಕ"ನೆಂಬ ಸಾರಥಿಯಾದ.

೨೩.ನಳನು ದಮಯಂತಿಯನ್ನು ಎಲ್ಲಿ ಬಿಟ್ಟು ಬಂದನು?
✍ಕಾಡಿನಲ್ಲಿ.

೨೪.ರಾಮಧಾನ್ಯ ಚರಿತೆಯಲ್ಲಿ ಅಡಕವಾಗಿರುವ ಅಂಶಗಳು ಯಾವುವು?
✍ವಾಸ್ತವಿಕ ಪ್ರಜ್ಞೆ, ಬದುಕಿನ ರೀತಿ, ವೆಯಕ್ತಿಕ ನಿಲುವು.

೨೫.ರಾಮಧಾನ್ಯ ಚರಿತೆ ಕನಕದಾಸರ.......ಭಾಗದಂತಿದೆ.
✍ಆತ್ಮಕಥನ.

೨೬.ರಾಮಧಾನ್ಯ ಚರಿತೆ‌.....ಕಾವ್ಯ.
✍ಖಂಡಕಾವ್ಯ.

೨೭.ರಾಮಧಾನ್ಯ ಚರಿತೆಯಲ್ಲಿರುವ ಪದ್ಯಗಳ ಸಂಖ್ಯೆ ಎಷ್ಟು? ಯಾವ ಷಟ್ಪದಿಯಲ್ಲಿ ರಚಿತವಾಗಿದೆ?
✍೧೫೮(ಒಂದನೂರ ಐವತ್ತೆಂಟು) ಪದ್ಯಗಳು‌. ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ.

೨೮.ರಾಮಧಾನ್ಯ ಚರಿತೆ ಪ್ರಧಾನ ವಸ್ತು ಯಾವುದು?
✍ರಾಗಿ ಮತ್ತು ಭತ್ತಗಳ ನಡುವೆ ಎದ್ದ  ಜಗಳವೇ ಕತೆಯ ಪ್ರಧಾನ ವಸ್ತು.

೨೯.ನವಧಾನ್ಯಗಳು ಯಾವುವು?
✍ನರೆದಲೆಗ, ಹಾರಕ, ಬರಗು, ಜೋಳ, ಕಂಬು, ಸಾಮೆ, ನವಣೆ, ಗೋಧಿ. ನೆಲ್ಲು,

೩೦.ರಾಗಿ(ನರೆದಲೆಗ)ಶ್ರೇಷ್ಟ ಎಂದು ಯಾರು ಯಾರಿಗೆ ಹೇಳಿದರು?
✍ಗೌತಮನು ರಾಮನಿಗೆ .

೩೧.ರಾಗಿ ತನ್ನ ಶ್ರೇಷ್ಟತೆಯನ್ನು ಕುರಿತು ಹೇಳಿದ ಕೀರ್ತನೆ ಸಾಲು.
✍ಸತ್ಯಹೀನನು ಬಡವರನು ಕ
ಣ್ಣೆತ್ತಿ ನೋಡೆ ಧನಾಡ್ಯರನ್ನು ಬೆಂ
ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇಂದನು.
ಮಳೆದೆಗೆದು ಬೆಳೆಯಡಗಿ ಕ್ಷಾಮದ ವಿಲಯಕಾಲದೊಳನ್ನವಿಲ್ಲದೆ
ಅಳಿವ ಪ್ರಾಣಿಗಳಾದರಿಸು ಸಲುಹುವೆನು ಜಗವರಿಯೆ
ಬಲ್ಲಿದರು ಬರೆ ಬಡವರಲಿ ನಿ
ನ್ನಲ್ಲಿಯುಂಟು ಉಪೇಕ್ಷೆ ನಮ್ಮಲ್ಲಿ
ಸಲ್ಲಿದು ಪರಿಪಕ್ಷಪಾತವದಿಲ್ಲ ಭಾವಿಸಲು.

೩೨.ರಾಮಧಾನ್ಯಚರಿತೆಯಲ್ಲಿ ರಾಗಿ ಮತ್ತು ಭತ್ತದ ಜೊತೆಗೆ ಕನಕದಾಸರು ಪರೋಕ್ಷವಾಗಿ ಯಾವುದನ್ನು ಕುರಿತು ಹೇಳಿದ್ದಾರೆ.
✍ಅಂದಿನ ಶೂದ್ರ ಮತ್ತು ಸವರ್ಣೀಯರ ನಡುವಿನ ವರ್ಗಸಂಘರ್ಷವನ್ನು .

೩೩.ರಾಮಧಾನ್ಯಚರಿತೆಯಲ್ಲಿ ಕೊನೆಗೆ ಜಯ ದೊರಕುವುದು ಯಾವುದಕ್ಕೆ?
✍ರಾಗಿಗೆ.

೩೪.ಹರಿಭಕ್ತಿಸಾರ ಎಂತಹ ಕಾವ್ಯ?
✍ಭಕ್ತಿಕಾವ್ಯ.

೩೫.ಹರಿಭಕ್ತಿಸಾರ ಯಾವ ಷಟ್ಪದಿಯಲ್ಲಿ ರಚಿತವಾಗಿದೆ? ಇದರಲ್ಲಿರುವ ಪದ್ಯಗಳ ಸಂಖ್ಯೆ ಎಷ್ಟು?
✍ಭಾಮಿನಿ ಷಟ್ಪದಿಯಲ್ಲಿ. ೧೧೦ ಪದ್ಯಗಳಿವೆ.

೩೬.ಹರಿಭಕ್ತಿಸಾರದ ಕಥಾವಸ್ತು ಯಾವುದು?
✍ಶ್ರೀ ಹರಿಯ ಸ್ತುತಿ.

೩೭.ಹರಿಭಕ್ತಿಸಾರ ಯಾವುದರ ಸಂಗಮಗಳ ಕಾವ್ಯವಾಗಿದೆ?
✍ಭಕ್ತಿ, ಜ್ಞಾನ, ವೈರಾಗ್ಯ.

೩೮.ಹರಿಭಕ್ತಿಸಾರದಲ್ಲಿ ಕನಕದಾಸರು ಕಂಡುಕೊಂಡ ಸತ್ಯ ಯಾವುದು?
✍ಪರಮಾತ್ಮ ವೈರಿಯನ್ನು ನಾಶ ಮಾಡುವ ಶಕ್ತಿಯುಳ್ಳವನು. ಅಷ್ಟೆ ಅಲ್ಲ ತನಗೆ ಒಲಿದ ಬಂದ ವೈರಿಗಳಿಗೂ ಕ್ಷಮಾದಾನ ನೀಡುವವನು‌. ಭಕ್ತರಿಗಂತೂ ಸದಾ ಅಭಯ ಕೊಟ್ಟವನು. ಇದು ಕನಕದಾಸರು ಕಂಡುಕೊಂಡ ಸತ್ಯ.

೩೯.ಯಾವುದರ ಮೇಲೆ ಅಭಿಮಾನ ಇರಕೂಡದು ಎಂಬುದು ಕನಕದಾಸರ ಅಭಿಮತ.
✍ನಶಿಸಿ ಹೋಗುವ ದೇಹದ ಮೇಲೆ ಅಭಿಮಾನ ಇರಕೂಡದು.

೪೦.ಮುಕ್ತಿಯ ಮಾರ್ಗ ಯಾವುದು?
✍ಅರಿಷಡ್ವರ್ಗಗಳಿಂದ ದೂರನಾದಾಗ ಮುಕ್ತಿ ದೊರಕುವುದು.

೪೧.ಮುಂಡಿಗೆಗಳು ಇರುವ ರೀತಿ ಯಾವುದು?
✍ಒಗಟು ಮತ್ತು ಒಡಪು

೪೨.ಮುಂಡಿಗೆಗಳ ಲಕ್ಷಣ
✍ಕೀರ್ತನೆಗಳ ಮಾದರಿ
ಪಲ್ಲವಿ-ಅನುಪಲ್ಲವಿಗಳಿಂದ ಸಾಗುತ್ತವೆ.
ನಾಲ್ಕು ಸಾಲುಗಳು ಹೊಂದಿರುತ್ತವೆ, ಕೆಲವೊಂದು ಬಾರಿ ಎರಡು ಸಾಲುಗಳು ಸಹ ಇವೆ.
ಆದಿಪ್ರಾಸ ಪ್ರಚಲಿತ.

೪೩.ಕನಕದಾಸರು ರಚಿಸಿದ ಮುಂಡಿಗೆಗಳ ಸಂಖ್ಯೆ ಎಷ್ಟಿರಬಹುದು ಎಂದು ಅಂದಾಜಿಸಲಾಗಿದೆ?
✍೨೦ರಿಂದ ೨೫.

೪೪.ಪುರಾಣ ಸಂಗತಿಗಳು, ಧಾರ್ಮಿಕ ವಿಚಾರಗಳು,ಸಾದಕರಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳು ಇದರಲ್ಲಿ ಇವೆ ಎಂದವರು ಯಾರು?
✍ಮಳಲಿ ವಸಂತಕುಮಾರ

೪೫.ಪಾಂಡಿತ್ಯಕ್ಕಾಗಿ,ಸ್ವಾರಸ್ಯಕ್ಕಾಗಿ,ಜಿಜ್ಞಾಸೆಗಾಗಿ,ವಿಷಯದ ಗೋಪ್ಯತೆಗಾಗಿ,ಅನುಭವಗಳ ನಿರೂಪಣೆಗಾಗಿ ಮುಂಡಿಗೆ ಹುಟ್ಟಿದವು ಎಂದು ಹೇಳಿದವರು ಯಾರು?
✍ಬಿಂದುಮಾಧವರಾವ್ ಬುರ್ಲಿ.

೪೬.ವಚನ:ಓದುಗಬ್ಬ::ಕೀರ್ತನೆ:.....
✍ಹಾಡುಗಬ್ಬ.

                             


                      ‌‌     ಭಾಗ-೨



೧.ಕನಕದಾಸರು ಎಷ್ಟರಲ್ಲಿ ಜನಿಸಿದರು.
 ಅಂದಾಜು ೧೫೦೯ ನಿಖರವಾಗಿ ತಿಳಿದಿಲ್ಲ
೨. ಕನಕದಾಸರು ಪುರಂದರದಾಸರಿಗಿಂತ ಎಷ್ಟು ವರ್ಷ ಚಿಕ್ಕವರು
೨೫
೩. ಕನಕದಾಸರ ಊರು ಯಾವುದು.
ಕಾಗಿನೆಲೆ ಹುಟ್ಟಿದ್ದು ಹಾವೇರಿ ಜಿಲ್ಲೆಯ ಬಾಡ ಪ್ರದೇಶದಲ್ಲಿ ನಾಯಕನಾಗಿದ್ದು.
೪. ಕನಕದಾಸರ ಪೂರ್ವದ ಹೆಸರು
ಕನಕನಾಯಕ / ತಿಮ್ಮಪ್ಪನಾಯಕ
೫. ಕನಕದಾಸರ ಅಂಕಿತನಾಮ
ಕಾಗಿನೆಲೆ ಆದಿಕೇಶವ
೬. ಮೋಹನ ತರಂಗಿಣಿ ಯಾರಿಗೆ ಸಂಬಂಧಪಟ್ಟ ಕೃತಿಯಾಗಿದೆ.
ಶ್ರೀಕೃಷ್ಣ ಮತ್ತು ಅವನ ಮಗ ಪ್ರದ್ಯುಮ್ನ
೭. ರಾಗಿಯ ಮಹತ್ವವನ್ನು ವಿವರಿಸುವ ಕೃತಿ
ರಾಮಧಾನ್ಯ ಚರಿತೆ.
೮. ಇನ್ನೂ ದೊರೆತಿಲ್ಲದ ಕನಕದಾಸರ ಕೃತಿ ಯಾವುದು.
ನೃಸಿಂಹಸ್ತವ
೯. ಮುಂಡಿಗೆಗಳು ಎಂದರೇನು.
ಕನಕದಾಸರ ಒಗಟಿನಂತಹ ಪದ್ಯಗಳು.
೧೦. ಸತಿ ಹೇಗೆ ನಡೆಯಬೇಕೆಂದು ಕನಕದಾಸರು ತಿಳಿಸಿದ್ದಾರೆ.
ಸನ್ನೆಯನರಿತು
೧೧. ಕನಕದಾಸರ ತಂದೆ ತಾಯಿ
ಬೀರಪ್ಪ ಬಚ್ಚಮ್ಮ
೧೨. ಕನಕದಾಸರು ಯಾವ ಸಾಮ್ರಾಜ್ಯದ ಅಧೀನದಲ್ಲಿದ್ದರು.
ವಿಜಯನಗರ
೧೩. ಸಾಕು ಮನುಜ ಸೇವೆಯು ಎಂದು ಹೇಳಿದವರು ಯಾರು
ಕನಕದಾಸರು
೧೪. ಕನಕದಾಸರು ಖಡ್ಗವನ್ನು ಬಿಟ್ಟು ತಾಳ ತಂಬೂರಿ ಹಿಡಿಯಲು ಕಾರಣ
ಯುದ್ದ ಮತ್ತು ವ್ಯಾಸರ ಆಶಿರ್ವಾದ
೧೫. ಕನಕದಾಸರ ಕೀರ್ತನೆಗಳು ಒಳಗೊಂಡಿರುವ ಅಂಶಗಳು
ದೈವಭಕ್ತಿ, ಜೀವನದರ್ಶನ, ಸಮಾಜವಿಮರ್ಶೆ, ಲೋಕಾನುಭವ.
೧೬. ಪ್ರಪಂಚದ ಎಲ್ಲಾ ಚಟುವಟಿಕೆಗಳು ಏತಕ್ಕಾಗಿ ನಡೆಯುತ್ತವೆ.
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
೧೭. ಕಳವಳಪಡುವ ಜನರಿಗೆ ಧೈರ್ಯ ತುಂಬುವ ಪದ್ಯ
ತಲ್ಲಣಿಸದಿರು ಕಂಡ್ಯ ತಾಳು ಮನವೇ.
೧೮. ಜಾತಿ ವ್ಯವಸ್ಥೆಯನ್ನು ನಿರಾಕರಿಸುವ ಪದ್ಯ
ಕುಲಕುಲ ಕುಲ ವೆಂದು ಹೊಡೆದಾಡದಿರಿ
೧೯. ಒಕ್ಕಾಳು ಪದದ ಅರ್ಥ
ಒಂದು ಕಾಳು
೨೦. ನೀ ಮಾಯೆಯಳಗೋ ನಿನ್ನೋಳು ಮಾಯೆಯೋ ಎಂದವರಿ
ಕನಕದಾಸರು
೨೧. ನಳ ಚರಿತ್ರೆ ಯಾವ ಷಟ್ಪದಿಯಲ್ಲಿದೆ
ಭಾಮಿನಿ
೨೨. ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ .......ಲೇಸು
ಜಗಳ
೨೩. ಕನಕದಾಸರು ಯಾರ ಅವತಾರವೆಂದು ದಾಸಪಂಥದವರು ತಿಳಿದುಕೊಂಡಿದ್ದಾರೆ.
ಯಮಧರ್ಮ
೨೪. ಕನಕದಾಸರ ಖಂಡ ಕಾವ್ಯ ಯಾವುದು
ರಾಮಧಾನ್ಯ ಚರಿತೆ
೨೫. ಮೋಹನ ತರಂಗಿಣಿಗಿರುವ ಇನ್ನೊಂದು ಹೆಸರೇನು
ಕೃಷ್ಣ ಚರಿತೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ