ನಾಗವರ್ಮನ ಕರ್ನಾಟಕ ಕಾದಂಬರಿ
ವೈಶಂಪಾಯನ ವೃತ್ತಾಂತ
ಪ್ರಮುಖ ಅಂಶಗಳು.



೧.ಕರ್ನಾಟಕ ಕಾದಂಬರಿ "ಪ್ರೇಮದ ವಿಜಯ ಕಥೆ,ವೈರಾಗ್ಯವು ಶರಣಾದ ಪುಣ್ಯಕತೆ" ಎಂದವರು?
✅✍ಕುವೆಂಪು

೨.ಕಾದಂಬರಿ ಕಥೆಯ ಬಂಡಿಗೆ ಕಡೆಗೀಲುಗಳು ಯಾವುವು?(ಪ್ರೇಮಾನುರಾಗಗಳನ್ನು ಹೊರತುಪಡಿಸಿ).
✅✍ಶ್ರದ್ದೆ ಮತ್ತು ತಪಸ್ಸು.

೩.೧ನೇ ನಾಗವರ್ಮನ ಮತ-ಗೋತ್ರ ಯಾವುದು?.
✅✍ಶೈವಬ್ರಾಹ್ಮಣ,ಕೌಂಡಿನ್ಯ ಗೋತ್ರ.


೪.ಕನ್ನಡದ ಮೊಟ್ಟಮೊದಲ ಪ್ರಣಯಕಾವ್ಯವಾದ ಕರ್ನಾಟಕ ಕಾದಂಬರಿ ಕಾವ್ಯದ ದಟ್ಟಪ್ರಭಾವ ಯಾವ ಕೃತಿಯ ಮೇಲಾಗಿದೆ?
✅✍ಲೀಲಾವತಿ ಪ್ರಬಂಧಂ

೫.ಅನುಚರರಿಂದೊಡಗೂಡಿದ ಚಕ್ರವರ್ತಿ ಎಂದು ವರ್ಣನೆಗಳ ಚಿತ್ರಶಾಲೆ" ಎಂದೂ ಬಾಣನ ಬಗ್ಗೆ ಹೇಳಿದವರು ಯಾರು?.
✅✍ರವೀಂದ್ರನಾಥ ಠಾಗೋರ

೬.ಕನ್ನಡ ಸಾಹಿತ್ಯದಲ್ಲಿ ಕಾದಂಬರಿಯಷ್ಟು ಮೇಲಾದ ಪರಿವರ್ತನವು ಇನ್ನೊಂದೊಲ್ಲ ಎಂದವರು?
✅✍ರಂ ಶ್ರೀ ಮುಗುಳಿ.

೭.ಜಾಬಾಲಿ ಋಷಿಗಳ ಮಗನ ಹಸರೇನು?
✅✍ಹಾರೀಪ

೮.ಪಾರಸೀ ದೇಶದ ಅರಸ ಯಾವ ಕುದುರೆಯನ್ನು ತಾರಾಪೀಡನಿಗೆ ಉಡುಗೊರೆಯಾಗಿ ಕೊಟ್ಟನು?
✅✍ಇಂದ್ರಾಯುಧ.

೯.ಇಂದ್ರಾಯುಧನ ಪೂರ್ವಜನ್ಮ ಯಾವುದು?
✅✍ಕಪಿಂಜಲ

೧೦.ಚಂದ್ರಾಪೀಡ:ಕಾದಂಬರಿ::ಪುಂಡರೀಕ:___.
✅✍ಮಹಾಶ್ವೇತೆ

೧೧.ಮಹಾಶ್ವೇತೆಯ ಸಖಿ ಯಾರು?
✅✍ಮಕರಿಕೆ

೧೨.ಕಾದಂಬರಿಯ ಸಖಿ ಯಾರು?
✅✍ಕೇಯೂರಕ

೧೩.ಚಾಂಡಾಲ ಕನ್ಯೆಯು ಇದ್ದ ಸ್ಥಳ ಯಾವುದು?
✅✍ಮಾತಂಗರಹಳ್ಳಿ

೧೪.ಚಾಂಡಾಲ ಕನ್ಯೆ ಯಾರು?
✅✍ಪುಂಡರೀಕನ ತಾಯಿ

೧೫.ತನ್ನ ತಾಯಿಯೇ ಚಾಂಡಾಲ ಕನ್ಯೆಯಾಗಿ ಗಿಳಿಯನ್ನು ಬಂಧಿಸಲು ಕಾರಣವೇನು?

೧೬.ಚಂದ್ರಾಪೀಡ- ಕಾದಂಬರಿ ಪುಂಡರೀಕ ಮಹಾಶ್ವೇತೆಯರ ವಿವಾಹ ನಡೆದದ್ದು ಎಲ್ಲಿ?
✅✍ಹೇಮಕೂಟ

೧೭.ಮಹಾಶ್ವೇತೆ ತಪಸ್ಸು ಮಾಡುತ್ತಿದ್ದ ಸ್ಥಳ ಯಾವುದು?
✅✍ಗುಹಾನಿವಾಸ(ಶಿವನ ದೇವಸ್ಥಾನ)

೧೮.ನಾಗವರ್ಮನ ಭಾಷೆ ಪ್ರಸನ್ನ ಗಂಭಿರವಾದ ಹಳೆಗನ್ನಡ ಎಂದವರು ಯಾರು?
✅✍ರಂ.ಶ್ರೀ ಮುಗುಳಿ.

೧೯.ಪುಂಡರೀಕನ ಜಾತಿ ಯಾವುದು?
✅✍ಬ್ರಾಹ್ಮಣ

೨೦.ಕಾದಂಬರಿಯ ಅಂತಿಮ ಲಕ್ಷ್ಯ ಯಾವುದು?
✅✍ಧರ್ಮಸಮ್ಮತವಾದ ಭೋಗಕ್ಕೆ ಯೋಗ್ಯವಾದ ಸಿಂಹಾಸನ ದೊರಕಿಸಿಕೊಡುವುದು.

೨೧.ಕರ್ನಾಟಕ ಕಾದಂಬರಿಯ ಸಂದೇಶ ಯಾವುದು?
✅✍ತಪಸ್ಸಿನ ಫಲ ಪ್ರೀಯ ಸಮಾಗಮ.

೨೨.೧ನೇ ನಾಗವರ್ಮನ ಮೂಲ ಸ್ಥಳ ಯಾವುದು?
✅✍ಸಯ್ಯಡಿ.

೨೩.ಪಾರಿಜಾತ ಪುಷ್ಪಮಂಜರಿ ಎಂಬೊದೊಂದು
✅✍ಪುಂಡರೀಕನ ಕವಿ ಓಲೆ.

೨೪.ಚಂದ್ರಾಪೀಡನ ೨ನೇ ಜನ್ಮ ಯಾವುದು?
✅✍ಶೂದ್ರಕ

೨೫.ಪತ್ರಲೇಖೆ,ಇಂದ್ರಾಯುಧ ಎಂಬ ಕುದುರೆಯೊಡನೆ ಯಾವ ಸರೋವರದಲ್ಲಿ ಹಾರಿದಳು?
✅✍ಅಚ್ಚೋದ ಸರೋವರ

೨೬.ಕಪಿಂಜಲನಿಗೆ ಶಾಪಕೊಟ್ಟವರಾರು?
✅✍ವೈಮಾನಿಕ

೨೭."ಕಡಲಂ ಪೀರ್ದನಗಸ್ತ್ಯನೆಂಬ ಪುರುಡಿಂ ಮತ್ತೊಂದನಬ್ಜೋದ್ಭವಂ ಪಡೆದು ಪೆರ್ಗಡಲಂ"ಎಂದು ಮುಂತಾಗಿ ಯಾವ ಸರೋವರದ ವರ್ಣನೆ ಮಾಡಲಾಗಿದೆ?
✅✍ಪಂಪಾಸರೋವರ

೨೮.ಎಲೆ!ತಾರಾಗಂ ಹರಂ ಕಣ್ಣಿಡೆ ಕರನಿದುದು ಎಂದು ಮುಂತಾಗಿ ಯಾವ ಸರೋವರದ ವರ್ಣನೆ ಇದೆ?
✅✍ಅಚ್ಚೋದ ಸರೋವರ

೨೯.ಗಿಳಿಯು ತಂದೆಯೊಡನೆ ವಾಸವಾಗಿದ್ದ ಮರದ ಹೆಸರು ಯಾವುದು?
✅✍ಬೂರುಗದ ಮರ

೩೦.ಗಿಳಿಯು,ಜಾಬಾಲಿ ಋಷಿಗಳ ಆಶ್ರಮ ಬಿಟ್ಟು ಹೋದ ಮೇಲೆ ಆಶ್ರಯ ಪಡೆದ ಮರ ಯಾವುದು?
✅✍ಜಂಬೂಮರ

೩೧.ಕರ್ನಾಟಕದ ಕಾದಂಬರಿ ಮಹಾಕೃತಿಯ ಓಲೆಗರಿಯ ಮಾತೃಕೆಗಳ ಸಂಖ್ಯೆ?
✅✍೦೨

೩೨.ದೊರೆತ ಮಾತೃಕೆಗಳ ಸಹಾಯದಿಂದ ಬಿ.ಮಲ್ಲಪ್ಪನವರು ಕಾದಂಬರಿಯನ್ನು ಸಂಪಾದಿಸಿ ಪ್ರಕಟಿಸಿದ ವರ್ಷ?
✅✍೧೮೯೨

೩೩.ಶೂದ್ರಕ ಮಹಾರಾಜರು ಆಳುತ್ತಿದ್ದ ಉಜ್ಜೈನಿಯ ರಾಜಧಾನಿ ವಿದಿಶೆ ಪಟ್ಟಣವು ಯಾವ ನದಿಯಿಂದ ಸುತ್ತುವರೆದಿತ್ತು?
✅✍ನೇತ್ರಾವತಿ

೩೪.ಕಾಲಿಗೆ ಬೀಳುತ್ತಿದ್ದ ಶತೃರಾಜರನ್ನು ಕಂಡು ಶೂದ್ರಕ ರಾಜರ ಮನಸ್ಸಿನಲ್ಲಿ ಯಾವ ಭಾವನೆ ಮೂಡುತ್ತಿತ್ತು.
✅✍ಸ್ತ್ರೀ ಸುಖವೆಂದರೆ ಹುಲ್ಲುಕಡ್ಡಿಗಿಂತ ಕಡೆ.

೩೫.ತ್ರಿದಶಲೋಲಕ್ಕೇರುತಿರ್ದಾ ತ್ರಿಶಂಕನರಾಧೀಶನ ಲಕ್ಷ್ಮೀ ಶಕ್ರನ ಮಹಾಹುಂಕಾರದಿಂ ಬಿರ್ದಳ್ "ಎಂಬಂತೆ ಯಾರು ಕಂಡಳು?
✅✍ಚಂಡಾಲಕನ್ಯೆ

೩೬.ಶೂದ್ರಕನ ಓಲಗದಲ್ಲಿ ಬೃಹಸ್ಪತಿಯಂತೆ ಇದ್ದ ಮಂತ್ರಿ ಪ್ರಧಾನರು ಯಾರು?
✅✍ಕುಮಾರಪಾಲಿತ

೩೭.ಅಗಸ್ತ್ಯ ಮಹರ್ಷಿಗಳ ಆಶ್ರಮವಿದ್ದುದು ಎಲ್ಲಿ?
✅✍ದಂಡಕಾರಣ್ಯ

೩೮.ಭುವನತ್ರಯಮುಮನತ್ಯುತ್ಸವದಿಂದ ನೋಡಲಿದುವೆ ದಲ್ ವನದೇವೀ ನಿವಹಕ್ಕೆ ಮಹಾಪ್ರಸಾದವೆನಿಸಿದುದು ಯಾವುದು?
✅✍ಬೂರುಗದ ಮರ

೩೯.ಕಳಲಲ್ ನಿಜತನುವೊಂದೆರಡುಳಿಯಲ್ ಗರಿ" ಎಂದು ಯಾರ ಬಗ್ಗೆ ಹೇಳುತ್ತಿರುದು?
✅✍ಮುದಿಗಿಳಿ

೩೦.ಬೂರುಗದ ಮರದ ಹತ್ತಿರ ಬಂದಿದ್ದ ಬೇಡರ ನಾಯಕ
✅✍ಮಾತಂಗ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ